Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮಗನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ ನಟಿ ಅಮಲ.!

Posted on May 29, 2025 By Kannada Trend News No Comments on ಮಗನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ ನಟಿ ಅಮಲ.!

ಪರಭಾಷಾ ನಟಿಯಾಗಿದ್ದರೂ ಕನ್ನಡಿಗರಿಗೆ ನಟಿ ಅಮಲಾ ಪೌಲ್ (ACTRESS AMALA PAUL) ಪರಿಚಯವಿದೆ. ಕಿಚ್ಚ ಸುದೀಪ್ (KICHA SUDEEP) ಅವರೊಂದಿಗೆ ಹೆಬ್ಬುಲಿ ಸಿನಿಮಾದಲ್ಲಿ (HEBBULI MOVIE) ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ವುಡ್ ಗೆ ಪ್ರವೇಶ ಪಡೆದ ನಟಿ ಈ ನೆಲದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಹೀಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ಹೆಸರು ಮಾಡುತ್ತಿರುವ ನಟಿ ಸಿನಿಮಾ ವಿಚಾರದಷ್ಟೇ ವೈಯಕ್ತಿಕ ಜೀವನದ ವಿಚಾರವಾಗಿ ಕೂಡ ಸದಾಸುದ್ದಿಯಲ್ಲಿ ಇರುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿರುವ ನಟಿ ತಮ್ಮ ಅಧಿಕೃತ ಖಾತೆಗಳಲ್ಲಿ ಪೋಸ್ಟ್ ಹಾಕುವ ಮೂಲಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸುಖ ದುಃಖಗಳನ್ನು ಅಭಿಮಾನಿ ಬಳಗದೊಂದಿಗೆ ಹಂಚಿಕೊಳ್ಳುತ್ತಾರೆ. ಅದೇ ರೀತಿಯಾಗಿ ಇದೀಗ ನಟಿಯ ಅಧಿಕೃತ ಇನ್ಸ್ಟಾ ಅಕೌಂಟ್ ನಿಂದ ಮಗನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುವ ಸಂಭ್ರಮದ ಫೋಟೋಗಳು ವೈರಲ್ ಆಗಿ ಚರ್ಚೆ ಆಗುತ್ತಿದೆ.

2023ರಲ್ಲಿ ನಟಿ ಅಮಲಾಪೌಲ್ ಉದ್ಯಮಿ ಜಗತ್ ದೇಸಾಯಿ ಅವರೊಂದಿಗೆ ಎರಡನೇ ವಿವಾಹವಾಗಿದ್ದರು ಮತ್ತು ಮದುವೆ ಆದ ಕೆಲವೇ ದಿನಗಳಲ್ಲಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೂಡ ಕೊಟ್ಟಿದ್ದರು. ಅಂದರೆ, ಜೂನ್ 11, 2024ರಂದು ನಟಿ ಅಮಲಾ ಪೌಲ್ ಹಾಗೂ ವಿಜಯ್ ದೇಸಾಯಿ ದಂಪತಿ ಪ್ರೀತಿಗೆ ಸಾಕ್ಷಿಯಾಗಿ ಗಂಡು ಮಗುವಿನ ಜನನವಾಯಿತು, ಈ ಮಗುವಿಗೆ ನಟಿ ಇಲೈ ಎಂದು ನಾಮಕರಣ ಮಾಡಿದ್ದಾರೆ.

ತಮ್ಮ ಮಗನ ಕುರಿತು ಕೂಡ ಪ್ರತಿಯೊಂದು ಅಪ್ ಡೇಟ್ ಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತೋಷಪಡುತ್ತಿದ್ದ ನಟಿ ಈಗ ಮಗು ದೀಕ್ಷ ಸ್ಥಾನ ಪಡೆದಿರುವ ಅಂದರೆ ಕ್ರಿಶ್ಚಿಯನ್ ಧರ್ಮಕ್ಕೆ (Christian) ಮತಾಂತರವಾಗುವ ಅವರ ಸಂಸ್ಕೃತಿಯ ಪ್ರಕಾರ ಬ್ಯಾಪ್ಟಿಸಂ (Bapstism) ಎಂದು ಕರೆಯಲಾಗುವ ಆಚರಣೆಯನ್ನು ನೆರವೇರಿಸಿದ್ದಾರೆ ಮತ್ತು ಈ ಶುಭ ಸಂದರ್ಭವು ಪ್ರೀತಿ ಮತ್ತು ಶಾಂತಿಯಿಂದ ತಂಬಿತ್ತು ಎನ್ನುವ ಅಡಿಬರಹ ಬರೆದು ಸೆಲೆಬ್ರೇಶನ್ ನ ಮುದ್ದಾದ ಫೋಟೋದೊಂದಿಗೆ ಶೇರ್ ಮಾಡಿದ್ದಾರೆ.

ಮೂಲತಃ ನಟಿ ಅಮಲಾ ಪೌಲ್ ಕೂಡ ಮಲೆಯಾಳಿ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು ಅವರ ಅಸಲಿ ಹೆಸರು ಅನಖ್ ಎನ್ನುವುದಾಗಿತ್ತು . ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಂತರ ಅಮಲಾ ಪೌಲ್ ಎಂದು ಹೆಸರು ಬದಲಾಯಿಸಿಕೊಂಡು ತಮ್ಮ ಅದೃಷ್ಟವನ್ನು ಕೂಡ ಬದಲಾಯಿಸಿಕೊಂಡರು ನಟಿ.

ನಟಿ ಸಿನಿಮಾದಷ್ಟೇ ಆಕೆಯ ವೈಯಕ್ತಿಕ ಜೀವನದ ಬಗ್ಗೆ ಕೂಡ ಹೆಚ್ಚು ಸುದ್ದಿ ಇರುತ್ತದೆ. ಯಾಕೆಂದರೆ ನಟಿ ಈ ಮೊದಲು 2013ರಲ್ಲಿ ನಿರ್ದೇಶಕ ವಿಜಯ್ (Director Vijay) ಅವರೊಂದಿಗೆ ವಿವಾಹವಾಗಿದ್ದರು ಆದರೆ ಕೇವಲ ಮೂರೇ ವರ್ಷಗಳಲ್ಲಿ ದಾಂಪತ್ಯ ಮುರಿದು ಬಿದ್ದಿತ್ತು ಬಳಿಕ ಬಹಳ ಕಾಲ ಏಕಾಂಗಿಯಾಗಿ ಜೀವನ ನಡೆಸುತ್ತ ನಟಿ ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದು ಈ ಬಾರಿ ಇಚ್ಛೆಯ ಪ್ರೀತಿ ಪಡೆದುಕೊಂಡಿದ್ದಾರೆ.

ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವ ಫೇಮ್ ಉಳ್ಳ ನಟಿ ಈಗಲೂ ಕೂಡ ಎಲ್ಲಾ ಭಾಷೆಗಳಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಹೀಗೆ, ವೃತ್ತಿ ಜೀವನದಲ್ಲಿ ಸಾಧನೆಗೈದಿರುವ ಮತ್ತು ತಾಯಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ನಟಿ ಅಮಲಾ ಪೌಲ್ ಬದುಕು ಸಂತಸಮಯವಾಗಿರಲಿ ಎಂದು ನಾವು ಹರಸೋಣ.

View this post on Instagram

A post shared by Amala Paul (@amalapaul)

Viral News
WhatsApp Group Join Now
Telegram Group Join Now

Post navigation

Previous Post: ತಮಿಳಿನಿಂದ ಹುಟ್ಟಿದ್ದು ಕನ್ನಡ.! ನಾಲಿಗೆ ಹರಿಬಿಟ್ಟ ನಟ ಕಮಲ್ ಹಾಸನ್.!
Next Post: Shivanna ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore