ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ ಮಾಡಬೇಡಿ, ಹೃದಯ.ಘಾ.ತ.ದ ಎಚ್ಚರಿಕೆ ನೀಡುವ ಲಕ್ಷಣಗಳು ಇವು.!

ಹೃದಯಕ್ಕೆ ರಕ್ತದ ಹರಿವು ತೀವ್ರ ಕಡಿಮೆಯಾದಾಗ ಅಥವಾ ರಕ್ತದ ಹರಿವು ನಿಂತು ಹೋದಾಗ ಹೃದಯಘಾತ ಆಗುತ್ತದೆ. ಹೃದಯದ ಅಪಧಮನಿಗಳಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಅಥವಾ ಇತರ ಪದಾರ್ಥಗಳ ಶೇಖರಣೆಯಿಂದಾಗಿ ಈ ರೀತಿ ಆಗುತ್ತದೆ. ಹೃದಯಘಾತ ಆಗುವುದಕ್ಕೂ ಮುನ್ನ ಕೆಲ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತದೆ. ಇದನ್ನು ನಿರ್ಲಕ್ಷಿಸದೆ ಅರ್ಥ ಮಾಡಿಕೊಂಡು ತಕ್ಷಣವೇ ಎಚ್ಚೆತ್ತುಕೊಂಡರೆ ಪ್ರಾಣಪಾಯ ಆಗುವುದನ್ನು ತಪ್ಪಿಸಬಹುದು. ಹಾಗಾಗಿ ಹೃದಯಘಾತ ಆಗುವುದಕ್ಕೂ ಮುನ್ನ ಕಂಡುಬರುವ ಕೆಲವು ಪ್ರಮುಖ ಲಕ್ಷಣಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

● ಬೇಗ ಸುಸ್ತಾಗುವುದು:- ನಡೆಯುವಾಗ, ಮೆಟ್ಟಿಲು ಹತ್ತುವಾಗ ಅಥವಾ ಇಳಿಯುವುದಾಗ ಇಲ್ಲವೇ ಸ್ವಲ್ಪ ಕೆಲಸ ಮಾಡಿದ ತಕ್ಷಣವೇ ಬಹಳ ಸುಸ್ತಾಗುತ್ತಿದ್ದರೆ ನೀವು ತಪ್ಪದೇ ವೈದ್ಯರನ್ನು ಭೇಟಿ ಮಾಡಲೇಬೇಕು. ಮಹಿಳೆಯರಿಗೆ ತೀವ್ರ ಸುಸ್ತು ಹಾಗೂ ಆಯಾಸವಾಗುತ್ತಿದ್ದರೆ ಅದನ್ನು ಕಡೆಗಣಿಸುವಂತಿಲ್ಲ, ಅದು ಹೃದ್ರೋಗದ ಲಕ್ಷಣವಾಗಿರಬಹುದು. ಹಾಗಾಗಿ ತಪ್ಪದೇ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ.

ಕನಸಿನಲ್ಲಿ ಯಾವ ವಸ್ತುವನ್ನು ಕಂಡರೆ ಏನು ಅರ್ಥ ಬರುತ್ತದೆ ಗೊತ್ತಾ.?

● ತೋಳಿನ ನೋವು:- ಕೆಲವರಿಗೆ ಹೃದಯಘಾತದ ಲಕ್ಷಣವು ದೇಹದ ಎಡಭಾಗದ ನೋವುಗಳ ಮೂಲಕ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಕೂಡ ಹೃದಯದ ಎಡ ಭಾಗದಲ್ಲಿ ಹೆಚ್ಚು ನೋವಿದ್ದು, ಹೃದಯದ ಕೆಳಗೆ ವಿಪರೀತವಾಗಿ ಮತ್ತು ಅದು ತೋಳಿನವರೆಗೂ ಕೂಡ ಹಬ್ಬಿರುತ್ತದೆ. ಹಾಗಾಗಿ ಈ ರೀತಿ ಲಕ್ಷಣಗಳು ಇರುವವರು ಅನಾರೋಗ್ಯಕರ ಪರಿಸ್ಥಿತಿಯಲ್ಲಿ ಇರುತ್ತಾರೆ ಎಂದು ಊಹಿಸಬಹುದು. ಇಂಥವರು ಕೂಡ ತಪ್ಪದೆ ಒಮ್ಮೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಹೃದಯದ ಆರೋಗ್ಯಕ್ಕೆ ಸಂಬಂಧಪಟ್ಟ ಪರೀಕ್ಷೆಗೆ ಒಳಪಡುವುದು ಒಳ್ಳೆಯದು.

● ಎದೆ ನೋವು ಅಥವಾ ಅಸ್ವಸ್ಥತೆ:- ವಿಪರೀತವಾದ ಎದೆ ನೋವು ಕೂಡ ಮುಂದೆ ಹೃದಯಘಾತ ಉಂಟಾಗಬಹುದಾದ ಲಕ್ಷಣ. ಅತಿಯಾದ ಒತ್ತಡ ಇದಕ್ಕೆ ಕಾರಣವಾಗಿರಬಹುದು. ಯಾವಾಗಲೂ ಹೃದಯಕ್ಕೆ ನೋವನ್ನುಂಟು ಮಾಡುವ ಭಾವನೆಗಳು ಹಾಗೂ ಹೃದಯದ ಭಾಗದಲ್ಲಿ ವಿಪರೀತವಾದ ಬಿಗಿತ ಅನಾರೋಗ್ಯ ಪೀಡಿತ ಹೃದಯದ ಲಕ್ಷಣ ಹಾಗಾಗಿ ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಗೃಹಣಿಯರಿಗೆ ಉಪಯುಕ್ತವಾಗುವ ಕೆಲವು ಅಡುಗೆಮನೆ ಟಿಪ್ಸ್.!

● ತಲೆ ತಿರುಗುವುದು:- ಅನೇಕ ಕಾರಣಗಳಿಂದ ತಲೆತಿರುಗು ಉಂಟಾಗುತ್ತದೆ, ಹೃದಯಾಘಾತ ಒಂದೇ ಕಾರಣವಲ್ಲ ಆದರೆ ಅದು ಒಂದು ಲಕ್ಷಣ ಕೂಡ ಹೌದು. ಬೇರೆ ಯಾವುದೇ ಗಂಭೀರ ಸಮಸ್ಯೆ ಇಲ್ಲದೆ ತಲೆ ತಿರುಗು ಬರುತ್ತಿದ್ದರೆ ಲೋ ಬಿಪಿ ಆಗಿರಬಹುದು, ಈ ರೀತಿ ಕಡಿಮೆ ರಕ್ತದ ಒತ್ತಡ ಇದ್ದಾಗ ಹೃದಯ ಸರಿಯಾಗಿ ರಕ್ತವನ್ನು ಪಂಪ್ ಮಾಡಲು ಆಗುವುದಿಲ್ಲ, ಈ ರೀತಿ ಹೃದಯದಲ್ಲಿ ರಕ್ತದ ಹರಿವು ಕಡಿಮೆಯಾದಾಗ ಹೃದಯಘಾತ ಉಂಟಾಗುತ್ತದೆ. ಹಾಗಾಗಿ ಈ ರೀತಿಯ ಲಕ್ಷಣ ಕಾಣಿಸಿಕೊಂಡಾಗ ಕೂಡ ತಪ್ಪದೆ ವೈದ್ಯರನ್ನು ಭೇಟಿಯಾಗಿ ಪರೀಕ್ಷೆಗೆ ಒಳಪಡಿ.

● ಗಂಟಲು ನೋವು ಅಥವಾ ದವಡೆ ನೋವು:- ಇತ್ತೀಚಿನ ಅನೇಕ ಪ್ರಕರಣಗಳಲ್ಲಿ ಹೃದಯಘಾತ ಆಗುವುದಕ್ಕೂ ಮುನ್ನ ಆನೇಕರಿಗೆ ಹಲ್ಲುನೋವು ಹಾಗೂ ಗಂಟಲು ನೋವು ಕಾಣಿಸಿಕೊಂಡಿದೆ. ಹಾಗಾಗಿ ಶೀತ, ನೆಗಡಿ, ಸೈನಸ್ ನಂತಹ ಸಮಸ್ಯೆಗಳು ಬಿಟ್ಟು ಬೇರೆ ಯಾವುದೇ ಕಾರಣದಿಂದ ಗಂಟಲು ನೋವು ಅಥವಾ ದವಡೆ ನೋವು ಇದ್ದರೆ ಅದು ಕೂಡ ಇದನ್ನೇ ಸೂಚಿಸುತ್ತದೆ. ಆದ್ದರಿಂದ ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಎಚ್ಚರವಾಗಿರಿ ಮತ್ತು ಸೂಕ್ತ ವೈದ್ಯರನ್ನು ಭೇಟಿಯಾಗಿ ಸಮಸ್ಯೆ ಇದ್ದರೆ ಕೂಡಲೇ ಒಳ್ಳೆಯ ಚಿಕಿತ್ಸೆ ಪಡೆದುಕೊಳ್ಳಿ.

ಶುಕ್ರವಾರದಂದು ಯಾವುದೇ ಕಾರಣಕ್ಕೂ ಈ 6 ತಪ್ಪುಗಳನ್ನು ಮಾಡಲೇಬೇಡಿ.!

● ಆಯಾಸ, ಅಜೀರ್ಣ ಹಾಗೂ ಹೊಟ್ಟೆ ನೋವು:- ಕೆಲವರಿಗೆ ಹೃದಯಘಾತ ಆಗುವಾಗ ಅಜೀರ್ಣ, ವಾಕರಿಕೆ, ಹೊಟ್ಟೆ ನೋವು, ವಾಂತಿ ಉಂಟಾಗಿದೆ. ಈಗಾಗಲೇ ನೀವು ಈ ಮೇಲೆ ತಿಳಿಸಿದ ಯಾವುದಾದರೂ ಲಕ್ಷಣವನ್ನು ಹೊಂದಿದ್ದು ಅದರ ಜೊತೆಗೆ ಈ ರೀತಿಯಾಗುತ್ತಿದ್ದರೆ ಅಂತಹ ಸಮಯದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು ಮತ್ತು ಸಾಧ್ಯವಾದಷ್ಟು ತಕ್ಷಣವೇ ಆಸ್ಪತ್ರೆಗೆ ಹೋಗಲು ಪ್ರಯತ್ನಿಸಬೇಕು.

Leave a Comment