ಮತ್ತೆ ಶುರುವಾಯ್ತು ಗ್ಯಾಸ್ ಸಿಲಿಂಡರ್ ಸಬ್ಸಿಡಿ, ಪ್ರತಿ ಸಿಲಿಂಡರ್ ಗೆ ಸಿಗಲಿದೆ 267 ರೂಪಾಯಿಗಳ ಸಬ್ಸಿಡಿ. ಈ ಹಣ ಪಡೆಯೋದು ಹೇಗೆ ನೋಡಿ.!

 

ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ದಿನಸಿ ಧಾನ್ಯಗಳು, ತರಕಾರಿ ಪಲ್ಲೆಗಳ ಜೊತೆಗೆ ಗ್ಯಾಸ್ ಸಿಲಿಂಡರ್ ಬೆಲೆ ಕೂಡ 1000 ದ ಗಡಿ ದಾಟಿದೆ. ಇಂದು ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕೂಡ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1000 ಕ್ಕಿಂತ ಅಧಿಕವಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಗ್ಯಾಸ್ ಸಿಲೆಂಡರ್ ಬಳಸಿ ಅಡುಗೆ ಮಾಡುವ ಪದ್ದತಿಗೆ ಬದಲಾಗಿದ್ದಾರೆ.

ಕೇಂದ್ರ ಸರ್ಕಾರವು ಉಜ್ವಲ್ ಯೋಜನೆ ಆರಂಭಿಸಿದ ಕಾರಣ ಈಗ ಎಲ್ಲರೂ ಕೂಡ ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವ ಅನುಕೂಲತೆ ಪಡೆದಿದ್ದಾರೆ. ಆದರೆ ಸಿಲಿಂಡರ್ ಬೆಲೆ ಪ್ರತಿ ತಿಂಗಳಿಗೂ ವ್ಯತ್ಯಾಸವಾಗುತ್ತಿರುವುದು ಮತ್ತು ಕಳೆದ ತಿಂಗಳಿನಲ್ಲಿ ಏರಿಕೆ ಆಗಿರುವುದು ಜನಸಾಮಾನ್ಯರಿಗೆ ಹೊರೆಯಾಗಿ ಭಾಸವಾಗುತ್ತಿದೆ.

ಈ ರೀತಿ ಬೆಲೆ ಏರಿಕೆಯಿಂದ ನೊಂ’ದು ಹೋಗಿದ್ದ ಬಡ ಮತ್ತು ಮಧ್ಯಮ ವರ್ಗದವರಿಗೆ ಈಗ ಸರ್ಕಾರದಿಂದ ಸಿಹಿಸುದ್ದಿ ಸಿಕ್ಕಿದೆ. ಅದೇನೆಂದರೆ, ಉಜ್ವಲ್ ಯೋಜನೆಯಡಿ ಗ್ಯಾಸ್ ಖರೀದಿ ಮಾಡುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಗೆ 200 ರೂ. ಸಬ್ಸಿಡಿ ಸಿಗುತ್ತಿದೆ.

ಇಂತಹದೊಂದು ಮಹತ್ವವಾದ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಇದೇ ತಿಂಗಳಿನಿಂದ ಯೋಜನೆಯ ಸಬ್ಸಿಡಿ ಹಣವು ಫಲಾನುಭವಿಗಳ ಖಾತೆಗೆ DBT ಮೂಲಕ ವರ್ಗಾವಣೆ ಆಗಲಿದೆ. ಈ ಹಿಂದೆ ಕೂಡ ಕೇಂದ್ರ ಸರ್ಕಾರವು ಎಲ್ಲ LPG ಬಳಕೆದಾರರಿಗೆ ಇಂತಹ ಅನುಕೂಲ ನೀಡುತ್ತಿತ್ತು.

ಈಗ ಉಜ್ವಲ್ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಬಳಸುತ್ತಿರುವ ಫಲಾನುಭವಿಗಳಿಗೆ ಕೆಲ ಕಂಡೀಷನ್ ಗಳ ಜೊತೆ ಸಬ್ಸಿಡಿ ಹಣವನ್ನು ನೀಡಲು ಸಚಿವ ಸಂಪುಟ ಸಭೆ ಜೊತೆ ಚರ್ಚಿಸಿ ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರದ ಈ ನಿರ್ಧಾರಕ್ಕೆ ಎಲ್ಲಾ ಪ್ರಮುಖ ಭಾರತೀಯ ತೈಲ ಕಂಪನಿಗಳು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್.

(BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಬ್ಸಿಡಿಯನ್ನು ನೀಡಲು ಒಪ್ಪಿಕೊಂಡಿವೆ ಎನ್ನುವುದು ತಿಳಿದು ಬಂದಿದೆ. ಅಂಕಿಅಂಶಗಳಿಂದ ದೇಶದ 1.6 ಕೋಟಿ ಫಲಾನುಭವಿಗಳಿಗೆ ಸರ್ಕಾರದ ಈ ನಿರ್ಧಾರದಿಂದ ಅನುಕೂಲತೆ ಆಗಲಿದೆ ಎನ್ನುವುದು ತಿಳಿದು ಬಂದಿದೆ.

ಈ ಯೋಜನೆಯ ಕುರಿತಾದ ಕೆಲ ಪ್ರಮುಖ ವಿಷಯಗಳು:-
● ಉಜ್ವಲ್ ಯೋಜನೆಯಡಿ ನೀವು ಭಾರತ್, ಇಂಡಿಯನ್, HP ಯಾವುದೇ ಕಂಪನಿಯ ಸಿಲಿಂಡರ್ ಬಳಸುತ್ತಿದ್ದರೂ ಫಲಾನುಭವಿಗಳಾಗಬಹುದು.
● ಒಂದು ವರ್ಷಕ್ಕೆ 12 ಸಿಲಿಂಡರ್ ಬಳಸುವವರಿಗೆ ಮಾತ್ರ ಈ ಸಬ್ಸಿಡಿ ಹಣ ಸಿಗುತ್ತದೆ.
● ಸದ್ಯಕ್ಕೆ ಸರ್ಕಾರವು ಒಂದು ವರ್ಷದ ಅವಧಿಗೆ ಈ ಸಬ್ಸಿಡಿ ಹಣದ ಯೋಜನೆಯನ್ನು ಘೋಷಿಸಿದೆ.

● ಈ ಸಬ್ಸಿಡಿ ಹಣವನ್ನು ಪಡೆದುಕೊಳ್ಳಲು ಮೊದಲಿಗೆ ಪೂರ್ತಿ ಹಣವನ್ನು ಕೊಟ್ಟು ಗ್ಯಾಸ್ ಸಿಲೆಂಡರ್ ಖರೀದಿಸಬೇಕು, ಬಳಿಕ ಭಾರತ ಸರ್ಕಾರ ನಿಮ್ಮ ಖಾತೆಗೆ ಒಂದು ಸಿಲಿಂಡರ್ ಗೆ 200 ರೂ. ಲೆಕ್ಕದಲ್ಲಿ ಸಬ್ಸಿಡಿ ಹಣ ವರ್ಗಾವಣೆ ಮಾಡಲಿದೆ.
● ಇದಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇದ್ದರೆ ನಿಮ್ಮ ಬ್ಯಾಂಕ್ ಖಾತೆ ವಿವರ ಹಾಗೂ ಉಜ್ವಲ್ ಯೋಜನೆ ಕುರಿತ ವಿವರ ಸಲ್ಲಿಸಿ ನೋಂದಣಿಯಾಗಬೇಕು.
● ಈ ಸಬ್ಸಿಡಿ ಹಣದ ಪ್ರಯೋಜನ ಪಡೆಯಲು ಹೆಚ್ಚಿನ ವಿಷಯ ಬೇಕಾದಲ್ಲಿ ನಿಮ್ಮ ಗ್ಯಾಸ್ ಸಂಪರ್ಕ ಕಚೇರಿಗೆ ಭೇಟಿಕೊಟ್ಟು ಮಾಹಿತಿ ಪಡೆಯಬಹುದು.

Leave a Comment