8 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಯಾಕೆ ಗೊತ್ತಾ.?

 

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು (Guarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ರಾಜ್ಯದ 1.10 ಕೋಟಿ ಮಹಿಳೆಯರು ನೋಂದಾಯಿಸಿಕೊಂಡಿದ್ದರು ಎನ್ನುವ ಅಂಕಿ ಅಂಶವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women amd Child Welfare department) ನೀಡುತ್ತಿದೆ.

ಆಗಸ್ಟ್ 30 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಖಾತೆಗೆ ಸಹಾಯಧನ ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಆದರೆ ಎಲ್ಲಾ ಮಹಿಳೆಯರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ. ಈಗಾಗಲೇ ಈ ಬಗ್ಗೆ ಮಹಿಳೆಯರಲ್ಲಿ ಗೊಂದಲ ಉಂಟಾಗಿದೆ.

ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ನಿಯಮಗಳನ್ನು ಪಾಲಿಸಿ.!

ಯಾಕೆಂದರೆ ಅರ್ಜಿ ಸಲ್ಲಿಸುವವರಲ್ಲಿ 40% ಗಿಂತ ಹೆಚ್ಚು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ, ಇದಕ್ಕಾಗಿ ಅವರು ಸರ್ಕಾರವನ್ನು ದೂರುತ್ತಿದ್ದಾರೆ. ಇದರ ಬಗ್ಗೆ ಕೆಲ ವಿವರಣೆಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಮಂಜೂರಾತಿ ಪತ್ರ (aknowledgment) ಪಡೆದು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (Aadhar Seeding NPCI Mapping ) ಮಾಡಿಸಿ ಆ ಖಾತೆಯನ್ನು ಆಕ್ಟಿವ್ (Account active) ಆಗಿ ಇಟ್ಟುಕೊಂಡಿದ್ದಾರೆ.

ಆ ಎಲ್ಲಾ ಮಹಿಳೆಯರ ಖಾತೆಗೂ ಕೂಡ DBT ಮೂಲಕ 2000ರೂ. ಹಣ ವರ್ಗಾವಣೆ ಆಗುತ್ತದೆ. ಆದರೆ ತಡವಾಗುತ್ತಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ಇದು ಮೊದಲನೇ ಕಂತಿನ ಹಣ ಆಗಿರುವುದರಿಂದ, ಜೊತೆಗೆ RBI ನಿಯಮಗಳನುಸಾರ ಒಂದು ದಿನಕ್ಕೆ ಗರಿಷ್ಠ 8 ಲಕ್ಷ ಮಹಿಳೆಯರ ಖಾತೆಗೆ ಮಾತ್ರ ಹಣ ವರ್ಗಾವಣೆ ಮಾಡಲು ಸಾಧ್ಯ, ಫಲಾನುಭವಿಗಳ ಸಂಖ್ಯೆ ಹೆಚ್ಚಿರುವ ಕಾರಣದಿಂದಾಗಿ ತಡವಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಪಷ್ಟತೆ ಕೊಟ್ಟಿದ್ದಾರೆ.

ವೀಳ್ಯದೆಲೆಯಿಂದ ಹೀಗೆ ಮಾಡಿ ಸಾಕು, ಕೋಟಿ ಸಾಲ ಇದ್ದರೂ ತೀರಿಸಬಹುದು.!

ಇವುಗಳಲ್ಲಿ ಒಂದು ಮುಖ್ಯವಾದ ವಿಷಯ ಏನೆಂದರೆ, 1.10 ಕೋಟಿ ಮಹಿಳೆಯರ ಪೈಕಿ 1.02 ಕೋಟಿ ಮಹಿಳೆಯರಿಗೆ ಅಷ್ಟೇ ಗೃಹಲಕ್ಷ್ಮಿ ಹಣ ಹೋಗಲಿದೆ ಅವರೆಲ್ಲರ ಖಾತೆಗೂ ಸೆಪ್ಟೆಂಬರ್ 30ರ ಒಳಗೆ ಖಂಡಿತವಾಗಿಯೂ ಗೃಹಲಕ್ಷ್ಮಿ ಯೋಜನೆಯ ಸಹಾಯ ಧನವು ತಲುಪಲಿದೆ ಎನ್ನುವ ಭರವಸೆಯನ್ನು ಇಲಾಖೆ ಅಧಿಕಾರಿಗಳು ನೀಡಿದ್ದಾರೆ.

ಉಳಿದ 8 ಲಕ್ಷ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗದಿರಲು ಇರುವ ಕಾರಣಗಳ ಬಗ್ಗೆ ಕೂಡ ತಿಳಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಅವರು ಹೇಳಿರುವ ಪ್ರಕಾರ ಮಹಿಳೆಯರು ತಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮಾಹಿತಿ ನೀಡಿ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದರು ಅವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು.

ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ ಹೊಸ ಗ್ಯಾಸ್…

ಹಾಗಾಗಿ ಈ ಮೇಲೆ ತಿಳಿಸಿದಂತೆ ಆಧಾರ್ ಕಾರ್ಡ್ ಖಾತೆಗಳಿಗೆ ಲಿಂಕ್ ಮಾಡದಿದ್ದರೆ ಅಥವಾ ಆ ಖಾತೆಗಳನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳದೆ ಇದ್ದರೆ ಅವರಿಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ಈ ಎಲ್ಲಾ ದಾಖಲೆಗಳಲ್ಲೂ ಮಾಹಿತಿ ಹೊಂದಾಣಿಕೆಯಾಗಬೇಕು (Document Mismatch). ಗೃಹಲಕ್ಷ್ಮಿ ಯೋಜನೆ ಅರ್ಜಿ ಪರಿಷ್ಕರಣೆ ವೇಳೆ ಹೆಸರು, ಭಾವಚಿತ್ರದಲ್ಲೂ ವ್ಯತ್ಯಾಸ ಕಂಡುಬಂದಿರುವುದರಿಂದ ಆ ಖಾತೆಗೆ ಹಣ ವರ್ಗಾವಣೆ ಆಗುವುದನ್ನು ತಡೆಹಿಡಿಯಲಾಗಿದೆ.

ಮುಂದಿನ ದಿನಗಳಲ್ಲಿ ಅವರು ಈ ಸಮಸ್ಯೆಗಳನ್ನು ಬಗೆಹರಿಸಿಕೊಂಡಲ್ಲಿ ಖಂಡಿತವಾಗಿಯೂ ಅವರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಜೊತೆಗೆ ಕುಟುಂಬದ ಮುಖ್ಯಸ್ಥರ ಸ್ಥಾನ ಬದಲಾವಣೆ ಅಥವಾ ಯಾವುದೇ ಕಾರಣದಿಂದಾಗಿ ತಿದ್ದುಪಡಿ ಮಾಡಿಸಿಕೊಂಡು ಅರ್ಜಿ ಸಲ್ಲಿಸಿದ್ದರೆ ಅದು ಆಡಳಿತ ನಿಯಂತ್ರಣ ಮತ್ತು ಇ-ಆಡಳಿತ (ex-governance) ತಂತ್ರಾಂಶಗಳಲ್ಲಿ ರಿಜಿಸ್ಟರ್ ಆಗಲು ಕನಿಷ್ಠ ಮೂರು ತಿಂಗಳಾದರೂ ಸಮಯ ತೆಗೆದುಕೊಳ್ಳುತ್ತದೆ.

ಮಕ್ಕಳು ನೀವು ಹೇಳಿದ ಮಾತು ಕೇಳಬೇಕಾ.? ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ ಹಾಕಿದ ಗೆರೆ ದಾಟುವುದಿಲ್ಲ.!

ಹಾಗಾಗಿ ಇವುಗಳಲ್ಲಿ ಅಪ್ಡೇಟ್ ಆಗಲು ಸಮಯ ತೆಗೆದುಕೊಳ್ಳುವುದರಿಂದ ಅಂತಹ ಸಮಸ್ಯೆ ಇರುವವರಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ತಲುಪುವುದು ತಡವಾಗುತ್ತದೆ. ಎಲ್ಲವು ಸರಿಯಿದ್ದು ಹಣ ಬರದೆ ಇದ್ದವರು ಯಾವುದೇ ಗೊಂದಲಗಳಿದ್ದರೂ ತಮ್ಮ ವ್ಯಾಪ್ತಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯ ತೆಗೆದುಕೊಂಡು ದಾಖಲೆಗಳ ಜೊತೆ ತಮ್ಮ ತಾಲೂಕು ಮಟ್ಟದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಹೋಗಿ CDPO ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಲು ಸೂಚಿಸಿದ್ದಾರೆ.

Leave a Comment