
ಸಾಮಾನ್ಯವಾಗಿ ನಾವು ಯಾವುದೇ ಪದಾರ್ಥಗಳಾಗಿರಬಹುದು ಅದು ಚೆನ್ನಾಗಿಲ್ಲ ನೋಡುವುದಕ್ಕೆ ಅಸಹ್ಯವಾಗಿದೆ ಎಂದರೆ ನಾವೆಲ್ಲರೂ ಕೂಡ ಅದನ್ನು ತಕ್ಷಣ ಮನೆಯಿಂದ ಆಚೆ ಹಾಕುತ್ತೇವೆ. ಅದರಲ್ಲೂ ತಲೆ ದಿಂಬು ಕಳಕಾಗಿದ್ದರೆ ಸಾಕು ಕೆಲವೊಂದಷ್ಟು ಜನ ಅದನ್ನು ಕಸದ ಗಾಡಿಗೆ ಹಾಕುತ್ತಾರೆ.
ಆದರೆ ಆ ರೀತಿ ಮಾಡುವುದರ ಬದಲು ಈಗ ನಾವು ಹೇಳುವಂತಹ ಈ ಒಂದು ವಿಧಾನ ಅನುಸರಿಸಿ ನಿಮ್ಮ ತಲೆದಿಂಬನ್ನು ನವೀಕರಿಸಬಹುದು. ಅಂದರೆ ಪುನರ್ ಬಳಕೆ ಮಾಡಿಕೊಳ್ಳಬಹುದು. ಹಾಗಾದರೆ ಅದನ್ನು ಹೇಗೆ ಮಾಡುವುದು ಯಾವ ವಿಧಾನಗಳನ್ನು ಅನುಸರಿಸುವುದರ ಮೂಲಕ ನಮ್ಮ ತಲೆ ದಿಂಬನ್ನು ಮತ್ತೆ ಪುನರ್ ಬಳಕೆ ಮಾಡಬಹುದು.
ಹಾಗೂ ಮನೆಯಲ್ಲಿ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರಿಂದ ಯಾವ ಕೆಲಸವನ್ನು ಹೇಗೆ ಸುಲಭವಾಗಿ ಮಾಡಬಹುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಮೊದಲೇ ಹೇಳಿದಂತೆ ಸಾಮಾನ್ಯವಾಗಿ ನಾವೆಲ್ಲರೂ ಕೂಡ ತಲೆ ದಿಂಬು ಕೊಳಕಾಗಿದೆ ಎನ್ನುವ ಉದ್ದೇಶದಿಂದ ಅದನ್ನು ಆಚೆ ಹಾಕುತ್ತಿರು ತ್ತೇವೆ. ಆದರೆ ಆ ರೀತಿ ಮಾಡುವುದರ ಬದಲು ಅದನ್ನು ಕತ್ತರಿಸಿ ಒಳಗಡೆ ಇರುವಂತಹ ಎಲ್ಲಾ ಹತ್ತಿಯನ್ನು ಬಿಡಿಬಿಡಿಯಾಗಿ ತೆಗೆದು ಅದನ್ನು ಬಡಿದು ಅದರಲ್ಲಿರುವಂತಹ ಧೂಳನ್ನು ತೆಗೆಯಬೇಕು.
ಆನಂತರ ಅದನ್ನು ಬಿಸಿಲಿನಲ್ಲಿ ಸ್ವಲ್ಪ ಒಣಗಿಸಿ ನಿಮ್ಮ ಮನೆಯಲ್ಲಿ ಯಾವುದಾ ದರೋ ಹಳೆಯ ಬಟ್ಟೆಯ ಬ್ಯಾಗ್ ಇದ್ದರೆ ಅದನ್ನು ಒಂದು ಕಡೆ ಕತ್ತರಿಸಿ ಅದರ ಒಳಗಡೆ ಇದನ್ನು ಹಾಕಿ ಒಲಿಯುವುದರಿಂದ ಹೊಸದಾಗಿ ಕಾಣುವಂತಹ ತಲೆದಿಂಬು ಸಿದ್ಧವಾಗುತ್ತದೆ.
ಹಾಗೆಯೇ ತಲೆ ದಿಂಬು ಸಿದ್ಧವಾದರೆ ಸಾಕಾಗುವುದಿಲ್ಲ ಅದರ ಮೇಲೆ ದಿಂಬಿನ ಕವರ್ ಇದ್ದರೆ ಮಾತ್ರ ಅದು ನೋಡುವುದಕ್ಕೆ ಸೊಗಸಾಗಿ ಕಾಣಿಸುತ್ತದೆ. ಸಾಮಾನ್ಯವಾಗಿ ನಾವು ಮನೆಯಲ್ಲಿ ಎಷ್ಟು ಜನ ಇರುತ್ತೇವೋ ಅಷ್ಟು ದಿಂಬುಗಳನ್ನು ಹಾಗೂ ಅಷ್ಟು ದಿಂಬಿನ ಕವರ್ ಗಳನ್ನು ನಾವು ಇಟ್ಟುಕೊಂಡಿರುತ್ತೇವೆ.
ಆದರೆ ಹೆಚ್ಚಿನ ಜನ ಬಂದಂತಹ ಸಮಯದಲ್ಲಿ ದಿಂಬಿಗೆ ಕವರ್ ಇಲ್ಲದೆ ಇದ್ದಂತಹ ಸಮಯದಲ್ಲಿ ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆಯ ವೇಲು ಅಥವಾ ಹಳೆಯ ಶಾಲು ಇದ್ದರೆ ಸಾಕು ನೀವು ಒಂದು ಪಿನ್ ಉಪಯೋಗಿಸಿ ಆ ದಿಂಬಿಗೆ ಕವರ್ ಸಿದ್ದ ಮಾಡಬಹುದು. ಹೌದು ದಿಂಬನ್ನು ಆ ವೇಲು ಅಥವಾ ಶಾಲುವಿನ ಮಧ್ಯ ಇಟ್ಟು ಎರಡು ಭಾಗದಿಂದ ಮುಚ್ಚಿ ಒಂದು ಪಿನ್ನನ್ನು ಹಾಕಿದರೆ ದಿಂಬಿನ ಕವರ್ ಸಿದ್ದವಾಗುತ್ತದೆ.
ಸಾಮಾನ್ಯವಾಗಿ ನಾವೆಲ್ಲರೂ ಕೂಡ ದಾಳಿಂಬೆ ಹಣ್ಣನ್ನು ಬಿಡಿಸುವು ದಕ್ಕೆ ತುಂಬಾ ಕಷ್ಟಪಡುತ್ತೇವೆ.ಅದಕ್ಕಾಗಿ ಹೆಚ್ಚಿನ ಜನ ದಾಳಿಂಬೆ ಹಣ್ಣನ್ನು ಖರೀದಿಯೂ ಸಹ ಮಾಡುವುದಿಲ್ಲ. ಆದರೆ ಈ ಟ್ರಿಕ್ ಉಪಯೋಗಿಸಿ ಅದನ್ನು ಸುಲಭವಾಗಿ ಬಿಡಿಸಬಹುದು. ಹೌದು ದಾಳಿಂಬೆ ಹಣ್ಣಿನ ಮಧ್ಯಭಾಗದಲ್ಲಿ ಚಾಕುವಿನಿಂದ ಮೆತ್ತಗೆ ಕತ್ತರಿಸಬೇಕು ಆನಂತರ ಆ ಹೋಳನ್ನು ಉಲ್ಟಾ ಹಿಡಿದು ಒಂದು ಸ್ಪೂನ್ ಸಹಾಯದಿಂದ ಮೇಲೆ ಬಡಿದರೆ ಸಾಕು ದಾಳಿಂಬೆ ಹಣ್ಣು ಸುಲಭವಾಗಿ ಬಿಚ್ಚಿಕೊಳ್ಳುತ್ತದೆ.
ಈ ರೀತಿ ಮಾಡುವುದರಿಂದ ಬೇಗ ದಾಳಿಂಬೆ ಹಣ್ಣನ್ನು ಬಿಡಿಸಬಹುದು ಹಾಗೂ ಸಮಯವು ಕೂಡ ಉಳಿತಾಯವಾಗುತ್ತದೆ. ಅದೇ ರೀತಿಯಾಗಿ ನಾವು ಕಿತ್ತಳೆ ಹಣ್ಣನ್ನು ಜ್ಯೂಸ್ ಮಾಡಬೇಕು ಎನ್ನುವ ಸಂದರ್ಭದಲ್ಲಿ ಅದನ್ನು ಸಿಪ್ಪೆ ಬಿಡಿಸಿ ಆ ನಂತರ ಮಿಕ್ಸಿಗೆ ಹಾಕಿ ಅದನ್ನು ಶೋಧಿಸಿ ಕುಡಿಯುತ್ತೇವೆ.
ಆದರೆ ಆ ರೀತಿ ಮಾಡುವುದರ ಬದಲು ಕಿತ್ತಳೆ ಹಣ್ಣನ್ನು ಹೋಳುಗಳಾಗಿ ಮಾಡಿ ನಾವು ಮಜ್ಜಿಗೆ ಕಡಿಯುವಂತಹ ಸ್ಟೀಲ್ ವಸ್ತುವಿನಿಂದ ಹಿಂಡಿದರೆ ಸಾಕು ನಮಗೆ ಸುಲಭವಾಗಿ ಕಿತ್ತಳೆ ಹಣ್ಣಿನ ಜ್ಯೂಸ್ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ