ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬಾರದು, ಊಟ ಮಾಡುವ ಸರಿಯಾದ ನಿಯಮಗಳು ಇವು.!

 

● ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು ಎನ್ನುತ್ತಾರೆ. ಇದರ ಅರ್ಥ ನಾವು ಕಷ್ಟಪಟ್ಟು ದುಡಿದ ಹಣದಿಂದ ಹೊಟ್ಟೆ ತುಂಬಿಸಿಕೊಂಡಾಗ ಮಾತ್ರ ಅದು ಶ್ರೇಷ್ಠ.
● ಊಟಕ್ಕೆ ಕುಳಿತುಕೊಳ್ಳುವ ಮುನ್ನ ಆ ಜಾಗ ಶುಚಿಯಾಗಿರಬೇಕು
● ಊಟಕ್ಕೂ ಮುನ್ನ ಕೈ ಕಾಲು ಮುಖ ತೊಳೆದು, ಬಾಯಿಯನ್ನು ಮುಕ್ಕಳಿಸಿ, ಹಣೆಗೆ ಭಸ್ಮ ಧರಿಸಿ ನಂತರ ಊಟಕ್ಕೆ ಕುಳಿತುಕೊಳ್ಳಬೇಕು

● ಬರೀ ನೆಲದ ಮೇಲೆ ಕುಳಿತು ಊಟ ಮಾಡಬಾರದು ಯಾವುದಾದರೂ ಚಿಕ್ಕ ಚಾಪೆಯನ್ನು ಹಾಕಿಕೊಳ್ಳಬೇಕು
● ಚೇರ್ ಸ್ಟೂಲ್ ಬದಲು ನೆಲದ ಮೇಲೆ ಚಾಪೆ ಹಾಕಿಕೊಂಡು ಕುಳಿತುಕೊಂಡು ಊಟ ಮಾಡುವುದೇ ಸೂಕ್ತ
● ಊಟಕ್ಕೆ ಕುಳಿತುಕೊಳ್ಳುವಾಗ ತಲೆಯ ಮೇಲೆ ಟವಲ್, ಪೇಟ ಸುತ್ತಿದ್ದರೆ ಅಥವಾ ಟೋಪಿ ಹಾಕಿದ್ದರೆ ಅದನ್ನು ತೆಗೆದು ಪಕ್ಕಕ್ಕೆ ಇಡಬೇಕು.
● ಗುರು ನಾಮ ಸ್ಮರಣೆ ಮಾಡಿ ಚಕ್ಕಂಬಕ್ಕಾಲು ಹಾಕಿ ಕುಳಿತುಕೊಳ್ಳಬೇಕು.

● ಊಟ ಮಾಡುವಾಗ ಹ್ಯಾಂಡ್ ಕರ್ಚೀಫ್ ಆಥವಾ ಚಿಕ್ಕ ಟವೆಲ್ ನಿಮ್ಮ ಜೊತೆ ಇದ್ದರೆ ಸೂಕ್ತ.
● ಊಟಕ್ಕೆ ತೆಗೆದುಕೊಳ್ಳುವ ತಟ್ಟೆ ಲೋಟಗಳು ಈಗಾಗಲೇ ಶುಚಿಯಾಗಿದ್ದರು ಮತ್ತೊಮ್ಮೆ ನೀರಿನಿಂದ ತೊಳೆದು ಅವುಗಳನ್ನು ಬಳಸಬೇಕು
● ಊಟ ಮಾಡುವಾಗ ಪಾದರಕ್ಷೆಗಳನ್ನು ಧರಿಸಬಾರದು
● ಊಟ ಮಾಡುವಾಗ ಕಸ ಗುಡಿಸಬಾರದು,
ಊಟ ಮಾಡುವವರನ್ನು ಒಂದೇ ಸಮನೆ ದಿಟ್ಟಿಸಿ ನೋಡಬಾರದು.

● ಊಟಕ್ಕೆ ಕುಳಿತಿರುವ ಜಾಗದಲ್ಲಿ ಸುಖಾ ಸುಮ್ಮನೆ ಓಡಾಡಬಾರದು
● ಯಾವಾಗಲು ಕುಡಿಯುವ ನೀರು ತುಂಬಿರುವ ಚಂಬು ಪಕ್ಕದಲ್ಲಿ ಇರಬೇಕು
● ಗಂಟಲು ಮೇಲೆತ್ತಿ ನೀರು ಕುಡಿಯಬೇಕು ಕಚ್ಚಿಕೊಂಡು ನೀರು ಕುಡಿಯಬಾರದು
● ನಾಯಿಮರಿ ಅಥವಾ ಇನ್ಯಾವುದೇ ಪ್ರಾಣಿಗಾಗಿ ಒಂದು ತುತ್ತು ಎತ್ತಿ ಇಟ್ಟು ನಂತರ ಊಟ ಮಾಡಬೇಕು.
● ನೀರು ಅಥವಾ ಸಾರಿನಲ್ಲಿ ಅಂಗೈ ತೇವ ಮಾಡಿಕೊಂಡು ನಂತರ ಊಟ ಶುರು ಮಾಡಬೇಕು.

● ಅಂಗೈ ಮುಂಗೈ ಮೂತಿಗಳಿಗೆ ಊಟ ಮೆತ್ತಿಕೊಳ್ಳದಂತೆ ಕ್ಲೀನ್ ಆಗಿ ಅಚ್ಚುಕಟ್ಟಾಗಿ ಊಟ ಮಾಡಬೇಕು
● ಊಟ ಮಾಡುವಾಗ ತೊಡೆ ಮೇಲೆ ನೆಲದ ಮೇಲೆ ಎಡಗೈ ಊರಿಕೊಂಡು ಇರಬಾರದು
● ಊಟ ಮಾಡುವಾಗ ಊಟದ ಮೇಲೆ ಗಮನ ಇರಬೇಕು. ತಲೆ ಕೆರೆದುಕೊಳ್ಳುವುದು, ಕಣ್ಣು ಮುಚ್ಚಿಕೊಳ್ಳುವುದು ಇವುಗಳನ್ನು ಮಾಡಬಾರದು.

● ನಾವು ಊಟ ಮಾಡುವ ಶಬ್ಧ ಪಕ್ಕದವರಿಗೆ ಕೇಳಬಾರದು, ಆ ರೀತಿ ಊಟ ಮಾಡಬೇಕು. ಊಟ ಮಾಡುವಾಗ ನಿಧಾನವಾಗಿ ತಿನ್ನಬೇಕು. ಗಬ ಗಬ ಎಂದು ತಿನ್ನಬಾರದು.
● ಊಟ ಮಾಡುವಾಗ ಅಳತೆ ಮಾಡಬಾರದು, ರೊಟ್ಟಿ ಚಪಾತಿ ದೋಸೆ ಲೆಕ್ಕ ಹಾಕಬಾರದು, ಊಟಕ್ಕೆ ಬಡಿಸುವವರು ಆಳು ನೋಡಿ ಅವರಿಗೆ ತಕ್ಕ ಹಾಗೆ ಊಟ ಬಡಿಸಬೇಕು ಯಾವತ್ತು ಯಾರನ್ನು ಅರ್ಧ ಹೊಟ್ಟೆ ಮಾಡಬಾರದು.

● ಊಟಕ್ಕೆ ಕರೆದು ಅವರು ಊಟ ಮಾಡಿ ಹೋದ ಮೇಲೆ ಅಷ್ಟು ತಿಂದ ಇಷ್ಟು ತಿಂದ ಎಂದು ಆಡಿಕೊಳ್ಳಬಾರದು.
● ಊಟ ಮಾಡುವಾಗ ಗಂಭೀರವಾದ ಯಾವುದೇ ವಿಷಯಗಳ ಬಗ್ಗೆ ಮಾತನಾಡಬಾರದು ಟಿವಿ ಮೊಬೈಲ್ ಇವುಗಳಿಂದ ದೂರ ಇದ್ದು ಊಟ ಮಾಡಬೇಕು.
● ಒಂದು ಕುಟುಂಬದಲ್ಲಿ ಊಟ ಬಡಿಸುವವರು ಬಿಟ್ಟು ಉಳಿದವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ಒಳ್ಳೆಯ ಲಕ್ಷಣ.

● ಊಟ ಮಾಡುವಾಗ ತಂಗಳು ಇದ್ದರೂ ಕೂಡ ಬಿಸಿ ಎಂದುಕೊಂಡು ಕಣ್ಣಿಗೆ ಒತ್ತಿಕೊಂಡು ಊಟ ಮಾಡಬೇಕು, ಊಟದ ಮೇಲೆ ಅಹಂಕಾರ ತೋರಬಾರದು ಒಂದು ತುತ್ತು ಕೂಡ ವೇಸ್ಟ್ ಮಾಡಬಾರದು.
● ಊಟ ಮಾಡಿದ ಮೇಲೆ ಅಗತ್ಯವಿರುವಷ್ಟು ನೀರು ಕುಡಿಯಬೇಕು
● ಊಟದ ಬಳಿಕ ಅಭ್ಯಾಸವಿದ್ದರೆ ತಾಂಬೂಲ ಸೇವಿಸಬಹುದು, ಚಿನಕುರುಳಿ, ಕಡಲೆಕಾಯಿ ಅಥವಾ ಹಣ್ಣುಗಳ ಸೇವನೆ ಮಾಡಬಹುದು. ಇದೇ ರೀತಿಯ ಇನ್ನಷ್ಟು ನಿಯಮಗಳು ಇದ್ದು ಊಟ ಮಾಡುವ ಸರಿಯಾದ ವಿಧಾನ ತಿಳಿಯಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment