ಕೇಂದ್ರ ಸರ್ಕಾರದಿಂದ 75 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್ ನೀಡುತ್ತಿದ್ದಾರೆ ಆಸಕ್ತರು ಅರ್ಜಿ ಸಲ್ಲಿಸಿ.!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ದೇಶದ ಎಲ್ಲಾ ವರ್ಗದ ಕ್ಷೇಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ರೈತರು, ವಿದ್ಯಾರ್ಥಿಗಳು, ಶ್ರಮಿಕ ವರ್ಗ ಹಾಗೂ ಗೃಹಿಣಿಯರು ಸೇರಿದಂತೆ ಪ್ರತಿಯೊಬ್ಬರಿಗೂ ವಿಭಿನ್ನವಾದ ಯೋಜನೆಗಳನ್ನು ಜಾರಿಗೆ ತಂದು ಅವರ ಹಾದಿಯನ್ನು ಸುಗಮ ಮಾಡುತ್ತಿದ್ದಾರೆ.

ಇವುಗಳ ಪೈಕಿ ಗೃಹಣಿಯರಿಗೆ ಜಾರಿಗೆ ತಂದಿರುವ ಉಜ್ವಲ ಯೋಜನೆ (Ujwal Yojane) ಸಾಕಷ್ಟು ಮನ್ನಣೆ ಗಳಿಸಿದೆ ಯಾಕೆಂದರೆ ಹೊಗೆ ಮುಕ್ತ ವಾತಾವರಣದಲ್ಲಿ ಮಹಿಳೆಯರು ಅಡುಗೆ ಮಾಡುವಂತಹ ಅನುಕೂಲತೆ ಮಾಡಿಕೊಡಬೇಕು ಇದನ್ನು ದೇಶದ ಕಟ್ಟ ಕಡೆ ಹಳ್ಳಿಯ ಮಹಿಳೆತನಕ ತಲುಪಿಸಿ ಪ್ರತಿಯೊಂದು ಮನೆ ಕೂಡ ಗ್ಯಾಸ್ ಸಂಪರ್ಕ ಹೊಂದಬೇಕು ಎನ್ನುವ ಮಹಾತ್ಮಾಕಾಂಕ್ಷೆಯಿಂದ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಇಂದು ಮಧ್ಯರಾತ್ರಿಯಿಂದ ಈ 5 ರಾಶಿಯವರಿಗೆ ಗುರುಬಲ, ರಾತ್ರೋ ರಾತ್ರಿ ಅದೃಷ್ಟ ಬದಲಾವಣೆ, ದುಡ್ಡಿನ ಸುರಿಮಳೆ.!

2016ರಲ್ಲಿ ಮೊದಲಿಗೆ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆ ಮೂಲಕ ಸಮಾಜದಲ್ಲಿ ಹಿಂದುಳಿದ ವರ್ಗದ ಕುಟುಂಬಗಳ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕದ (free gas connection and Gasstove) ಜೊತೆಗೆ ಉಚಿತ ಗ್ಯಾಸ್ ಸ್ಟವ್ ನೀಡುವುದು ಮಾತ್ರವಲ್ಲದೇ ಸಬ್ಸಿಡಿ ಬೆಲೆಯಲ್ಲಿ ಸಿಲೆಂಡರ್ (Subsidy on cylinder booking) ಕೂಡ ನೀಡುತ್ತಿದೆ.

ಪರೋಕ್ಷವಾಗಿ ಇದು ಪರಿಸರದ ಮಾಲಿನ್ಯವನ್ನು ತಪ್ಪಿಸಲ್ಲಿ ಅರಣ್ಯ ನಾಶವನ್ನು ಕೂಡ ಕಡಿಮೆ ಮಾಡವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಮಹಿಳೆಯರು ಸೌದೆ ಒಲೆಯಲ್ಲಿ ಅಡುಗೆ ಮಾಡುವುದರಿಂದ ಈ ಮೇಲೆ ತಿಳಿಸಿದ ಎಲ್ಲ ರೀತಿಯ ಅನಾನುಕೂಲತೆಗಳು ಉಂಟಾಗುವುದರಿಂದ ಅದನ್ನು ತಪ್ಪಿಸುವ ಸಲುವಾಗಿ ನಿರ್ಧಾರಕ್ಕೆ ಬಂದ ಕೇಂದ್ರ ಸರ್ಕಾರ ಯೋಜನೆ ಜಾರಿಯಾದಾಗ 5 ಕೋಟಿ ಮಹಿಳೆಯರಿಗೆ ತಲುಪಿಸುವ ಗುರಿ ಹೊಂದಿತ್ತು, ನಂತರ ಅದನ್ನು 8 ಕೋಟಿಗೆ ವಿಸ್ತರಿಸಿತು ಈಗ ಯಶಸ್ವಿಯಾಗಿ 10 ಮಹಿಳೆಯರನ್ನು ತಲುಪುವ ಲಕ್ಷಣ ಕಾಣುತ್ತಿದೆ.

ಮಹಿಳೆಯರಲ್ಲಿ ಕಂಡು ಬರುವ PCOD ಸಮಸ್ಯೆಗೆ ಶಾಶ್ವತ ಪರಿಹಾರ.! ವೈದ್ಯರ ಈ ಸಲಹೆ ಪಾಲಿಸಿ ಸಾಕು.!

ಇತ್ತೀಚಿಗೆ ನಡೆದ ಕ್ಯಾಬಿನೆಟ್ ಮೀಟಿಂಗ್ (cabinet meeting) ನಲ್ಲಿ 2023-24 ನೇ ಸಾಲಿನ ಉಜ್ವಲ ಯೋಜನೆಯಡಿ 75 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಬೇಕು ಎನ್ನುವ ಯೋಜನೆಗೆ ಸಹಿ ಬಿದ್ದಿದೆ, ಇದಕ್ಕಾಗಿ ಈ ವರ್ಷ 1650 ಕೋಟಿ ವ್ಯಯಿಸಲಾಗುತ್ತಿದೆ ಈವರೆಗೂ 9.60 ಕೋಟಿ ಮಹಿಳೆಯರು ಉಜ್ವಲ ಯೋಜನೆ ಪ್ರಯೋಜನ ಪಡೆಯುತ್ತಿದ್ದರು.

ಈಗ ಅದು ಕೋಟಿ ಗಡಿ ದಾಟಲಿದೆ ಎನ್ನುವ ಮಾಹಿತಿಯನ್ನು ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ (Minister Anuragh Thakur) ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್ನು ಕೂಡ ಗ್ಯಾಸ್ ಸಂಪರ್ಕ ಪಡೆಯದ ದೇಶದಲ್ಲಿರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಅರ್ಜಿ ಸಲ್ಲಿಸಿ ಈ ಅನುಕೂಲತೆಯನ್ನು ಪಡೆದುಕೊಳ್ಳಬಹುದು. ಜೊತೆಗೆ ಇತ್ತೀಚಿಗೆ ಸರ್ಕಾರವು ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡಿರುವುದು ಕೂಡ ಉಜ್ವಲ ಯೋಜನೆ ಅಡಿ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಡಬಲ್ ಧಮಾಕವಾಗಲಿದೆ.

ಉಚಿತ ಪ್ರಯಾಣಕ್ಕೆ ಇನ್ಮುಂದೆ ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯ.! ಸ್ಮಾರ್ಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಕೇಂದ್ರ ಸರ್ಕಾರವು ಎಲ್ಲಾ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಳೆಯನ್ನು 200 ರೂಪಾಯಿ ಇಳಿಕೆ ಮಾಡಿತ್ತು. ಉಜ್ವಲ ಯೋಜನೆಯಡಿ ಈಗಾಗಲೇ ಪ್ರತಿ ಸಿಲಿಂಡರ್ ಬುಕ್ಕಿಂಗ್ ಮೇಲೆ 200ರೂ. ಸಬ್ಸಿಡಿ ಸಿಗುತ್ತಿದ್ದ ಕಾರಣ ಈಗ ಹೊಸದಾಗಿ ಘೋಷಣೆ ಮಾಡುವ 200 ರುಪಾಯಿ ಸೇರಿ ಒಟ್ಟು 400ರೂ. ಕಡಿಮೆ ಆಗುತ್ತಿದೆ.

ನೀವು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸೂಕ್ತ ದಾಖಲೆಗಳನ್ನು ಸಲ್ಲಿಸಿ ನಿಮಗೆ ಯಾವ ಕಂಪನಿಯಿಂದ ಗ್ಯಾಸ್ ಸಂಪರ್ಕ ಬೇಕು ಎನ್ನುವುದನ್ನು ಸೆಲೆಕ್ಟ್ ಮಾಡಿ ಅರ್ಜಿ ಸಲ್ಲಿಸಿ ಯೋಜನೆಯ ಫಲಾನುಭವಿಯಾಗಬಹುದು ಇಂತಹ ಒಂದು ಅವಕಾಶವನ್ನು ತಪ್ಪದೆ ಬಳಸಿಕೊಳ್ಳಿ.

ನನ್ನ ಹಣೆಬರಹ ಚೆನ್ನಾಗಿಲ್ಲ, ಕಷ್ಟಗಳು ನನ್ನನ್ನೇ ಹುಡುಕಿ ಬರುತ್ತವೆ ಎನ್ನುವವರು ತಪ್ಪದೆ ಈ 4 ಕೆಲಸ ಮಾಡಿ.!

Leave a Comment