ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಜಾರಿ ಆಯ್ತು ಹೊಸ ಯೋಜನೆ.!

 

ರಾಜ್ಯದಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗೆ ಅನುಕೂಲವಾಗುವಂತೆ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳನ್ನು (Koosina Mane Creches) ತೆರೆಯಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ 2023-24ರ ಬಜೆಟ್ ಭಾಷಣದಲ್ಲಿ ಘೋಷಣೆ ಕೂಡ ಮಾಡಲಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ನರೇಗಾ (NREGA) ಯೋಜನೆಯಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ಪಾಲ್ಗೊಳ್ಳಲು ಇದರಿಂದ ಅನುಕೂಲವಾಗುವಂತೆ. ಆ ಕೂಲಿ ಕಾರ್ಮಿಕರ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಕೂಸಿನ ಮನೆ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹೇಳಲಾಗಿತ್ತು.

8 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಯಾಕೆ ಗೊತ್ತಾ.?

ಅಂತೆಯೇ ಈಗ ಭಾನುವಾರ ಕಲ್ಬುರ್ಗಿ (Kalburgi) ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ‌ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಧ್ವಜಾರೋಹಣ ನಂತರ ಮುಖ್ಯಮಂತ್ರಿಗಳು
ಕೂಸಿನ ಮನೆ ಶಿಶುಪಾಲನಾ ಕೇಂದ್ರದ ಲಾಂಛನವನ್ನು (Koosina Mane logo launched by CM) ಅನಾವರಣಗೊಳಿಸಿ ಶೀಘ್ರದಲ್ಲಿಯೇ ನರೇಗಾ ಕೂಲಿ ಕಾರ್ಮಿಕರಿಗೆ ಈ ಪ್ರಯೋಜನ ಸಿಗುವ ಬಗ್ಗೆ ಭರವಸೆ ನೀಡಿದ್ದಾರೆ.

ಈ ಸಮಯದಲ್ಲಿ ಯೋಜನೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ಯೋಜನೆಗೆ ಸರ್ಕಾರ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಶಿಶುಪಾಲನಾ ಕೇಂದ್ರ ನಡೆಸಲು ಬೇಕಾಗುವ ಕಟ್ಟಡ, ಇತರ ಮೂಲ ಸೌಲಭ್ಯಗಳ ಖರ್ಚಿಗೆ ಗ್ರಾಮ ಪಂಚಾಯಿತಿಗಳೇ ತಮ್ಮ‌ ಸಂಪನ್ಮೂಲದಲ್ಲಿ ಹಣ ಹೊಂದಿಸಬೇಕಾಗುತ್ತದೆ ಎಂದಿದ್ದಾರೆ.

ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ನಿಯಮಗಳನ್ನು ಪಾಲಿಸಿ.!

ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ (Rural development Minister Priyank Kharge) ಅವರು ಮಾತನಾಡಿ ಶಿಶುಪಾಲನಾ ಕೇಂದ್ರಗಳನ್ನು ನಡೆಸಲು ಅಗತ್ಯವಿರುವ ಕಟ್ಟಡ ಇತರ ಮೂಲ ಸೌಲಭ್ಯಗಳನ್ನು ಹಾಗೂ ಅನುದಾನವನ್ನು ಗ್ರಾಮ ಪಂಚಾಯಿತಿಯಿಂದ ಒದಗಿಸಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಹಾಗೆ ಯೋಜನೆ ಕುರಿತ ಕೆಲ ಪ್ರಮುಖ ಅಂಶಗಳ ಬಗ್ಗೆಯೂ ಕೂಡ ಮಾಹಿತಿ ತಿಳಿಸಿಕೊಟ್ಟಿದ್ದಾರೆ. ನರೇಗಾ ಯೋಜನೆಯಡಿ ಜಾಬ್ ಕಾರ್ಡ್‌ ಪಡೆದುಕೊಂಡು ಕೆಲಸ ನಿರ್ವಹಣೆ ಮಾಡುತ್ತಿರುವ, ಗ 22 ರಿಂದ 45 ವರ್ಷ ವಯೋಮಿತಿಯ, ಕನಿಷ್ಠ 10ನೇ ತರಗತಿ ವ್ಯಾಸಂಗ ಮಾಡಿರುವ 10 ಜನ ಮಹಿಳಾ ಕೂಲಿ ಕಾರ್ಮಿಕರು ಕೂಸಿನ ಮನೆ ಶಿಶು ಪಾಲನ ಕೇಂದ್ರದಲ್ಲಿ ಕೇರ್ ಟೇಕರ್ಸ್ (Care takers) ಆಗಿ ನೇಮಕಗೊಳ್ಳುತ್ತಾರೆ.

ವೀಳ್ಯದೆಲೆಯಿಂದ ಹೀಗೆ ಮಾಡಿ ಸಾಕು, ಕೋಟಿ ಸಾಲ ಇದ್ದರೂ ತೀರಿಸಬಹುದು.!

4000 ಶಿಶು ಪಾಲನಾ ಕೇಂದ್ರಗಳಿಗೆ ಪ್ರತಿ ಕೇಂದ್ರಕ್ಕೆ ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ 10 ಜನ ಕೇರ್ ಟೇಕರ್ಸ್‌ಗಳನ್ನು ನೇಮಿಸಲಾಗುತ್ತದೆ. ಇವರಿಗೆ ಪ್ರತ್ಯೇಕವಾದ ಗೌರವಧನವನ್ನು ನೀಡಲಾಗುವುದಿಲ್ಲ. ನರೇಗಾ ಯೋಜನೆಯಡಿ ಉಳಿದ ಮಹಿಳಾ ಕಾರ್ಮಿಕರಿಗೆ ನಿಗದಿ ಮಾಡಿರುವಂತೆಯೇ ದಿನಕ್ಕೆ 316 ರೂ. ನಂತೆ ವೇತನ ಸಿಗಲಿದೆ.

ಇದೇ ನಿಯಮದಂತೆ ಒಬ್ಬ ಮಹಿಳೆಗೆ ನೂರು ದಿನಗಳ ತನಕ ಕೆಲಸ ನೀಡಲಾಗುತ್ತದೆ, ಆ ಮಹಿಳೆಯು 100 ದಿನದ ಕೆಲಸ ನಿರ್ವಹಣೆ ಪೂರ್ತಿಗೊಂಡ ಬಳಿಕ ಮತ್ತೊಬ್ಬರಿಗೆ ಅವಕಾಶ ನೀಡಲಾಗುತ್ತದೆ. ಇವರೆಲ್ಲರಿಗೂ ಮೊಬೈಲ್ ಕ್ರಶ್ ದೆಹಲಿ (Mobile Creche Dehli) ಸಂಸ್ಥೆಯ ವತಿಯಿಂದ ಮಗುವಿನ ಆರೈಕೆಯ ಕುರಿತು ತರಬೇತಿ ಕೊಡಿಸಲಾಗುತ್ತದೆ.

ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ ಹೊಸ ಗ್ಯಾಸ್…

ಯೋಜನೆಯ ವಿವರದಂತೆ ಪ್ರತಿ ಕೂಸಿನ ಮನೆ ಕೇಂದ್ರದಲ್ಲಿ ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ ಕುಟುಂಬದ 3 ವರ್ಷದೊಳಗಿನ ಗರಿಷ್ಠ 25 ಮಕ್ಕಳನ್ನು ದಾಖಲೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ, ಈ ಕೇಂದ್ರಗಳು ಸ್ಥಳೀಯ ಕಾರ್ಮಿಕರ ಅನುಕೂಲಕ್ಕೆ ತಕ್ಕಂತೆ ದಿನದಲ್ಲಿ 6 ಗಂಟೆ 30 ನಿಮಿಷಗಳ ಕಾಲ ಕಾರ್ಯನಿರ್ವಹಿಸುತ್ತವೆ. ಸ್ಥಳೀಯ ಗ್ರಾಮ ಪಂಚಾಯಿತಿಗಳೇ ಈ ಕೇಂದ್ರಗಳು ಕಾರ್ಯನಿರ್ವಹಿಸುವ ಸಮಯವನ್ನು ಆಯಾ ಭಾಗಕ್ಕೆ ಅನುಕೂಲವಾಗುವಂತೆ ನಿರ್ಧಾರ ಮಾಡಲಿದ್ದಾರೆ ಎಂದರು.

Leave a Comment