ದೇವರ ಬಳಿ ಬೇಡಿಕೊಳ್ಳುವಾಗ ಅಥಾವ ಪ್ರಾರ್ಥನೆ ಮಾಡುವಾಗ ಯಾವುದೇ ಕಾರಣಕ್ಕೂ ಈ ರೀತಿ ತಪ್ಪುಗಳನ್ನು ಮಾಡಬೇಡಿ.!

ಪ್ರತಿಯೊಂದು ಧರ್ಮದಲ್ಲೂ ಕೂಡ ದೇವರಿಗೆ ಪ್ರಾರ್ಥನೆ ಮಾಡುತ್ತಾರೆ. ಆದರೆ ಹಲವರು ಪ್ರಾರ್ಥನೆ ಹೆಸರಿನಲ್ಲಿ ಅವರ ಆಸೆಯ ಪಟ್ಟಿಗಳನ್ನು ಸೇರಿಸುತ್ತಾರೆ ಎಂದೇ ಹೇಳಬಹುದು, ಈ ರೀತಿ ಮಾಡಿದರೆ ಅದು ಪ್ರಾರ್ಥನೆಯಾಗುವುದಿಲ್ಲ. ಪ್ರಾರ್ಥನೆ ಎಂದರೆ ನಿಮ್ಮನ್ನು ಹಾಗೂ ದೇವರನ್ನು ಬೆಸೆಯುವ ಒಂದು ವಿಶೇಷವಾದ ಬಂಧ ಎಂತಹ ಸಮಯದಲ್ಲೂ ನೀವು ನಿಮ್ಮ ಇಹಲೋಕದ ಇಚ್ಛೆಗಳ ಬಗ್ಗೆ ಯೋಚಿಸಬಾರದು.

ಹಲವರು ಪೂಜೆ, ವ್ರತ, ತಪಗಳನ್ನು ಅಥವಾ ಪ್ರಾರ್ಥನೆಗಳನ್ನು ಈ ರೀತಿ ಭಗವಂತನನ್ನು ಬೇಡಿಕೊಳ್ಳಲೆಂದೇ ಮಾಡುತ್ತಾರೆ. ನಿಜವಾಗಿಯೂ ಭಗವಂತನಲ್ಲಿ ಬೇಡಿಕೊಳ್ಳುವುದಾದರೆ ನನಗೆ ಮದುವೆ ಮಾಡಿಸು, ಉದ್ಯೋಗ ಬರುವಂತೆ ಮಾಡು, ನನ್ನ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡುವಂತೆ ಮಾಡು ನನಗೆ ಕಾರು ತೆಗೆದುಕೊಳ್ಳುವಂತೆ ಮಾಡು ನನಗೆ ಹಣ ಬರುವಂತೆ ಮಾಡು ಎಂದು ಬೇಡಿಕೊಳ್ಳಬಾರದು.

ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ ಮಾಡಬೇಡಿ, ಹೃದಯ.ಘಾ.ತ.ದ ಎಚ್ಚರಿಕೆ ನೀಡುವ ಲಕ್ಷಣಗಳು ಇವು.!

ಅದಕ್ಕಾಗಿ ಹಿರಿಯರು ಹೇಳುವುದು ಹಣೆಯಲ್ಲಿ ಬರೆದಂತೆ ಆಗುತ್ತದೆ ಹಣೆ ಬರಹವನ್ನು ಬದಲಾಯಿಸಲು ಯಾರಿಂದಲೂ ಆಗುವುದಿಲ್ಲ ಎಂದು, ಇದನ್ನೇ ನಂಬಿದರೆ ಬಹಳ ಒಳ್ಳೆಯದು. ಯಾಕೆಂದರೆ ನಾವು ಪ್ರಾರ್ಥನೆ ಮಾಡುವುದರಿಂದ ಈಗಾಗಲೇ ನಮ್ಮ ಹಣೆಯಲ್ಲಿ ಬರೆದಿರುವ ಅದೃಷ್ಟ ಕಡಿಮೆ ಆಗಬಹುದು.

ಯಾವಾಗಲೂ ನಾವು ಮಾಡುವ ಯೋಜನೆಗಳಿಂದ ಭಗವಂತನ ಯೋಜನೆಯು ಶ್ರೇಷ್ಠವಾಗಿರುತ್ತದೆ, ನಾವು ಭಗವಂತನಲ್ಲಿಯೇ ಹೋಗಿ ನಮಗೆ ಏನು ಬೇಕು ಅದನ್ನು ಕೇಳುವುದರಿಂದ ಆ ಲಕ್ ಕಡಿಮೆ ಆಗಬಹುದು. ಆದ್ದರಿಂದ ಎಂದಿಗೂ ಕೂಡ ನಿಮ್ಮ ಆಸೆ ಆಕಾಂಕ್ಷೆಗಳು ಆಮಿಷಗಳನ್ನು ಭಗವಂತನ ಮುಂದೆ ಇಡಬೇಡಿ. ಅದರ ಬದಲು ದೇವರಿಗೆ ಪ್ರಾರ್ಥನೆ ಮಾಡುವಾಗ ನನ್ನ ಕರ್ಮಕ್ಕೆ ತಕ್ಕ ಪ್ರತಿಫಲ ಕೊಡು ನನ್ನ ಬದುಕಿನಲ್ಲಿ ಏನೇ ಬಂದರೂ ಕೂಡ ನೀನು ಜೊತೆಗಿದ್ದು ನನಗೆ ಧೈರ್ಯ ಹೇಳಿ ಎಲ್ಲವನ್ನು ನಿಭಾಯಿಸುವ ಶಕ್ತಿ ಕೊಡು ಎಲ್ಲರಿಗೂ ಎಲ್ಲವೂ ಒಳಿತಾಗುವಂತೆ ಮಾಡು ನನ್ನನ್ನು ಸರಿಯಾದ ದಾರಿಯಲ್ಲಿ ನಡೆಸು ಈ ರೀತಿಯಾಗಿ ಕೇಳಿಕೊಳ್ಳಬೇಕು.

ಕನಸಿನಲ್ಲಿ ಯಾವ ವಸ್ತುವನ್ನು ಕಂಡರೆ ಏನು ಅರ್ಥ ಬರುತ್ತದೆ ಗೊತ್ತಾ.?

ಸಾಧ್ಯವಾದರೆ ಪರೋಪಕಾರಕ್ಕಾಗಿ ಪ್ರಾರ್ಥನೆ ಮಾಡಬಹುದು. ಹೇಗೆಂದರೆ ಯಾರಾದರೂ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಇನ್ನೊಬ್ಬರ ಬದುಕಿನಲ್ಲಿ ನಿಮ್ಮ ಕೈಯಿಂದ ಪರಿಹರಿಸಲಾಗದ ಸಮಸ್ಯೆ ಇದ್ದಾಗ ನೀವು ಅವರಿಗೆ ದಾರಿ ತೋರಿಸುವ ಭಗವಂತ ಎಂದು ಇನ್ನೊಬ್ಬರಿಗಾಗಿ ಪ್ರಾರ್ಥನೆ ಮಾಡಬಹುದು ಹೊರತು ಸ್ವಾರ್ಥಕಾಗಿ ಬೇಡಿಕೆ ಇಡುವುದನ್ನೇ ಪ್ರಾರ್ಥನೆ ಎಂದು ಕೊಳ್ಳಬಾರದು.

ನಿಮ್ಮ ಬದುಕಿನಲ್ಲಿ ನೀವು ಏನನ್ನಾದರೂ ಸಾಧಿಸಬೇಕು ಅಥವಾ ಪಡೆದುಕೊಳ್ಳಬೇಕು ಎನ್ನುವುದು ನಿಮ್ಮ ಮನಸ್ಸಿನಲ್ಲಿ ಹುಟ್ಟಿದ್ದರೆ ನೀವು ಅದಕ್ಕಾಗಿ ಕಷ್ಟ ಪಡಬೇಕು, ಜೊತೆಗೆ ಅದನ್ನು ಸನ್ಮಾರ್ಗದಿಂದ ಸಂಪಾದಿಸಿಕೊಳ್ಳಲು ಪ್ರಯುತ್ನ ಪಡಬೇಕು. ನೀವು ಈ ರೀತಿ ನ್ಯಾಯವಾದ ದಾರಿಯಲ್ಲಿ ಹೋಗಿ ನೀವು ಇಷ್ಟ ಪಟ್ಟಿದ್ದನ್ನು ಪಡೆದುಕೊಳ್ಳಲು ಕಷ್ಟ ಪಡುತ್ತಿದ್ದರೆ ಭಗವಂತ ಅದನ್ನು ನೋಡಿ ಸುಮ್ಮನೆ ಇರುವುದಿಲ್ಲ ಖಂಡಿತವಾಗಿಯೂ ಕೂಡ ನಿಮ್ಮ ದಾರಿಯಲ್ಲಿ ಅದು ಸಿಗುವಂತೆ ಮಾಡುತ್ತಾನೆ.

ಗೃಹಣಿಯರಿಗೆ ಉಪಯುಕ್ತವಾಗುವ ಕೆಲವು ಅಡುಗೆಮನೆ ಟಿಪ್ಸ್.!

ಹಾಗಾಗಿ ಏನೇ ಬೇಕೆಂದರೂ ಸ್ವಂತ ಪರಿಶ್ರಮದಿಂದ ಪಡೆದುಕೊಳ್ಳಲು ಪ್ರಯತ್ನಿಸಿ, ನಿಮಗೆ ಏನೇ ಬೇಕು ಎಂದು ಅನಿಸಿದರೂ ಕೂಡ ಅದು ನಿಮ್ಮ ಮನಸ್ಸಿನ ಆಳದಿಂದ ಬರಬೇಕು ಹೊರತು ಮತ್ತೊಬ್ಬರ ಬಳಿ ಇರುವುದನ್ನು ನೋಡಿ ಅವರ ಮೇಲಿನ ಹೊಟ್ಟೆ ಕಿಚ್ಚಿನಿಂದ ಬರಬಾರದು. ಸಾಧ್ಯವಾದಷ್ಟು ನಾವು ಬದುಕಿನ ಭವ ಬಂಧನಗಳನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡಬೇಕು.

ಹಾಗೂ ಯಾವಾಗ ಬೇಕಾದರೂ ಎಲ್ಲವನ್ನು ಬಿಟ್ಟು ಹೋಗುವುದಕ್ಕೆ ತಯಾರಿರಬೇಕು. ಆಗ ಮಾತ್ರ ದುರಾಸೆಗೆ ಬೀಳದೆ ಒಳ್ಳೆಯ ರೀತಿಯಲ್ಲಿ ನಮ್ಮ ಬದುಕನ್ನು ಕಳೆದು ದೇವರಿಗೆ ಹತ್ತಿರವಾಗುತ್ತೇವೆ. ಇನ್ನು ಮುಂದೆ ಆದರೂ ನೀವು ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ತಿದ್ದಿಕೊಳ್ಳಿ.

Leave a Comment