ಹೆಣ್ಣು ಒಂದು ಕುಟುಂಬದ ಕಣ್ಣು ಎನ್ನುತ್ತಾರೆ, ಹೆಣ್ಣನ್ನು ಮನೆಯ ನಂದಾದೀಪ ಎಂದು ಕರೆಯುತ್ತಾರೆ, ಮನೆಯ ಮಹಾಲಕ್ಷ್ಮಿ , ಹೆಣ್ಣು ಜೀವನದಲ್ಲಿ ಬರುವುದೇ ಸೌಭಾಗ್ಯ ಎನ್ನುತ್ತಾರೆ. ಹೆಣ್ಣು ಮಕ್ಕಳು ತಾಯಿಯಾಗಿ, ಮಡದಿಯಾಗಿ, ಮಗಳಾಗಿ, ಸ್ನೇಹಿತೆಯಾಗಿ, ಸಹೋದರಿ ರೂಪದಲ್ಲಿ ಬದುಕಿನಲ್ಲಿ ಬರುತ್ತಾರೆ. ಈ ರೀತಿ ಒಂದು ಹೆಣ್ಣು ನಿಮ್ಮ ಜೀವನದಲ್ಲಿ ಬರಬೇಕು ಎಂದರೆ ಅದಕ್ಕೆ ಋಣ ಇರಬೇಕು, ಅದೃಷ್ಟ ಇರಬೇಕು.
ಆದರೆ ಕೆಲವರು ವಿನಾಕಾರಣ ಹೆಣ್ಣು ಮಕ್ಕಳಿಗೆ ತೊಂದರೆ ಕೊಟ್ಟು ಅವರ ಶಾಪಕ್ಕೆ ಗುರಿಯಾಗುತ್ತಾರೆ. ಹೆಣ್ಣು ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಕೂಡ ಬಲವಂತವಾಗಿ ಅವರನ್ನು ಮದುವೆಯಾಗುವದರಿಂದ, ಪ್ರೀತಿಸಿ ಮದುವೆಯಾಗುತ್ತೇನೆ ಎಂದು ಹೇಳಿ ಅರ್ಧ ದಾರಿಯಲ್ಲಿ ಕೈ ಕೊಟ್ಟು ಹೋಗುವುದರಿಂದ ಅಥವಾ ಮದುವೆಯಾದ ಬಳಿಕ ಪ್ರತಿದಿನವೂ ಕೂಡ ಹೆಣ್ಣಿಗೆ ಕಣ್ಣೀರು ಹಾಕಿಸುವುದರಿಂದ ಸ್ತ್ರೀ ಶಾಪ ತಟ್ಟುತ್ತದೆ.
ಇದು ಎಷ್ಟು ಘೋ’ರವಾಗಿ ಇರುತ್ತದೆ ಎಂದರೆ ಹೆಣ್ಣಿನ ಕಣ್ಣೀರಿನ ಒಂದೊಂದು ಹನಿ ಕಣ್ಣೀರಿಗೂ ಕೂಡ ಬಹುದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ಈ ರೀತಿ ಹೆಣ್ಣಿನ ಶಾಪಕ್ಕೆ ಗುರಿಯಾಗಿ ದೇವಾನುದೇವತೆಗಳು ಸಮಸ್ಯೆಗೆ ಸಿಲುಕಿರುವುದು, ಮಹಾ ಸಾಮ್ರಾಜ್ಯಗಳ ಮುಳುಗಿ ಹೋಗಿದ್ದನ್ನು ಪುರಾಣಗಳಲ್ಲಿ ಹಾಗೂ ಇತಿಹಾಸಗಳಲ್ಲಿ ಕಾಣಬಹುದು.
ಈ ರೀತಿ ಹೆಣ್ಣಿಗೆ ಸಮಸ್ಯೆ ಉಂಟು ಮಾಡುವವರಿಗೆ ಆಕೆ ಶಾಪಕ್ಕೆ ಗುರಿಯಾಗುವವರಿಗೆ ಏನೆಲ್ಲ ಸಮಸ್ಯೆ ಬರಬಹುದು ನೋಡಿ. ಹೆಣ್ಣಿನ ಶಾಪಕ್ಕೆ ಗುರಿಯಾಗಿ ತೊಂದರೆ ಅನುಭವಿಸುವುದನ್ನು ಸರ್ಪ ಶಾಪಕ್ಕೆ ಹೋಲಿಸಲಾಗಿದೆ. ಹೇಗೆ ಸರ್ಪಗಳಿಗೆ ತೊಂದರೆ ಕೊಟ್ಟಾಗ ಅದರಿಂದ ಶಾಪವು ಜೀವನಪೂರ್ತಿ ನರಳುವಂತೆ ಮಾಡುವುದೋ ಹಾಗೆಯೇ ಹೆಣ್ಣು ಮಕ್ಕಳಿಗೆ ತೊಂದರೆ ಕೊಟ್ಟು ಆಕೆಯನ್ನು ನೋವುಂಟು ಮಾಡಿ ಅದಕ್ಕೆ ಕಾರಣನಾದ ಪುರುಷನಿಗೂ ಜೀವನಮೂರ್ತಿ ಕಣ್ಣೀರಿಡುವ ಪರಿಸ್ಥಿತಿ ಬರುತ್ತದೆ.
ಅವನು ಕೈಗೊಳ್ಳುವ ಯಾವ ಕೆಲಸವೂ ಕೂಡ ಪೂರ್ತಿ ಆಗುವುದಿಲ್ಲ, ಅವನಿಗೆ ಲಾಭ ಎನ್ನುವುದೇ ಇರುವುದಿಲ್ಲ, ಎಲ್ಲಾ ಕೆಲಸಗಳನ್ನು ನ’ಷ್ಟವಾಗುತ್ತದೆ. ಎಲ್ಲಿ ಹೋದರು ಕೂಡ ಅಪಕೀರ್ತಿಗೆ ಒಳಗಾಗುತ್ತಾನೆ, ಇದರಿಂದ ಆತನ ಮಾನಸಿಕ ಆರೋಗ್ಯ ಹಾಳಾಗುತ್ತದೆ, ಕಂಡು ಕೇಳರಿಯದ ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತವೆ. ಆ ಮಹಿಳೆ ಅವನಿಂದ ಎಷ್ಟು ನೋವಿಗೆ ಒಳಗಾಗಿದ್ದಳು ಅದರ ಎರಡರಷ್ಟು ಕಣ್ಣೀರು ಹಾಕುವಂತೆ ಆಗುತ್ತದೆ ಜೀವನ ಪೂರ್ತಿ ನರಳುವ ಪರಿಸ್ಥಿತಿ ಬರುತ್ತದೆ.
ಹಾಗಾಗಿ ಯಾರು ಕೂಡ ಹೆಣ್ಣನ್ನು ನೋಯಿಸಬಾರದು. ತಾಯಿ, ಹೆಂಡತಿ, ಪ್ರೀತಿಸಿದ ಹುಡುಗಿ ಅಥವಾ ಸಹೋದರಿ ಇವರನ್ನು ನೋಯಿಸಿ ಕಣ್ಣೀರಾಕಿಸಬಾರದು. ಹೆಣ್ಣಿನ ಶಾಪಕ್ಕೆ ಗುರಿಯಾದರೆ ಆಕೆ ಕಾಲಿಗೆ ಬಿದ್ದು ಕ್ಷಮೆ ಕೇಳುವುದೇ ಒಂದೇ ಪರಿಹಾರ. ನಿಮ್ಮಿಂದ ನೋವಿಗೆ ಒಳಗಾದವರು ಖಂಡಿತ ನಿಮ್ಮಿಂದ ತುಂಬಾ ದೂರ ಹೋಗಿರುತ್ತಾರೆ. ಜೀವನದಲ್ಲಿ ನೀವು ಇದ್ಧ ಪರಿಸ್ಥಿತಿಯನ್ನು ಹಾಳು ಮಾಡಿಕೊಂಡು ತುಂಬಾ ಪಾತಾಳಕ್ಕೆ ಹೋಗುತ್ತಿದ್ದೇವೆ ಎಂದರೆ ಖಂಡಿತವಾಗಿ ಇದು ಯಾವ ಕಾರಣಕ್ಕೆ ಅನ್ನೋದು ನಿಮಗೆ ಅರಿವಾಗಿರುತ್ತದೆ.
ಇಂದು ಮಧ್ಯರಾತ್ರಿಯಿಂದ ಈ 5 ರಾಶಿಯವರಿಗೆ ಗುರುಬಲ, ರಾತ್ರೋ ರಾತ್ರಿ ಅದೃಷ್ಟ ಬದಲಾವಣೆ, ದುಡ್ಡಿನ ಸುರಿಮಳೆ.!
ಆಗ ಅವರ ಬಳಿಗೆ ಹೋಗಿ ಮನಸಾರೆ ಕ್ಷಮೆ ಕೇಳಿ ಸಾಧ್ಯವಾದರೆ ನಿಮ್ಮಿಂದ ಅವರಿಗಾಗಿರುವ ತೊಂದರೆಯನ್ನು ಸರಿ ಮಾಡಲು ಪ್ರಯತ್ನಿಸಿ. ಒಂದು ವೇಳೆ ಅವರು ಕ್ಷಮಿಸಿದರೆ ಮಾತ್ರ ನೀವು ಸ್ವಲ್ಪ ನೆಮ್ಮದಿಯನ್ನು ಕಾಣಬಹುದು ಇಲ್ಲವಾದಲ್ಲಿ ಜೀವನಪೂರ್ತಿ ದುಃ’ಖ ತಪ್ಪಿದ್ದಲ್ಲ. ಅದಕ್ಕೆ ಹೆಣ್ಣನ್ನು ದೈವ ಸ್ವರೂಪ ಎನ್ನುವುದು, ಎಲ್ಲಿ ನಾರಿಯನ್ನು ಪೂಜಿಸುತ್ತಾರೆ ಅಲ್ಲಿ ದೇವತೆಗಳು ನೆಲೆಸುತ್ತಾರೆ. ದೇವರ ಆಶೀರ್ವಾದವೂ ದೊರೆಯುತ್ತದೆ. ಒಂದು ವೇಳೆ ವಿರುದ್ಧವಾಗಿ ನಡೆದುಕೊಂಡರೆ ಬದುಕು ನರಕವಾಗುವುದು ಕಟ್ಟಿಟ್ಟ ಬುತ್ತಿ.