ದೊಡ್ಮನೆ ಕೊಡುತ್ತಿದ್ದ ಸಂಭಾವನೆ ಬಗ್ಗೆ ಸತ್ಯ ಬಿಚ್ಚಿಟ್ಟ ನಟ ದರ್ಶನ್ ತಾಯಿ.

 

ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ ಅವರು ಕನ್ನಡ ಚಲನಚಿತ್ರರಂಗದ ಖ್ಯಾತ ಖಳನಾಯಕ. ಅಣ್ಣಾವ್ರ ಅನೇಕ ಸಿನಿಮಾಗಳಲ್ಲಿ ಅವರಿಗೆ ಎದುರಿಗೆ ಖಡಕ್ ವಿಲನ್ ಪಾತ್ರದಲ್ಲಿ ತೂಗುದೀಪ್ ಶ್ರೀನಿವಾಸ್ ಅವರನ್ನು ನೋಡಬಹುದು. ಆದರೆ ತಂದೆ ಅಷ್ಟು ದೊಡ್ಡ ಹೆಸರು ಮಾಡಿದ್ದರೂ ಕೂಡ ದರ್ಶನ್ ಗೆ ಸಿನಿಮಾ ಇಂಡಸ್ಟ್ರಿ ದಾರಿ ಹೂವಿನದ್ದಾಗಿರಲಿಲ್ಲ. ಇಂದು ದರ್ಶನ್ ಕಟ್ಟಿಕೊಂಡಿರುವ ಈ ಸಾಮ್ರಾಜ್ಯ ಅವರ ಸ್ವಂತ, ಪರಿಶ್ರಮ, ದುಡಿಮೆ ಹಾಗೂ ಹಠದಿಂದ ಎಂದೇ ಹೇಳಬಹುದು.

ಅದೇ ಕಾರಣಕ್ಕಾಗಿ ಇವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಕರೆಯುವುದು. ದರ್ಶನ್ ಬಗ್ಗೆ ಇದುವರೆಗೆ ಸಾಕಷ್ಟು ವಿವಾದಗಳು ಆಗಿದ್ದರು ಕೂಡ ಕರ್ನಾಟಕದಲ್ಲಿ ದರ್ಶನ್ ಕ್ರೇಝ್ ಎಂದೂ ಕಡಿಮೆ ಆಗುವುದಿಲ್ಲ. ಡಿ ಬಾಸ್ ಗೆ ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಆದರೆ ಅಭಿಮಾನಿಗಳು ಎಂದು ಹೆಸರು ಹೇಳಿಕೊಂಡು ಕೆಲಕಿಡಿಗೇಡಿಗಳು ದರ್ಶನ್ ಮತ್ತು ಬೇರೆ ಸ್ಟಾರ್ ನಟರ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ.

ಎರಡು ಪಕ್ಷದವರು ಪರಸ್ಪರ ಅಭಿಮಾನಿಗಳು ಎಂದು ಹೇಳಿಕೊಂಡು ತಮ್ಮ ಹೀರೋ ಹೆಚ್ಚು ತಮ್ಮ ಹೀರೋ ಹೆಚ್ಚು ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಇನ್ನು ಮುಂದುವರೆದು ಈ ನಟರ ಕಾರ್ಯಕ್ರಮ ನಡೆಯುವಾಗಲೂ ಕೂಡ ರಂಪಾಟ ನಡೆಸಿ ತೊಂದರೆ ಕೊಡುತ್ತಾರೆ. ಇತ್ತೀಚೆಗೆ ದರ್ಶನ್ ಅವರ ಹೊಸಪೇಟೆಯಲ್ಲಿ ಆದ ಇನ್ಸಿಡೆಂಟ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಲ್ಲೀತನಕ ಬೂದಿ ಮೆಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಸ್ಪೋ.ಟವಾಗಿ ಈಗ ಸ್ಟಾರ್ ವಾರ್ ಬಗ್ಗೆ ಎದುರಿಗೆ ಎಲ್ಲರೂ ಮಾತನಾಡುವಂತ ಪರಿಸ್ಥಿತಿಯನ್ನು ಆ ಘಟನೆ ತಂದಿದೆ.

ಇದೆಲ್ಲದರ ನಂತರ ನೇರವಾಗಿ ದೊಡ್ಮನೆ ಕುಟುಂಬ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಮೇಲೆ ಈ ಆರೋಪವನ್ನು ಹೊರಿಸಲಾಯಿತು. ಆದರೆ ದೊಡ್ಮನೆ ಇಂತಹ ಘಟನೆಗಳಿಗೆ ಪ್ರೇರಣೆ ಕೊಡುವುದಿಲ್ಲ ಎಂದೆ ಕನ್ನಡದ ಮಂದಿ ಬಲವಾಗಿ ನಂಬಿದರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹುತೇಕರ ಅಭಿಪ್ರಾಯ ಇದೇ ರೀತಿ ಇತ್ತು. ಇಂತಹ ಸಂದರ್ಭದಲ್ಲಿ ದರ್ಶನ್ ಅವರ ತಾಯಿ ದೊಡ್ಡಮನೆ ಬಗ್ಗೆ ಮಾತನಾಡಿದ ಒಂದು ಆಡಿಯೋ ಕ್ಲಿಪ್ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು, ಅಷ್ಟಕ್ಕೂ ಆ ವಿಡಿಯೋದಲ್ಲಿ ತೂಗುದೀಪ್ ಶ್ರೀನಿವಾಸ್ ಪತ್ನಿ ಅವರು ದೊಡ್ಮನೆ ಬಗ್ಗೆ ಏನು ಹೇಳಿದರು ಗೊತ್ತಾ.

ಅನೇಕ ಕಲಾವಿದರಿಗೆ ತವರು ಮನೆಯೆಂತೆ ಇದ್ದ ಮನೆ ಅದು, ಎಷ್ಟೋ ಜನ ದೊಡ್ಮನೆ ಪ್ರೊಡಕ್ಷನ್ ಇಂದ ಅನ್ನ ತಿಂದಿದ್ದಾರೆ. ನಮ್ಮ ಯಜಮಾನರಿಗೂ ಸಹ ಸಾಕಷ್ಟು ಅವಕಾಶಗಳು ದೊಡ್ಡ ಮನೆಯಿಂದ ದೊರಕಿವೆ. ಸ್ವತಃ ಡಾಕ್ಟರ್ ರಾಜಕುಮಾರ್ ಅವರೇ ಕೇಳಿ ನಾಲ್ಕೈದು ಸಿನಿಮಾಗಳಲ್ಲಿ ಇವರನ್ನು ಹಾಕಿಸಿಕೊಳ್ಳುತ್ತಿದ್ದರು. ತೂಗುದೀಪ್ ಶ್ರೀನಿವಾಸ್ ತಮ್ಮ ಸಿನಿಮಾದಲ್ಲಿ ಇರಲೇಬೇಕು ಎಂದೇ ರಾಜ್ ಕುಮಾರ್ ಹಠ ಹಿಡಿಯುತ್ತಿದ್ದರು.

ಅದರಿಂದ ವರ್ಷಕ್ಕೆ ನಾಲ್ಕೈದು ಸಿನಿಮಾ ಆದರೂ ಅವರ ಬ್ಯಾನರ್ ನ ಸಿನಿಮಾಗಳು ಸಿಕ್ಕುತ್ತಿದ್ದವು. ಆ ಕಾಲದಲ್ಲಿ ಕಡಿಮೆ ಎಂದರೂ ಒಂದು ಲಕ್ಷವಾದರೂ ಒಂದು ವರ್ಷಕ್ಕೆ ಸಂಭಾವನೆ ಆಗುವಂತ ಅವಕಾಶಗಳು ದೊಡ್ಮನೆಯಿಂದಲೇ ಬರುತ್ತಿತ್ತು ಎಂದಿದ್ದಾರೆ. ಇಂತಹ ಮಾತುಗಳನ್ನು ಆಡಿರುವ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ. ರಾಜ್ ಕುಟುಂಬದ ಮೇಲೆ ಕನ್ನಡಿಗರಿಗೆ ಅಪಾರವಾದ ಅಭಿಮಾನ ಇದೆ ತಾವು ಬೆಳೆದು ತಮ್ಮವರನ್ನು ಬೆಳೆಸುವ ಗುಣ ಹೊಂದಿರುವ ಈ ಕುಟುಂಬವನ್ನು ಬಗ್ಗೆ ಜನ ರಾಜವಂಶ ಎಂದೇ ಕರೆಯುತ್ತಾರೆ. ಕರ್ನಾಟಕದ ಈ ಹೆಸರಾಂತ ಮನೆತನದ ಬಗ್ಗೆ ಮತ್ತು ಅವರ ದೊಡ್ಡ ಗುಣದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Comment