
ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖವಾದಂತೆ ಮಹಿಳೆಯರ ದೇಹದ ಭಾಗಗಳ ಗುಣಲಕ್ಷಣಗಳನ್ನು ನೋಡಿ. ಅವರ ಅದೃಷ್ಟದ ಬಗ್ಗೆ ತಿಳಿಯ ಬಹುದಾಗಿದೆ. ಹೌದು ಮಹಿಳೆಯ ದೇಹದ ಒಂದೊಂದು ಭಾಗವೂ ಕೂಡ ಒಂದೊಂದು ಅದೃಷ್ಟವನ್ನು ಹೊಂದಿರುತ್ತದೆ ಎಂದು ಹೇಳ ಬಹುದು. ಆ ಮಹಿಳೆ ತನ್ನ ಜೀವನದಲ್ಲಿ ಯಾವ ರೀತಿಯ ಅಭಿವೃದ್ಧಿ ಯನ್ನು ಹೊಂದುತ್ತಾಳೆ ಹಾಗೂ ಅದು ಅವಳಿಗೆ ಎಷ್ಟು ಅದೃಷ್ಟವನ್ನು ತಂದು ಕೊಡುತ್ತದೆ ಎನ್ನುವುದನ್ನು ಅದು ಹೊಂದಿರುತ್ತದೆ.
ಹಾಗಾದರೆ ಈ ದಿನ ಮಹಿಳೆಯ ದೇಹದ ಯಾವ ಭಾಗಗಳನ್ನು ನೋಡಿ ಅವಳು ಎಷ್ಟು ಅದೃಷ್ಟವಂತಳು ಎಂದು ತಿಳಿಯಬಹುದು ಎನ್ನುವಂತಹ ಮಾಹಿತಿ ಯನ್ನು ಈ ದಿನ ತಿಳಿಯೋಣ. ಹೆಣ್ಣನ್ನು ದೇವರಿಗೆ ಹೋಲಿಸುತ್ತಾರೆ. ಪುರಾತನ ಕಾಲದಿಂದಲೂ ದೇವಿಯ ಸ್ವರೂಪ ಎಂದು ಪೂಜಿಸುತ್ತಾರೆ.
ಅದೃಷ್ಟವಂತ ಹೆಣ್ಣಿನ ಗುಣಲಕ್ಷಣಗಳು ಯಾವುದೆಂದರೆ
* ಮನೆಯ ಹೆಣ್ಣು ಮಗಳು ಸದಾ ನಗು ನಗುತ್ತಾ ಇದ್ದರೆ ಮನೆಯು ಸದಾ ಸಮೃದ್ಧಿಯಿಂದ ಹಾಗೂ ಸಂತೋಷದಿಂದ ಕೂಡಿರುತ್ತದೆ. ಜೊತೆಗೆ ಹೆಣ್ಣು ಮಕ್ಕಳು ಮನೆಯಲ್ಲಿ ನಗುತ್ತಾ ಇದ್ದರೆ ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಕೂಡ ಅವೆಲ್ಲವನ್ನು ಸಹ ನಾವು ಮರೆಯಬಹುದು ಹಾಗೂ ಅವಳನ್ನು ನೋಡುತ್ತಾ ಎಷ್ಟೇ ಕಷ್ಟ ಇದ್ದರೂ ಅದನ್ನು ನಾವು ಸರಿಪಡಿಸು ತ್ತೇವೆ ಎನ್ನುವ ಮನೋಭಾವನೆ ಉಂಟಾಗುತ್ತದೆ.
* ಹೆಣ್ಣಿನ ಹಣೆಯ ಭಾಗವು ಅಗಲವಾಗಿದ್ದರೆ ಆ ಹೆಣ್ಣು ಮಗಳು ತನ್ನ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಸುಖವಾಗಿರುತ್ತಾಳೆ ಎಂದು ಶಾಸ್ತ್ರ ಪುರಾಣಗಳಲ್ಲಿ ತಿಳಿಸಲಾಗಿದೆ.
* ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ತಮ್ಮ ಗಂಡಂದಿರ ಪಾಲಿಗೆ ಅದೃಷ್ಟದ ದೇವತೆಯಂತೆ ಇರುತ್ತಾರೆ. ಅಂದರೆ ಅವಳು ಹೋದ ಮನೆಯಲ್ಲಿ ಅತಿ ಹೆಚ್ಚಿನ ಅಭಿವೃದ್ಧಿ ಎನ್ನುವುದು ಉಂಟಾಗುತ್ತದೆ. ಅದರಲ್ಲೂ ಅವಳ ಗಂಡನ ಪಾಲಿಗೆ ಅವರು ಅದೃಷ್ಟದ ದೇವತೆಯಂತೆ ಇರುತ್ತಾರೆ.
* ಹೆಣ್ಣುಮಕ್ಕಳು ಉದ್ದನೆಯ ಕತ್ತನ್ನು ಹೊಂದಿದ್ದರೆ ಅವರು ಹುಟ್ಟಿದ ಮನೆ, ಹೋದ ಮನೆ ಎರಡು ಕಡೆಯೂ ಸಂಪತ್ತನ್ನು ತರುತ್ತಾಳೆ ಎಂದು ಹೇಳಲಾಗುತ್ತದೆ.
* ದಪ್ಪವಾಗಿರುವ ಹೆಣ್ಣು ಮಕ್ಕಳು ಆರ್ಥಿಕವಾಗಿ ಏನೇ ಕಷ್ಟ ಬಂದರೂ, ಸದೃಢವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
* ಹೆಣ್ಣು ಮಕ್ಕಳು ದುಂಡನೆಯ ಮುಖ, ದೊಡ್ಡದಾದ ಕಣ್ಣು, ನೋಡಲು ಆಕರ್ಷಕವಾಗಿದ್ದರೆ ಆ ಹೆಣ್ಣು ನೆಲೆಸಿರುವ ಮನೆಯಲ್ಲಿ ಸದಾ ಖುಷಿ ಮತ್ತು ಸಂತೋಷ ತುಂಬಿರುತ್ತದೆ.
* ಹೆಣ್ಣು ಮಕ್ಕಳ ತುಟಿಯು ದಪ್ಪಗೆ ದುಂಡಗೆ ಇದ್ದರೆ ಅವರ ಜೀವನ ದಲ್ಲಿ ಯಾವುದೇ ಕೆಟ್ಟ ಘಟನೆ ನಡೆಯದೆ ಸದಾ ಕಾಲ ಸಂತೋಷದಿಂದ ಇರುತ್ತಾರೆ.
* ಹೆಣ್ಣುಮಕ್ಕಳ ಹಲ್ಲಿನ ನಡುವೆ ಅಂತರವಿದ್ದರೆ ಆ ಹೆಣ್ಣು ತುಂಬಾ ಭಾಗ್ಯಶಾಲಿಯಾಗಿರುತ್ತಾಳೆ. ಅಂದರೆ ಅವಳು ತನ್ನ ಜೀವನದಲ್ಲಿ ಯಾವ ರೀತಿಯಾಗಿ ಇರಬೇಕು ಎಂದುಕೊಳ್ಳುತ್ತಾಳೋ ಅದೇ ರೀತಿಯಾಗಿ ತಾನು ಅಂದುಕೊಂಡಂತೆ ಸುಖವಾದ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
* ಹೆಣ್ಣು ಮಕ್ಕಳ ಕೈ ಬೆರಳಿನಲ್ಲಿ ಶಂಖ ಹಾಗೂ ಶುಭ ಚಿಹ್ನೆಗಳು ಇದ್ದರೆ ಜೀವನದಲ್ಲಿ ಸೌಭಾಗ್ಯವನ್ನು ಕಾಣುತ್ತಾಳೆ. ಮೇಲೆ ಹೇಳಿದಂತೆ ಈ ರೀತಿಯ ಚಿಹ್ನೆಗಳು ಅವಳಿಗೆ ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ. ಅವಳು ಅಂದುಕೊಂಡಂತೆ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತಾಳೆ. ಜೀವನದಲ್ಲಿ ಒಂದು ಗುರಿಯನ್ನು ತಲುಪುತ್ತಾಳೆ ಎಂದೇ ಹೇಳಬಹುದು.
* ಹೆಣ್ಣು ಮಕ್ಕಳ ಕಾಲು ಬೆರಳುಗಳು ಉದ್ದವಾಗಿದ್ದರೆ ಲಕ್ಷ್ಮಿ ಸ್ವರೂಪ ಎಂದು ಉಲ್ಲೇಖಿಸಿದ್ದಾರೆ. ಹೌದು ಬಹಳ ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳನ್ನು ನೋಡಲು ಹೋದಂತಹ ಸಮಯದಲ್ಲಿ ಅವಳ ಕಾಲು ಬೆರಳುಗಳನ್ನು ನೋಡುವುದರ ಮೂಲಕ ಅವಳನ್ನು ಮನೆಯ ಸೊಸೆಯಾಗಿ ಮಾಡಿಕೊಳ್ಳುತ್ತಿದ್ದರು ಎಂದೇ ಉಲ್ಲೇಖ ಇದೆ.