ನಟ ಅರ್ಜುನ್ ಸರ್ಜಾ ಅವರು ಕನ್ನಡದ ಹಿರಿಯ ನಟ ಆದಂತಹ ಶಕ್ತಿ ಪ್ರಸಾದ್ ಅವರ ಎರಡನೇ ಪುತ್ರ ತಂದೆಯಂತೆ ಮಗನು ಕೂಡ ನಟನೆಯಲ್ಲಿ ಕರಗತ ಮಾಡಿಕೊಂಡಿದ್ದಾರೆ. ಬಾಲ್ಯದಿಂದಲೂ ಕೂಡ ಸಿನಿಮಾಗಳಲ್ಲಿ ನಟನೆ ಮಾಡುವುದರ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಮೂಲತಃ ಕನ್ನಡದವರೇ ಆಗಿದ್ದರು ಕೂಡ ಹೆಚ್ಚು ಸದ್ದು ಮಾಡಿದ್ದು ತಮಿಳು ಮತ್ತು ತೆಲುಗು ಅಂತಾನೆ ಹೇಳಬಹುದು. ಹೌದು ನಟ ಅರ್ಜುನ್ ಸರ್ಜಾ ಅವರ ಕನ್ನಡದವರು ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ಹೀರೋ ಆಗಿ ಆಕ್ಟ್ ಮಾಡಿದ್ದಾರೆ ಆದರೂ ಕೂಡ ಇವರಿಗೆ ಪರಭಾಷೆಯಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಈ ಕಾರಣಕ್ಕಾಗಿ ತಮಿಳು ತೆಲುಗು ಮಲಯಾಳಂ ಸೇರಿದಂತೆ ಹಲವಾರು ಭಾಷೆಯಲ್ಲಿ ಘಟನೆ ಮಾಡಿದ್ದಾರೆ.
ಸದ್ಯಕ್ಕೆ ನಟ ಅರ್ಜುನ್ ಸರ್ಜನ್ ಅವರು ಚೆನ್ನೈನಲ್ಲಿ ವಾಸವಾಗಿದ್ದಾರೆ, ಇನ್ನು ಅರ್ಜುನ್ ಸರ್ಜಾ ಅವರ ವೈವಾಯಿಕ ಜೀವನಕ್ಕೆ ಬರುವುದಾದರೆ ಆಶಾರಾಣಿ ಎಂಬ ನಟಿಯನ್ನು ಇವರು ಮದುವೆಯಾಗಿದ್ದು. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ ಐಶ್ವರ್ಯ ಅರ್ಜುನ್ ಮತ್ತು ಅಂಜನಾ ಅರ್ಜುನ ಎಂಬ ಮಕ್ಕಳಿದ್ದಾರೆ. ಅರ್ಜುನ್ ಸರ್ಜಾ ಅವರು ಹನುಮಂತನ ಪರಮ ಭಕ್ತ ಹಾಗಾಗಿಯೇ ಬೆಂಗಳೂರಿನ ಸಮೀಪದಲ್ಲಿ ಇರುವಂತಹ ಪ್ರದೇಶ ಒಂದರಲ್ಲಿ ಹನುಮಂತನಿಗೆ ಸ್ವಂತ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಈ ಒಂದು ದೇವಸ್ಥಾನದ ಜೀರ್ಣೋಧ್ದಾರ ಕಾರ್ಯಕ್ಕೆ ವಿನಯ್ ಗುರೂಜಿಯವರು ಕೂಡ ಆಗಮಿಸಿದ್ದರು. ಆ ಸಂದರ್ಭದಲ್ಲಿ ತೆಗೆದಂತಹ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಇನ್ನು ನಟ ಅರ್ಜುನ್ ಸರ್ಜುನ್ ಅವರ ಹಿರಿಯ ಪುತ್ರಿ ಯಾದಂತಹ ಐಶ್ವರ್ಯ ಅರ್ಜುನ್ ಅವರು ಕೂಡ ಕನ್ನಡದಲ್ಲಿ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಈ ಸಿನಿಮಾ ಅಂದುಕೊಂಡ ಮಾದರಿಯಲ್ಲೇ ಒಳ್ಳೆಯ ರೀತಿಯಲ್ಲಿ ಸಕ್ಸಸ್ ಖಂಡಿತ ಆದರೆ ಈ ಸಿನಿಮಾದ ನಂತರ ಐಶ್ವರ್ಯ ಅರ್ಜುನ್ ಅವರಿಗೆ ಯಾವುದೇ ರೀತಿಯಾದಂತಹ ಸಿನಿಮಾಗಳ ಆಫರ್ ಬಂದಿಲ್ಲ. ಹಾಗಾಗಿ ಅರ್ಜುನ್ ಸರ್ಜಾ ಅವರು ಇದೀಗ ತೆಲುಗುನಲ್ಲಿ ತಮ್ಮ ಮಗಳನ್ನು ಪರಿಚಯ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಆದರೂ ಐಶ್ವರ್ಯ ಅರ್ಜುನ ಅವರಿಗೆ ಒಳ್ಳೆಯ ಫ್ಯೂಚರ್ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
ಇವೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಅರ್ಜುನ್ ಸರ್ಜಾ ಅವರು ತಮ್ಮ ದೇಹವನ್ನು ಎಷ್ಟು ಫಿಟ್ ಆಗಿ ಇಟ್ಟುಕೊಂಡಿದ್ದಾರೆ ಎಂಬುದು ನಿಮಗೆ ತಿಳಿದೇ ಇದೆ. ಈ ಕಾರಣಕ್ಕಾಗಿ ಇವರನ್ನು ಆಕ್ಷನ್ ಕಿಂಗ್ ಅಂತ ಹೇಳುವುದು ಆಕ್ಷನ್ ಸೀನ್ ಗಳಲ್ಲಿ ಇವರು ನಟಿಸುವ ಮಾದರಿಯಲ್ಲಿ ಯಾರಿಂದಲೂ ಕೂಡ ನಟಿಸಲು ಸಾಧ್ಯ ವಾಗುವುದಿಲ್ಲ. ಇನ್ನು ವಯಸ್ಸು 60 ರ ಸಮೀಪವಾಗಿದ್ದರು ಕೂಡ ಈಗಲೂ 18ರ ಯುವಕರ ಮಾದರಿಯಲ್ಲಿ ತಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಂಡಿದ್ದಾರೆ. ಇದಕ್ಕೆ ಪೂರಕವಾಗುವಂತಹ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ಟ್ರೆಂಡ್ ಅನ್ನು ಸೃಷ್ಟಿ ಮಾಡಿದೆ.
ಹೌದು ಟೇಬಲ್ ಮೇಲೆ ಒಂದು ಖಾಲಿ ವಿಸ್ಕಿ ಬಾಟಲನ್ನು ಇರಿಸಲಾಗುತ್ತದೆ ಈ ವಿಸ್ಕಿ ಬಾಟಲ್ ಮುಚ್ಚಳವನ್ನು ನಟ ಅರ್ಜುನ್ ಸರ್ಜಾ ಅವರು ತಮ್ಮ ಕಾಲಿನ ಮುಖಾಂತರ ಒಂದೇ ಒಂದು ಶಾರ್ಟ್ ನಲ್ಲಿ ಓಪನ್ ಮಾಡುತ್ತಾರೆ. ಬಾಟಲ್ ಸ್ವಲ್ಪವೂ ಕೂಡ ಅಲುಗಾಡುವುದಿಲ್ಲ ಇವರ ದೇಹದ ಫಿಟ್ನೆಸ್ ಮತ್ತು ಗುರಿಯನ್ನು ನೋಡಿದಂತಹ ನೆಟ್ಟಿಗರು ಫಿದಾ ಆಗಿದ್ದರೆ. ಸದ್ಯಕ್ಕೆ ಈ ವಿಡಿಯೋ ನೋಡಿದರೆ ಒಂದು ಕ್ಷಣ ನಿಮಗೆ ಅಚ್ಚರಿ ಉಂಟಾಗಬಹುದು ಇದು ಸಾಧ್ಯನಾ ಅಂತ ನಿಮಗೆ ಅನುಮಾನ ಮೂಡಬಹುದು. ಆದರೆ ಖಂಡಿತವಾಗಿಯೂ ಕೂಡ ಇದು ಸಾಧ್ಯ ಈ ವಿಡಿಯೋ ನೋಡಿದರೆ ನಿಮಗೆ ಏನನಿಸುತ್ತದೆ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.