ಅರಿಶಿನ ಒಂದು ಮಂಗಳ ದ್ರವ್ಯ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅರಿಶಿಣ ಕುಂಕುಮ ಖರೀದಿ ಮಾಡದೆ ಯಾವ ಶುಭಕಾರ್ಯವನ್ನು ಕೂಡ ಮಾಡುವುದಿಲ್ಲ. ಹಾಗೆ ಮನೆ ಎಂದ ಮೇಲೆ ಆ ಮನೆಯ ದೇವರ ಕೋಣೆಯಲ್ಲಿ ಹಾಗೂ ಅಡುಗೆ ಮನೆಯಲ್ಲಿ ಅರಿಶಿನ ಇದ್ದೇ ಇರುತ್ತದೆ. ಅರಿಶಿಣಕ್ಕೆ ಎಷ್ಟೊಂದು ಶಕ್ತಿ ಇದೆ ಎಂದರೆ ಇದು ಅಡುಗೆಯ ಬಣ್ಣ, ರುಚಿ, ಸುವಾಸನೆ ಹೆಚ್ಚಿಸುತ್ತದೆ.
ಅಡುಗೆಯಲ್ಲಿ ಬಳಕೆಯಾಗುವ ಇದು ಆ ಮೂಲಕ ದೇಹಕ್ಕೆ ಸೇರಿ ದೇಹದ ಟಾಕ್ಸಿನ್ ಅಂಶಗಳನ್ನು ಹೊರಹಾಕುವ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ತಕ್ಷಣ ಗಾಯವಾದಾಗ ಅಥವಾ ಚರ್ಮ ಸಮಸ್ಯೆಗಳು ಬಂದಾಗ ಇದನ್ನೆಲ್ಲ ಗುಣಮಾಡಲು ತಕ್ಷಣ ಬಳಸುವುದೇ ಅರಿಶಿಣವನ್ನು ದೃಷ್ಟಿ ದೋಷಗಳು ಉಂಟಾದಾಗ ದೃಷ್ಟಿ ತೆಗೆಯಲು ಮತ್ತು ಕೆಲವು ತಂತ್ರಗಳ ಪ್ರಯೋಗ ಮಾಡಲು ಕೂಡ ಅರಿಶಿಣವನ್ನು ಬಳಕೆ ಮಾಡಲಾಗುತ್ತದೆ.
ಈ ರೀತಿ ಆಯುರ್ವೇದ, ವಾಸ್ತು ಶಾಸ್ತ್ರ, ಅಡಿಕೆ ಎಲ್ಲದರಲ್ಲೂ ಬಳಕೆಯಾಗುವ ಅರಿಶಿಣವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದರಿಂದ ಚಿಟಿಕೆ ಅರಿಶಿಣದಿಂದ ನಿಮ್ಮ ವ್ಯಾಪಾರ ಅಭಿವೃದ್ಧಿ ಹೊಂದುವ ಹಾಗೆ ಮಾಡಬಹುದು. ಕೈತಪ್ಪಿ ಹೋಗಿರುವ ಉದ್ಯೋಗದ ಬದಲು ಅದಕ್ಕಿಂತ ಒಳ್ಳೆಯ ಉದ್ಯೋಗ ಪಡೆದುಕೊಳ್ಳಬಹುದು.
ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗುತ್ತದೆ. ಈ ರೀತಿಯಾಗಿ ಅಂದುಕೊಂಡಿದ್ದೆಲ್ಲ ಪಡೆದುಕೊಳ್ಳುವಂತಹ ಯೋಗ ಅರಿಶಿಣದಿಂದ ಬರುತ್ತದೆ. ಈಗ ನಾವು ಹೇಳುವ ರೀತಿ ಅರಿಶಿಣವನ್ನು ಬಳಸುವುದರಿಂದ ಮತ್ತು ಅರಿಶಿಣದಿಂದ ಈ ಒಂದು ಕೆಲಸಗಳನ್ನು ಮಾಡುವುದರಿಂದ ನೀವು ಈ ಎಲ್ಲ ಶುಭಫಲಗಳನ್ನು ಪಡೆಯಬಹುದಾಗಿದೆ.
* ಅರಿಶಿನವನ್ನು ಗುರುಗ್ರಹಕ್ಕೆ ಹೋಲಿಸಲಾಗಿದೆ, ಯಾರಿಗೆ ಜಾತಕದಲ್ಲಿ ಗುರುಬಲವು ಕಡಿಮೆ ಆಗಿದೆಯೋ ಅವರು ಅರಿಶಿಣವನ್ನು ದಾನ ಮಾಡುವುದರಿಂದ ದೋಷಗಳು ಪರಿಹಾರ ಆಗುತ್ತದೆ.
* ವಿಷ್ಣು ಸಹಸ್ರನಾಮವನ್ನು ಪಠಿಸುವಾಗ ಅಥವಾ ಶ್ರವಣ ಮಾಡುವಾಗ ಭಕ್ತಿಯಿಂದ ಅಕ್ಷತೆ ಹಾಗೂ ಅರಿಶಿಣವನ್ನು ಕೈನಲ್ಲಿ ಹಿಡಿದುಕೊಂಡು ಮತ್ತು ಹಣೆಗೂ ಹಚ್ಚಿಕೊಂಡು ಪಾರಾಯಣ ಮಾಡುವುದರಿಂದ ಶ್ರೀ ಮಹಾಲಕ್ಷ್ಮಿ ಸಮೇತ ಶ್ರೀ ಮಹಾ ವಿಷ್ಣುವಿನ ಕೃಪಾಕಟಾಕ್ಷ ಉಂಟಾಗಿ ಎಲ್ಲ ರೀತಿಯ ಹಣಕಾಸಿನ ಸಮಸ್ಯೆಗಳು ಪರಿಹಾರ ಆಗುತ್ತವೆ, ಕುಟುಂಬ ಕ’ಲ’ಹಗಳು ಕೂಡ ವಿವರಣೆ ಆಗುತ್ತದೆ
* ಮನೆಯಿಂದ ಹೊರಗೆ ಹೋಗುವಾಗ ಕಿವಿಯ ಹಿಂದೆ ಚಿಟಿಕೆ ಅರಿಶಿಣವನ್ನು ಹಚ್ಚಿಕೊಂಡು ಹೋಗುವುದರಿಂದ ಯಾವುದೇ ರೀತಿಯ ದೃಷ್ಟಿ ದೋಷಗಳು ಆಗುವುದಿಲ್ಲ ಮತ್ತು ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳ ಪ್ರಭಾವ ಉಂಟಾಗುವುದಿಲ್ಲ
* ಮನೆಯಲ್ಲಿ ದಂಪತಿಗಳ ಮಧ್ಯೆ ಸದಾ ಕ’ದ’ನ, ವಿ’ರ’ಸ ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲದಂತಾಗಿದೆ. ಇಂತಹ ಸಮಸ್ಯೆಗಳು ಇದ್ದರೆ ಆ ಮಹಿಳೆಯು ನೀರಿಗೆ ಅರಿಶಿಣ ಹಾಕಿಕೊಂಡು ಸ್ನಾನ ಮಾಡಬೇಕು ಅಥವಾ ಮೈಗೆಲ್ಲಾ ಅರಿಶಿಣ ಹಚ್ಚಿಕೊಂಡು ಸ್ನಾನ ಮಾಡಬೇಕು ಆಗ ಸಮಸ್ಯೆ ಪರಿಹಾರ ಆಗುತ್ತದೆ
* ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಮತ್ತು ದು’ಶ್ಚ’ಟಗಳಿಗೆ ಒಳಗಾಗುತ್ತಿದ್ದಾರೆ ಎಂದಾಗ ಆ ಮಕ್ಕಳಿಗೆ ನೀರಿನಲ್ಲಿ ಅರಿಶಿನ ಹಾಕಿ ಸ್ನಾನ ಮಾಡಿಸಬೇಕು ಮತ್ತು ದೇವರ ಕೋಣೆಯಲ್ಲಿ ಕೂರಿಸಿ ಹಣೆಗೆ ಅರಿಶಿಣದ ತಿಲಕವನ್ನು ಇಟ್ಟು ಅವರ ಇಷ್ಟ ದೇವರ ಪ್ರಾರ್ಥನೆ ಮಾಡಲು ಹೇಳಬೇಕು. ಆಗ ಅವರು ಮತ್ತೆ ಒಳ್ಳೆಯ ದಾರಿಗೆ ಬರುತ್ತಾರೆ
* ಒಳ್ಳೆಯ ರೀತಿಯಲ್ಲಿ ಒಳ್ಳೆಯ ಉದ್ದೇಶಗಳಿಂದ ಕೆಲಸ ಮಾಡಿದರೂ ಕೂಡ ಕೈ ಕೊಡುತ್ತಿಲ್ಲ ಎನ್ನುವ ಸಮಸ್ಯೆ ಇರುವವರು ಗುರುವಾರದ ದಿನ ಅರಿಶಿಣದ ಹೂವು, ಅರಿಶಿಣ ಬಣ್ಣದ ವಸ್ತ್ರ ಮತ್ತು ರವೆ ಲಡ್ಡು ಇದನ್ನು ಬ್ರಾಹ್ಮಣರಿಗೆ ದಾನ ಮಾಡಬೇಕು ನಂತರ ಆಶ್ಚರ್ಯಕರ ಫಲಿತಾಂಶಗಳು ಸಿಗುತ್ತದೆ
* ಮನೆಯಿಂದ ಮುಖ್ಯವಾದ ಒಳ್ಳೆಯ ಕೆಲಸಕ್ಕೆ ಹೊರಟಾಗ ಗಣೇಶನ ದೇವಸ್ಥಾನಕ್ಕೆ ಅರಿಶಿಣ ಅರ್ಪಿಸಿ, ಹಣೆಗೆ ಅರಿಶಿಣದ ತಿಲಕ ಇಟ್ಟುಕೊಂಡು ಹೋಗುವುದರಿಂದ ಆ ಕಾರ್ಯ ಕೈಗೂಡುತ್ತದೆ.