ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನಿರ್ಮಾಣಕ್ಕಾಗಿ ಹೆಚ್ಚಿನ ಪ್ರಾಮುಖ್ಯ ತೆಯನ್ನು ನೀಡಲಾಗುತ್ತದೆ ಅದೇ ರೀತಿ ಮನೆ ನಿರ್ಮಾಣ ಮಾಡುವಾಗ ಯಾವ ಕೋಣೆ ಯಾವ ದಿಕ್ಕಿನಲ್ಲಿ ಇರಬೇಕು ಯಾವ ವಸ್ತು ಯಾವ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು ಎನ್ನುವುದರ ಬಗ್ಗೆ ವಾಸ್ತು ಶಾಸ್ತ್ರ ತಿಳಿಸುತ್ತದೆ. ಅದೇ ರೀತಿ ನಮ್ಮ ಮನೆಯಲ್ಲಿರುವಂತಹ ಬೀರು ಒಳ್ಳೆಯ ದಿಕ್ಕಿನಲ್ಲಿ ಇದ್ದರೆ ನಮ್ಮ ಹಣಕಾಸಿನ ಪರಿಸ್ಥಿತಿ ಕೂಡ ಚೆನ್ನಾಗಿರುತ್ತದೆ.
ಏಕೆಂದರೆ ಬೀರುವಿನಿಂದ ಪ್ರತಿನಿತ್ಯ ಬಟ್ಟೆಯಿಂದ ಹಿಡಿದು ಹಣಕಾಸಿನ ವ್ಯವಹಾರವನ್ನು ಮಾಡುತ್ತೇವೆ. ಹಾಗಾಗಿ ಬೀರು ಒಳ್ಳೆಯ ದಿಕ್ಕಿನಲ್ಲಿ ಇದ್ದರೆ ನಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುವುದರ ಜೊತೆಗೆ ನಾವು ನೆಮ್ಮದಿಯಾಗಿ ಕೂಡ ಇರಬಹುದು.
ವಾಸ್ತು ಪ್ರಕಾರ ಮನೆಗೆ ಎಷ್ಟು ಸಂಖ್ಯೆಯಲ್ಲಿ ಕಿಟಕಿ ಮತ್ತು ಬಾಗಿಲುಗಳಿರಬೇಕು ತಿಳಿದುಕೊಳ್ಳಿ.!
ಹಾಗಾದರೆ ಈ ದಿನ ನಮ್ಮ ಮನೆಗಳಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರುತ್ತದೆ ಎನ್ನುವುದರ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಕಷ್ಟು ಜನರು ಅವರ ಮನೆಯಲ್ಲಿ ಬೀರುವನ್ನು ಅನುಕೂಲಕ್ಕೆ ತಕ್ಕಂತೆ ಅನುಗುಣವಾಗಿ ಬೀರು ವನ್ನು ಇಟ್ಟಿರುತ್ತಾರೆ ಮತ್ತು ಯಾವ ಸ್ಥಳ ಖಾಲಿ ಇರುತ್ತದೆಯೋ ಅಲ್ಲಿ ಬೀರುವನ್ನು ಇಟ್ಟಿರುತ್ತಾರೆ.
ಆದರೆ ನಮ್ಮ ಮನೆಯಲ್ಲಿ ನಾವು ಕೆಲ ವೊಂದಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ನಮ್ಮ ಹಣಕಾಸಿನ ಪರಿಸ್ಥಿತಿಗಳು ಕೂಡ ಚೆನ್ನಾಗಿರುತ್ತದೆ. ಹಾಗಾಗಿ ನಾವು ಕೆಲವೊಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಕೆಲವೊಂದಷ್ಟು ಪಾಸಿಟಿವ್ ಎನರ್ಜಿ ಕೂಡ ಸಿಗುತ್ತದೆ. ಅದೇ ರೀತಿಯಾಗಿ ನಮ್ಮ ಹಣಕಾಸಿನ ಪರಿಸ್ಥಿತಿ ಕೂಡ ಚೆನ್ನಾಗಿ ಆಗಲು ಅನುಕೂಲವಾಗುತ್ತದೆ.
ಸ್ತ್ರೀಯರ ಒಳಗುಟ್ಟು.! ಪ್ರತಿಯೊಬ್ಬ ಪುರುಷರು ಇದನ್ನು ತಿಳಿದುಕೊಳ್ಳಲೇಬೇಕು.!
ನಾವು ಈ ಮೊದಲೇ ಹೇಳಿದಂತೆ ಬೀರುವಿನಿಂದ ಬಟ್ಟೆ ಬರಿಯಿಂದ ಹಿಡಿದು ಹಣಕಾಸಿನ ವ್ಯವಹಾರವನ್ನು ಕೂಡ ನಾವು ಮಾಡುತ್ತೇವೆ. ಹಾಗಾಗಿ ಈ ಬೀರುವನ್ನು ನಾವು ಕೆಲವೊಂದಷ್ಟು ದಿಕ್ಕಿನಲ್ಲಿ ಇಟ್ಟರೆ ನಮಗೆ ಒಳ್ಳೆಯ ರೀತಿಯಾದ ಪಾಸಿಟಿವ್ ಎನರ್ಜಿ ಸಿಗುವುದರ ಜೊತೆಗೆ ನಮ್ಮ ಹಣಕಾಸಿನ ಅಭಿವೃದ್ಧಿ ಕೂಡ ಚೆನ್ನಾಗಿ ಆಗುತ್ತದೆ. ಹಾಗಾದರೆ ಈ ಬೀರುವನ್ನು ಇಡುವುದಕ್ಕೆ ಯಾವ ಸ್ಥಳ ಸೂಕ್ತ ಎಂದು ನೋಡುವುದಾದರೆ.
ಉತ್ತರ ದಿಕ್ಕು, ದಕ್ಷಿಣ ದಿಕ್ಕು, ವಾಯುವ್ಯ ದಿಕ್ಕು, ಸೂಕ್ತ ಎಂದು ಹೇಳಬಹುದು. ಅದರಲ್ಲೂ ಉತ್ತರ ದಿಕ್ಕಿನಲ್ಲಿ ಇದ್ದರೆ ತುಂಬಾ ಒಳ್ಳೆಯದು. ಉತ್ತರ ದಿಕ್ಕಿನ ಅಧಿಪತಿ ಬುಧ, ಬುಧ ಸಂಪತ್ತಿನ ಅಧಿಪತಿ ಆದ್ದರಿಂದ ಉತ್ತರ ದಿಕ್ಕಿನ ಮಧ್ಯಭಾಗದಲ್ಲಿ ಬೀರುವನ್ನು ಇಡಬಹುದು. ಇನ್ನು ನಿಮ್ಮ ಬೀರುವಿನಲ್ಲಿ ಚಿನ್ನಾಭರಣ ಹಾಗೂ ಹಣಕಾಸನ್ನು ಇಡುತ್ತಿದ್ದರೆ ಉತ್ತರ ದಿಕ್ಕಿನಲ್ಲಿ ಇಡುವುದು ತುಂಬಾ ಸೂಕ್ತ.
ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!
ಏಕೆಂದರೆ ಉತ್ತರ ದಿಕ್ಕು ಕುಬೇರನ ಮಾಲೀಕನ ದಿಕ್ಕು ಆಗಿರುವುದರಿಂದ ಚಿನ್ನಾಭರಣ ಹಾಗೂ ಹಣಕಾಸು ಉತ್ತರ ದಿಕ್ಕಿನಲ್ಲಿ ಇಡುವುದು ತುಂಬಾ ಸೂಕ್ತ. ಇನ್ನು ಕೆಲವೊಂದಷ್ಟು ಜನರು ತಮ್ಮ ರೇಷ್ಮೆ ಬಟ್ಟೆಗಳನ್ನು ಮತ್ತು ಬೆಲೆ ಬಾಳುವಂತಹ ಬಟ್ಟೆಗಳನ್ನು ಹೇಗೆ ಅಂದರೆ ಹಾಗೆ ಹರಡಿ ಬಿಟ್ಟಿರು ತ್ತಾರೆ. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಎಂದಿಗೂ ಪಾತ್ರರಾಗುವುದಕ್ಕೆ ಸಾಧ್ಯವಾಗುವುದಿಲ್ಲ.
ಹಾಗಾಗಿ ಲಕ್ಷ್ಮಿ ದೇವಿಗೆ ಗೌರವವನ್ನು ನೀಡುವುದು ಅಂದರೆ ಬೀರುವನ್ನು ಶುದ್ಧವಾಗಿ ಇಟ್ಟು ಕೊಳ್ಳಬೇಕು. ಅದರಲ್ಲೂ ನಿಮ್ಮ ಆಸ್ತಿ ವಿವರ ಹೊಂದಿರುವಂತಹ ಪತ್ರಗಳನ್ನು ಮತ್ತು ಹಣಕಾಸು ಆಭರಣಗಳನ್ನು ಸರಿಯಾಗಿ ಜೋಡಿಸಿ ಇಟ್ಟುಕೊಳ್ಳಬೇಕು. ಇನ್ನು ನಿಮ್ಮ ಬೀರುವಿನಲ್ಲಿ ಇಟ್ಟಂತಹ ಬಟ್ಟೆ ವಾಸನೆ ಬರುತ್ತಿದ್ದರೆ ಅದಕ್ಕೆ ಸುಗಂಧವನ್ನು ಬಳಕೆ ಮಾಡಬೇಕು ಮತ್ತು ಯಾವುದೇ ಹುಳ ಆಗದಂತೆ ನೋಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.