ಈಗಿನ ಕಾಲದಲ್ಲಿ ಬಹುತೇಕರ ಸಮಸ್ಯೆ ವಿವಾಹ ವಿಳಂಬವಾಗುತ್ತಿದೆ ಎನ್ನುವುದು. ವಿವಾಹ ವಿಳಂಬವಾದರೆ ಅದೊಂದು ಮಾನಸಿಕ ಒತ್ತಡವೇ ಆಗುತ್ತದೆ. ವ್ಯಕ್ತಿ ಮಾತ್ರ ಅಲ್ಲದೇ ಕುಟುಂಬದವರು ಕೂಡ ಇದರಿಂದ ನೋ’ವು ಪಡುತ್ತಾರೆ. ಈ ಕಾಲದಲ್ಲಿ ಹೆಣ್ಣು ಮಕ್ಕಳಿಗೂ ಮತ್ತು ಹೆಚ್ಚಾಗಿ ಗಂಡು ಮಕ್ಕಳಿಗೂ ಕೂಡ ಈ ಸಮಸ್ಯೆ ಇದೆ.
ಹತ್ತಾರು ಕಡೆ ಸಂಬಂಧ ನೋಡಿಕೊಂಡು ಬಂದರು ಯಾವುದು ಒಪ್ಪಿಗೆ ಆಗುವುದಿಲ್ಲ ಅಥವಾ ವಿವಾಹಕ್ಕೆ ಸಂಬಂಧಿಸಿದ ಇನ್ನಿತರ ತೊಡಕುಗಳು ಇರುತ್ತವೆ. ಒಟ್ಟಾರೆಯಾಗಿ ಯಾವುದೋ ಕಾರಣದಿಂದ ನಿಮಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲ ಎಂದರೆ ಇದರ ಪರಿಹಾರವಾಗಿ ಶೀಘ್ರವೇ ನಿಮಗೆ ಕಲ್ಯಾಣ ಭಾಗ್ಯ ದೊರಕಲು ನಾವು ಹೇಳುವ ರೀತಿಯಲ್ಲಿ ಸರಳವಾಗಿ ಒಂದು ಆಚರಣೆಯನ್ನು ಶ್ರದ್ಧೆ ಭಕ್ತಿಯಿಂದ ಮಾಡಿ ಸಾಕು.
ಬಾದಾಮಿಯ ಬನಶಂಕರಮ್ಮನ ಶಕ್ತಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಶಾಕಾಂಬರಿ ಸ್ವರೂಪಿ ಬನಶಂಕರಮ್ಮನ ದೇವಸ್ಥಾನ ಬಾದಾಮಿಯಲ್ಲಿ ಮಾತ್ರವಲ್ಲದೆ ಬೆಂಗಳೂರು ಸೇರಿದಂತೆ ಕರ್ನಾಟಕದ ನಾನಾ ಕಡೆಗಳಲ್ಲಿ ಇದೆ. ಈ ಬನಶಂಕರಮ್ಮನ ಸನ್ನಿಧಾನದಲ್ಲಿ ನಿಮ್ಮ ಸಮಸ್ಯೆಗೆ ಖಂಡಿತ ಪರಿಹಾರ ಇದೆ ನೀವು ತಾಯಿ ಬನಶಂಕರಿಗೆ ನಾವು ಹೇಳುವ ವಿಧಾನದಲ್ಲಿ ಪೂಜೆ ಸಲ್ಲಿಸಿ ಮನವಿ ಮಾಡಿಕೊಳ್ಳಿ ಸಾಕು.
ಈ ಸುದ್ದಿ ಓದಿ:- ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…
ಪಾರ್ವತಿ ಸ್ವರೂಪಿಣಿ ಬನಶಂಕರಮ್ಮ ನಿಮಗೆ ವಿವಾಹ ಭಾಗ್ಯ ಒದಗಿಸುತ್ತಾರೆ. ಸಾಮಾನ್ಯವಾಗಿ ಬನಶಂಕರಮ್ಮನ ದರ್ಶನಕ್ಕೆ ಮಂಗಳವಾರ ಶುಕ್ರವಾರ ಹಾಗೂ ಭಾನುವಾರದಂದು ಹೆಚ್ಚಿನ ಭಕ್ತಾದಿಗಳು ಹೋಗುತ್ತಾರೆ ನೀವು ಈ ದಿನಗಳಲ್ಲಿ ಅಥವಾ ವಾರದ ಯಾವುದೇ ದಿನ ಬೇಕಾದರೂ ಈ ಆಚರಣೆ ಮಾಡಬಹುದಾಗಿದೆ.
ಮೊದಲು ಯಾವ ದಿನದಂದು ಹೋಗುತ್ತೀರಿ ಎನ್ನುವುದನ್ನು ನಿರ್ಧಾರ ಮಾಡಿ. ಮನೆ ಸ್ವಚ್ಛ ಮಾಡಿ ಸ್ನಾನ ಮಾಡಿ ಮಡಿಯಲ್ಲಿ ನಿಮ್ಮ ಮನೆದೇವರು ಇಷ್ಟ ದೇವರ ಹೆಸರೇಳಿ ದೀಪ ಹಚ್ಚಿ ಪೂಜೆ ಮಾಡಿ ಮನೆಯಲ್ಲೂ ಕೂಡ ತಾಯಿ ಬನಶಂಕರಿ ಅಮ್ಮನನ್ನು ನೆನೆದು ನಿಮ್ಮ ಸಮಸ್ಯೆ ಬಗ್ಗೆ ಹರಿಸುವಂತೆ ಕೇಳಿಕೊಳ್ಳಿ.
ನಂತರ ಅಮ್ಮನ ಸನ್ನಿಧಿಯಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ನೀವು ತಾಯಿಗೆ ಉಡಿ ತುಂಬುವ ಸೇವೆ ಮಾಡಬೇಕು. ಉಡಿ ತುಂಬಲು ನಾವು ಹೇಳುವ ಈ ವಸ್ತುಗಳನ್ನು ತಪ್ಪದೆ ಇಡಬೇಕು. ನೀವು ಕಡ್ಡಾಯವಾಗಿ ಒಂದು ಹೊಸ ತಟ್ಟೆಯನ್ನು ತೆಗೆದುಕೊಳ್ಳಬೇಕು, ಅದರ ಮೇಲೆ ಒಂದು ರವಿಕೆ ಕಣ ಇಟ್ಟು ಎರಡು ಎಲೆ ಮತ್ತು ಅಡಿಕೆಗಳನ್ನು ಇಟ್ಟು ಒಂದು ಅರಿಶಿಣದ ಕೊಂಬು ಮತ್ತು ಹುತ್ತತ್ತಿ ಇಡಬೇಕು.
ಈ ಸುದ್ದಿ ಓದಿ:-ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ, ಈ 6 ರಾಶಿಯವರು ಏನು ಮಾಡಿದರು ಲಾಭನೇ.!
ಇದು ಇಟ್ಟ ಮೇಲೆ 11 ಹಸಿರು ಬಣ್ಣದ ಬಳೆಗಳನ್ನು ಇಡಬೇಕು ಎರಡು ಜೋಡಿ ಕಾಯಿಗಳನ್ನು ಇಡಬೇಕು ಮತ್ತು ಮಲ್ಲಿಗೆ ಹೂವಿನ ಮಾಲೆಯನ್ನು ಅರ್ಪಿಸಬೇಕು. ನೆನಪಿರಲಿ ನೀವು ಮಲ್ಲಿಗೆ ಹೂವನ್ನೇ ಅರ್ಪಿಸಬೇಕು ನಂತರ ಅರಿಶಿನ ಕುಂಕುಮವನ್ನು ಕೂಡ ಇಡಿ.
ಇದೆಲ್ಲದರ ಜೊತೆಗೆ ಮುಖ್ಯವಾಗಿ ಅರಿಶಿನದ ದಾರವನ್ನು ಇಡಬೇಕು ಇದನ್ನು ಕಂಕಣ ದಾರ ಎಂದು ಕೂಡ ಕರೆಯುತ್ತಾರೆ. ಇದನ್ನು ಹೇಗೆ ಮಾಡಿಕೊಳ್ಳಬೇಕು ಎಂದರೆ 21 ಎಳೆ, ಹಸಿ ನೂಲನ್ನು ತೆಗೆದುಕೊಂಡು ಅರಿಶಿನದಲ್ಲಿ ಹದ್ದಿ ಕಂಕಣದ ದಾರ ಮಾಡಿಕೊಳ್ಳಬೇಕು. ಇದೇ ಮುಖ್ಯ ಇದೆಲ್ಲವನ್ನು ಬನಶಂಕರಿ ತಾಯಿ ಉಡಿ ತುಂಬಲು ಅರ್ಚಕರಿಗೆ ಹೇಳಿಕೊಡಿ.
ಇದರಲ್ಲಿ ಯಾವುದೇ ವಸ್ತುಗಳನ್ನು ಮರಳಿ ಪಡೆದುಕೊಳ್ಳಬೇಡಿ ಆದರೆ ಆ ಕಂಕಣದ ದಾರವನ್ನು ವಾಪಸ್ಸು ಕೊಡುವಂತೆ ಅರ್ಚಕರ ಬಳಿ ಹೇಳಿ ಅರ್ಚಕರು ಪೂಜೆ ಮಾಡಿ ಆ ದಾರವನ್ನು ನಿಮಗೆ ಕೊಡುತ್ತಾರೆ. ಆ ಸಮಯದಲ್ಲಿ ನಿಮ್ಮ ಮನೆ ಸದಸ್ಯರ ಕೈಯಿಂದ ಅಥವಾ ಅರ್ಚಕರ ಕೈಯಿಂದ ಅದನ್ನು ನಿಮ್ಮ ಕೈಗೆ ಕಟ್ಟಿಸಿಕೊಳ್ಳಿ ಮತ್ತು ಬನಶಂಕರಮ್ಮನಿಗೆ ವಿವಾಹ ವಿಳಂಬವನ್ನು ಪರಿಹರಿಸಿ ಶೀಘ್ರವೇ ಒಳ್ಳೆಯ ಸಂಬಂಧ ಕೂಡಿ ಬಂದು ಒಳ್ಳೆಯ ಸಂಗಾತಿ ಸಿಗುವಂತೆ ಮಾಡಿ ಎಂದು ಕೇಳಿಕೊಳ್ಳಿ.
ಈ ಸುದ್ದಿ ಓದಿ:-ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!
ಮತ್ತು ಆ ದಾರವನ್ನು ಯಾವಾಗಲೂ ನಿಮ್ಮ ಕೈನಲ್ಲಿಯೇ ಕಟ್ಟಿಕೊಂಡಿರಿ ನೀವು ಹೆಣ್ಣು ನೋಡಲು ಅಥವಾ ಗಂಡು ನಿಮ್ಮನ್ನು ನೋಡಲು ಬಂದಾಗಲೂ ಕೂಡ ಅದು ಕೈಯಲ್ಲಿ ಇರಲಿ ಆದಷ್ಟು ಬೇಗ ನಿಮಗೆ ಮದುವೆ ಆಗುತ್ತದೆ. ವಿವಾಹ ನಡೆದ ಮೇಲೆ ಜೋಡಿಯಾಗಿ ಹೋಗಿ ತಾಯಿ ದರ್ಶನ ಮಾಡಿ.