Friday, June 9, 2023
HomeEntertainmentಒಂದು ಕೊಟ್ಟು ಒಂದು ಕಿತ್ತುಕೊಂಡ ದೇವರು. ನಾನು ನಗುತ್ತಿರುವುದೇ ಮಗ ರಾಯನ್ ಗಾಗಿ ಎಂದು ಕಣ್ಣಿರಿಟ್ಟ...

ಒಂದು ಕೊಟ್ಟು ಒಂದು ಕಿತ್ತುಕೊಂಡ ದೇವರು. ನಾನು ನಗುತ್ತಿರುವುದೇ ಮಗ ರಾಯನ್ ಗಾಗಿ ಎಂದು ಕಣ್ಣಿರಿಟ್ಟ ನಟಿ ಮೇಘನಾ ರಾಜ್.

 

ಮೇಘನಾ ರಾಜ್ ಕನ್ನಡ ಚಲನಚಿತ್ರ ರಂಗ ಕಂಡ ಪ್ರತಿಭಾನ್ವಿತ ನಟಿ. ಮೂಲತಃ ಕಲಾವಿದರ ಕುಟುಂಬದಿಂದ ಬಂದ ಈಕೆ ಆರಿಸಿಕೊಂಡಿದ್ದು ಕೂಡ ಇದೇ ವೃತ್ತಿಯನ್ನೇ. ಪ್ರತಿಭೆ ಜೊತೆ ನಟಿ ಆಗಲು ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿದ್ದ ಇವರು ಸಲೀಸಾಗಿ ನಾಯಕಿ ಪಟ್ಟ ಏರಿದರು. ಕನ್ನಡ ಮಾತ್ರವಲ್ಲದೆ ಮಲಯಾಳಂ ಚಿತ್ರರಂಗದಲ್ಲಿ ಕೂಡ ಬಹಳ ಬೇಡಿಕೆಯಲ್ಲಿರುವ ನಟಿ ದಕ್ಷಿಣ ಭಾರತದ ತಾರೆಯಾಗಿದ್ದಾರೆ.

ಸಿನಿಮಾ ರಂಗವನ್ನು ಹೊರತುಪಡಿಸಿ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೂ ಕೂಡ ಈಕೆ ಸ್ಟ್ರಾಂಗ್ ಮೈಂಡೆಡ್. ಮಹಿಳೆಯಾಗಿ ತನ್ನ ಬದುಕಿನ ದುರಂತವನ್ನು ಸಹಿಸಿಕೊಂಡು ನಗು ಮುಖದಿಂದ ಬಾಳುತ್ತಿರುವ ಇವರು ತನ್ನ ಬಾಳಿನಲ್ಲಿ ವಿಧಿ ಆಡಿದ ಆಟಕ್ಕೆ ಸೆಡ್ಡು ಹೊಡೆದು ಮತ್ತೆ ಮುಗುಳ್ನಗುವ ಚಾಲೆಂಜ್ ತೆಗೆದುಕೊಂಡಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ ಪ್ರೀತಿಸಿ ಕೈ ಹಿಡಿದಿದ್ದ ಚಿರಂಜೀವಿ ಸರ್ಜಾ ಅವರನ್ನು ತಾವು ಗರ್ಭಿಣಿಯಾಗಿದ್ದಾಗ ಕಳೆದುಕೊಳ್ಳಬೇಕಾದ ದುರ್ಗತಿ ಮೇಘನಾರಾಜ್ ಅವರಿಗೆ ಬಂತು. ಅಂದು ಅವರ ಪರಿಸ್ಥಿತಿ ಎಷ್ಟು ಕರುಣಾಜನಕವಾಗಿತ್ತು ಎಂದರೆ ಯಾರು ಸಹ ತಮ್ಮ ಶತ್ರುವಿಗೂ ಅಂತ ಸ್ಥಿತಿ ಬಯಸುವುದಿಲ್ಲ. ಚಿರಂಜೀವಿಯದು ಸಾ.ವಾಗಿದ್ದರೆ ಮೇಘನಾದು ಜೀವಂತ ಸಾ.ವಿನ ಪರಿಸ್ಥಿತಿ.

ಆದರೆ ಕುಟುಂಬದ ಪ್ರೀತಿಯ ಆರೈಕೆಯಿಂದ ಕರುಳ ಕುಡಿಗಾಗಿ ಎಲ್ಲವನ್ನು ಸಹಿಸಿಕೊಂಡು ತನ್ನ ನೋವು ಬಚ್ಚಿಟ್ಟುಕೊಂಡು ನಾರ್ಮಲ್ ಆಗಿರುವಂತೆ ತೋರಿಕೊಂಡೇ ಬದುಕುತ್ತಿದ್ದಾರೆ ಈಕೆ. ಮಗು ಆದ ಮೇಲೂ ಕೂಡ ಮಗುವಿನ ಲಾಲನೆ ಪಾಲನೆ ಪೋಷಣೆ ನೆಪಕ್ಕಾಗಿ ಸಿನಿಮಾ ರಂಗದಿಂದ ದೂರ ಉಳಿದಿದ್ದ ಈಕೆ ಈಗ ಮತ್ತೆ ಕಮ್ ಬ್ಯಾಕ್ ಮಾಡಲು ನಿರ್ಧರಿಸಿದ್ದಾರೆ.

ಒಂದೊಳ್ಳೆ ಸಬ್ಜೆಕ್ಟ್ ಇರುವ ಸಿನಿಮಾ ಜೊತೆ ಗೆಳೆಯರೊಂದಿಗೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಮೇಘನಾ ರಾಜ್ ಮೇಘನಾ ರಾಜ್ ಮತ್ತು ಚಿರಂಜೀವಿ ಅವರ ಗೆಳೆಯರದ್ದು ಒಂದು ಗುಂಪು ಇತ್ತು. ಅಲ್ಲಿ ಪನ್ನಗ, ಪ್ರಜ್ವಲ್, ರಾಗಿಣಿ ಹೀಗೆ ಸಾಕಷ್ಟು ಮಂದಿ ಇದ್ದರು. ಈಗ ಇವರೆಲ್ಲ ಸೇರಿ ಸಿನಿಮಾ ಒಂದನ್ನು ತರುತ್ತಿದ್ದಾರೆ. ತತ್ಸಮ ತದ್ಭವ ಎನ್ನುವ ಹೆಸರಿನ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

ಭುಜಂಗ ಸಿನಿಮಾದಲ್ಲಿ ಕೂಡ ಇವರಿಬ್ಬರು ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ತತ್ಸಮ ತದ್ಭವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ನಾಗಭರಣ ಅವರ ಪುತ್ರ ಪನ್ನಗಾಭರಣ. ಈ ಸಿನಿಮಾ ಕುರಿತು ಸಂದರ್ಶನದಲ್ಲಿ ಕಾಣಿಸಿಕೊಂಡ ಮೇಘನಾ ರಾಜ್ ಅವರ ತಮ್ಮ ಮಗನ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನನ್ನ ಮಗ ಒಬ್ಬನನ್ನು ನೋಡಿಕೊಳ್ಳುವ ಜವಾಬ್ದಾರಿ ಇಲ್ಲ ಎಂದರೆ ನೂರು ಸಿನಿಮಾಗಳನ್ನು ಮಾಡಬಹುದು, ಆದರೆ ತಾಯಿಯಾಗುವುದು ಬಹಳ ದೊಡ್ಡ ಜವಾಬ್ದಾರಿ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎನ್ನುವುದು ನನ್ನ ಆಸೆ. ನನ್ನ ಬದುಕಲಿ ಎಲ್ಲಾ ಪರ್ಫೆಕ್ಟ್ ಆಗುತ್ತಿದೆ ಎನ್ನುವಾಗ ವಿಧಿ ಒಂದನ್ನು ಕಿತ್ತುಕೊಂಡು ಮತ್ತೊಂದು ಕೊಟ್ಟಿದ್ದಾನೆ. ನನ್ನ ತಂದೆ ತಾಯಿಗೂ ಕಷ್ಟ ಇತ್ತು ಆದರೂ ಅವರು ನನ್ನ ಮುಂದೆ ತೋರಿಸಿಕೊಳ್ಳದೇ ಸಾಕಿದರು.

ಅದನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡು ನನ್ನ ಮಗನಿಗಾಗಿ ನಗುವ ಪ್ರಯತ್ನ ಮಾಡುತ್ತಿದ್ದೇನೆ. ಮಗ ರಾಯನ್ ಸಿನಿಮಾಲೋಕಕ್ಕೆ ಬರುತ್ತಾನಾ ಎಂದು ಈಗಲೇ ಎಲ್ಲರೂ ಕೇಳುತ್ತಿದ್ದಾರೆ. ಅವನ ಬ್ಲಡ್ ಅಲ್ಲಿಯೇ ಕಲೆ ಎನ್ನುವುದು ಇದೆ. ಅದಕ್ಕೂ ಮೊದಲು ಅವನು ಎಬಿಸಿಡಿ ಕಲಿಯಲಿ ಅವನಿಗೆ ಡೈಲಾಗ್ ಹೇಳುವ ರೀತಿ ಆಗಲಿ ಮುಂದೆ ಅವನ ಇಚ್ಛೆ ಎಂದಿದ್ದಾರೆ. ಇದರ ಜೊತೆ ಮಗ ಮಾಡುವ ತುಂಟಾಟಗಳ ಬಗ್ಗೆ ಕೂಡ ಮಾತನಾಡಿದ್ದಾರೆ.