Sunday, May 28, 2023
HomeEntertainmentಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ರವಿಚಂದ್ರನ್ ಪ್ರತಿ ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ರವಿಚಂದ್ರನ್ ಪ್ರತಿ ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

 

ಕ್ರೇಜಿಸ್ಟಾರ್, ಕನ್ನಡ ಚಲನಚಿತ್ರರಂಗದ ಕನಸುಗಾರ, ಕಲಾವಿದ, ಪುಟ್ನಂಜ, ರಸಿಕ, ಮಲ್ಲ ಹೀಗೆ ನಾನಾ ಟೈಟಲ್ ಗಳನ್ನು ಪಡೆದಿರುವ ಎಲ್ಲರ ಪ್ರೀತಿಯ ರವಿಮಾಮ ರವಿಚಂದ್ರನ್ ಅವರು ಕನ್ನಡ ಚಲನಚಿತ್ರರಂಗದ ಬೆಲೆ ಕಟ್ಟಲಾಗದ ಆಸ್ತಿ. ಹಲವು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ ಈಗ ಪೋಷಕ ಪಾತ್ರಧಾರಿಯಾಗಿ ಸಿನಿಮಾವನ್ನೇ ತನ್ನ ಜೀವನ ಮಾಡಿಕೊಂಡು ಬದುಕುತ್ತಿರುವ ಅಪ್ಪಟ ಸಿನಿಮಾ ಪ್ರೇಮಿ.

ರವಿಚಂದ್ರನ್ ಅವರಷ್ಟು ಸಿನಿಮಾ ಕ್ರೇಝ್ ಅನ್ನು ಮತ್ತೊಬ್ಬರಲ್ಲಿ ಕಾಣದ ಅಸಾಧ್ಯ. ಸಿನಿಮಾಗಾಗಿ ಹುಟ್ಟಿದವರ ರೀತಿ ಬದುಕಿರುವ ಇವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಇತಿಹಾಸವನ್ನೆ ಬದಲಾಯಿಸಿದವರು. ಪ್ರೇಮಲೋಕ ಸಿನಿಮಾ ಮೂಲಕ ಚಂದನವನಕ್ಕೆ ಹೊಸತನದ ಕನಸನ್ನು ಕಾಣಲು ಕಲಿಸಿಕೊಟ್ಟವರು. ಪ್ರೀತಿ ಪ್ರೇಮ ಪ್ರಣಯದ ಕಥೆಗಳನ್ನು ತೆರೆ ಮೇಲೆ ಸುಂದರವಾಗಿ ತೋರಿಸಿದವರು.

ರವಿಚಂದ್ರನ್ ಅವರ ನಿರ್ಮಾಣ ಸಂಸ್ಥೆಯಾದ ಈಶ್ವರಿ ಪಿಚ್ಚರ್ಸ್ ಅಲ್ಲಿ ದುಡಿಯದವರಿಲ್ಲ ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ಕನ್ನಡ ಸಿನಿಮಾ ರಂಗದ ಅನೇಕರನ್ನು ಸಾಕಿ ಸಲುಹಿದ ಆ ಸಂಸ್ಥೆಯ ಒಡೆಯ ವೀರ ಸ್ವಾಮಿ ಅವರ ಪ್ರೀತಿಯ ಪುತ್ರ ರವಿಚಂದ್ರನ್ ಅವರು ಸಿನಿಮಾ ಗೆ ಕಾಲಿಟ್ಟ ಸಮಯದಲ್ಲಿ ಗಜಕೇಸರಿ ಯೋಗ ಪಡೆದಿದ್ದವರು. ಮುಟ್ಟಿದ್ದೆಲ್ಲ ಚಿನ್ನ ಆಗುವಂತೆ ಪ್ರತಿ ಸಿನಿಮಾದಲ್ಲೂ ಕೂಡ ಸಕ್ಸಸ್ ಕಾಣುತ್ತಿದ್ದ ಇವರು ಕನ್ನಡದಲ್ಲಿ ಅನೇಕ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿದ್ದಾರೆ.

ಹೈ ಬಜೆಟ್ ಸಿನಿಮಾಗಳು, ಹಾಡುಗಳಲ್ಲಿ ಹೆಚ್ಚು ಪ್ರಾಪರ್ಟಿ ಬಳಕೆ ಮತ್ತು ಪರಭಾಷೆ ನಟಿಯರನ್ನು ಕನ್ನಡಕ್ಕೆ ಹೆಚ್ಚಾಗಿ ತಂದಿದ್ದು ಈ ಎಲ್ಲಾ ಖ್ಯಾತಿಯೂ ಕೂಡ ಇವರಿಗೆ ಸಲ್ಲುತ್ತದೆ. ಆದರೆ ನಿಧಾನವಾಗಿ ಸಿನಿಮಾ ಪ್ರಪಂಚದಲ್ಲಿ ಅವರ ಶುಕ್ರ ದೆಶೆ ಮುಗಿಯುತ್ತೇನೋ ಎನ್ನುವ ಅನುಮಾನ ಕಾಡುತ್ತಿದೆ. ಇತ್ತೀಚಿಗೆ ಅವರು ಮಾಡುತ್ತಿರುವ ಯಾವ ಸಿನಿಮಾಗಳು ಕೂಡ ಪ್ರೇಕ್ಷಕರ ನಿರೀಕ್ಷೆ ಅಂತಿಲ್ಲ ಹಾಗಾಗಿ ಸಾಲು ಸಾಲು ಸಿನಿಮಾಗಳು ಸೋಲುತ್ತಿವೆ.

ಅನಿವಾರ್ಯವಾಗಿ ಪೋಷಕ ಪಾತ್ರಗಳನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ ರವಿಚಂದ್ರನ್ ಅವರು. ಆದರೆ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು ಇವರ ಪಾತ್ರಕ್ಕೆ ಹೆಚ್ಚು ಒತ್ತು ಇರುವಂತೆ ಇವರಿಗಾಗಿ ಕಥೆ ಎಣೆಯಲಾಗುತ್ತಿದೆ ಎಂದರು ತಪ್ಪಾಗಲ್ಲ. ಇವುಗಳ ಜೊತೆ ಕಿರುತೆರೆಯಲ್ಲೂ ಕೂಡ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ ರವಿಚಂದ್ರನ್ ಅವರು ಬೆಳ್ಳಿತೆರೆಗಿಂತ ಕಿರುತೆರೆ ಪ್ರೇಕ್ಷಕರಿಗೆ ಬಹಳ ಹತ್ತಿರವಾದದ್ದು ಪ್ರತಿದಿನ ಅಥವಾ ಪ್ರತಿವಾರಂತ್ಯ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರ ಮನೆ ಟಿವಿ ಪರದೆ ಮೇಲೆ ಬಂದರೆ ಅವರು ಅವರ ಕುಟುಂಬದವರಂತೆ ಇವರನ್ನು ಹಚ್ಚಿಕೊಂಡು ಬಿಡುತ್ತಾರೆ.

ಹಾಗಾಗಿ ಎಂತಹ ಸೂಪರ್ ಸ್ಟಾರ್ಗಳ ಆದರೂ ಕೂಡ ಕಿರುತರೆ ಕೈಬೀಸಿ ಕರೆದರೆ ಹೋಗದೆ ಇರುವುದಿಲ್ಲ. ರವಿಚಂದ್ರನ್ ಅವರು ಸಹ ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದೆ ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ಎನ್ನುವ ಡ್ಯಾನ್ಸಿಂಗ್ ರಿಯಾಲಿಟಿ ಶೋ ತೀರ್ಪುಗಾರರಾಗಿದ್ದ ಇವರು ಈಗ ಝೀ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ ಡ್ರಾಮಾ ಜೂನಿಯರ್ಸ್ ಎನ್ನುವ ಮಕ್ಕಳ ಪ್ರತಿಭೆ ಹೊರ ತರುವ ರಿಯಾಲಿಟಿ ಶೋ ಅಲ್ಲಿ ತೀರ್ಪುಗಾರರಾಗಿದ್ದಾರೆ.

ಸಿನಿಮಾ ರಂಗದಲ್ಲಿ ಕೋಟಿ ಕೋಟಿ ಬಂಡವಾಳ ಹೂಡಿ ಬಂಗಾರವನ್ನು ತೆಗೆಯುತ್ತಿದ್ದ ಈ ಸಿಪಾಯಿ ಕಿರುತೆರೆಯಲ್ಲಿ ಎಪಿಸೋಡ್ ಗೆ ಎಷ್ಟು ಸಂಭವನ ಪಡೆಯುತ್ತಿರಬಹುದು ಎನ್ನುವುದು ಎಲ್ಲರ ಕುತೂಹಲ. ಕೆಲ ಮಾಹಿತಿಗಳ ಪ್ರಕಾರ ರವಿಚಂದ್ರನ್ ಅವರು ಒಂದು ಎಪಿಸೋಡ್ ಗೆ 5 ರಿಂದ 6 ಲಕ್ಷಗಳ ಸಂಭಾವನೆಯನ್ನು ಡಿಮ್ಯಾಂಡ್ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಜೊತೆಗೆ ಕೆಲ ಕಿರುತೆರೆ ಶೋಗಳಿಗೆ ಅತಿಥಿಯಾಗಿಯೂ ಸಹ ಇವರು ಕಾಣಿಸಿಕೊಳ್ಳುತ್ತಾರೆ.