ನನ್ನ ಹಣೆಬರಹ ಚೆನ್ನಾಗಿಲ್ಲ, ಕಷ್ಟಗಳು ನನ್ನನ್ನೇ ಹುಡುಕಿ ಬರುತ್ತವೆ ಎನ್ನುವವರು ತಪ್ಪದೆ ಈ 4 ಕೆಲಸ ಮಾಡಿ.!

● ಸೇವೆ ಎಲ್ಲರಿಗೂ ಮಾಡು ಆದರೆ ಪ್ರತಿಫಲ ಯಾರಿಂದಲೂ ಬಯಸಬೇಡ, ಏಕೆಂದರೆ ನೀನು ಮಾಡುವ ಕಾರ್ಯಗಳಿಗೆ ಫಲ ನೀಡುವವನು ಭಗವಂತ ಎಂದು ಶ್ರೀ ಕೃಷ್ಣ ಹೇಳುತ್ತಾರೆ.
● ಮನುಷ್ಯನನ್ನು ಹುಟ್ಟಿದಾಗಲೂ ಎತ್ತುಕೊಳ್ಳಬೇಕು, ಮರಣ ಹೊಂದಿದಾಗಲೂ ಎತ್ತುಕೊಳ್ಳಬೇಕು ಆದರೆ ಆ ನಡುವೆ ನಡೆದಾಡುತ್ತೇನೆ ಎನ್ನುವ ಕಾರಣಕ್ಕೆ ಅಹಂಕಾರ ಪಡಬಾರದು.

● ಒಳ್ಳೆಯವರ ಶಾಪ ಒಳ್ಳೆಯದಲ್ಲ. ಕೆಟ್ಟದ್ದವರು ಕೆಟ್ಟದ್ದನ್ನು ಮಾಡಿದರೆ ಕೆಡುಕಾಗಬಹುದು, ಆದರೆ ಒಳ್ಳೆಯವರು ಕೆಟ್ಟದ್ದನ್ನು ಮಾಡಬೇಕು ಎಂದುಕೊಂಡರೆ ಸರ್ವನಾಶ ಖಂಡಿತ.
● ಒಳ್ಳೆವರಿಗೆ ಆದ ಮೋಸಕ್ಕೆ ಭಗವಂತನೇ ಉತ್ತರ ಕೊಡುತ್ತಾನೆ. ಒಳ್ಳೆಯವರಿಗೆ ಸೋಲಾಗುವುದಿಲ್ಲ, ಕೆಟ್ಟವರು ಎಂದಿಗೂ ಉದ್ಧಾರ ಆಗುವುದಿಲ್ಲ.

ಸ್ಮಾರ್ಟ್ ರೇಷನ್ ಕಾರ್ಡ್ ಇದ್ದರೆ ಮಾತ್ರ ಇನ್ಮುಂದೆ ರೇಷನ್ ಸಿಗೋದು, ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ.!

● ಒಳ್ಳೆಯವರ ಹಾಗೆ ಜೊತೆಯಲ್ಲಿದ್ದು ಮೋಸ ಮಾಡುವವರ ಬಗ್ಗೆ ನಾವು ದುಃಖ ಪಡಬೇಕಿಲ್ಲ, ಯಾಕೆಂದರೆ ಇದು ಭಗವಂತನ ಆಟ ಭಗವಂತ ಅವರ ನಿಜ ಸ್ವರೂಪವನ್ನು ನಿಮ್ಮೆದರು ಬಯಲು ಮಾಡಿ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾನೆ
● ಹಣದಿಂದ ಏನು ಬೇಕಾದರೂ ಸಂಪಾದಿಸಬಹುದು, ಆದರೆ ಇನ್ನೊಬ್ಬರಿಂದ ನಿಷ್ಕಲ್ಮಶ ಪ್ರೀತಿಯನ್ನು ಪಡೆಯಲಾಗದು ಹಾಗಾಗಿ ಹಣ ಸಂಪಾದನೆ ಮಾಡುವುದಕ್ಕಿಂತ ಪ್ರೀತಿ ಹಾಗು ನಂಬಿಕೆ ಸಂಪಾದನೆ ಮಾಡುವುದೇ ಬಹಳ ಶ್ರೇಷ್ಠ

● ಒಣಗಿದ ಹೂವನ್ನು ನೋಡಿ ಅರಳಿದ ಹೂವು ನಗಬಹುದು ಆದರೆ ಆಸ್ಥಾನಕ್ಕೆ ಅದು ಕೂಡ ಬರುತ್ತದೆ ಎನ್ನುವುದೇ ಸತ್ಯ. ಅಹಂಕಾರದಿಂದ ಗರ್ವ ಪಡುವವರಿಗೆ ಇದು ತಪ್ಪಿದ್ದಲ್ಲ.
● ಮರದ ಬೇರಿಗೆ ಹಾಕಿದ ನೀರು ತುದಿಯ ಎಲೆಯವರೆಗೆ ಹೇಗೆ ತಲುಪುತ್ತದೆಯೋ ಹಾಗೆಯೇ ಭಕ್ತಿಯಿಂದ ಪ್ರೀತಿಯಿಂದ ಏನೇ ಕೆಲಸ ಮಾಡಿದರೆ ಕೂಡ ಅದು ಭಗವಂತನವರೆಗೂ ತಲುಪುತ್ತದೆ.

ಈ ಮೂರು ವಿಷಯ ಗೊತ್ತಿದ್ರೆ ನಿಮಗೆ ಯಾವತ್ತೂ ಸ್ಟ್ರೋಕ್ ಹೊಡೆಯುವುದಿಲ್ಲ.! ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು.!

● ಕಷ್ಟಗಳು ನನ್ನನ್ನು ಮುಳುಗಿಸುತ್ತೇವೆ, ಹಣೆಬರಹ ಚೆನ್ನಾಗಿಲ್ಲ ಎಂದು ದುಃಖ ಪಡಬೇಡಿ. ಭಗವಂತನು ಒಳ್ಳೆಯವರಿಗೆ ಹೆಚ್ಚು ಕಷ್ಟ ಕೊಟ್ಟರೂ ಕೂಡ ಹಿಂದೆ ನಿಂತು ಕಾಯುತ್ತಿರುತ್ತಾನೆ. ಪ್ರಪಂಚದಲ್ಲಿ ಚಿನ್ನದ ಪರಿಶುದ್ಧತೆಯನ್ನು ಮಾತ್ರ ಪರಿಕ್ಷಿಸಲಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಅನ್ಯಮಾರ್ಗವನ್ನು ಹಿಡಿಯಬೇಡಿ, ಭಗವಂತನ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ತಾಳ್ಮೆಯಿಂದ ಕಾಯಿರಿ.

● ಸ್ವರ್ಗದಲ್ಲಿ ಎಲ್ಲವೂ ಇದೆ ಆದರೆ ಸಾವಿಲ್ಲ, ಭಗವದ್ಗೀತೆಯಲ್ಲಿ ಎಲ್ಲವೂ ಇದೆ ಆದರೆ ಸುಳ್ಳಿಲ್ಲ. ಜಗತ್ತಿನಲ್ಲಿ ಎಲ್ಲವೂ ಇದೆ ಆದರೆ ಶಾಂತಿಯಲ್ಲ ಇಂದಿನ ಮನುಷ್ಯನಲ್ಲಿ ಎಲ್ಲವೂ ಇದೆ ಆದರೆ ಆತನಿಗೆ ತೃಪ್ತಿ ಮತ್ತು ನೆಮ್ಮದಿ ಇಲ್ಲ.
● ದುರ್ಬಲರು ಹಾಗೂ ಹೇಡಿಗಳು ಮಾತ್ರ ಅದೃಷ್ಟಕ್ಕಾಗಿ ಕಾಯುತ್ತಾರೆ. ತಮ್ಮ ಮೇಲೆ ಬಲವಾದ ಆತ್ಮವಿಶ್ವಾಸ ಹೊಂದಿರುವವರು ಸಿಗುವ ಅವಕಾಶಗಳನ್ನೇ ಅದೃಷ್ಟವನ್ನಾಗಿ ಬದಲಾಯಿಸಿಕೊಳ್ಳುತ್ತಾರೆ.
● ಬದುಕಿನಲ್ಲಿ ಯಾವಾಗಲೂ ನಿನ್ನನ್ನು ಬೆಂಬಲಿಸುವವರು ಅಪರಿಚಿತರೇ ಆಗಿರುತ್ತಾರೆ ಹಾಗೂ ನಿನ್ನ ಅತೀ ದೊಡ್ಡ ಶತ್ರು ಪರಿಚಿತನೇ ಆಗಿರುತ್ತಾನೆ.

ಅಫಿಡವಿಟ್ ಎಂದರೇನು.? ಇದನ್ನು ಬರೆಯುವುದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ಸತ್ಯ ಬಯಲಿಗೆ ಬರುವವರೆಗೂ ಸುಳ್ಳಿನದೇ ಅಧಿಕಾರ, ನಿಜವನ್ನು ನಿರೂಪಿಸಲು ನಿರಂತರ ಪ್ರಯತ್ನ ಪಡಬೇಕು. ನೈಜ ರೂಪ ವ್ಯಕ್ತವಾಗಲು ಮುಖವಾಡ ಕಳಚುವವರೆಗೂ ಕೂಡ ಕಾಯಲೇಬೇಕು.
● ಜೀವನ ಎಂಬುದು ಸುಂದರ ಉಡುಗೊರೆ. ಯಾವುದೋ ಸಿಗದ ಆಸೆ ಹಿಂದೆ ಓಡಿ ಅಮೂಲ್ಯವಾದ ಜೀವನವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಜೀವನದಲ್ಲಿ ಏನೋ ಸರಿ ಇಲ್ಲ ಎಂದು ದೂರುವ ಮೊದಲು ನೀವಿನ್ನು ಉಸಿರಾಡುತ್ತಿದ್ದೀರಿ ಎನ್ನುವುದಕ್ಕೆ ಸಂತೋಷಪಡಿ.

● ಬೇರೆಯವರ ಬಳಿ ಏನೆಲ್ಲ ಇದೆ ಅದು ತನ್ನ ಬಳಿಯೂ ಬೇಕು ಎಂದು ಆಸೆ ಪಡುವವರು ಎಂದು ತೃಪ್ತಿಯನ್ನು ಹೊಂದುವುದಿಲ್ಲ. ಅದರ ಬದಲು ತನ್ನ ಬಳಿಗೆ ಏನಿದೆ ಅದರಲ್ಲೇ ಖುಷಿಯಾಗಿರುವವರು ಇನ್ನೊಬ್ಬರ ಬಳಿ ಏನೇ ಇದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಇಂತಹ ಮನೋಭಾವನೆಯನ್ನು ಬಳಸಿಕೊಂಡರೆ ನೆಮ್ಮದಿ ತಾನಾಗೆ ಬರುತ್ತದೆ. ಇದೇ ರೀತಿಯ ಇನ್ನಷ್ಟು ಮನಸಿಗೆ ಸಮಾಧಾನ ತರುವ ಇನ್ನಷ್ಟು ಮಾತುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment