Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅತೀ ಕಡಿಮೆ ಬೆಲೆಯ ಹೊಸ ರೀತಿಯ ಗೃಹ ನಿರ್ಮಾಣ, ನಿಮ್ಮ ಕನಸಿನ ಮನೆಯನ್ನೂ ಹೀಗೆ ಕಟ್ಬೋದು ನೋಡಿ.!

Posted on July 12, 2023 By Kannada Trend News No Comments on ಅತೀ ಕಡಿಮೆ ಬೆಲೆಯ ಹೊಸ ರೀತಿಯ ಗೃಹ ನಿರ್ಮಾಣ, ನಿಮ್ಮ ಕನಸಿನ ಮನೆಯನ್ನೂ ಹೀಗೆ ಕಟ್ಬೋದು ನೋಡಿ.!

 

ಈಗಿನ ಆಧುನಿಕ ಕಾಲದಲ್ಲಿ ಪ್ರಗತಿ ಮತ್ತು ಅಭಿವೃದ್ದಿ ಮತ್ತು ಹೊಸತನ ಎನ್ನುವುದನ್ನು ನಾವು ಕಾಣುತ್ತಿದ್ದೇವೆ. ಅದು ತಂತ್ರಜ್ಞಾನ ಕ್ಷೇತ್ರದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಔಷಧೀಯ ಕ್ಷೇತ್ರದಲ್ಲಿ ಇನ್ನಿತರ ಹಲವಾರು ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ನಾವು ನೋಡುತ್ತಿದ್ದೇವೆ. ಹೊಸ ರೀತಿಗಳು, ನಿಯಮಗಳು ಜಾರಿಗೆ ಬರುತ್ತಾ ಇದೆ. ಇಂದಿನ ಲೇಖನದಲ್ಲಿ ನಾವು ನಿಮಗೆ ಇಪಿಎಸ್ ತಂತ್ರಜ್ಞಾನ ಬಗ್ಗೆ ತಿಳಿಸಿ ಕೊಡುತ್ತೇವೆ. ಕೊನೆವರೆಗೂ ತಪ್ಪದೇ ಈ ಲೇಖನವನ್ನು ಓದಿ ಮಾಹಿತಿ ತಿಳಿಯೋದನ್ನ ಮರೆಯಬೇಡಿ…

ಈ ಇಪಿಎಸ್ ಅಂದರೆ, ಎಕ್ಸ್ಪಾಂಡೆಡ್ ಫಾಲೀಸ್ಟರ್ ಶೀಟ್ಸ್(Expanded Polyester Sheets) ಅಂತ ಇದರ ಅರ್ಥವಾಗಿದೆ. ತುಂಬಾನೇ ಸರಳವಾದ ಭಾಷೆಯಲ್ಲಿ ಹೇಳಬೇಕೆಂದರೆ, ಈ ಶೀಟ್ಸ್‌ಗಳನ್ನು ಬಳಕೆ ಮಾಡಿಕೊಂಡು ಹೊಸದಾದ ಕಟ್ಟಡವನ್ನು ನಿರ್ಮಾಣ ಮಾಡಿಕೊಳ್ಳಬಹುದು. ಈ ವಿಧಾನಕ್ಕೆ ಇಪಿಎಸ್ ತಂತ್ರಜ್ಞಾನ ಅಂತ ಕರೆಯುತ್ತಾರೆ.

ಈ ತಂತ್ರಜ್ಞಾನ ನಮ್ಮ ಭಾರತದಲ್ಲಿ ದೇಶದಲ್ಲಿ ಜಾರಿಯಲ್ಲಿ ಇದೆಯೇ?, ಇದು ಎಲ್ಲಿಂದ ಪ್ರಾರಂಭವಾಯಿತು?, ಈ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನಾವು ಸುಲಭವಾದ ಹೊಸದಾದ ಕಟ್ಟಡವನ್ನು ನಿರ್ಮಾಣ ಮಾಡಲು ಸಾಧ್ಯವೇ, ಹಾಗೆಯೇ ಇದರಿಂದಾಗುವ ಇನ್ನಿತರ ಪ್ರಯೋಜನವನ್ನು ತಿಳಿಸುವ ಉದ್ದೇಶವೇ ಇಂದಿನ ಲೇಖನವಾಗಿದೆ. ಇಪಿಎಸ್ ತಂತ್ರಜ್ಞಾನವನ್ನೂ ನಾವು ಪರಿಸರ ಸ್ನೇಹಿ ತಂತ್ರಜ್ಞಾನ ಅಂತ ಕರೆಯಬಹುದು. ಇದು ಮೂಲತಃ ಇಟಲಿ ದೇಶದ ತಂತ್ರಜ್ಞಾನ ಅಂತ ಗುರುತಿಸಿಕೊಂಡಿದ್ದು ಈಗ ನಮ್ಮ ಕರ್ನಾಟಕದಲ್ಲಿ ಕೂಡ ಈ ತಂತ್ರಜ್ಞಾನದ ಬಳಕೆ ಶುರುವಾಗಿದೆ.

ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೀವು ಮನೆ ನಿರ್ಮಾಣ ಮಾಡಲು ಶುರು ಮಾಡಿದರೆ, ನಿಮಗೆ ಕನಿಷ್ಠ 20%-50% ಉಳಿತಾಯ ಆಗುತ್ತದೆ ಅಂತ ಹೇಳಲಾಗುತ್ತದೆ. ಜೊತೆಗೆ ನಿಮ್ಮ ಮನೆಯ ಕೆಲಸಗಳು ಬೇಗನೆ ಆಗಿ ಮನೆಯೂ ಬೇಗನೆ ಸಿದ್ಧವಾಗುತ್ತದೆ ಮತ್ತು ಕಟ್ಟಡ ಕಟ್ಟುವ ಎಲ್ಲ ಕೆಲಸಗಳು ಬೇಗನೆ ನೆರವೇರುತ್ತದೆ. ಈ ತಂತ್ರಜ್ಞಾನವನ್ನು ಯಾಕೆ ಬಳಕೆ ಮಾಡಬೇಕು.

ಅಂದರೆ, ಇದು ಹವಾಮಾನಕ್ಕೆ ಹೊಂದಿಕೊಳ್ಳುತ್ತದೆ. ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಅಧಿಕವಾದ ಉಷ್ಣಾಂಶ ಇರುತ್ತದೆ ಆ ಹಿಟ್ ಅನ್ನು ಇ ತಂತ್ರಜ್ಞಾನ ತಡೆ ಹಿಡಿಯುತ್ತದೆ. ಇನ್ನೂ ಅಧಿಕ ಮಳೆ ಬರುವ ಪ್ರದೇಶದಲ್ಲಿ ಕೂಡ ಈ ಟೆಕ್ನಾಲಜಿ ಬಳಕೆ ಮಾಡಿದರೆ ಕೂಡ ಚಳಿಯನ್ನು ಇದು ಹಾದು ಹೋಗಲು ಬಿಡುವುದಿಲ್ಲ.

ಹಾಗೆಯೇ, ಎರಡು ಗಂಟೆಗಳ ಕಾಲ ಇದು ಫೈಯರ್ ಫ್ರುಪ್ ಮತ್ತು ಬುಲೆಟ್ ಪ್ರೂಫ್ ಆಗಿದ್ದು ಉಪ್ಪು ನೀರಿನ ವಾತಾವರಣಕ್ಕೆ ಕೂಡ ಇದು ತುಂಬಾನೇ ಉತ್ತಮವಾಗಿದೆ. ಇದರಿಂದ, ಯಾವುದೇ ರೀತಿಯ ತೊಂದರೆಯೂ ಆಗುವುದಿಲ್ಲ. ಇಪಿಎಸ್ ತಂತ್ರಜ್ಞಾನ ನಮ್ಮ ಭಾರತ ದೇಶದಲ್ಲಿ ಜನಪ್ರಿಯತೆಯನ್ನು ಪಡೆಯುವುದಲ್ಲದೇ ನಮ್ಮ ಕರ್ನಾಟಕದಲ್ಲಿ ಉಡುಪಿ ಸೃಷ್ಟಿ ವೆಂಚರ್ ಅವರು ಇಟಲಿ ದೇಶದಿಂದ ಖರೀದಿ ಮಾಡಿ ಜನರಿಗೆ ಇದರ ಲಾಭವನ್ನು ಪಡೆಯುವಂತೆ ಮಾಡಿದ್ದಾರೆ.

ಇವರು ತಮ್ಮ ಕಂಪನಿಯನ್ನು ಇಡೀ ಇಪಿಎಸ್ ತಂತ್ರಜ್ಞಾನದ ಮೂಲಕ ನಿರ್ಮಿಸಿದ್ದಾರೆ. ಇಲ್ಲಿ ಎಕ್ಸ್ಪಾಂಡೆಬಲ್ ಪೋಲಿಮಸ್ ಹಾಗೂ ಹೊರಗಡೆ ರಿಎನ್ ಫೋರ್ ಸಿಬಲ್ ಸ್ಟೀಲ್ ಬಳಕೆ ಮಾಡಿರುತ್ತಾರೆ. ಯಾಕೆ ಈ ಸ್ಟೀಲಿನ ಬಳಕೆ ಮಾಡುತ್ತಾರೆ ಎಂದರೆ, ಇದರಿಂದ ಯಾವುದೇ ಕೆರೋಸಿನ್ ಬರುವುದಿಲ್ಲ ರಸ್ಟ್ ಬರುವುದಿಲ್ಲ. ಇದರ ಎರಡು ಬದಿಯಲ್ಲಿ ಕಾಂಕ್ರೀಟ್ ಕೋಟಿಂಗ್ ಮತ್ತು ಗಾರೆ ಮಾಡಿ ಪುಟ್ಟಿ ಮಾಡಿ ಅದಕ್ಕೆ ಬಣ್ಣವನ್ನು ಹಚ್ಚಬೇಕು.

ಜೊತೆಗೆ ಸ್ಯಾಂಡ್ವಿಚ್ ನ ತರಹ ಮಧ್ಯದಲ್ಲಿ ಕಾಂಕ್ರೀಟ್ ಲೆಯರ್ ಅನ್ನು ತುಂಬಲಾಗುತ್ತದೆ. ಈ ಕಟ್ಟಡ ನಿರ್ಮಾಣ ಬೇಗನೆ ಮುಗಿಯುತ್ತದೆ. ಜೊತೆಗೆ ಖರ್ಚು ಕೂಡ ಕಡಿಮೆ ಆಗುತ್ತದೆ. ಏಕೆಂದರೆ, ರೆಡಿಮೇಡ್ ಸ್ಟೇರ್ ಕೇಸ್ ಸಿಗುತ್ತದೆ. ಹಾಗಾಗಿ, ಇಲ್ಲಿ ಎಲ್ಲವನ್ನ ತಂದು ತಂದು ಜೋಡಿಸುವುದರಿಂದ ಬೇಗನೆ ಮುಗಿಯುತ್ತದೆ. ಇದರಲ್ಲಿ ಎರಡು ರೀತಿಯ ಟೆಕ್ನಾಲಜಿ ಬರುತ್ತದೆ.

ಒಂದು ಸಿಂಗಲ್ ಪ್ಯಾನೆಲ್ ಮತ್ತು ಸ್ಯಾಂಡ್ವಿಚ್ ಪ್ಯಾನಲ್. ಸಿಂಗಲ್ ಪ್ಯಾನಲ್ ಬಳಸಿ ಮೂರು ಮಹಡಿಯವರೆಗೆ ಮನೆಯನ್ನು ನಿರ್ಮಾಣ ಮಾಡಬಹುದು. ಇನ್ನೂ ಸ್ಯಾಂಡ್ವಿಚ್ ಪ್ಯಾನಲ್ ನಲ್ಲಿ 15-20 ಮಹಡಿವರೆಗೆ ಕಟ್ಟಬಹುದು. ಈ ಬಗೆಯ ಕಟ್ಟಿದ ಮನೆಗಳು ನೂರು ವರ್ಷ ಬಾಳಿಕೆಗೆ ಬರುತ್ತದೆ. ಈ ಲೇಖನದ ಉದ್ದೇಶವೆಂದರೆ, ನೀವು ಈ ಬಗೆಯ ಟೆಕ್ನಾಲಜಿ ಬಳಕೆ ಮಾಡಿ ಮನೆ ಮಾಡುವುದು ಉತ್ತಮ ಜೊತೆಗೆ ಮನೆ ಕೂಡ ಬೇಗನೆ ಆಗುತ್ತದೆ. ಹಾಗೆಯೇ ನಿಮ್ಮ ಖರ್ಚು ವೆಚ್ಚಗಳು ಕಡಿಮೆ ಆಗುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯೇ ಇಲ್ಲವೋ ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವ ವಿಧಾನ…
Next Post: ಮಡಿಲಿನಲ್ಲಿ ಮಗುವಿಟ್ಟುಕೊಂಡು ಆಟೋ ಏರಿ ಜೀವನದ ಬಂಡಿ ಎಳೆಯುವ ಮಹಾತಾಯಿ.! ಮಾತೃ ವಾತ್ಸಲ್ಯ ಅಂದರೆ ಇದೇ ಅಲ್ಲವೇ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore