ಇಂಗ್ಲಿಷ್ ನಲ್ಲಿ ಒಂದು ವಾಕ್ಯವಿದೆ ನೀವು ಮನೆಯಲ್ಲಿ ಪುಟ್ಟ ಗ್ರಂಥಾಲಯ ಹಾಗೂ ಚಿಕ್ಕ ಕೈತೋಟ ಹೊಂದಿದ್ದರೆ ಜೀವನದಲ್ಲಿ ಎಲ್ಲವನ್ನು ಹೊಂದಿದಂತೆ ಎಂದು. ಈ ಒಂದು ವಾಕ್ಯವು ಎಷ್ಟು ಅದ್ಬುತವಾಗಿದೆ ಎಂದರೆ ಇದರ ಸಾರವನ್ನು ಪುಟಗಳಲ್ಲಿ ಬರೆದರೂ ಕೂಡ ತೀರಲಾರದ.
ಪುಸ್ತಕದ ರುಚಿ ಮತ್ತು ಪ್ರಕೃತಿ ಜೊತೆ ಸಮಯ ಕಳೆಯುವವರಿಗೆ ಇದಕ್ಕಿಂತ ಸಮಾನವಾದದ್ದು ಇದಕ್ಕಿಂತಲೂ ಬೆಲೆ ಬಾಳುವದಂತದ್ದು ಪ್ರಪಂಚದಲ್ಲಿ ಬೇರೇನು ಇಲ್ಲ ಎನ್ನುವುದು ಮನವರಿಕೆಯಾಗಿರುತ್ತದೆ. ಈ ರೀತಿ ಪ್ರತಿಯೊಬ್ಬರೂ ಕೂಡ ಮನೆಗಳಲ್ಲಿ ಕನಿಷ್ಠ ಐದು ಔಷಧಿ ಗಿಡ, ಐದು ಹೂವಿನ ಗಿಡ, ಐದು ತರಕಾರಿ ಗಿಡ ಬೆಳೆಸುವ ಅಭ್ಯಾಸ ಒಳ್ಳೆಯದು.
ಈ ರೀತಿ ಗಿಡ ಬೆಳೆಸುವಾಗ ತಪ್ಪದೇ ಈಗ ನಾವು ಹೇಳುವ ಈ ಮೂರು ಗಿಡಗಳನ್ನು ಕೂಡ ನಿಮ್ಮ ಮನೆಯಲ್ಲಿ ಬೆಳೆಸಿ ಗಿಡ ನೆಡುವುದು ಮರಗಳನ್ನು ಸಾಕುವುದು ಬಹಳ ಪುಣ್ಯವಾದ ಕಾರ್ಯ. ಒಂದು ಗಿಡ ನೆಟ್ಟು ಮರ ಮಾಡಿ ಆ ಮರದ ಆಸರೆಯನ್ನು ಪಕ್ಷಿಗಳು ಗೂಡು ಕಟ್ಟಿಕೊಳ್ಳಲು, ಮರದ ನೆರಳನ್ನು ಪಶು ಪ್ರಾಣಿಗಳು ಮನುಷ್ಯರು ಮತ್ತು ಮರದ ಇನ್ನಿತರ ಅನುಕೂಲತೆಯನ್ನು ಎಲ್ಲರೂ ಪಡೆದಾಗ ಆ ಗಿಡವನ್ನು ನೆಟ್ಟು ಸಾಕಿದ ವ್ಯಕ್ತಿಗೆ ಒಂದು ಯಾಗ ಮಾಡಿದ ಫಲ ಸಿಗುತ್ತದೆ.
ಆದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಇದನ್ನು ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸಮಯಾವಕಾಶದ ತೊಂದರೆ ಅಥವಾ ಸ್ಥಳದ ಸಮಸ್ಯೆ ಇರಬಹುದು. ಆದರೆ ಕೆಲವು ಗಿಡಗಳನ್ನು ಪಾಟ್ ಗಳಲ್ಲಿಯೇ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಬೆಳೆಸಬಹುದು, ಇರುವ ಅವಕಾಶದಲ್ಲೇ ಗಿಡ ಬೆಳೆಸುವುದಾದರೆ ದೈವಾನುಗ್ರಹ ಸಿಗುವಂತಹ ಈ ಮೂರು ಗಿಡಗಳನ್ನು ಬೆಳೆಸಿ.
ಆದು ಯಾವ ಗಿಡಗಳು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ಈ ಗಿಡಗಳನ್ನು ಬೆಳೆಸುವುದರಿಂದ ನಿಮ್ಮ ಮನೆಗೆ ಯಾರ ಕೆಟ್ಟ ದೃಷ್ಟಿಯು ಬೀಳುವುದಿಲ್ಲ, ನಿಮ್ಮ ಮನೆಯ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದ್ದರೂ ಪರಿಹಾರವಾಗುತ್ತದೆ, ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆ ಬರುವುದಿಲ್ಲ, ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ಬಂದ ಕಷ್ಟ ಬಯಲಾಗುತ್ತದೆ.
ಈ ಗಿಡಗಳು ಯಾವುದೆಂದರೆ ಮೊದಲನೇದಾಗಿ ಸ್ನೇಕ್ ಪ್ಲಾಂಟ್, ಸ್ನೇಕ್ ಪ್ಲಾಂಟ್ ಹಾವಿನ ಮೈ ರೀತಿ ರಚನೆಯನ್ನು ಹೊಂದಿರುತ್ತದೆ. ಇದು ಅಲೋವೆರಾ ಗಿಡದಂತೆ ಕಾಣುತ್ತದೆ, ಚಿಕ್ಕ ಪಾಟ್ ಗಳಲ್ಲೂ ಕೂಡ ಬೆಳೆಸಬಹುದು, ಇದನ್ನು ಸಾಕ್ಷಾತ್ ಶಿವನ ಆಶೀರ್ವಾದವಿರುವ ಗಿಡ ಮತ್ತು ಮಹದೇವನಿಗೆ ಇಷ್ಟವಾದ ಗಿಡ ಎನ್ನಲಾಗುತ್ತದೆ.
ಇದನ್ನು ಬೆಳೆಸುವುದರಿಂದ ವಾತಾವರಣದ ವಿಷಾನಿಲ ಹೀರಿಕೊಳ್ಳುತ್ತದೆ, ಹೆಚ್ಚು ಆಕ್ಸಿಜನ್ ಉತ್ಪಾದನೆ ಮಾಡುತ್ತದೆ ಮತ್ತು ಇದನ್ನು ಬಳಸುವವರಿಗೆ ಮಹದೇವನ ರಕ್ಷಣೆ ಇರುತ್ತದೆ. ಹಾಗಾಗಿ ಈ ಗಿಡವನ್ನು ಹಾಕಿ. ಇದರ ಜೊತೆಗೆ ಪ್ರತಿಯೊಂದು ಮನೆಗಳಲ್ಲೂ ಕೂಡ ತಪ್ಪದೇ ತುಳಸಿ ಗಿಡವನ್ನು ಬೆಳೆಸಬೇಕು.
ಯಾಕೆಂದರೆ ತುಳಸಿ ಗಿಡವೂ ಮನೆಗೆ ಬರುವ ಎಷ್ಟೋ ಕೆಟ್ಟ ಪರಿಣಾಮಗಳನ್ನು ತಡೆದು ಅದರ ಲಕ್ಷಣಗಳನ್ನು ತಿಳಿಸುತ್ತದೆ. ಆರೋಗ್ಯಕ್ಕೂ ಕೂಡ ಒಳ್ಳೆಯದು ಮತ್ತು ಸಾಕ್ಷಾತ್ ಮಹಾವಿಷ್ಣು ಹಾಗೂ ತಾಯಿ ಮಹಾಲಕ್ಷ್ಮಿಯ ಅನುಗ್ರಹವು ಮನೆ ಮುಂದೆ ತುಳಸಿ ಗಿಡ ನೆಟ್ಟು ಅದನ್ನು ಪ್ರತಿನಿತ್ಯ ಆರಾಧಿಸುವವರಿಗೆ ಒಲಿಯುತ್ತದೆ ಹಾಗಾಗಿ ಈ ಗಿಡಗಳನ್ನು ಬೆಳೆಸಿ.
ಮತ್ತೊಂದು ಗಿಡವೆಂದರೆ ಮನಿ ಪ್ಲಾಂಟ್, ಈ ಗಿಡದಲ್ಲಿ ಬ್ರಹ್ಮದೇವ ನೆನೆಸಿರುತ್ತಾನೆ ಎಂದು ನಂಬಲಾಗುತ್ತದೆ. ಆದ್ದರಿಂದ ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಬಳಸಿ ಈ ಗಿಡ ಹೇಗೆ ಅಭಿವೃದ್ಧಿ ಹೊಂದಿರುತ್ತದೆಯೋ ಹಾಗೆ ಆ ಮನೆಯ ಹಣಕಾಸಿನ ಪರಿಸ್ಥಿತಿಯು ಕೂಡ ಉತ್ತಮವಾಗುತ್ತಾ ಹೋಗುತ್ತದೆ. ಈ ರೀತಿ ತ್ರಿಮೂರ್ತಿಗಳ ಅನುಗ್ರಹಕ್ಕಾಗಿ ತಪ್ಪದೇ ಈ ಗಿಡಗಳನ್ನು ಬೆಳೆಸಿ.