ತಾಯಿ ಮಹಾಲಕ್ಷ್ಮಿಯು ನಿಮ್ಮ ಜೀವನದಲ್ಲಿ ಆಗಮಿಸುವ ಮುನ್ನ ನೀಡುವ ಸೂಚನೆಗಳು ಇವು.!

● ಮನೆಯಲ್ಲಿ ಕಪ್ಪು ಇರುವೆಗಳು ಕಾಣಿಸಿಕೊಂಡಿದ್ದರೆ ಸದ್ಯದಲ್ಲೇ ನಿಮಗಿದ್ದ ಆರ್ಥಿಕ ಸಮಸ್ಯೆ ಬಗೆಹರಿಯಲಿದೆ ಎನ್ನುವ ಅರ್ಥ. ಕಪ್ಪು ಇರುವೆಗಳು ಮನೆ ಒಳಗೆ ಬರುವುದು ಶುಭ ಸೂಚಕವಾಗಿದೆ ಅದು ಶೀಘ್ರದಲ್ಲಿ ಧನಾಗಮನ ಆಗುವ ಲಕ್ಷಣವನ್ನು ಸೂಚಿಸುತ್ತದೆ.
● ಬೆಳಿಗ್ಗೆ ನೀವು ಏಳುತ್ತಿದ್ದ ಕೂಡಲೇ ಗಂಟೆ ನಾದ ಅಥವಾ ಶಂಖನಾದವನ್ನು ಹೇಳಿದರೆ ಅದು ಬಹಳ ಒಳ್ಳೆಯದು ನಿಮ್ಮ ಸಂಪತ್ತಿನ ವೃದ್ಧಿ ಆಗುತ್ತದೆ ಎನ್ನುವ ಸಂಕೇತವದು.

● ನೀವು ಬೆಳಗ್ಗೆ ಎದ್ದು ದೇವರ ಫೋಟೋ ನೋಡಿ, ಮನೆಯಿಂದ ಹೊರಗೆ ಬಂದಾಗ ಯಾರಾದರು ಕಸ ಗುಡಿಸುತ್ತಿರುವುದನ್ನು ನೋಡಿದರೆ ಅದು ಕೂಡ ಶುಭ ತರುವ ಸೂಚನೆ.
● ದೇವರಿಗೆ ಪೂಜೆ ಮಾಡುವ ಹಾಗೂ ಪ್ರಾರ್ಥನೆ ಮಾಡುವ ಸಮಯದಲ್ಲಿ ದೇವರ ಫೋಟೋ ಅಥವಾ ವಿಗ್ರಹಗಳಿಗೆ ಅರ್ಪಿಸಿರುವ ಹೂವು ಬಲಗಡೆಯಿಂದ ಬಿದ್ದರೆ ನಿಮ್ಮ ಕೋರಿಕೆಗಳು ದೇವರಿಗೆ ಕೇಳಿಸಿದೆ ಶೀಘ್ರದಲ್ಲಿ ಅವು ನೆರವೇರುತ್ತದೆ ಎಂದು ಅರ್ಥ.

ದೇವರ ಬಳಿ ಬೇಡಿಕೊಳ್ಳುವಾಗ ಅಥಾವ ಪ್ರಾರ್ಥನೆ ಮಾಡುವಾಗ ಯಾವುದೇ ಕಾರಣಕ್ಕೂ ಈ ರೀತಿ ತಪ್ಪುಗಳನ್ನು ಮಾಡಬೇಡಿ.!

● ಬ್ರಾಹ್ಮಿ ಮುಹೂರ್ತ ಎಂದರೆ ಮುಂಜಾನೆ 5-7 ಗಂಟೆ ಸಮಯ. ಇದು ದೇವತೆಗಳು ಎಚ್ಚರದಿಂದ ಇರುವ ಸಮಯ ಎನ್ನುತ್ತಾರೆ. ಈ ಸಮಯದಲ್ಲಿ ಎಚ್ಚರವಾದರೆ ನಿಮ್ಮ ಮೇಲೆ ದೇವರ ಕೃಪಾಕಟಾಕ್ಷ ಉಂಟಾಗಿದೆ ಎಂದರ್ಥ. ನೀವು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಇತ್ಯಾದಿ ಕಾರ್ಯಗಳನ್ನು ಮುಗಿಸಿ ದೇವರ ಪೂಜೆ ಮಾಡುವುದರಿಂದ ನಿಮ್ಮ ಅದೃಷ್ಟ ಇಮ್ಮಡಿಕೊಳ್ಳುತ್ತದೆ.

● ಮನೆಗೆ ಹಲ್ಲಿಗಳು ಬಂದು ವಾಸ ಮಾಡಲು ಶುರು ಮಾಡಿದರೆ ಅದು ಕೂಡ ಧನಾಗಮನವಾಗುವ ಸೂಚನೆ. ಒಂದೇ ಸ್ಥಳದಲ್ಲಿ ಮನೆಯಲ್ಲಿ ಮೂರು ಹಲ್ಲಿಗಳನ್ನು ಕಂಡರೆ ಅದು ಕೂಡ ನಿಮ್ಮ ಮನೆಗೆ ಶೀಘ್ರದಲ್ಲಿಯೇ ಒಳ್ಳೆಯದಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮನೆಯಿಂದ ಹಲ್ಲಿಗಳನ್ನು ಹೊರಗೆ ಹಾಕಲು ಅಥವಾ ಕೊಲ್ಲಲು ಪ್ರಯತ್ನ ಮಾಡಬೇಡಿ.

ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ ಮಾಡಬೇಡಿ, ಹೃದಯ.ಘಾ.ತ.ದ ಎಚ್ಚರಿಕೆ ನೀಡುವ ಲಕ್ಷಣಗಳು ಇವು.!

● ಪೊಲಕೆ, ಗೂಬೆ, ಆನೆ, ಹಲ್ಲಿ, ಹೊಸ್ತಿಲು, ಹಸು, ರಂಗೋಲಿ ಕನಸಿನಲ್ಲಿ ಕಾಣಿಸಿಕೊಂಡರೆ ನೀವು ಶೀಘ್ರದಲ್ಲೇ ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗುತ್ತೀರಿ ಎನ್ನುವುದರ ಸೂಚನೆಯಾಗಿದೆ.
● ಶುಕ್ರವಾರದಂದು ಮನೆಗೆ ಯಾರಾದರೂ ಹೂವು, ಹಣ್ಣು, ಧಾನ್ಯ, ಬಳೆ, ಕುಂಕುಮ ಇವುಗಳನ್ನು ತಂದು ಕೊಟ್ಟರೆ ಬೇಡ ಎನ್ನಬೇಡಿ. ಯಾಕೆಂದರೆ ಇದೆಲ್ಲ ತಾಯಿ ಮಹಾಲಕ್ಷ್ಮಿಯ ಸಂಕೇತ. ತಪ್ಪದೇ ಅವುಗಳನ್ನು ತುಂಬು ಮನಸ್ಸಿನಿಂದ ಸ್ವೀಕರಿಸಿ ಅದು ಕೂಡ ತಾಯಿ ಮಹಾಲಕ್ಷ್ಮಿಯು ನಿಮ್ಮ ಮನೆಗೆ ಶೀಘ್ರದಲ್ಲಿ ಬರಲಿದ್ದಾರೆ ಎನ್ನುವುದನ್ನು ಸೂಚಿಸುವ ಲಕ್ಷಣಗಳಾಗಿವೆ.

● ಮನೆ ಮುಂದೆ ಹಾಕಿರುವ ತುಳಸಿ ಗಿಡವು ಅಚ್ಚಹಸಿರಾಗಿ ಬೆಳೆದಿದ್ದು ಸಮೃದ್ಧಿಯಾಗಿ ಕಾಣುತ್ತಿದ್ದರೆ ಆ ಮನೆಯು ಕೂಡ ಅದೇ ರೀತಿ ಅಭಿವೃದ್ಧಿ ಆಗುತ್ತದೆ ಎಂದು ಹೇಳುತ್ತಾರೆ ಹಾಗಾಗಿ ಮನೆ ಮುಂದೆ ನಿಂತಿರುವ ತುಳಸಿ ಗಿಡವನ್ನು ಚೆನ್ನಾಗಿ ಪೂಜಿಸಿ ಅದರ ಲಕ್ಷಣ ಆಧಾರದ ಮೇಲೆ ಮನೆಯ ಏಳಿಗೆಯನ್ನು ಕೂಡ ಅರಿತುಕೊಳ್ಳಬಹುದು.
● ಮನೆಯಲ್ಲಿ ಜರಿ ಕಾಣಿಸಿದರೆ ಅದು ಕೂಡ ತಾಯಿ ಮಹಾಲಕ್ಷ್ಮಿ ಆಗಮನದ ಸಂಕೇತ ಯಾವುದಾದರೂ ಒಂದು ರೂಪದಲ್ಲಿ ನಿಮ್ಮ ಬಳಿಗೆ ಹಣ ಬಂದು ಬರುತ್ತದೆ ಎನ್ನುವುದನ್ನು ಅದು ಸೂಚಿಸುತ್ತದೆ.

ಕನಸಿನಲ್ಲಿ ಯಾವ ವಸ್ತುವನ್ನು ಕಂಡರೆ ಏನು ಅರ್ಥ ಬರುತ್ತದೆ ಗೊತ್ತಾ.?

● ಗೋಮಾತೆಯು ಪದೇ ಪದೇ ಬಂದು ನಿಮ್ಮ ಮನೆಯ ಮುಂದೆ ನಿಲ್ಲುತ್ತಿದ್ದರೆ ಇದು ಕೂಡ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷದ ಉಂಟಾಗುವುದರ ಸೂಚನೆ. ಗೋವುಗಳಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು ಇವುಗಳನ್ನು ನೀಡಿ ಸಂಕ್ಷಿಪ್ತಗೊಳಿಸಿ ಕಳುಹಿಸಿ ತಾಯಿ ಕೃಪೆಗೆ ಒಳಗಾಗಿ.
● ಮುಸ್ಸಂಜೆ ಸಮಯದಲ್ಲಿ ಯಾರಾದರೂ ನಿಮಗೆ ತುಂಬಿದ ಬಿಂದಿಗೆಯನ್ನು ಕೊಟ್ಟರೆ ಸಿಹಿ ಕೊಟ್ಟರೆ ಹಾಲು ಕೊಟ್ಟರೆ ಅದು ಕೂಡ ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಬರುತ್ತವೆ ಎನ್ನುವುದನ್ನು ಸೂಚಿಸುವ ಸೂಚನೆ ಆಗಿದೆ
● ಬ್ರಾಹ್ಮಿ ಮುಹೂರ್ತದಲ್ಲಿ ಒಳ್ಳೆಯ ಕನಸುಗಳು ಬಿದ್ದು ಎಚ್ಚರವಾದರೆ ಅದು ಕೂಡ ಶುಭ ಸಂಕೇತ.

Leave a Comment