ಕನಸಿನಲ್ಲಿ ಯಾವ ವಸ್ತುವನ್ನು ಕಂಡರೆ ಏನು ಅರ್ಥ ಬರುತ್ತದೆ ಗೊತ್ತಾ.?

ಕನಸುಗಳನ್ನು ಎಲ್ಲರೂ ಕಾಣುತ್ತಾರೆ, ಅದರಲ್ಲಿ ಎರಡು ರೀತಿ ಇದೆ. ಒಬ್ಬ ವ್ಯಕ್ತಿ ಒಂದು ವಿಷಯದ ಬಗ್ಗೆ ಸದಾ ಯೋಚನೆ ಮಾಡುತ್ತಾ ಇದ್ದರೆ ಖಂಡಿತವಾಗಿಯೂ ಆ ವಿಷಯಗಳು ಆತನ ಸಬ್ ಕಾನ್ಷಿಯಸ್ ಮೈಂಡ್ ಅಲ್ಲಿ ಉಳಿದುಕೊಂಡು ಆತ ಅದರ ಬಗ್ಗೆಯೇ ಕನಸು ಕಾಣುತ್ತಾನೆ. ಇದನ್ನು ವಿದ್ಯಾರ್ಥಿಗಳಲ್ಲಿ ಅಥವಾ ಉದ್ಯೋಗ ಆಕಾಂಕ್ಷಿಗಳಲ್ಲಿ, ಮಹತ್ವಾಕಾಂಕ್ಷೆ ಉಳ್ಳವರಲ್ಲಿ ಕಾಣಬಹುದು. ಸಾಮಾನ್ಯ ಜನರೂ ಕೂಡ ನಿದ್ರೆ ಮಾಡುವಾಗ ಕನಸು ಕಾಣುತ್ತಾರೆ ಕೆಲವು ಕನಸುಗಳು ಎಚ್ಚರವಾದಗ ನೆನಪಿಗೆ ಬರುವುದಿಲ್ಲ, ಆದರೆ ಇನ್ನು ಕೆಲವು ಅಚ್ಚಳಿಯದಂತೆ ಉಳಿದುಕೊಳ್ಳುತ್ತವೆ.

ಈ ರೀತಿ ಬೀಳುವ ಕನಸನ್ನು ಬರಿ ಕನಸು ಮಾತ್ರವಲ್ಲ ಮುಂದೆ ಬರುವ ವಿಷಯವನ್ನು ತಿಳಿಸುವ ಮುನ್ಸೂಚನೆ ಎಂದು ಕೂಡ ಅಂದುಕೊಳ್ಳಬಹುದು. ಈ ರೀತಿಯ ಕನಸಿನಿಂದ ನಮಗೆ ಭವಿಷ್ಯದಲ್ಲಿ ಬರುವ ಆಗುಹೋಗುಗಳ ಬಗ್ಗೆ ಸುಳಿವು ಇರುತ್ತದೆ ಅದನ್ನು ಸ್ವಪ್ನ ಫಲ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಅದರಲ್ಲಿ ಕೆಲವು ಪ್ರಮುಖವಾದ ಕೆಲ ಸಂಗತಿಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಗೃಹಣಿಯರಿಗೆ ಉಪಯುಕ್ತವಾಗುವ ಕೆಲವು ಅಡುಗೆಮನೆ ಟಿಪ್ಸ್.!

● ಕನಸಿನಲ್ಲಿ ಕುಂಕುಮವನ್ನು ಕಂಡರೆ ಕೀರ್ತಿ ಲಭಿಸುತ್ತದೆ, ಅದು ಅದೃಷ್ಟದ ಸಂಕೇತ.
● ಕನಸಿನಲ್ಲಿ ಅಡುಗೆ ಮನೆಯನ್ನು ಕಂಡರೆ ಶೀಘ್ರದಲ್ಲಿ ಸುಖ ಭೊಜನ ಪ್ರಾಪ್ತಿಯಾಗುತ್ತದೆ ಮತ್ತು ಸಾಲದಿಂದ ಮುಕ್ತಿ ದೊರೆಯುತ್ತದೆ ಎಂದರ್ಥ
● ಕನಸಿನಲ್ಲಿ ದೇವಸ್ಥಾನ ಅಥವಾ ದೇವರನ್ನು ಕಂಡರೆ ನಿಮಗಿರುವ ಕಷ್ಟ ಕಾಲ ಕಳೆದು ಒಳ್ಳೆಯ ಸಮಯ ಬರುತ್ತಿದೆ ಎಂದು ಅರ್ಥ.
● ಕನಸಿನಲ್ಲಿ ಶುದ್ಧವಾದ ನೀರನ್ನು ಕಂಡರೆ ನಿಮಗೆ ಶೀಘ್ರದಲ್ಲಿ ಶುಭವಾಗಲಿ, ಶುಭ ಸಮಾಚಾರ ಕೇಳುತ್ತೀರಿ ಎಂದುಕೊಳ್ಳಬಹುದು.

● ಅಶುದ್ಧವಾದ ನೀರನ್ನು ಕನಸಿನಲ್ಲಿ ಕಂಡರೆ ಅದು ಅಶುಭ, ನಷ್ಟ ಹಾಗೂ ಕೆಟ್ಟ ಸುದ್ದಿಯನ್ನು ಕೇಳುತ್ತಿರಿ ಎನ್ನುವುದರ ಸೂಚನೆ.
● ಕನಸಿನಲ್ಲಿ ನಿಧಿಯನ್ನು ಕಂಡರೆ ಸಂಪತ್ತು ಪ್ರಾಪ್ತಿ ಆಗುತ್ತದೆ ಎನ್ನುವುದರ ಮುನ್ಸೂಚನೆ.
● ಗಂಧವನ್ನು ಕನಸಿನಲ್ಲಿ ಕಂಡರೆ ಅದು ಕೂಡ ಶುಭ ಸಂಕೇತ
● ಕನಸಿನಲ್ಲಿ ನೋಟನ್ನು ಅಥವಾ ನೋಟಿನ ಕಂತೆಗಳನ್ನು ಕಂಡರೆ ನಿಮಗೂ ಕೂಡ ಧನ ಲಾಭವಾಗಲಿದೆ ಎನ್ನುವುದರ ಸೂಚನೆ.
● ಚಿಲ್ಲರೆ ಹಣವನ್ನು ಕಂಡರೆ ನಿಮ್ಮ ಹಣ ಖರ್ಚಾಗುತ್ತದೆ ಎನ್ನುವ ಅರ್ಥ.

ಶುಕ್ರವಾರದಂದು ಯಾವುದೇ ಕಾರಣಕ್ಕೂ ಈ 6 ತಪ್ಪುಗಳನ್ನು ಮಾಡಲೇಬೇಡಿ.!

● ಕನಸಿನಲ್ಲಿ ಉರಿಯುತ್ತಿರುವ ದೀಪವನ್ನು ಕಂಡರೆ ಅದು ಸಮೃದ್ಧಿಯ ಸಂಕೇತ
● ಅರಳಿರುವ ಹೂಗಳನ್ನು ಕನಸಿನಲ್ಲಿ ಕಂಡರೆ ನಿಮಗಿದ್ದ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದರ ಸೂಚನೆಯದು.
● ಪುಸ್ತಕಗಳನ್ನು ಕನಸಿನಲ್ಲಿ ಕಂಡರೆ ಅದು ನಿಮ್ಮ ಪ್ರಬುದ್ಧತೆ ಹೆಚ್ಚುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.
● ಯಾವುದೇ ರೀತಿಯ ಆಯುಧಗಳನ್ನು ಕನಸಿನಲ್ಲಿ ಕಂಡರೆ ನಿಮ್ಮ ನಿಂತು ಹೋಗಿದ್ದ ಕೆಲಸಗಳು ಮತ್ತೆ ಶುರು ಆಗುತ್ತದೆ ಎನ್ನುವುದರ ಸೂಚನೆ.

● ಕಾಗೆಗಳನ್ನು ಕನಸಿನಲ್ಲಿ ಕಂಡರೆ ನೀವು ಆದಷ್ಟು ಎಲ್ಲ ವಿಷಯದಲ್ಲೂ ಕೂಡ ಜಾಗೃತಿಯಲ್ಲಿರಬೇಕು ಎನ್ನುವ ಸೂಚನೆ.
● ತಲಪಾಯ ಕನಸಿನಲ್ಲಿ ಕಂಡರೆ ಗೌರವ ಹೆಚ್ಚಾಗುತ್ತದೆ
● ಕನಸಿನಲ್ಲಿ ಸತ್ತು ಹೋದ ಹಿರಿಯರು ಕಾಣಿಸಿಕೊಂಡರೆ ಅವರ ಆಶೀರ್ವಾದ ದೊರೆತಿದೆ ಎಂದು ಅಂದುಕೊಳ್ಳಬೇಕು.
● ಕನಸಿನಲ್ಲಿ ವಾಹನಗಳನ್ನು ಕಂಡರೆ ನೀವು ಸದ್ಯದಲ್ಲೇ ಪ್ರಯಾಣವನ್ನು ಬೆಳೆಸಬೇಕಾಗಿ ಬರುತ್ತದೆ ಎನ್ನುವುದರ ಸೂಚನೆ.

ಹೆಣ್ಣುಮಕ್ಕಳು ಹಾಕುವ ಶಾಪ ನಮ್ಮನ್ನು ಜೀವನ ಪೂರ್ತಿ ನರಳುವಂತೆ ಮಾಡುತ್ತದೆ.! ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತದೆ, ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ಕನ್ನಡಿ ಕನಸಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಯಾವುದೇ ಮಹತ್ವಕಾಂಕ್ಷೆ ನೆರವೇರುತ್ತದೆ ಎಂದು ಅರ್ಥ
● ಸಂಖ್ಯೆಗಳನ್ನು ಕನಸಿನಲ್ಲಿ ಕಂಡರೆ ನಿಮಗೆ ಲಾಟರಿಯಲ್ಲಿ ಲಾಭವಾಗುತ್ತದೆ ಎನ್ನುವುದರ ಮುನ್ಸೂಚನೆ.
● ನೀವು ಕುದುರೆ ಮೇಲೆ ಸವಾರಿ ಮಾಡುತ್ತಿರುವ ರೀತಿ ಕನಸಿನಲ್ಲಿ ಕಂಡರೆ ನೀವು ಕೈಗೊಳ್ಳಬೇಕು ಎಂದು ಹಾಕಿಕೊಂಡಿರುವ ಯೋಜನೆಯಲ್ಲಿ ಯಶಸ್ವಿಯಾಗುತ್ತೀರಿ ಎಂದು ಅರ್ಥ.
● ಕನಸಿನಲ್ಲಿ ಮುತ್ತೈದೆಯರನ್ನು ಕಂಡರೆ ಅದು ಕೂಡ ಶುಭ.

Leave a Comment