ಅತ್ತೆ-ಸೊಸೆ ನಡುವೆ ಜಗಳ ಹೇಗೆ ಶುರುವಾಗುತ್ತದೆ.? ಈ ರೀತಿ ಆದಾಗ ಗಂಡನ ಮನಸ್ಥಿತಿ ಹೇಗಿರುತ್ತದೆ.? ಅದು ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ನೋಡಿ.!

 

ಅತ್ತೆ ಸೊಸೆ ಎನ್ನುವ ಸಂಬಂಧ ಮೊದಲನಿಂದಲೂ ಬಹಳ ನೆಗೆಟಿವ್ ಆಗಿ ಕಾಣಿಸಿಕೊಂಡಿದೆ. ನಾವು ನೋಡುವ ಸಿನಿಮಾ, ಸೀರಿಯಲ್ ಗಳ ಪ್ರಭಾವವು ಅಥವಾ ನಮ್ಮ ಸ್ನೇಹಿತರು ಅಥವಾ ಪರಿಚಯಸ್ಥರ ಬದುಕಿನಲ್ಲಿ ಆದ ಘಟನೆಗಳ ಬಗ್ಗೆ ನಾವು ಕೇಳಿರುವ ಉದಾಹರಣೆಗಳು ಈ ಎರಡು ಸಂಬಂಧಗಳು ಪರಸ್ಪರ ಯಾವಾಗಲೂ ಜಗಳವಾಡುತ್ತಲೇ ಇರುವಂತ ಸಂಬಂಧ ಎನ್ನುವ ರೀತಿಯ ಮನಸ್ಸಿಗೆ ಭಾವನೆ ಮೂಡಿಸುತ್ತವೆ.

ಬಹುತೇಕ ಕುಟುಂಬಗಳಲ್ಲಿ ಈ ಸಂಬಂಧ ಹೀಗೆ ಇರುತ್ತದೆ, ಇದಕ್ಕೆ ಕಾರಣ ಏನು ಎಂದು ಎಲ್ಲರಿಗೂ ಗೊತ್ತಿದೆ. ಆದರೂ ಕೂಡ ಅದನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿ. ಮನೆಯಲ್ಲಿ ಮೊದಲಿನಿಂದಲೂ ಇದ್ದವಳು ನಾನು ನನ್ನ ಮಗನನ್ನು ಇಷ್ಟು ದೊಡ್ಡವನನ್ನಾಗಿ ಸಾಕಿದವನು ನಾನು, ಈಗ ಎಲ್ಲಿಂದಲೋ ಬಂದ ಈಕೆ ನನ್ನ ಮಗನ ಮೇಲೆ ಮನೆ ಮೇಲೆ ಹಕ್ಕು ಚಲಾಯಿಸುತ್ತಾಳೆ ಅವಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎನ್ನುವುದು ಅತ್ತೆ ಮನಸ್ಥಿತಿ.

ಕೇಂದ್ರ ಸರ್ಕಾರದಿಂದ 75 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್ ನೀಡುತ್ತಿದ್ದಾರೆ ಆಸಕ್ತರು ಅರ್ಜಿ ಸಲ್ಲಿಸಿ.!

ನಾನು ಇಷ್ಟು ವರ್ಷಗಳ ಕಾಲ ಸುಖವಾಗಿ ಬೆಳೆದೆ ನನ್ನ ತಂದೆ ತಾಯಿ ನನ್ನ ಇಷ್ಟ ಕಷ್ಟಗಳಿಗೆ ಅಡ್ಡಿ ಬಂದವರಲ್ಲ ಈ ಮನೆಯನ್ನು ಬೆಳಗಲು ಬಂದವಳು ನಾನು, ನನ್ನನ್ನು ಮನೆ ಕೆಲಸದವರ ತರಹ ನೋಡುತ್ತಾರೆ, ಎಲ್ಲದಕ್ಕೂ ರಿಸ್ಟ್ರಿಕ್ಷನ್ ಮಾಡುತ್ತಾರೆ ನಾನು ಈ ರೀತಿ ಇರುವುದಕ್ಕೆ ಮದುವೆ ಆಗಬೇಕಿತ್ತಾ ಇವರ ಮಗನ ಜೊತೆಗೆ ನಾನು ಬದುಕಬೇಕು ಅವರ ಜೊತೆ ಚೆನ್ನಾಗಿದ್ದರೆ ಸಹಿಸುವುದಿಲ್ಲ ಎಂದರೆ ಮದುವೆ ಯಾಕೆ ಮಾಡಬೇಕಿತ್ತು, ಎನ್ನುವ ಪ್ರಶ್ನೆ ಸೊಸೆಯರದ್ದು.

ಇಬ್ಬರಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಎಂದು ವಿಶ್ಲೇಷಿಸುತ್ತಾ ಹೋದರೆ ಅದಕ್ಕೆ ಸ್ಪಷ್ಟವಾದ ಉತ್ತರ ಸಿಗುವುದಿಲ್ಲ. ಇದಕ್ಕೆ ಕಾರಣ ಜನರೇಶನ್ ಗ್ಯಾಪ್ ಎನ್ನಬಹುದು, ಟ್ರೆಡಿಷನಲ್ ಮನಸ್ಥಿತಿಯಲ್ಲಿರುವ ಅತ್ತೆಯರು ಹಾಗೂ ಫ್ಯಾಷನ್ ಗೆ ಹೊಂದಿಕೊಂಡಿರುವ ಸೊಸೆಯರು ಆದರೆ ಇದೊಂದೇ ಕಾರಣವಲ್ಲ ಕೆಲವೊಮ್ಮೆ ಇವರಿಬ್ಬರ ನಡುವೆ ಜಗಳ ಆಗುವುದಕ್ಕೆ ಕಾರಣಗಳೇ ಬೇಕಿಲ್ಲ, ಸಿಕ್ಕ ಅವಕಾಶನ್ನೆಲ್ಲಾ ವಿಪರೀತಕ್ಕೆ ತೆಗೆದುಕೊಂಡು ಹೋಗಿ ವಾಗ್ವಾದ ಶುರು ಮಾಡಿಕೊಂಡುಬಿಟ್ಟಿರುತ್ತಾರೆ.

ಇಂದು ಮಧ್ಯರಾತ್ರಿಯಿಂದ ಈ 5 ರಾಶಿಯವರಿಗೆ ಗುರುಬಲ, ರಾತ್ರೋ ರಾತ್ರಿ ಅದೃಷ್ಟ ಬದಲಾವಣೆ, ದುಡ್ಡಿನ ಸುರಿಮಳೆ.!

ಯಾವುದೇ ವಿಷಯ ಯಾವುದೇ ಕಾರಣದಿಂದ ಶುರುವಾದರೂ ಕೊನೆಗೆ ಅಂತ್ಯವಾಗುವುದು ಇವರಿಬ್ಬರ ಪರಸ್ಪರ ವಿರುದ್ಧವಾದ ಅಭಿಪ್ರಾಯಗಳೊಂದಿಗೆ ಆದರೆ ಇವರಿಬ್ಬರು ಈ ರೀತಿ ಇದ್ದರೆ ಅದು ಆ ಕುಟುಂಬದ ಮಗನ ಮೇಲೆ ನೇರ ಪರಿಣಾಮ ಬೀರುತ್ತದೆ. ಯಾಕೆಂದರೆ ಆತ ತನ್ನನ್ನು ನಂಬಿಕೊಂಡು ಬಂದಿರುವ ಹೆಂಡತಿಯನ್ನು ದೂರುವಂತಿಲ್ಲ, ಇಷ್ಟು ವರ್ಷ ಬೆಳೆಸಿದ ಜನ್ಮ ಕೊಟ್ಟ ಅಮ್ಮನ ತಪ್ಪಿದರೂ ಎದುರು ಮಾತನಾಡುವಂತಿಲ್ಲ.

ಒಂದು ಎರಡು ವಿಷಯ ಅಥವಾ ಒಂದೆರಡು ತಿಂಗಳು ಆದರೆ ಹೊಂದಿಕೊಳ್ಳುವುದಕ್ಕೆ ಸಮಯ ಬೇಕಾಗುತ್ತದೆ ಎಂದುಕೊಂಡು ಸಹಿಸಿಕೊಳ್ಳಬಹುದು ಆದರೆ ಹೊರಗಡೆ ಹೋಗಿ ದುಡಿಯುವ ಗಂಡಸಿಗೆ ಮನೆಯಲ್ಲಿ ಪ್ರತಿನಿತ್ಯವು ಈ ರೀತಿ ಕಿರಿಕಿರಿ ಆಗುತ್ತಿದ್ದರೆ ಅದು ಆತನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಅದು ಆತನ ಉದ್ಯೋಗದ ಮೇಲು ಕೂಡ ಪರಿಣಾಮ ಬೀರುತ್ತದೆ. ಕೊನೆಗೆ ಆತ ಬದುಕಿನ ಉತ್ಸಾಹವನ್ನು ಕಳೆದುಕೊಂಡರೆ ನಂತರ ಆಗುವ ಪರಿಣಾಮವನ್ನು ಇಬ್ಬರೂ ಕೂಡ ಅನುಭವಿಸಬೇಕಾಗುತ್ತದೆ.

ಮಹಿಳೆಯರಲ್ಲಿ ಕಂಡು ಬರುವ PCOD ಸಮಸ್ಯೆಗೆ ಶಾಶ್ವತ ಪರಿಹಾರ.! ವೈದ್ಯರ ಈ ಸಲಹೆ ಪಾಲಿಸಿ ಸಾಕು.!

ಹಾಗಾಗಿ ಅತ್ತೆ ಆದವರು ಅನುಸರಿಸಿಕೊಂಡು ಸೊಸೆ ಆದವರು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳಲು ಕಲಿಯಬೇಕು. ತಾನೊಂದು ಕಾಲದಲ್ಲಿ ಸೊಸೆಯಾಗಿದ್ದೆ ಎನ್ನುವುದನ್ನು ಅತ್ತೆ ಮುಂದೆ ತಾನು ಅತ್ತೆ ಆಗುತ್ತೇನೆ ಎನ್ನುವುದನ್ನು ಸೊಸೆ ಅರ್ಥೈಸಿಕೊಂಡು ಬಿಟ್ಟರೆ ಇವರ ಮಧ್ಯೆ ಮನಸ್ತಾಪವಾಗಲು ಎಂತಹ ಕಾರಣಗಳು ಸೃಷ್ಟಿಯಾದರೂ ಕರಗಿ ಹೋಗುತ್ತವೆ. ಹಾಗಾಗಿ ಇನ್ನು ಮುಂದೆ ಇಂತಹ ತಪ್ಪುಗಳನ್ನು ನೀವು ಮಾಡುತ್ತಿದ್ದರೆ ಆ ಸ್ಥಾನದಲ್ಲಿ ನೀವಿದ್ದರೆ ಎಂದು ಒಮ್ಮೆ ಯೋಚಿಸಿ ನೋಡಿ ಆಗ ಈ ಲೇಖನಕ್ಕೂ ಕೂಡ ಒಂದು ಅರ್ಥ ಬರುತ್ತದೆ.

Leave a Comment