
ಮನೆಯಲ್ಲಿರುವಂತಹ ಪ್ರತಿಯೊಂದು ದಿಕ್ಕು ಮತ್ತು ಪ್ರತಿಯೊಂದು ವಸ್ತುವಿಗೂ ವಾಸ್ತುವಿನಲ್ಲಿ ಪ್ರಾಮುಖ್ಯತೆ ಇದೆ. ಕಿಟಕಿಗಳ ದಿಕ್ಕು ಬಾಗಿಲುಗಳ ದಿಕ್ಕು ನಿಮ್ಮ ಖ್ಯಾತಿ ಮತ್ತು ಪ್ರಗತಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ ಕಿಟಕಿ ಮತ್ತು ಬಾಗಿಲುಗಳು ಹೊರಗಿನ ಪ್ರಪಂಚವನ್ನು ಮನೆಯ ಜೊತೆ ಸಂಪರ್ಕಿಸುವಂತಹ ಸ್ಥಳವಾಗಿದೆ.
ಸಕಾರಾತ್ಮಕ ಶಕ್ತಿಯು ಕಿಟಕಿಗಳು ಮತ್ತು ಬಾಗಿಲುಗಳ ಮೂಲಕ ಮನೆಗೆ ಪ್ರವೇಶಿಸುತ್ತದೆ ಮತ್ತು ಋಣಾತ್ಮಕ ಶಕ್ತಿಯು ಮನೆಯಿಂದ ಹೊರ ಹೋಗುತ್ತದೆ. ಆದ್ದರಿಂದ ಸರಿಯಾದ ದಿಕ್ಕಿನಲ್ಲಿ ಕಿಟಕಿ ಹಾಗೂ ಬಾಗಿಲುಗಳು ಇರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ವಾಸ್ತು ಪ್ರಕಾರ ಕಿಟಕಿ ಮತ್ತು ಬಾಗಿಲುಗಳು ಯಾವ ದಿಕ್ಕಿನಲ್ಲಿ ಇರಬೇಕು ಎನ್ನುವುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ.
ಸ್ತ್ರೀಯರ ಒಳಗುಟ್ಟು.! ಪ್ರತಿಯೊಬ್ಬ ಪುರುಷರು ಇದನ್ನು ತಿಳಿದುಕೊಳ್ಳಲೇಬೇಕು.!
* ಪೂರ್ವ ದಿಕ್ಕಿನ ಬಾಗಿಲು ಪೂರ್ವ ದಿಕ್ಕಿನಲ್ಲಿ ಸೂರ್ಯ ಉದಯಿಸುತ್ತಾನೆ ಮತ್ತು ಈ ದಿಕ್ಕು ದೇವರಿಗೆ ಸಂಬಂಧಿಸಿದೆ ಅಂತ ಪರಿಗಣಿಸಲಾಗುತ್ತದೆ. ಹಣದ ನಷ್ಟ ಅಪ.ಘಾ.ತ ಕೆಲವು ರೀತಿಯ ಭಯ ಯಾವಾಗಲೂ ಕಾಡುತ್ತಿದ್ದರೆ. ಈ ದಿಕ್ಕಿನಲ್ಲಿ ನೀವು ನಿಮ್ಮ ಮನೆ ಬಾಗಿಲು ಮಾಡುವುದು ಒಳ್ಳೆಯದು ಈ ಭಾಗದಲ್ಲಿ ಬಾಗಿಲನ್ನು ಇಟ್ಟುಕೊಂಡಿದ್ದರೆ ಮನೆಯಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತದೆ ಹಾಗು ಮನೆಯಲ್ಲಿ ಹಣ ವ್ಯರ್ಥ ವಾಗುವುದಿಲ್ಲ.
* ಮನೆಯಲ್ಲಿ ಬಾಗಿಲು ಬೇಡ, ಮೂರು ಬಾಗಿಲು ಒಂದೇ ದಿಕ್ಕಿನಲ್ಲಿ ಇರುವ ಹಾಗೆ ಮನೆಯನ್ನು ನಿರ್ಮಿಸಬಾರದು ಬಾಗಿಲ ಒಳಗಡೆ ಇನ್ನೊಂದು ಬಾಗಿಲು ಇಡಬಾರದು. ಪ್ರವೇಶ ದ್ವಾರವನ್ನು ಮೂಲೆಯಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಮನೆಯಲ್ಲಿ ಪ್ರವೇಶಿಸುವುದಿಲ್ಲ.
* ಇನ್ನು ಮನೆಯಲ್ಲಿ ಮೂರು ಬಾಗಿಲು ಇದ್ದರೆ ಆ ಮನೆಯಲ್ಲಿ ಅಶಾಂತಿ ನೆಲೆಸಿರುತ್ತದೆ ಹಾಗೆ ಮನೆಯಲ್ಲಿ ಆರು ಬಾಗಿಲುಗಳು ಇದ್ದರೆ ಆ ಮನೆಗೆ ಅದೃಷ್ಟ ಒಲಿದು ಬರಲಿದೆ ಅಂತ ಅರ್ಥ.
* ಮನೆಯಲ್ಲಿ ಏಳು ಸಂಖ್ಯೆಯ ಬಾಗಿಲುಗಳು ಇದ್ದರೂ ಆ ಮನೆಯಲ್ಲಿ ಕಳ್ಳ ಖಾಕರ ಭಯ ಇರುತ್ತದೆ. ಜೊತೆಗೆ ಐದು ಬಾಗಿಲುಗಳಿದ್ದರೂ ಕೂಡ ಆ ಮನೆಯಲ್ಲಿ ಗೊಂದಲಗಳು ಹೆಚ್ಚಾಗಿರುತ್ತದೆ ಮತ್ತು ಅಶಾಂತಿ ನೆಲೆಸಿರುತ್ತದೆ ಎಂದು ನಂಬಲಾಗುತ್ತದೆ.
* ಹಾಗೆ ಮನೆಯಲ್ಲಿ ಕಿಟಕಿಗಳು ಮತ್ತು ಬಾಗಿಲುಗಳ ಸಂಖ್ಯೆ ಸಮವಾ ಗಿರಬೇಕು ಅಂದರೆ 2,4,6,8 ಹೀಗೆ ಆದರೆ ಕಿಟಕಿ ಮತ್ತು ಬಾಗಿಲುಗಳ ಸಂಖ್ಯೆ ಒಟ್ಟು 10 ಆಗಿರಬಾರದು.
* ಕಿಟಕಿಗಳ ವಿಚಾರಕ್ಕೆ ಬರುವುದಾದರೆ ಮನೆಯ ಸಿಂಹದ್ವಾರದ ಪಕ್ಕದಲ್ಲಿಯೇ ಅಂದರೆ ಮನೆಯ ಸಿಂಹದ್ವಾರದ ಚೌಕಟ್ಟಿಗೆ ಕೂಡಿಸಿ ಕಿಟಕಿಗಳ ಚೌಕಟ್ಟನ್ನು ಇಡಬಾರದು ಮನೆಯ ಸಿಂಹ ದ್ವಾರದ ಸ್ವಲ್ಪ ದೂರದಲ್ಲಿ ಕಿಟಕಿಯನ್ನು ಇರಿಸಬೇಕು ಹಾಗೆಯೇ ಮನೆಯ ಸಿಂಹದ್ವಾರದ ಬಾಗಿಲುಗಳು ಒಳ ಮುಖಕ್ಕೆ ತೆಗೆಯುವ ಹಾಗೆ ಇರಬೇಕು. ಮನೆಯ ಸಿಂಹ ದ್ವಾರದ ಬಾಗಿಲುಗಳು ಆಚೆ ಹೋಗುವ ಹಾಗೆ ಇರಿಸುವುದು ತಪ್ಪಾಗುತ್ತದೆ.
ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!
* ಇನ್ನು ಕೆಲವೊಂದಷ್ಟು ಜನ ತುಂಬಾ ಹಣವನ್ನು ಖರ್ಚು ಮಾಡಿ ಮನೆಯ ಬಾಗಿಲುಗಳನ್ನು ಮಾಡಿಸಿರುತ್ತಾರೆ. ಮನೆಯ ಬಾಗಿಲಿನ ಮೇಲೆ ದೇವರ ಆಕಾರಗಳನ್ನು ಕೆತ್ತನೆ ಮಾಡಿಸಿರುತ್ತಾರೆ. ಆದರೆ ನೆನಪಿನಲ್ಲಿಡಿ ಮನೆಯ ಸಿಂಹದ್ವಾರದ ಬಾಗಿಲಿಗೆ ಈ ರೀತಿಯ ದೇವರ ಆಕಾರವನ್ನು ಕೆತ್ತನೆ ಮಾಡಿಸುವುದು ತುಂಬಾ ತಪ್ಪಾಗುತ್ತದೆ.
ಏಕೆಂದರೆ ಈ ರೀತಿ ದೇವರ ಆಕಾರಗಳನ್ನು ಬಾಗಿಲಿನ ಮೇಲೆ ಕೆತ್ತನೆ ಮಾಡಿಸಿದರೆ ದೇವರನ್ನು ಆಚೆ ಇಟ್ಟಂತೆ ಲೆಕ್ಕ ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ಸಿಂಹದ್ವಾರದ ಬಾಗಿಲಿಗೆ ದೇವರ ಆಕಾರ ಇರುವಂತಹ ಚಿತ್ರಣವನ್ನು ಕೆತ್ತನೆ ಮಾಡಿಸಬೇಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.