
ನಮ್ಮ ಮನೆಯಲ್ಲಿರುವಂತಹ ಮಹಿಳೆಯರು ಮನೆಯ ವಸ್ತುಗಳಾಗಿರ ಬಹುದು ಹಾಗೂ ಉಪಯೋಗಿಸುವಂತಹ ಪದಾರ್ಥಗಳಾಗಿರಬಹುದು ಹಾಗೂ ಬಟ್ಟೆಗಳಾಗಿರಬಹುದು ಮನೆಯನ್ನು ಕೂಡ ಸ್ವಚ್ಛವಾಗಿ ಇಟ್ಟು ಕೊಳ್ಳುವುದಕ್ಕೆ ಬಯಸುತ್ತಾರೆ. ಹಾಗೂ ಅದನ್ನು ಹೇಗೆ ಸ್ವಚ್ಛವಾಗಿ ಇಡಬಹುದು ಎನ್ನುವಂತಹ ಮಾಹಿತಿಗಳನ್ನು ಸಹ ಹುಡುಕುತ್ತಿರುತ್ತಾರೆ.
ಹಾಗೂ ಕೆಲವೊಂದು ಮಾಹಿತಿಗಳನ್ನು ತಿಳಿದು ಅದನ್ನು ಅನುಸರಿಸುವು ದರ ಮೂಲಕ ಅದರಲ್ಲಿ ಯಶಸ್ವಿಯು ಸಹ ಆಗುತ್ತಾರೆ. ಹಾಗೂ ಕೆಲವೊಂದು ಸಂದರ್ಭದಲ್ಲಿ ವಿಫಲರು ಕೂಡ ಆಗುತ್ತಾರೆ. ಅದರಲ್ಲಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಅವರು ಪ್ರತಿನಿತ್ಯ ಉಪಯೋಗಿಸುವಂತಹ ಅವರ ವಾಷಿಂಗ್ ಮಷೀನ್ ಅನ್ನು ಹೇಗೆ ಸ್ವಚ್ಛವಾಗಿ ಹೆಚ್ಚಿನ ದಿನ ಬಾಳಿಕೆ ಬರುವ ಹಾಗೆ ಇಟ್ಟುಕೊಳ್ಳಬೇಕು.
ಹಾಗೂ ಅದನ್ನು ಯಾವ ವಿಧಾನದಲ್ಲಿ ಅನುಸರಿಸುವುದರಿಂದ ಅದನ್ನು ಹೆಚ್ಚು ದಿನಗಳವರೆಗೆ ಇಟ್ಟುಕೊಳ್ಳಬಹುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ನಾವು ವಾಷಿಂಗ್ ಮಷೀನ್ ಗೆ ಬಟ್ಟೆ ಹಾಕಿದಂತಹ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಹ ಲಿಕ್ವಿಡ್ ಗಳನ್ನು ಉಪ ಯೋಗಿಸಿ ಬಟ್ಟೆಗಳಲ್ಲಿ ಇರುವಂತಹ ದುರ್ಗಂಧ ಹೋಗಿ ಸುಗಂಧ ಬರಲಿ ಎನ್ನುವ ಉದ್ದೇಶದಿಂದ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸುತ್ತೇವೆ.
ಆದರೆ ಅದರ ಬದಲು ನ್ಯಾಚುರಲ್ ಆಗಿ ಬಟ್ಟೆಗಳಲ್ಲಿ ಸುಗಂಧ ಹೆಚ್ಚಾಗಬೇಕು ಎಂದರೆ ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ಆನಂತರ ಅದನ್ನು ಶೋಧಿಸಿ ಸಂಪೂರ್ಣ ವಾಗಿ ತಣ್ಣಗಾದ ನಂತರ ಆ ನೀರನ್ನು ವಾಷಿಂಗ್ ಮಷೀನ್ ಗೆ ಹಾಕುವುದರಿಂದ ಬಟ್ಟೆಗಳಲ್ಲಿ ಇರುವಂತಹ ದುರ್ಗದ ಹೋಗಿ ಒಳ್ಳೆಯ ಸುವಾಸನೆ ಬರುತ್ತದೆ. ಈ ಒಂದು ವಿಧಾನ ತುಂಬಾ ಅನುಕೂಲವಾಗಿದ್ದು ಇದು ವಾಷಿಂಗ್ ಮಷೀನ್ ಹಾಳಾಗದಂತೆ ಕಾಪಾಡುತ್ತದೆ ಹಾಗೂ ಕಡಿಮೆ ಖರ್ಚಿನಲ್ಲಿ ನಾವು ಈ ಒಂದು ವಿಧಾನವನ್ನು ಅನುಸರಿಸಬಹುದು.
* ಸಾಮಾನ್ಯವಾಗಿ ನಾವು ಎಲ್ಲ ಬಟ್ಟೆಗಳನ್ನು ಒಮ್ಮೆಲೆ ವಾಷಿಂಗ್ ಮಷೀನ್ ಗೆ ಹಾಕುತ್ತೇವೆ. ಆದರೆ ಹೆಚ್ಚು ಕೊಳೆಹೊಂದಿರುವಂತಹ ಬಟ್ಟೆಯನ್ನು ಒಮ್ಮೆ ತೊಳೆದು ಆನಂತರ ಅದನ್ನು ವಾಷಿಂಗ್ ಮಷೀನ್ ನಲ್ಲಿ ಇತರ ಬಟ್ಟೆಗಳ ಜೊತೆ ಹಾಕುವುದರಿಂದ ಆ ಬಟ್ಟೆಯಲ್ಲಿರುವಂತಹ ಕೊಳೆ, ಎಣ್ಣೆ ಜಿಡ್ಡು ಎಲ್ಲಾ ಅಂಶ ಇತರೆ ಬಟ್ಟೆಗಳಿಗೆ ಇಳಿಯುವುದಿಲ್ಲ ಈ ವಿಧಾನ ಅನುಸರಿಸುವುದರಿಂದ ಬಟ್ಟೆಗಳು ಹಾಳಾಗುವುದಿಲ್ಲ ಹಾಗೂ ವಾಷಿಂಗ್ ಮಷೀನ್ ನಲ್ಲಿ ಹೆಚ್ಚು ಕಸ ಧೂಳು ಕೂಡ ಸೇರುವುದಿಲ್ಲ.
* ಸಾಮಾನ್ಯವಾಗಿ ನಾವು ಬಟ್ಟೆಯನ್ನು ಪ್ರತಿನಿತ್ಯ ವಾಷಿಂಗ್ ಮಷೀನ್ ಗೆ ಹಾಕುತ್ತಿರುತ್ತೇವೆ ಆದರೆ ಅದನ್ನು ವಾರಕ್ಕೆ 15 ದಿನಗಳಿಗೊಮ್ಮೆ ಸ್ವಚ್ಛ ಮಾಡಿಕೊಂಡರೆ ವಾಷಿಂಗ್ ಮಷೀನ್ ಹಾಳಾಗುವುದಿಲ್ಲ. ಹಾಗಾದರೆ ಅದನ್ನು ಹೇಗೆ ನೋಡಿಕೊಳ್ಳುವುದು ಎಂದು ನೋಡುವುದಾದರೆ ವಾಷಿಂಗ್ ಮಷೀನ್ ಒಳಭಾಗದಲ್ಲಿ ಒಂದು ರೀತಿಯ ಬೆಲ್ಟ್ ಇರುತ್ತದೆ ಅದನ್ನು ತೆಗೆದು ಒಂದು ಬಟ್ಟೆಯ ಸಹಾಯದಿಂದ ಅದನ್ನು ಸ್ವಚ್ಛ ಮಾಡಿದರೆ ಅದರಲ್ಲಿ ಇರುವಂತಹ ದೂಳು ಖಸ ಎಲ್ಲವೂ ಕೂಡ ಸಂಪೂರ್ಣವಾಗಿ ಆಚೆ ಬರುತ್ತದೆ. ಈ ರೀತಿಯಾಗಿ ಮಾಡುವುದರಿಂದ ವಾಷಿಂಗ್ ಮಷೀನ್ ಹೆಚ್ಚು ದಿನ ಬಾಳಿಕೆಗೆ ಬರುತ್ತದೆ.
* ವಾಷಿಂಗ್ ಮಷೀನ್ ನಲ್ಲಿ ಇರುವಂತಹ ಬೆಲ್ಟ್ ಭಾಗಕ್ಕೆ ಒಂದು ಚಮಚ ಅಡುಗೆ ಸೋಡಾ ಹಾಗೂ ಒಂದು ಚಮಚ ಸೋಪ್ ಪೌಡರ್ ಹಾಗೂ ಒಂದು ಚಮಚ ವಿನೀಗರ್ ಅನ್ನು ಹಾಕಬೇಕು ಆನಂತರ ಒಂದು ನಿಂಬೆಹಣ್ಣಿಗೆ ಸ್ವಲ್ಪ ಪೇಸ್ಟ್ ಹಾಕಿ ಇದನ್ನು ಬಟ್ಟೆ ಹಾಕುವಂತಹ ಡ್ರಮ್ ಒಳಭಾಗಕ್ಕೆ ಹಾಕಿ ಆನ್ ಮಾಡಬೇಕು ಈ ರೀತಿ ಮಾಡುವುದರಿಂದ ವಾಷಿಂಗ್ ಮಷೀನ್ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.