ನಟ ಕಮಲ್ ಹಾಸನ್ (Actor Kamal Hasan) ಪ್ಯಾನ್ ಇಂಡಿಯಾ ಸ್ಟಾರ್ ಅದಕ್ಕೂ ಮೊದಲು ಪಂಚಭಾಷಾ ಕಲಾವಿದನಾಗಿದ್ದ ಅವರು ಕನ್ನಡವು ಸೇರಿದಂತೆ ನೆರೆಯ ಎಲ್ಲಾ ರಾಜ್ಯಗಳ ಸಿನಿಮಾದಲ್ಲಿ ಮುಖ್ಯ ಪಾತ್ರದಾರಿಯಾಗೆ ಅಭಿನಯಿಸಿ ಆ ನೆಲದದವರೆ ಅನಿಸುವಷ್ಟು ಹತ್ತಿರವಾಗಿದ್ದಾರೆ.
ಕನ್ನಡದಲ್ಲಿ ಕೂಡ ಮುಂದೆ ಬನ್ನಿ ಇನ್ನು ಮುಂದೆ ಬನ್ನಿ ಹಾಡಿನಲ್ಲಿ ಬಂದು ಮೋಡಿ ಮಾಡಿ ಹೋಗಿದ್ದು ಕಮಲ್ ನಂತರ ರಾಮ ಶಾಮ ಭಾಮದಂತಹ ಹಾಸ್ಯ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರೇ ಎನಿಸುವಷ್ಟು ಹತ್ತಿರವಾಗಿದ್ದಾರೆ. ಅಲ್ಲದೆ ಅವರ ಸಾಕಷ್ಟು ಸಿನಿಮಾಗಳು ಕನ್ನಡದಲ್ಲಿ ಡಬ್ ಕೂಡ ಆಗಿವೆ ಮತ್ತು ಕನ್ನಡದ ಸ್ಟಾರ್ ಹೀರೋಗಳೊಂದಿಗೆ ಬಹಳ ಅವಿನಾಭಾವ ಸಂಬಂಧ ಹೊಂದಿರುವ ಕಮಲ್ ಹಾಸನ್ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಕನ್ನಡದ ಬಗ್ಗೆ ತಪ್ಪಾಗಿ ಮಾತನಾಡಿ ತಪ್ಪಿಸ್ಥರಾಗಿದ್ದಾರೆ (Controversy).
ಮೊನ್ನೆ ನಡೆದ ಕಮಲ್ ಹಾಸನ್ ಅಭಿನಯದ ಥಗ್ಸ್ ಲೈಫ್ ಸಿನಿಮಾ (Thugs Life) ರಿಲೀಸ್ ಇವೆಂಟ್ ನಲ್ಲಿ ಸಿನಿಮಾ ಬಗ್ಗೆ ಮಾತನಾಡುತ್ತಾ ವಿಶೇಷ ಅತಿಥಿಯಾ ಹೋಗಿದ್ದ ಶಿವಣ್ಣ ಅವರ ಕುರಿತು ಮತ್ತು ಡಾಕ್ಟರ್ ರಾಜಕುಮಾರ್ ಅವರನ್ನು ನೆನೆಯುತ್ತಾ ರಾಜಕುಮಾರ್ ಫ್ಯಾಮಿಲಿ ಹಾಗೂ ಬೆಂಗಳೂರಿನೊಂದಿಗೆ ಹೊಂದಿರುವ ನಂಟಿನ ಬಗ್ಗೆ ವಿವರಿಸುತ್ತ ಕೊನೆಗೆ ಕನ್ನಡ ತಮಿಳು ಮೂಲದಿಂದ ಬಂದಿದ್ದು ಎನ್ನುವ ಹೇಳಿಕೆ ಕೊಟ್ಟು ಬಿಟ್ಟಿದ್ದಾರೆ.
ಈ ವಿಡಿಯೋ ವೈರಲ್ ಆಗುದ್ದಂತೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಪದೇ ಪದೇ ಕನ್ನಡ ಭಾಷೆ ಮೇಲೆ ಪರಭಾಷಿಗರು ತೋರುತ್ತಿರುವ ಧೋರಣೆಯಿಂದಾಗಿ ಬೇಸತ್ತಿ ಹೋಗಿದ್ದ ಕನ್ನಡದ ಮಂದಿ ಬಹಳ ತೀವ್ರವಾಗಿ ಘಟನೆಯನ್ನು ಖಂಡಿಸುತ್ತಿದ್ದಾರೆ. 3000 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ತಮಿಳು ಮೂಲದಿಂದ ಬಂದಿದ್ದು ಎನ್ನುವುದನ್ನು ಸಹಿಸಿಕೊಳ್ಳಲು ಕನ್ನಡಿಗರಿಗೆ ಆಗುತ್ತಿಲ್ಲ ಹಾಗಾಗಿ ತಪ್ಪಾಗಿ ಮಾತನಾಡಿರುವ ಕಮಲ್ ಹಾಸನ್ ಈ ಬಗ್ಗೆ ಸರಿಯಾದ ಇತಿಹಾಸ ತಿಳಿದುಕೊಂಡು ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಂತೂ ಕಮಲ್ ಹಾಸನ್ ಅವರನ್ನು ಕ್ಷಮೆ ಕೇಳದಿದ್ದರೆ ಕನ್ನಡ ಚಿತ್ರರಂಗದಿಂದ ಬ್ಯಾನ್ (Ban) ಮಾಡಬೇಕು ಮತ್ತು ಕಮಲ್ ಹಾಸನ್ ಅವರ ಸಿನಿಮಾಗಳಿಗೆ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡಬಾರದು (Boycott) ಎಂದು ಅಭಿಯಾನ ನಡೆಯುತ್ತಿದೆ. ಇಂಥ ಘಟನೆಗೆ ವೇದಿಕೆ ಮೇಲೆ ಪ್ರತ್ಯಕ್ಷ ಸಾಕ್ಷಿಯಾಗಿ ಕೂತಿದ್ದ ಶಿವಣ್ಣ ಈಗ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.
ಅವರು ಮಾತನಾಡಿದ್ದನ್ನೇ ದೊಡ್ಡ ವಿಚಾರ ಮಾಡುವುದು ಬೇಡ, ಕನ್ನಡ ಭಾಷೆ ಬಗ್ಗೆ ಅವರಿಗೆ ಅಪಾರ ಪ್ರೀತಿ ಇದೆ, ಅವರಿಗೆ ಗೊತ್ತಾದ ತಕ್ಷಣ ಅವರೇ ತಿದ್ದುಕೊಳ್ಳುತ್ತಾರೆ. ಇದನ್ನು ಇಷ್ಟು ದೊಡ್ಡದು ಮಾಡುವ ಅಗತ್ಯ ಇರಲಿಲ್ಲ, ನನ್ನನ್ನು ಅತಿಥಿಯಾಗಿ ಕರೆದಿದ್ದರು, ನಾನು ಅವರ ಅಭಿಮಾನಿ ಹಾಗಾಗಿ ನಾನು ಹೋಗಿ ಬಂದೆ ಅಷ್ಟೇ.
ಕನ್ನಡ ಕನ್ನಡ ಎಂದು ಬರಿ ಬಾಯಿ ಮಾತಿಗೆ ಬಡಿದು ಕೊಳ್ಳುವುದಲ್ಲ ಕನ್ನಡಕ್ಕಾಗಿ ನಾವು ಏನು ಮಾಡುತ್ತಿದ್ದೇವೆ ಎನ್ನುವುದನ್ನು ಅವಲೋಕಿಸಿಕೊಳ್ಳಬೇಕು. ಕೇವಲ ಸ್ಟಾರ್ ಗಳಿಗೆ ಅವಕಾಶ ನೀಡಿದರೆ ಸಾಲದು ಹೊಸಬರ ಪ್ರಯತ್ನ ಪ್ರೋತ್ಸಾಹಿಸುವ ಕೆಲಸ ಆಗಬೇಕು ಆದರೆ ಯಾರು ಮಾಡುತ್ತಿದ್ದಾರೆ ಈ ರೀತಿ ಮಾಡಿದ್ರೆ ಕನ್ನಡ ಬೆಳೆಯುವುದಾದರೆ ಹೇಗೆ ಎಂದು ಹೇಳಿದ್ದಾರೆ.
ಆದರೆ ಇತ್ತ ಕಮಲ್ ಹಾಸನ್ ಮಾತ್ರ ಕೇರಳದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ನಾನು ಕ್ಷಮೆ ಕೇಳುವ ಮಾತೇ ಇಲ್ಲ ಭಾಷೆ ವಿಚಾರದಲ್ಲಿ ಪುರಾತತ್ವ ತಜ್ಞರು, ಇತಿಹಾಸ ತಜ್ಞರು, ಭಾಷಾ ತಜ್ಞರು ಏನು ಹೇಳುತ್ತಾರೆ ಅದು ಅಂತಿಮ ಅದನ್ನು ತಜ್ಞರಿಗೆ ಬಿಡೋಣ ಎಂದಿದ್ದಾರೆ.