ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ನಿಯಮಗಳನ್ನು ಪಾಲಿಸಿ.!

ವಯಸ್ಸಾದ ಮೇಲೆ ದೇಹದಲ್ಲಿ ಶಕ್ತಿ ಕುಂದುತ್ತದೆ, ಆಗ ಅನೇಕ ರೋಗಗಳಿಗೆ ತುತ್ತಾಗುತ್ತೇವೆ. ಆದರೆ ನಮ್ಮ ಹಿರಿಯರು ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೆ ಗಟ್ಟಿಮಟ್ಟಾಗಿ ಕೊನೆ ದಿನದವರೆಗೂ ಇದ್ದ ಉದಾಹರಣೆಯನ್ನು ನಾವು ನೋಡಿರಬಹುದು. ಆದರೆ ನಾವು ಯುವಜನತೆಯಾಗಿದ್ದು ಕೂಡ ಪದೇಪದೇ ಅನೇಕ ರೋಗಗಳಿಗೆ ತುತ್ತಾಗುತ್ತಿರುತ್ತೇವೆ. ಇವುಗಳಿಂದ ತಪ್ಪಿಸಿಕೊಂಡು ನಮ್ಮ ಹಿರಿಯರಂತೆ ವಯಸ್ಸಾಗುವವರೆಗೂ ಕೂಡ ಆರೋಗ್ಯವಾಗಿರಲು ಈ ಬದಲಾವಣೆಗಳನ್ನು ಮಾಡಿಕೊಳ್ಳಿ.

● ಅಡುಗೆ ಅಥವಾ ಊಟ ಮಾಡುವಾಗ ಪುಡಿ ಉಪ್ಪನ್ನು ಉಪಯೋಗಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ, ಇದರ ಬದಲು ಕಲ್ಲುಪ್ಪು ಅಥವಾ ಬ್ಲಾಕ್ ಸಾಲ್ಟ್ ಉಪಯೋಗಿಸಿ.
● ಊಟ ಆದ ತಕ್ಷಣ ಮಲಗುವ ಅಭ್ಯಾಸ ಇದ್ದರೆ ಅದನ್ನು ಬಿಟ್ಟುಬಿಡಿ. ಊಟ ಆದ ನಂತರ 500 ಹೆಜ್ಜೆಗಳನ್ನಾದರೂ ಓಡಾಡುವ ಅಭ್ಯಾಸ ಮಾಡಿಕೊಳ್ಳಿ. ಊಟ ಆದ ಮೇಲೆ ಎರಡು ಗಂಟೆ ಬಿಟ್ಟು ನಿದ್ದೆ ಮಾಡಬೇಕು.

ವೀಳ್ಯದೆಲೆಯಿಂದ ಹೀಗೆ ಮಾಡಿ ಸಾಕು, ಕೋಟಿ ಸಾಲ ಇದ್ದರೂ ತೀರಿಸಬಹುದು.!

● ಎಮ್ಮೆಯ ಹಾಲು ಹಾಗೂ ಆ ಹಾಲಿನಿಂದ ಮಾಡಿದ ತುಪ್ಪ ತಿನ್ನುವ ಅಭ್ಯಾಸ ಬಿಟ್ಟುಬಿಡಿ. ಹಸುವಿನ ಹಾಲು ಕೂಡ ಅಷ್ಟೊಂದು ಒಳ್ಳೆಯದಲ್ಲ, ನಾಟಿ ಹಸುವಿನ ಹಾಲು ಅಥವಾ ತುಪ್ಪವನ್ನು ಮಾತ್ರ ಸೇವಿಸಿ.
● ಸಕ್ಕರೆ, ಉಪ್ಪು ಹಾಗೂ ಮೈದಾವನ್ನು ಬಿಳಿ ಬಣ್ಣದ ವಿಷಗಳು ಎಂದು ಹೇಳಲಾಗುತ್ತದೆ. ವಯಸ್ಸಾದ ಮೇಲೆ ಆರೋಗ್ಯವಾಗಿರಬೇಕು ಎಂದರೆ ಮೊದಲಿನಿಂದಲೇ ಈ ಮೂರು ಆಹಾರ ಪದಾರ್ಥಗಳಲ್ಲಿ ಕಂಟ್ರೋಲ್ ಇರಬೇಕು, ಇವುಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ದೇಹಕ್ಕೆ ಬರುವ ಅನೇಕ ರೋಗಗಳಿಗೆ ಇವೆ ಮೂಲ ಕಾರಣವಾಗಿರುತ್ತವೆ.

● ರಾತ್ರಿ ವೇಳೆ ಊಟ ಮಾಡುವಾಗ ಮೊಸರು ಸೇವನೆ ಮಾಡುವುದು ಮತ್ತು ಅನ್ನವನ್ನು ಸೇವಿಸುವುದನ್ನು ಕಡಿಮೆ ಮಾಡುತ್ತಾ ಬನ್ನಿ.
● ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಕನಿಷ್ಠ ಎರಡು ಲೋಟ ಬೆಚ್ಚಗಿನ ನೀರನ್ನು ಕುಡಿರಿ ಇದು ದೇಹದಲ್ಲಿರುವ ಟಾಕ್ಸಿನ್ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ಮೈಂಡ್ ಕೂಡ ಫ್ರೆಶ್ ಆಗಿ ಬಾಡಿ ಆಕ್ಟಿವೇಟ್ ಆಗುತ್ತದೆ ನಿರಂತರವಾಗಿ ಈ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು.

ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ ಹೊಸ ಗ್ಯಾಸ್…

● ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿಯೇ ಕಾಫಿ ಅಥವಾ ಚಹಾ ವನ್ನು ಕುಡಿಯಬೇಡಿ
● ಊಟ ಮಾಡುವ 45 ನಿಮಿಷಗಳ ಮುಂಚೆ ಒಂದು ಲೋಟ ನೀರು ಕುಡಿಯಿರಿ.
● ಸೂರ್ಯಸ್ತಕ್ಕೂ ಮೊದಲೇ ರಾತ್ರಿ ಊಟವನ್ನು ಮಾಡುವ ಅಭ್ಯಾಸ ಮಾಡಿಕೊಳ್ಳಿ. ಯಾಕೆಂದರೆ ಸಂಜೆ 5 ರ ನಂತರ ಭಾರವಾದ ಆಹಾರಗಳನ್ನು ಸೇವಿಸುವುದು ಒಳ್ಳೆಯದಲ್ಲ.

● ಬೆಳಗ್ಗೆ ಎದ್ದ ಕೂಡಲೇ ಕಣ್ಣುಗಳನ್ನು ಸ್ವಚ್ಛವಾದ ತಣ್ಣೀರಿನಿಂದ ತೊಳೆಯಿರಿ
● ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದು ಸೇಬು ಸೇವಿಸುವುದರಿಂದ ಅನಗತ್ಯವಾಗಿ ಹುಷಾರು ತಪ್ಪುವುದು ತಪ್ಪುತ್ತದೆ ,ಆರೋಗ್ಯ ಉತ್ತಮವಾಗುವುದರ ಜೊತೆಗೆ ದೇಹ ಗಟ್ಟಿ ಮುಟ್ಟಾಗುತ್ತದೆ.
● ಪ್ರತಿದಿನವೂ ಕೂಡ ಒಂದೆರಡು ಎಲೆ ತುಳಸಿ ಎಲೆಯನ್ನು ಸೇವಿಸುವುದರಿಂದ ದೇಹಕ್ಕೆ ಇಮ್ಯೂನಿಟಿ ಪವರ್ ಹೆಚ್ಚಾಗುತ್ತದೆ. ಕ್ಯಾನ್ಸರ್ ನಂತಹ ಕಾಯಿಲೆ ಗುಣ ಮಾಡುವ ಶಕ್ತಿಯು ತುಳಸಿ ಎಲೆಗೆ ಇದೆ, ಆದ್ದರಿಂದ ಈ ಅಭ್ಯಾಸ ರೂಢಿಸಿಕೊಳ್ಳಿ.

ಮಕ್ಕಳು ನೀವು ಹೇಳಿದ ಮಾತು ಕೇಳಬೇಕಾ.? ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ ಹಾಕಿದ ಗೆರೆ ದಾಟುವುದಿಲ್ಲ.!

● ಐಸ್ ವಾಟರ್ ಗೆ ನಿಂಬೆ ರಸ ಹಿಂಡಿಕೊಂಡು ಕುಡಿಯುವುದರಿಂದ ದೇಹದ ತೂಕ ಹೆಚ್ಚಾಗುವುದಿಲ್ಲ.
● ಪ್ರತಿದಿನ ಕೂಡ ಒಂದು ಲೋಟ ಹಾಲು ಸೇವನೆ ಮಾಡುವುದರಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ. ಆದರೆ ಶುದ್ಧವಾದ ಹಾಲಾಗಿದ್ದರೆ ಮಾತ್ರ ಸೇವನೆ ಮಾಡಬೇಕು.
● ಪ್ರತಿದಿನವೂ ಕೂಡ ದೇಹಕ್ಕೆ ಮೂರು ಲೀಟರ್ ನೀರಿನ ಅವಶ್ಯಕತೆ ಇರುತ್ತದೆ ಈ ರೀತಿ ದೇಹಕ್ಕೆ ಬೇಕಾದಷ್ಟು ನೀರು ಕುಡಿಯುವುದರಿಂದ ದೇಹ ಸ್ವಚ್ಛವಾಗುತ್ತದೆ. ಹೊಟ್ಟೆ ನೋವು ಹಾಗೂ ಇದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ.

Leave a Comment