ನಮ್ಮ ಹಿಂದುಗಳ ಪಾಲಿಗೆ ಹೊಸ ವರ್ಷವು ಯುಗಾದಿ ಆದರೂ ಕೂಡ ಕ್ಯಾಲೆಂಡರ್ ನ ಹೊಸ ವರ್ಷವಾದ ಜನವರಿ 1ನ್ನು ಕೂಡ ನಾವು ಅಷ್ಟೇ ನಂಬುತ್ತೇವೆ ಮತ್ತು ನಮ್ಮ ನಮ್ಮ ಶಾಲಾ ಕಾಲೇಜುಗಳಲ್ಲಿ ಅಥವಾ ಆಫೀಸ್ ಗಳಲ್ಲಿ ಗೆಳೆಯರೊಟ್ಟಿಗೆ ಸೇರಿ ಮತ್ತು ಕುಟುಂಬದವರಿಗೂ ಜೊತೆಗೂ ಕೂಡ ಆಚರಿಸುತ್ತೇವೆ.
ಹೊಸ ವಿಚಾರ, ಹೊಸತನ, ಹೊಸ ಭರವಸೆ, ಹೊಸ ಆಲೋಚನೆಗಳು ಇದನ್ನು ಆಸ್ಪಾದಿಸಲು ಹೊಸತೊಂದು ನೆಪ ಸಿಗುವುದಾದರೆ ಅದನ್ನು ಆಚರಿಸುವುದರಲ್ಲಿ ತಪ್ಪೇನಿಲ್ಲ ಎನಿಸುತ್ತದೆ. ಇಂತಹ ಹೊಸ ವರ್ಷದಲ್ಲಿ ನಿಮ್ಮ ಹೊಸ ಹೊಸ ಕನಸುಗಳು ಸೃಷ್ಟಿಯಾಗುತ್ತವೆ ಅಥವಾ ಈ ಹಿಂದಿನ ಕನಸಿಗೆ ಹೆಚ್ಚಿನ ತಯಾರಿಗಳು ಜಾಗೃತವಾಗುತ್ತದೆ.
ಈ ಹಾದಿಯಲ್ಲಿ ನಿಮಗೆ ಅನುಕೂಲವಾಗುವಂತಹ ಒಂದು ಉಪಾಯದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ಹೊಸ ವರ್ಷದ ದಿನ ಈಗ ನಾವು ಹೇಳುವ ಈ ಒಂದು ಉಪಾಯವನ್ನು ಬೆಳಗಿನ ಬ್ರಾಹ್ಮಿ ಮುಹೂರ್ತದಿಂದ ಹಿಡಿದು ರಾತ್ರಿ 11:30 ರ ಒಳಗೆ ಯಾವುದೇ ಸಮಯದಲ್ಲಿ ನಾವು ಮಾಡಬಹುದು.
ಸರಳ ವಿಧಾನದಲ್ಲಿ ನಾವು ಹೇಳುವ ರೀತಿ ಈ ಒಂದು ಉಪಾಯ ಮಾಡಿದರೆ ಸಾಕು ವರ್ಷ ಪೂರ್ತಿ ನಿಮಗೆ ಹಣಕಾಸಿನ ತೊಂದರೆ ಬರುವುದಿಲ್ಲ. ಹಾಗೆಂದು ನೀವು ದುಡಿಯುವುದನ್ನು ನಿಲ್ಲಿಸಿದರೆ ಅದು ವಿತಂಡ ವಾದವಾಗುತ್ತದೆ. ನೀವು ದುಡಿಯುತ್ತಿರುವ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಖರ್ಚುಗಳು ಹೆಚ್ಚಾಗುತ್ತಿವೆ ಕೊಟ್ಟ ಹಣ ವಾಪಸ್ಸು ಬರುತ್ತಿಲ್ಲ ಎಂದರೆ ಅದಕ್ಕೆಲ್ಲ ನಿಯಂತ್ರಣ ಬೀಳುತ್ತದೆ.
ನಿಮಗೆ ಹಣ ಸಂಪಾದನೆಗೆ ಹಾದಿಗಳು ಹೆಚ್ಚಾಗುತ್ತವೆ, ನಿಮ್ಮ ಹಣಕ್ಕೆ ಹೆಚ್ಚಿನ ಹಣದ ಆಕರ್ಷಣೆ ಆಗುತ್ತದೆ ನೀವು ಯಾರ ಬಳಿಯು ಕೂಡ ಸಾಲ ಕೇಳುವ ಕೆ’ಟ್ಟ ಪರಿಸ್ಥಿತಿ ಬರುವುದಿಲ್ಲ. ಈ ರೀತಿ ಹಣಕಾಸಿನ ವಿಚಾರದಲ್ಲಿ ಬಹಳ ಸುಧಾರಿಸಿಕೊಂಡು ಉತ್ತಮ ಫಲಗಳನ್ನು ಕಾಣುತ್ತೀರಿ.
ಹಣಕಾಸಿನ ವಿಚಾರ ಮಾತ್ರವಲ್ಲದೇ ಹಣಕಾಸಿನ ಮೂಲಕ ಉಂಟಾಗುವ ಬದಲಾವಣೆಗಳಾದ ಹೊಸ ಮನೆ ಖರೀದಿಸುವುದು, ಹೊಸ ಕಾರು ಖರೀದಿಸುವುದು, ಬಂಗಾರ ಖರೀದಿಸುವುದು ಇಂತಹ ಯೋಜನೆಗಳಿಗೂ ಕೂಡ ಈ ಉಪಾಯ ಮಾಡುವುದರಿಂದ ಎನರ್ಜಿ ಬರುತ್ತದೆ ಬಹಳ ಸರಳವಾಗಿರುವ ಈ ಉಪಾಯವನ್ನು ಪುರುಷರು ಮಹಿಳೆಯರು ಯಾರು ಬೇಕಾದರೂ ಮಾಡಬಹುದು.
ಇದನ್ನು ಮಾಡುವ ಮುನ್ನ ಶುದ್ಧವಾಗಿ ಸ್ನಾನ ಮಾಡಿ ದೇವರ ಕೋಣೆಯಲ್ಲಿ ಕುಳಿತು ದೇವರಿಗೆ ದೀಪ ಹಚ್ಚಿ ಕುಲ ದೇವರ ಹಾಗೂ ಮನೆ ದೇವರನ್ನು ನೆನೆದು ಮೊದಲು ನಿಮ್ಮ ಆಸೆ ಏನು ಎಂದು ಹೇಳಿಕೊಂಡು ಪ್ರಾರ್ಥಿಸಿಕೊಳ್ಳಿ. ಬಳಿಕ ದೇವರಮನೆಯಲ್ಲಾದರೂ ಕುಳಿತುಕೊಳ್ಳಿ ಅಥವಾ ಮನೆಯ ಹಾಲ್ ನಲ್ಲಿ ಅಥವಾ ನಿಮ್ಮ ಬೆಡ್ರೂಮ್ ಎಲ್ಲಿಯಾದರೂ ಕುಳಿತುಕೊಳ್ಳಿ.
ನೆಲದ ಮೇಲೆ ಕುಳಿತುಕೊಳ್ಳುವ ಬದಲು ನೆಲದ ಮೇಲೆ ಚಾಪೆ ಹಾಕಿಕೊಂಡು ಅಥವಾ ಮಣೆ ಹಾಕಿಕೊಂಡು ಉತ್ತರಮುಖವಾಗಿ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಿ. ನಂಬಿಕೆ ಇಟ್ಟು ವೇದಿಕ್ ಸ್ವಿಚ್ ವರ್ಡ್ ಎಂದು ಕರೆಸಿಕೊಂಡಿರುವ “ಕೋಟೇಶ್ವರ ಮಹಾಖರ್ವ” ಎಂಬ ಮಹಾ ಮಂತ್ರವನ್ನು 108 ಬಾರಿ ಹೇಳಿ. ಒಂದು ಬಾರಿ ಹೇಳಲು ಕುಳಿತುಕೊಂಡ ಮೇಲೆ ಮತ್ತೆ ಮತ್ತೆ ಎದ್ದೇಳಬಾರದು ಈ ಸಮಯದಲ್ಲಿ ನಿಮ್ಮನ್ನು ಯಾರೂ ಕೂಡ ಮಧ್ಯೆ ಡಿಸ್ಟರ್ಬ್ ಮಾಡಬಾರದು ಹಾಗಾಗಿ ಸೂಕ್ತ ಸಮಯ ನೋಡಿಕೊಂಡು ಕುಳಿತುಕೊಳ್ಳಿ.
ಏಕಾಗ್ರತೆಯಿಂದ ಒಂದೇ ಬಾರಿಗೆ ಒಂದು ಕಡೆ ಕುಳಿತುಕೊಂಡು ಒಟ್ಟಿಗೆ 108 ಬಾರಿ ಈ ಮಹಾಮಂತ್ರವನ್ನು ಪಠಿಸಿ. ಈ ಒಂದು ಉಪಾಯ ಮಾಡಿ ಈ ಮಂತ್ರ ಶಕ್ತಿಯ ತಂತ್ರಗಾರಿಕೆಯು ನಿಮ್ಮ ಜೀವನದಲ್ಲಿ ಎಷ್ಟೊಂದು ಉತ್ತಮ ಪರಿಣಾಮ ಬೀರುತ್ತದೆ ಎನ್ನುವುದನ್ನು ನೀವು 2024 ರಲ್ಲಿ ಕಾಣುತ್ತೀರಿ. ಹೊಸ ವರ್ಷದ ಶುಭಾಶಯಗಳು, ಎಲ್ಲರಿಗೂ ಶುಭವಾಗಲಿ.