ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ದೇಶದಾದ್ಯಂತ ಎಲ್ಲಾ ನಾಗರಿಕರಿಗೂ ಕೂಡ ಉಚಿತ ಆಹಾರ ವ್ಯವಸ್ಥೆ ಕಲ್ಪಿಸುವ ಕಾರಣಕ್ಕಾಗಿ ನಾನು ಯೋಜನೆಗಳನ್ನು ಜಾರಿಗೆ ತಂದಿವೆ. ಇದಕ್ಕಾಗಿ ಪಡಿತರ ಚೀಟಿಯನ್ನು ಒಂದು ಮುಖ್ಯ ಗುರುತಿನ ಚೀಟಿ ಹಾಕಿ ಪರಿಗಣಿಸಿ ಆ ಪ್ರಕಾರವಾಗಿ ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಈ ರೀತಿ ಉಚಿತ ರೇಷನ್ ಕೊಡುವ ವ್ಯವಸ್ಥೆ ಮಾಡುತ್ತಿವೆ.
ಕರ್ನಾಟಕದಲ್ಲಿ BPL ಮತ್ತು AAY ಕಾರ್ಡುಗಳನ್ನು ಹೊಂದಿರುವಂತಹ ಪಡಿತರ ಚೀಟಿದಾರರು ಅನ್ನ ಭಾಗ್ಯ ಯೋಜನೆ ಅಡಿ ಉಚಿತವಾಗಿ ಅಕ್ಕಿ, ಗೋಧಿ, ರಾಗಿ ಮುಂತಾದ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಹಸಿರು ಮುಕ್ತ ಕರ್ನಾಟಕ ಕನಸು ಹೊಂದಿರುವ ಸರ್ಕಾರವು ಈ ರೀತಿ ಪಡಿತರ ಚೀಟಿ ಉಚಿತ ಪಡಿತರದ ಮೂಲಕ ನಾಗರಿಕರನ್ನು ಹಸಿವು ಮುಕ್ತವಾಗಿ ಬದುಕುವಂತೆ ಮಾಡಿದೆ.
ಅದರಲ್ಲೂ ಒನ್ ನೇಷನ್ ಒನ್ ರೇಷನ್ ಯೋಜನೆ ಜಾರಿಗೆ ತಂದ ಮೇಲಂತೂ ಸಾಕಷ್ಟು ಜನರಿಗೆ ಇದರಿಂದ ಉಪಯೋಗವೇ ಆಯಿತು. ನಂತರದಲ್ಲಿ ಕರ್ನಾಟಕ ರಾಜ್ಯವು ಕೂಡ ಈ ಯೋಜನೆಗೆ ಸೇರ್ಪಡೆಯಾದ ಮೇಲಂತೂ ಕನ್ನಡಿಗರ ಪಾಲಿಕೆದು ದೊಡ್ಡವರದಾನವೇ ಆಯಿತು. ಯಾಕೆಂದರೆ ಉದ್ಯೋಗದ ಕಾರಣಕ್ಕೆ ಅಥವಾ ವಲಸೆ ಹೋದ ಕಾರಣ ಅಥವಾ ಮತ್ತೆ ಯಾವುದೇ ಕಾರಣಕ್ಕೂ ತಮ್ಮ ಮೂಲ ಸ್ಥಳವನ್ನು ಬಿಟ್ಟು ಬೇರೆ ಕಡೆ ಬಂದಿದ್ದ ಜನತೆಗೆ ಹಿಂದೆಲ್ಲಾ ಪಡಿತರ ಪಡೆಯುವುದು ಸಮಸ್ಯೆಯಾಗಿತ್ತು.
ಆದರೆ ಒನ್ ನೇಶನ್ ಒನ್ ರೇಷನ್ ಯೋಜನೆಯಿಂದ ರಾಜ್ಯದ ಯಾವುದೇ ಮೂಲೆಯಲ್ಲಿ ಬೇಕಾದರೂ ಪಡಿತರ ಚೀಟಿ ಮೂಲಕ ತಮ್ಮ ಪಾಲಿನ ಪಡಿತರವನ್ನು ಮಾಮೂಲಿನಂತೆ ಉಚಿತ ಪಡಿತರ ಯೋಜನೆಯಡಿ ಪಡೆದು ಬದುಕಬಹುದು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಪಡಿತರ ಚೀಟಿ ಪಡಿತರ ವ್ಯವಸ್ಥೆಯಲ್ಲಿ ಮತ್ತೊಂದು ಮಹತ್ತರವಾದ ಬದಲಾವಣೆಯನ್ನು ತರಲಾಗಿದೆ.
ಅದೇನೆಂದರೆ ಇನ್ನು ಮುಂದೆ ಆಧಾರ್ ಕಾರ್ಡ್ ಮೂಲಕವೇ ಪಡಿತರ ಕೊಡಬೇಕು ಎಂದು ಸರ್ಕಾರ ಚಿಂತಿಸುತ್ತಿದೆ ಅದಕ್ಕಾಗಿ ಹೊಸ ಯೋಜನೆ ಯನ್ನು ಜಾರಿಗೆ ತಂದಿದೆ. ಒನ್ನೆ ರೇಷನ್ ಒನ್ ಆಧಾರ್ ಎನ್ನುವ ಸಹಕಾರ ಯೋಜನೆ ಹಾಕಿಕೊಂಡಿರುವ ಸರ್ಕಾರವು ಆಧಾರ್ ಕಾರ್ಡ್ ಮೂಲಕವೇ ಎಲ್ಲಾ ಕಾರ್ಯಗಳು ನಡೆಯಬೇಕು ಎನ್ನುವ ಧ್ಯೇಯ ಹೊಂದಿದೆ. ಆಧಾರ್ ಒಂದು ಯೂನಿಕ್ ನಂಬರ್ ಆಗಿರುವುದರಿಂದ ಆಧಾರ್ ಸಂಖ್ಯೆಯಿಂದ ಅನೇಕ ಅವ್ಯವಹಾರಗಳನ್ನು ತಪ್ಪಿಸಲು ಸುಲಭವಾಗುತ್ತದೆ ಎಂದು ಇಂತಹ ಒಂದು ನಿರ್ಧಾರಕ್ಕೆ ಬಂದಿದೆ. ಸರ್ಕಾರ
ಜನತೆಗೆ ಆಧಾರ್ ಕಾರ್ಡ್ ನೀಡಿದ ಸಂಸ್ಥೆಯಾದ UIDAI ಇಂಥದೊಂದು ಘೋಷಣೆಯನ್ನು ಮಾಡಿ ಇನ್ನು ಮುಂದೆ ರೇಷನ್ ಪಡೆದುಕೊಳ್ಳುವುದಕ್ಕೆ ಚಿಂತಿಸಬೇಕಿಲ್ಲ ಎನ್ನುವ ಭರವಸೆ ನೀಡಿದೆ. ಆದರೆ ಈ ರೀತಿ ಆದಾಯ ಕಾರ್ಡಿಂದ ರೇಷನ್ ಪಡೆದುಕೊಳ್ಳಬೇಕು ಎಂದರೆ ಅವರು ಅವರ ಆಧಾರ್ ನವೀಕರಿಸಬೇಕಾಗಿರುವುದು ಅನಿವಾರ್ಯ.
ಆಧಾರ್ ಕೇಂದ್ರಗಳಿಗೆ ಹೋಗಿ ಆಧಾರ್ ಕಾರ್ಡ್ ನವೀಕರಿಸಬೇಕು ಅಥವಾ ಆಧಾರ್ ಅಧಿಕೃತ ವೆಬ್ಸೈಟ್ ಆದ ಭುವನ್ – ಆಧಾರ್ ಸೇವಾ ಕೇಂದ್ರಕ್ಕೆ ಭೇಟಿಕೊಟ್ಟು ಆ ಮೂಲಕ ಕೂಡ ಅಪ್ಡೇಟ್ ಮಾಡಿಸಬಹುದು. ಈ ರೀತಿ ಆದಲ್ಲಿ ನೀವು ರೇಷನ್ ಕಾರ್ಡ್ ಬದಲು ಆಧಾರ್ ಕಾರ್ಡ್ ಇಂದಲೇ ಸರ್ಕಾರ ನೀಡುವ ಉಚಿತ ಪಡಿತರ ಪಡೆದುಕೊಳ್ಳಬಹುದು. ಸರ್ಕಾರದ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.