ನಿಮ್ಮ ಜಮೀನನ್ನು ಪಕ್ಕದ ಜಮೀನಿನವರು ಒತ್ತುವರಿ ಮಾಡಿ ಬಿಡದೆ ಇದ್ದರೆ ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಒಬ್ಬ ರೈತನು ಸರ್ವೇ ಇಲಾಖೆಗೆ ಅರ್ಜಿ ಹಾಕಿ ಅಳತೆ ಮಾಡಿಸಿ ತನ್ನ ಜಮೀನನ್ನ ಬೌಂಡರಿಯನ್ನು ಗುರುತಿಸಿ ಕೊಳ್ಳುತ್ತಾನೆ. ಇದನ್ನು ಜಮೀನು ಹದ್ದುಬಸ್ತು ಮಾಡಿಸಿಕೊಳ್ಳುವುದು ಎನ್ನುತ್ತಾರೆ. ಯಾಕೆಂದರೆ ಈಗಾಗಲೇ ನಮ್ಮ ಬಳಿ ಇರುವ ದಾಖಲೆ ಪ್ರಕರಣವಾಗಿ ಜಮೀನು ಇರುವುದಿಲ್ಲ ಅಂತಹ ಸಮಯದಲ್ಲಿ ಕಾನೂನು ಪ್ರಕಾರ ಈ ರೀತಿ ಸರ್ವೇ ಮಾಡಿಸುತ್ತಾರೆ.

ಆಗ ಒತ್ತುವರಿ ಆಗಿರುವುದು ಕಂಡು ಬಂದರೆ ಅದನ್ನು ಬಿಡುವಂತೆ ಕೇಳಿದಾಗ ಅಕ್ಕಪಕ್ಕದ ಜಮೀನಿನ ರೈತರ ಜೊತೆ ವಾಗ್ವಾದ ನಡೆಯುತ್ತದೆ. ಆದರೂ ಕೂಡ ಸರ್ಕಾರದ ಇಲಾಖೆಯಿಂದ ಗಡಿ ಗುರುತಿಸಿದ ಮೇಲು ಅವರು ಆ ಜಾಗವನ್ನು ಬಿಟ್ಟು ಕೊಡದಿದ್ದರೆ ಕಾನೂನು ಪ್ರಕಾರ ಯಾವ ರೀತಿ ಕ್ರಮ ಕೈಗೊಳ್ಳಬಹುದು ಮತ್ತು ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ತಾಯಿ ಮಹಾಲಕ್ಷ್ಮಿಯು ನಿಮ್ಮ ಜೀವನದಲ್ಲಿ ಆಗಮಿಸುವ ಮುನ್ನ ನೀಡುವ ಸೂಚನೆಗಳು ಇವು.!

● ಮೊದಲಿಗೆ ನೀವು ನಿಮ್ಮ ಜಮೀನು ಹದ್ದು ಬಸ್ತ್ ಮಾಡಿಸಿಕೊಳ್ಳಲು ಸೂಕ್ತ ದಾಖಲೆಗಳನ್ನು ಕೊಟ್ಟು ಭೂ ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು.
● ಭೂ ಸರ್ವೆ ಇಲಾಖೆಯಿಂದ ಅಕ್ಕಪಕ್ಕದ ರೈತರಿಗೆ ಅಂಚೆ ಮೂಲಕ ನೋಟೀಸ್ ಕಳಿಸಲಾಗುತ್ತದೆ, ಅದಕ್ಕಾಗಿ ಅರ್ಜಿ ಸಲ್ಲಿಸುವ ರೈತನು ಆತನ ಜಮೀನಿನ ಅಕ್ಕ ಪಕ್ಕದ ರೈತರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೀಡಬೇಕು. ಸಾಧ್ಯವಾದರೆ ರೈತನು ಕೂಡ ಅವರಿಗೆ ಮಾಹಿತಿ ತಿಳಿಸಿರಬೇಕು ಸರ್ವೇ ಮಾಡುವ ದಿನದಂದು ಅಕ್ಕಪಕ್ಕದ ಜಮೀನಿನ ಮಾಲೀಕರು ಕೂಡ ಸ್ಥಳದಲ್ಲೇ ಹಾಜರಿದ್ದರೆ ಎಲ್ಲರಿಗೂ ಅನುಕೂಲ, ಗ್ರಾಮದ ಕೆಲ ಮುಖ್ಯಸ್ಥರನ್ನು ಕೂಡ ರೈತನು ಆ ಸಮಯದಲ್ಲಿ ಜಮೀನಿಗೆ ಕರೆ ತರಬೇಕು.

● ಸರ್ವೆ ಆದ ಬಳಿಕ ಅಧಿಕಾರಿಗಳಿಂದ ವರದಿ ಪಡೆದುಕೊಳ್ಳಬೇಕು. ನಿಮ್ಮ ಜಮೀನು ಒತ್ತುವರಿ ಆಗಿದ್ದರೆ ಚಿತ್ರ ಸಮೇತ ವರದಿ ಕೊಡುತ್ತಾರೆ ಅಥವಾ ಒಂದು ವಾರದ ಬಳಿಕ ನಾಡಕಚೇರಿಯಲ್ಲಿ ಕೂಡ ಈ ವರದಿಯನ್ನು ಪಡೆದುಕೊಳ್ಳಬಹುದು.

ದೇವರ ಬಳಿ ಬೇಡಿಕೊಳ್ಳುವಾಗ ಅಥಾವ ಪ್ರಾರ್ಥನೆ ಮಾಡುವಾಗ ಯಾವುದೇ ಕಾರಣಕ್ಕೂ ಈ ರೀತಿ ತಪ್ಪುಗಳನ್ನು ಮಾಡಬೇಡಿ.!

● ನಿಮ್ಮ ಜಮೀನು ಒತ್ತುವರಿ ಆಗಿದ್ದರೆ ಚಿತ್ರ ಸಮೇತ ನಿಮ್ಮಲ್ಲಿ ದಾಖಲೆ ಇರುತ್ತದೆ, ಆಗ ನೀವು ನಿಮ್ಮ ಅಕ್ಕ ಪಕ್ಕದ ರೈತರಿಗೆ ಈ ಬಗ್ಗೆ ತಿಳಿಸಿ ಹೇಳಬೇಕು. ಕೇಳದೆ ಇದ್ದಲ್ಲಿ ಊರಿನಲ್ಲಿಯೇ ಮುಖ್ಯಸ್ಥರ ಸಮ್ಮುಖದಲ್ಲಿ ಪಂಚಾಯಿತಿ ಮಾಡಿ ಇಲಾಖೆಯಿಂದ ನೀಡಿರುವ ದಾಖಲೆಯ ಕುರಿತು ವಿವರಿಸಿ ಹೇಳಿ, ಒಪ್ಪದೆ ಇದ್ದರೆ ನೀವು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಆ ದೂರಿನ ಸಮಯದಲ್ಲಿ ಸರ್ವೆ ಇಲಾಖೆಯಿಂದ ಕೊಟ್ಟಿರುವ ದಾಖಲೆ, ಪಂಚಾಯಿತಿ ನಡೆಸಿರುವುದಾಗಿ ಸಾಕ್ಷಿಗಳ ಹೇಳಿಕೆ, ನಿಮ್ಮ ಜಮೀನಿನ ವರದಿ ನೀಡಿ ರಕ್ಷಣೆ ಕೋರುವಂತೆ ಕೇಳಿಕೊಳ್ಳಬೇಕು ಮತ್ತು ನೀವು ದೂರು ಸಲ್ಲಿಸಿರುವುದಕ್ಕೆ ರಿಸಿಪ್ಟ್ ಪಡೆದುಕೊಳ್ಳಬೇಕು.

● ಮತ್ತೊಮ್ಮೆ ಹದ್ದುಬಸ್ತು ಮಾಡಿಸುವಂತೆ ಆ ರೈತ ಸೂಚಿಸಿದರೆ ಅದಕ್ಕೂ ಒಪ್ಪಿಕೊಳ್ಳಿ. ಇಷ್ಟಾದ ಮೇಲೂ ಆತ ಜಮೀನು ಬಿಡದೆ ಇದ್ದರೆ ವಕೀಲರ ಸಹಾಯದಿಂದ ಹತ್ತಿರದಲ್ಲಿರುವ ನ್ಯಾಯಾಲಯದಲ್ಲಿ ಈ ಕುರಿತು ದಾವೇ ದಾಖಲಿಸಿ.
● ಈ ರೀತಿ ಭೂ ವಿವಾದ ದಾಖಲಾದರೆ ಅದು ವಿಚಾರಣೆ ನಡೆದು ತೀರ್ಪು ಬರುವವರೆಗೂ ಕೂಡ ಕನಿಷ್ಠವೆಂದರೂ 10 ವರ್ಷ ಹಿರಿಯುತ್ತದೆ. ಆದ್ದರಿಂದ ರೈತರು ಈ ರೀತಿ ಕೋರ್ಟು ಕಚೇರಿ ಅಲೆದು ಸಮಯ ಹಾಗೂ ಹಣ ವ್ಯರ್ಥ ಮಾಡಿಕೊಳ್ಳುವುದರ ಬದಲು ರಾಜಿ ಸಂಧಾನದ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಂಡರೆ ಇನ್ನು ಉತ್ತಮ ಎನ್ನುವುದು ಹಲವರ ಅಭಿಪ್ರಾಯ. ನಿಮಗೆ ಯಾವುದು ಸೂಕ್ತ ಆ ಮಾರ್ಗವನ್ನು ಆರಿಸಿಕೊಂಡು ಆದಷ್ಟು ತಾಳ್ಮೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಿ.

Leave a Comment