ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವಂತೆ ಈಗ ಟಮೋಟೊ ಗೂ (Tomato) ಕೂಡ ಒಂದು ಕಾಲ ಬಂದಿದೆ. ಸದ್ಯಕ್ಕೆ ದೇಶದಲ್ಲಿ ಕೆಂಪು ಚಿನ್ನ ಎಂದೇ ಕರೆಸಿಕೊಳ್ಳುತ್ತಿರುವ ಟೊಮೊಟೊ ದಾಖಲೆಯ ದರದಲ್ಲಿ ಮಾರಾಟ ಆಗುತ್ತಿದೆ. ಹಲವು ಬಾರಿ ಟೊಮೊಟೊ ಅದರ ಖರ್ಚಿಗೂ ಗಿಟ್ಟದೇ ಕಣ್ಣೀರಿಡುತ್ತಿದ್ದ ರೈತ ಕನಿಷ್ಠ ಬೆಂಬಲ ಬೆಲೆಯು ಇಲ್ಲದೆ ರಸ್ತೆಗೆ ಸುರಿದು ಹೋಗುತ್ತಿದ್ದ ಆದರೆ ಈಗ ಟಮೊಟೊ ಬೆಳೆದ ರೈತನಿಗೆ (Farmers) ಜಾಕ್ ಪಾಟ್ ಹೊಡೆದಿದೆ.
ರಾತ್ರೋ ರಾತ್ರಿ ಅದೃಷ್ಟ ಕುಲಾಯಿಸಿ ಲಕ್ಷಾಧಿಪತಿ, ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಇದೇ ಸಂಭ್ರಮದಲ್ಲಿ 12 ಎಕರೆ ಜಮೀನಿನಲ್ಲಿ ಟೊಮೊಟೊ ಬೆಳೆ ಬೆಳೆದಿದ್ದ ರೈತನೊಬ್ಬ ಟಮೋಟೋ ಬೆಳೆದ ಹಣದಿಂದ ಮಾರುತಿ XUV 700 ಕಾರ್ (Maruyhi XUV 700) ಕೊಂಡು ಇದೇ ಕಾರಿನಲ್ಲಿ ಹೆಣ್ಣು ನೋಡಲು ಹೋಗುತ್ತೇನೆ ಎಂದಿದ್ದಾನೆ.
ಚಾಮರಾಜನಗರ ಜಿಲ್ಲೆಯ (Chamarajanagara) ಲಕ್ಷ್ಮಿಪುರ ಗ್ರಾಮದ ರಾಜೇಂದ್ರ (Rajendra) ಎನ್ನುವ ಯುವ ರೈತ ತನ್ನ 12 ಎಕರೆ ಜಮೀನಿನಲ್ಲಿ ಟಮೊಟೊ ಬೆಳೆದು ಕೋಟ್ಯಾಧಿಪತಿಯಾಗಿದ್ದಾನೆ. ಆತ ಅದೇ ಖುಷಿಯಲ್ಲಿ ಕಾರ್ ಕೊಂಡುಕೊಂಡಿದ್ದಾನೆ. ಅದೇ ಭರದಲ್ಲಿ ಈ ರೀತಿ ಮಾತು ಹೇಳಲು ಕಾರಣ ಕೂಡ ಇದೆ. ಯಾಕೆಂದರೆ, ಈ ಹಿಂದೆ ಅನೇಕ ಬಾರಿ ಹೆಣ್ಣು ನೋಡಲು ಹೋಗಿದ್ದಾಗ ಬೈಕ್ ಅಲ್ಲಿ ಬಂದಿದ್ದಾನೆ.
ಸರ್ಕಾರಿ ಕೆಲಸ ಇಲ್ಲ, ITBT ಯಲ್ಲಿ ದುಡಿಯುವ ಹುಡುಗನೇ ಬೇಕು, ಸಿಟಿಯಲ್ಲಿ ಇರುವವನೇ ಆಗಬೇಕು ಎಂದು ಅನೇಕ ಹುಡುಗಿಯರು ರಿಜೆಕ್ಟ್ ಮಾಡಿದ್ದರಂತೆ. ಹೆಣ್ಣು ಹೆತ್ತ ಪೋಷಕರು ಕೂಡ ರೈತನಾಗಿರುವ ಕಾರಣಕ್ಕೆ ಹೆಣ್ಣು ಕೊಡಲು ಒಪ್ಪುತ್ತಿರಲಿಲ್ಲವಂತೆ. ಇದನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ರಾಜೇಂದ್ರ ಈಗ ಕೃಷಿಯಲ್ಲಿ ಸಾಧನೆ ಮಾಡಿ ಕಾರು ಕೊಂಡುಕೊಂಡು ಹೆಣ್ಣು ನೋಡಲು ಅದರಲ್ಲೇ ಹೋಗುತ್ತೇನೆ.
ಡಿವೋರ್ಸ್ ಕೊಡ್ತಿಲ್ಲ ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು.!
ಆಗ ಬೇಡ ಎಂದವರೆ ಕರೆದು ಪಾದ ತೊಳೆದು ಮಕ್ಕಳನ್ನು ಕೊಡುವಂತಾಗಿದೆ ಎಂದು ಹೇಳಿದ್ದಾರೆ. ರೈತರ ಮಕ್ಕಳನ್ನು ಮದುವೆಯಾಗಲು ಹಿಂದೇಟು ಆಗುವ ಹೆಣ್ಣು ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಮನವಿ ಮಾಡಿರುವ ರಾಜೇಂದ್ರ ಅವರು ಶ್ರಮಪಟ್ಟು ದುಡಿಯುವವರಿಗೆ ಭೂಮಿ ತಾಯಿ ಕೈ ಹಿಡಿಯುತ್ತಾರೆ, ಒಂದಲ್ಲ ಒಂದು ಬಾರಿ ಅದೃಷ್ಟ ಖುಲಾಯಿಸುತ್ತದೆ.
6 ತಿಂಗಳಿನಲ್ಲಿ ಶ್ರಮ ಪಟ್ಟು ಕೋಟಿಗಟ್ಟಲೆ ಟಮೊಟೊ ಬೆಳೆದಿದ್ದೇನೆ ಎಲ್ಲರಿಗೂ ಕೂಡ ಅಂತ ಸಮಯ ಬರುತ್ತದೆ ರೈತ ಎನ್ನುವ ಕಾರಣಕ್ಕೆ ಅವಮಾನಿಸಬೇಡಿ ಎಂದು ಹೇಳಿದ್ದಾರೆ. ಹಾಗೆಯೇ ತನ್ನ 12 ಎಕರೆಯ ಜಮೀನಿನಲ್ಲಿ ಇರುವ ಟಮೋಟೋ ಬೆಳೆಗೆ ಕಿಡಿಗೇಡಿಗಳ ಕಾಟ ಇರುವುದರಿಂದ ರಕ್ಷಣೆ ಕೊಡುವಂತೆ ಪೊಲೀಸರಿಗೆ ಮನವಿ ಕೂಡ ಮಾಡಿ ಕೊಂಡಿದ್ದಾನೆ (Police protection for tomato farm).
ಕಳೆದ ನಾಲ್ಕು ದಿನಗಳ ಹಿಂದೆ ಇದೇ ಚಾಮರಾಜನಗರ ಜಿಲ್ಲೆಯ ಕೆಬ್ಬೇಪುರ ಗ್ರಾಮದ ಮಂಜುನಾಥ್ ಎಂಬುವವರ 1.5 ಎಕರೆ ಜಮೀನಿನ ಟಮೋಟೊ ಬೆಳೆಯನ್ನು ಕಿಡಿಗೇಡಿಗಳು ನಾಶಪಡಿಸಿ ತೊಂದರೆ ಕೊಟ್ಟಿದ್ದರು. ಆದ ಕಾರಣ ಕೆಬ್ಬೇಪುರ ಪಕ್ಕದಲ್ಲಿ ಇರುವ ಲಕ್ಷ್ಮಿಪುರದ ತನ್ನ ಜಮೀನಿಗೆ ರಕ್ಷಣೆ ಕೊಡಿ ಎಂದು ರಾಜೇಂದ್ರ ಕೇಳಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ರೈತನ ಮನವಿಗೆ ಓಗೊಟ್ಟು ಪೊಲೀಸರು ಕೂಡ ಟೊಮೆಟೊ ಬೆಳೆಯ ಕಾವಲಿಗೆ ಮುಂದಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳ ಆದೇಶ ಕೂಡ ಇರುವ ಕಾರಣ ಚಾಮರಾಜನಗರ ಪೊಲೀಸರು ರಾತ್ರಿ ಸಮಯ ನಾಲ್ಕೈದು ಬಾರಿ ಜಿಲ್ಲೆಯಲ್ಲಿರುವ ಟಮೋಟೊ ಜಮೀನುಗಳ ಸುತ್ತಾ ಪೊಲೀಸರು ಗಸ್ತು ಹೊಡೆಯುತ್ತಿದ್ದಾರೆ.