ಉಚಿತ ಪ್ರಯಾಣಕ್ಕೆ ಇನ್ಮುಂದೆ ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯ.! ಸ್ಮಾರ್ಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಕಾಂಗ್ರೆಸ್ (Congress) ನೇತೃತ್ವದ ರಾಜ್ಯ ಸರ್ಕಾರವು (Karnataka government) ಜಾರಿಗೆ ತಂದಿರುವ ಗ್ಯಾರಂಟಿ (Guarantee Scheme) ಯೋಜನೆಗಳಲ್ಲಿ ಶಕ್ತಿ ಯೋಜನೆ (Shakthi Scheme) ಮೊದಲ ಗ್ಯಾರಂಟಿ ಯೋಜನೆಯಾಗಿ ಜಾರಿಗೆ ಬಂತು, ಜೂನ್ 10 ರಿಂದ ಕರ್ನಾಟಕದಾದ್ಯಂತ ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ ಎಲ್ಲಾ ಮಹಿಳೆಯರು ಕರ್ನಾಟಕ ರಾಜ್ಯ ಸಾರಿಗೆ ನಿಗಮದ ನಾಲ್ಕು ವಿಭಾಗದ ಬಸ್ ಗಳಲ್ಲೂ ಕೂಡ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.

ಯೋಜನೆ ಆರಂಭವಾದ ಸಮಯದಲ್ಲಿಯೇ ಮೂರು ತಿಂಗಳವರೆಗೆ ಮಹಿಳೆಯರು ಕರ್ನಾಟಕದ ನಿವಾಸಿ ಎನ್ನುವುದಕ್ಕೆ ಸರ್ಕಾರ ನೀಡಿರುವ ಯಾವುದೇ ಗುರುತಿನ ಚೀಟಿ ತೋರಿಸಿ ಶೂನ್ಯ ಟಿಕೆಟ್ ಪಡೆದು ಪ್ರಯಾಣ ಮಾಡಬಹುದು, ಆದರೆ ಮೂರು ತಿಂಗಳ ನಂತರ ಶಕ್ತಿ ಸ್ಮಾರ್ಟ್ ಕಾರ್ಡ್ (Shakthi Smart Card) ಹೊಂದಿರುವವರಿಗೆ ಮಾತ್ರ ಉಚಿತ ಪ್ರಯಾಣದ (Free travel) ಅನುಕೂಲತೆಗಳು ಇದೆ ಹಾಗಾಗಿ ಅಷ್ಟರ ಒಳಗೆ ಮಹಿಳೆಯರು ಅರ್ಜಿ ಸಲ್ಲಿಸಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು ಎಂದು ತಿಳಿಸಿತ್ತು.

ನನ್ನ ಹಣೆಬರಹ ಚೆನ್ನಾಗಿಲ್ಲ, ಕಷ್ಟಗಳು ನನ್ನನ್ನೇ ಹುಡುಕಿ ಬರುತ್ತವೆ ಎನ್ನುವವರು ತಪ್ಪದೆ ಈ 4 ಕೆಲಸ ಮಾಡಿ.!

ಸಾರಿಗೆ ಇಲಾಖೆಯು (transport department) ನೀಡಿರುವ ಮಾಹಿತಿ ಪ್ರಕಾರ ಇದುವರೆಗೆ 57 ಕೋಟಿ ಮಹಿಳೆಯರು ಈ ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದಾರೆ. ಇದಕ್ಕಾಗಿ ಸರ್ಕಾರಕ್ಕೆ ಸುಮಾರು 13,000 ಕೋಟಿಗೂ ಹೆಚ್ಚು ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ನೀಡಿದ ಕಂಡೀಶನ್ ಪ್ರಕಾರ ಮೂರು ತಿಂಗಳು ಮುಗಿಯುತ್ತಿದ್ದರೂ ಶಕ್ತಿ ಸ್ಪಾಟ್ ಕಾರ್ಡ್ ವಿತರಣೆಗೆ ಅರ್ಜಿ ಆಹ್ವಾನ ಮಾಡಿಲ್ಲ ಆದರೆ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.

ಮಾಸಿಕ ಪಾಸ್ ಮಾದರಿಯಲ್ಲಿ ಶಕ್ತಿ ಸ್ಮಾರ್ಟ್ ನೀಡಲಾಗುವುದು ಎನ್ನುವ ಸುದ್ದಿ ಇತ್ತು, ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೈಕ್ರೋ ಚಿಪ್ ಅಳವಡಿಸಿ ಟ್ರಾವೆಲಿಂಗ್ ಡೀಟೇಲ್ಸ್ ಟ್ರಾಕ್ ಮಾಡಲಾಗುವುದು ಎನ್ನುವ ಸುದ್ದಿ ಹರಿದಾಡಿದ್ದವು ಆದರೆ ಅಂತಿಮವಾಗಿ ಈ ಕುರಿತು ಯಾವುದೇ ಅಧಿಕೃತ ಘೋಷಣೆಗಳಾಗಿಲ್ಲ ಸದ್ಯಕ್ಕೀಗ ಇರುವ ಚರ್ಚೆಗಳ ಪ್ರಕಾರ ಯಾವಾಗ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎನ್ನುವ ಬಗ್ಗೆ ಕೆಲವು ಪ್ರಮುಖ ವಿಷಯವನ್ನು ಹಂಚಿಕೊಳ್ಳುತ್ತಿದ್ದೇವೆ.

ಮನೆಯ ಮುಖ್ಯ ದ್ವಾರದ ಬಳಿ ಕುಳಿತುಕೊಂಡು ಈ ಒಂದು ಮಂತ್ರ ಪಠಿಸಿ ನೋಡಿ, ಎಲ್ಲಾ ಕಷ್ಟಗಳು ದೂರವಾಗುತ್ತವೆ.!

● ಈಗಿರುವ ಬಲವಾದ ಮೂಲಗಳ ಮಾಹಿತಿಯ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಅವಕಾಶ ಮಹಿಳೆಯರಿಗೆ ಸಿಗಲಿದೆ. ಈಗಾಗಲೇ ತಯಾರಿ ನಡೆದಿದ್ದು 15 ದಿನಗಳ ನಂತರ ಪ್ರಾಯೋಗಿಕವಾಗಿ ಸರ್ಕಾರ ಪರೀಕ್ಷೆ ನಡೆಸಿ ಒಂದು ತಿಂಗಳ ನಂತರ ಎಲ್ಲ ಮಹಿಳೆಯರಿಗೂ ಅರ್ಜಿ ಸಲ್ಲಿಸಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಅವಕಾಶ ನೀಡಲಾಗುವುದು ಎನ್ನುಲಾಗುತ್ತಿದೆ.

● ಸೇವಾ ಸಿಂಧು ಪೋರ್ಟಲ್ (Sevasindhu portal) ಮೂಲಕ ಅರ್ಜಿ ಸಲ್ಲಿಸಿ ಈ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದು. ಫಲಾನುಭವಿಗಳು ಮೊಬೈಲ್ ಲ್ಯಾಪ್ಟಾಪ್ ಅಥವಾ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
● ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ನ್ನು (Aadhar card) ದಾಖಲೆಯಾಗಿ ತೆಗೆದುಕೊಳ್ಳಲಾಗುತ್ತದೆ. ಅದರಲ್ಲಿರುವ ಮಾಹಿತಿ ಆಧಾರದ ಮೇಲೆ ಅರ್ಜಿ ಸಲ್ಲಿಕೆಯಾಗುತ್ತದೆ.

ನಿಮಗಿನ್ನೂ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲವೇ ಸರ್ಕಾರದಿಂದ ಗುಡ್ ನ್ಯೂಸ್, ಆಗಸ್ಟ್ ತಿಂಗಳ ಹಣ ಸೇರಿ 4000 ಸೆಪ್ಟೆಂಬರ್ ತಿಂಗಳಿನಲ್ಲಿ ಸಿಗಲಿದೆ.! ಈ ರೀತಿ ಮಾಡಿ ಸಾಕು

● ವಿದ್ಯಾರ್ಥಿನಿಯರು ಸೇರಿದಂತೆ ಶಕ್ತಿ ಯೋಜನೆಯ ಫಲಾನುಭವಿಗಳಾಗಿರುವ ಕರ್ನಾಟಕದ ಎಲ್ಲಾ ಮಹಿಳೆಯರು ಕೂಡ ಕಡ್ಡಾಯವಾಗಿ ಈ ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಪಡೆಯಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ವೇಳೆ ಪೇಪರ್ ನಲ್ಲಿ ಪ್ರಿಂಟ್ ಔಟ್ ಬರುತ್ತದೆ ಅದನ್ನು ಲ್ಯಾಮಿನೇಷನ್ ಮಾಡಿಸಿ ಇಟ್ಟುಕೊಳ್ಳಬೇಕು. ಇದಕ್ಕೆ ತಗಲುವ ಖರ್ಚನ್ನು ಫಲಾನುಭವಿಯೇ ಭರಿಸಬೇಕು ಎನ್ನುವ ಮಾಹಿತಿ ಇದೆ. ಆದರೆ ಈ ಬಗ್ಗೆ ಇಲಾಖೆಯ ವತಿಯಿಂದ ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಕಾಯಬೇಕು.

● ಕರ್ನಾಟಕದ ಮಹಿಳೆಯರಿಗೆ ಮಾತ್ರ ಅವಕಾಶವಿದ್ದು ಬೇರೆ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ವಾಸ ಮಾಡುತ್ತಾ ಇರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ, ಆಧಾರ್ ಕಾರ್ಡ್ ನಲ್ಲಿ ಕರ್ನಾಟಕದ ವಿಳಾಸ ಇದ್ದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಎನ್ನುವ ಮಾಹಿತಿಗಳು ಸಿಗುತ್ತಿದೆ.

Leave a Comment