ಪ್ರತಿಯೊಬ್ಬರಿಗೂ ಕೂಡ ಬಾತ್ರೂಮ್ ಅನ್ನು ಸ್ವಚ್ಛ ಮಾಡುವುದೇ ಒಂದು ದೊಡ್ಡ ಕೆಲಸವಾಗಿರುತ್ತದೆ. ಹೌದು ಪ್ರತಿನಿತ್ಯ ನಾವು ಸ್ನಾನ ಮಾಡುವುದರಿಂದ ಅಲ್ಲಿ ಪದೇ ಪದೇ ನೀರು ಬೀಳುವುದರಿಂದ ಬಾತ್ರೂಮ್ ಹಾಳಾಗುತ್ತದೆ ಎಂದರೆ ಹೆಚ್ಚು ಕೊಳೆ ಆಗುವುದು. ಹಾಗೂ ನೀರಿನ ಕಲೆ ಹಾಗೆ ಒಣಗಿರುವುದರಿಂದ ನೀರಿನ ಕಲೆಯು ಸಹ ಟೈಲ್ಸ್ ಮೇಲೆ ಹಾಗೆ ಇರುತ್ತದೆ.
ಹಾಗಾಗಿ ಅದನ್ನು ವಾರಕ್ಕೆ ಒಮ್ಮೆ ತಕ್ಷಣವೇ ಕ್ಲೀನ್ ಮಾಡಿದರೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಆದರೆ ಕೆಲವೊಂದಷ್ಟು ಜನ ಅದನ್ನು ವರ್ಷಾನುಗಟ್ಟಲೆ ಹಾಗೆ ಬಿಟ್ಟು ಅದನ್ನು ಸ್ವಚ್ಛ ಮಾಡಲು ಹೋಗುತ್ತಾರೆ. ಆದರೆ ವರ್ಷದಿಂದ ಇರುವಂತಹ ಕೊಳೆ.
ಒಮ್ಮೆ ನೀವು ಉಜ್ಜಿ ತಿಕ್ಕಿ ತೊಳೆದರೆ ಹೋಗುವುದಿಲ್ಲ. ಬದಲಿಗೆ ಅದು ಗಟ್ಟಿಯಾಗಿ ಕೊಳೆ ಅಲ್ಲಿಯೇ ಕೂತಿರುತ್ತದೆ. ಆದ್ದರಿಂದ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಂಡು ಅದನ್ನು ಯಾವ ವಸ್ತುವಿನಿಂದ ಸ್ವಚ್ಛ ಮಾಡಬಹುದು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಆನಂತರ ಮತ್ತೆ ನೀರಿನ ಕಲೆ ಕೆಲವೊಂದು ಕೊಳೆಗಳು ಹಾಗೆಯೇ ಇರುತ್ತದೆ.
ಹಾಗಾದರೆ ಈ ದಿನ ಬಾತ್ರೂಮ್ ನಲ್ಲಿ ಇರು ವಂತಹ ಕೊಳೆಯನ್ನು ಅಂದರೆ ಟೈಲ್ಸ್ ಮೇಲೆ ಇರುವ ಕೊಳೆಯನ್ನು ಸಂಪೂರ್ಣವಾಗಿ ಹೇಗೆ ಸ್ವಚ್ಛ ಮಾಡುವುದು, ಹಾಗೂ ಅದನ್ನು ಮಾಡು ವುದಕ್ಕೆ ಯಾವ ಒಂದು ಮ್ಯಾಜಿಕ್ ವಸ್ತು ಬಳಸಬಹುದು ಹಾಗೂ ಅದಕ್ಕೆ ಯಾವ ಪದಾರ್ಥಗಳು ಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳು ತ್ತಾ ಹೋಗೋಣ.
ಈ ಒಂದು ಮ್ಯಾಜಿಕಲ್ ನೀರನ್ನು ತಯಾರು ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳು ಯಾವುದು ಎಂದು ನೋಡುವುದಾದರೆ.
• ಎರಡರಿಂದ ಮೂರು ಚಮಚ ಅಡುಗೆ ಸೋಡಾ
• ಹೈಡ್ರೋಜನ್ ಪೆರೋಕ್ಸೈಡ್. ಇದು ನಿಮಗೆ ಎಲ್ಲ ಮೆಡಿಕಲ್ ಶಾಪ್ ಗಳಲ್ಲಿ ಸಿಗುತ್ತದೆ ಇದನ್ನು ಯಾವುದಕ್ಕೆ ಉಪಯೋಗಿಸುತ್ತಾರೆ ಎಂದು ನೋಡುವುದಾದರೆ.
ನಿಮಗೆ ಏನಾದರೂ ಗಾಯವಾದಂತಹ ಸಮಯ ದಲ್ಲಿ ನಿಮ್ಮ ಚರ್ಮದ ಮೇಲ್ಭಾಗದಲ್ಲಿ ಯಾವುದಾದರೂ ಧೂಳು ಕೊಳೆ ಇದ್ದರೆ ಅದು ಹೋಗಲಿ ಎನ್ನುವ ಉದ್ದೇಶದಿಂದ ಇದನ್ನು ಉಪಯೋಗಿ ಸುತ್ತಾರೆ. ಆದ್ದರಿಂದ ಇದನ್ನು ಉಪಯೋಗಿಸಿದರೆ ನಿಮಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಬದಲಿಗೆ ನಿಮ್ಮ ಒಂದು ಬಾತ್ರೂಮ್ ಕ್ಲೀನ್ ಮಾಡಲು ಸಹಾಯ ತುಂಬಾ ಉಪಯೋಗಕ್ಕೆ ಬರುತ್ತದೆ ಎಂದು ಹೇಳಬಹುದು.
ಇದನ್ನು ಕೈಯಿಂದ ಮುಟ್ಟಿದರು ಸಹ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಮೊದಲು ಒಂದು ಜಗ್ ತೆಗೆದುಕೊಂಡು ಅದರ ಒಳಗಡೆ 2 ರಿಂದ 3 ಚಮಚ ಅಡುಗೆ ಸೋಡವನ್ನು ಹಾಕಿ ಅದಕ್ಕೆ ಎರಡರಿಂದ ಮೂರು ಚಮಚ ಹೈಡ್ರೋಜನ್ ಪೆರೋಕ್ಸೈಡ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಆ ನೀರನ್ನು ನಿಮ್ಮ ಬಾತ್ರೂಮ್ ಟೈಲ್ಸ್ ಮೇಲೆ ಹಾಕಿ ಒಮ್ಮೆ ಉಜ್ಜಿದರೆ ಸಾಕು ಟೈಲ್ಸ್ ಮೇಲೆ ಇರುವಂತಹ ಸಂಪೂರ್ಣವಾದಂತಹ ಕೊಳೆ ಹೋಗುತ್ತದೆ.
ಇದು ಯಾವುದೇ ರೀತಿಯ ಕಷ್ಟವಾಗುವುದಿಲ್ಲ ಸುಲಭ ವಾಗಿ ಬೇಗನೆ ಎಲ್ಲವನ್ನು ಸಹ ಸ್ವಚ್ಛ ಮಾಡಬಹುದು. ಈ ಒಂದು ಟ್ರಿಕ್ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹೆಚ್ಚಿನ ಸಮಯ ತೆಗೆದುಕೊಳ್ಳದೆ ಇರುವುದರಿಂದ ಪ್ರತಿಯೊಬ್ಬರೂ ಕೂಡ ಬಾತ್ರೂಮ್ ಅನ್ನು ಬೇಗನೆ ಕಡಿಮೆ ಸಮಯದಲ್ಲಿ ಸ್ವಚ್ಛ ಮಾಡಬಹುದು.
ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿ ಹಣವನ್ನು ಹಾಳು ಮಾಡಿಕೊಳ್ಳುವುದರ ಬದಲು ಕಡಿಮೆ ಬೆಲೆಯಲ್ಲಿ ಸಿಗುವಂತಹ ಈ ಪದಾರ್ಥಗಳನ್ನು ತೆಗೆದುಕೊಂಡು ಈ ರೀತಿ ಉಪಯೋಗಿಸುವುದು ನಿಮಗೆ ತುಂಬಾ ಅನುಕೂಲವಾಗುತ್ತದೆ ಹಾಗೂ ಯಾವುದೇ ರೀತಿಯ ತೊಂದರೆಗಳು ಸಹ ಉಂಟಾಗುವುದಿಲ್ಲ.