ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯೇ ಇಲ್ಲವೋ ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವ ವಿಧಾನ…

 

ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿರುವ ಪಡಿತರವನ್ನು 10Kg ಗೆ ಎದುಸಲಾಗುವುದು ಎಂದು ಕಾಂಗ್ರೆಸ್ ಪಕ್ಷವು ಚುನಾವಣೆ ಪೂರ್ವವಾಗಿ ಭರವಸೆ ನೀಡಿತ್ತು. ಈಗ ಅಧಿಕಾರಕ್ಕೆ ಬಂದಮೇಲೆ ಇದನ್ನು ಅನುಷ್ಠಾನಕ್ಕೆ ತರಲು ಶತ ಪ್ರಯತ್ನ ಮಾಡಿದೆ. ಅಕ್ಕಿ ವಿತರಣೆಗೆ ದಾಸ್ತಾನು ಲಭ್ಯವಾಗದ ಹಿನ್ನೆಲೆ ಪ್ರತಿ ಸದಸ್ಯನಿಗೆ 5Kg ಅಕ್ಕಿ ವಿತರಣೆ ಹಾಗೂ ಹೆಚ್ಚುವರಿ 5Kg ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 34ರೂ. ಅಂತೆ ಒಬ್ಬ ಸದಸ್ಯನಿಗೆ 170ರೂಗಳನ್ನು ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲು ನಿರ್ಧರಿಸಿದೆ.

BPL ರೇಷನ್ ಕಾರ್ಡ್ ಹೊಂದಿರುವ ಎಲ್ಲರಿಗೂ ಕೂಡ ಈ ಯೋಜನೆಯ ಫಲಾನುಭವಿಗಳು ಅರ್ಹರಿದ್ದಾರೆ. ಒಂದು ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೋ ಆ ಎಲ್ಲಾ ಸದಸ್ಯರ ಒಟ್ಟು ಹಣವು ಕುಟುಂಬದ ಮುಖ್ಯಸ್ಥನ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತದೆ. ಸರ್ಕಾರವು ಯಾವುದೇ ಅರ್ಜಿಯನ್ನು ಇದಕ್ಕಾಗಿ ಆಹ್ವಾನಿಸುತ್ತಿಲ್ಲ.

ಆದರೆ ಆಧಾರ್ ಕಾರ್ಡ್ ಲಿಂಕ್ ಆಗಿ KYC ಅಪ್ಡೇಟ್ ಆಗಿರುವುದರಿಂದ ಕುಟುಂಬದ ಮುಖ್ಯಸ್ಥನ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿ, NPCI ಮ್ಯಾಚಿಂಗ್ ಆಗಿದೆಯೋ ಆ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಜುಲೈ 10 ರಂದು ಮುಖ್ಯಮಂತ್ರಿಗಳು, ಉಪಮುಖ್ಯ ಮಂತ್ರಿಗಳು ಹಾಗೂ ಆಹಾರ ಸಚಿವರು ಹಣ ವರ್ಗಾವಣೆಗೆ ಚಾಲನೆ ನೀಡಿದ್ದಾರೆ.

ಹಂತ ಹಂತವಾಗಿ ಎಲ್ಲಾ ಜಿಲ್ಲೆಯ ಫಲಾನುಭವಿಗಳು ಹಣ ವರ್ಗಾವಣೆ ಆಗಲಿದೆ. ನೀವು ಸಹ ಫಲಾನುಭವಿಗಳಾಗಿದ್ದಲ್ಲಿ ನಿಮಗೆ ಎಷ್ಟು Kg ಅಕ್ಕಿಗೆ ಹಣ ಬರುತ್ತಿದೆ, ಎಷ್ಟು ಮೊತ್ತದ ಹಣ ಬರುತ್ತದೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಹಣವು ಬರುತ್ತಿದೆಯೇ ಎಂದು ಸ್ಟೇಟಸ್ ಚೆಕ್ ಮಾಡಬಹುದು. ಅದರ ವಿವರವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

● ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in ಗೆ ಭೇಟಿ ಕೊಡಿ.
● ಇ-ಸೇವೆಗಳು ಎನ್ನುವ ಆಪ್ಷನ್ ಮುಖಪುಟದಲ್ಲಿ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ, ಎಡಭಾಗದಲ್ಲಿ ಇರುವ ಮೆನು ಬಾರ್ ಅಲ್ಲಿ ಮೂರನೇ ಆಪ್ಷನ್ ಅಲ್ಲಿ ಇ-ಸ್ಥಿತಿ ಎಂದು ಇರುತ್ತದೆ, ಅದನ್ನು ಕ್ಲಿಕ್ ಮಾಡಿ. ಸ್ಕ್ರೋಲ್ ಮಾಡಿ ನೋಡಿದರೆ ಕೊನೆಯಲ್ಲಿ DBT ಸ್ಥಿತಿ ಎಂದು ಇರುವ ಆಪ್ಷನ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

● ಆಗ ಆಹಾರ ಇಲಾಖೆಯ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆಯ ಪೇಜ್ ಓಪನ್ ಆಗುತ್ತದೆ. ಜಿಲ್ಲಾವಾರು ಲಿಂಕ್ ಇರುತ್ತದೆ. ನಿಮ್ಮ ಜಿಲ್ಲೆಯ ಲಿಸ್ಟ್ ಲಿಂಕ್ ಅನ್ನು ಕ್ಲಿಕ್ ಮಾಡಿ.
● ಆಗ ಒಂದು ಡ್ಯಾಶ್ ಬೋರ್ಡ್ ಕಾಣುತ್ತದೆ, ನೇರ ನಗದು ವರ್ಗಾವಣೆ ಸ್ಥಿತಿ ಅಥವಾ ಸ್ಟೇಟಸ್ ಆಫ್ DBT ಎಂದು ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

● ಸ್ಟೇಟಸ್ ಆಫ್ DBT ಎಂದು ಹೆಡ್ ಲೈನ್ ಇರುತ್ತದೆ. ಕೆಳಗೆ ವರ್ಷ, ತಿಂಗಳು, ಸೆಲೆಕ್ಟ್ ಮಾಡಿ ನಂತರ ನಿಮ್ಮ ಪಡಿತರ ಚೀಟಿಯ RC ನಂಬರ್ ಎಂಟರ್ ಮಾಡಿ ಗೋ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● RC ನಂಬರ್ ಹಾಕಿ ಕ್ಲಿಕ್ ಮಾಡಿದ ತಕ್ಷಣವೇ ಸ್ಕ್ರೀನ್ ಮೇಲೆ ನಿಮ್ಮ ವರ್ಗಾವಣೆಯ ಸಂಪೂರ್ಣ ವಿವರ ಬರುತ್ತದೆ. ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ ಅವರ ಹೆಸರು, ಅವರ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ನಂಬರ್ಗಳು, ಕುಟುಂಬದಲ್ಲಿ ಒಟ್ಟು ಎಷ್ಟು ಸದಸ್ಯರ ಹಣ ವರ್ಗಾವಣೆ ಆಗಿದೆ, ಎಷ್ಟು ಕೆಜಿ ಅಕ್ಕಿಗೆ ಎಲಿಜಿಬಲ್ ಆಗಿದ್ದಾರೆ ಮತ್ತು ಒಟ್ಟು ಮೊತ್ತದ ಹಣ ಎಷ್ಟು? ಎನ್ನುವುದು ತೋರಿಸುತ್ತದೆ.

ಕೊನೆಯಲ್ಲಿ ನಿಮ್ಮ ಕಾರ್ಡ್ ನಗದು ಪಾವತಿಗೆ ಅರ್ಹವಾಗಿದೆ ಮತ್ತು ಪ್ರಕ್ರಿಯೆ ಪ್ರಗತಿಯಲ್ಲಿದೆ ಎನ್ನುವ ಘೋಷಣೆ ಕೂಡ ಬಂದಿರುತ್ತದೆ. ಈ ರೀತಿ ಇದ್ದಲ್ಲಿ ಕೆಲವೇ ದಿನಗಳಲ್ಲಿ ಹಣ ಖಾತೆಗೆ ಖಚಿತವಾಗಿ ವರ್ಗಾವಣೆ ಆಗುತ್ತದೆ ಎಂದರ್ಥ.
● ಆಧಾರ್ ಕಾರ್ಡ್ ಸಂಬಂಧಿತ ಸಮಸ್ಯೆಯಿಂದಾಗಿ DBT ಹಣ ವರ್ಗಾವಣೆ ಆಗದೆ ಇದ್ದರೆ ಕುಟುಂಬದ ಮುಖ್ಯಸ್ಥರು ಹತ್ತಿರದಲ್ಲಿರುವ ಬೆಂಗಳೂರು ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಹೋಗಿ KYC ಅಪ್ಡೇಟ್ ಮಾಡಿಸಬೇಕು. ಆಹಾರ ಇಲಾಖೆ ಅಧಿಕಾರಿಗಳು ಅನುಮೋದನೆ ಮಾಡಿದರೆ ಮುಂದಿನ ತಿಂಗಳಿಂದ ಹಣ ವರ್ಗಾವಣೆ ಆಗುತ್ತದೆ ಎಂದು ಇಲಾಖೆ ತಿಳಿಸಿದೆ.

Leave a Comment