ನಟ ಕಮಲ್ ಹಾಸನ್ (ACTOR KAMAL HASAN) ತಮ್ಮ ಥಗ್ಸ್ ಲೈಫ್ ಸಿನಿಮಾ (THUGS LIFE MOVIE) ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳಿನಿಂದ ಕನ್ನಡ ಜನ್ಮ ತಾಳಿದ್ದು ಎನ್ನುವ ಹೇಳಿಕೆ ಕೊಟ್ಟು ವಿವಾದ ( Controversy) ಮೈಮೇಲೆ ಎಳೆದುಕೊಂಡಿದ್ದಾರೆ. ನಟನ ಹೇಳಿಕೆ ವೈರಲ್ ಆಗುತ್ತಿದ್ದಂತೆ ಇತ್ತ ಕರ್ನಾಟಕದಲ್ಲಿ ದೊಡ್ಡ ಅಭಿಯಾನವೇ ಶುರು ಆಗಿದೆ
ಮೊದಲಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ ಕಮಲ್ ಹಾಸನ್ ಅವರ ತಪ್ಪಾದ ಮಾತಿಗೆ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ವಿಷಯ ಎಲ್ಲೆಡೆ ಜೋರಾಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಕೂಡ ಭಾಷೆಯ ಇತಿಹಾಸ ತಿಳಿಯದೆ ಮಾತನಾಡಿರುವ ಈ ಹೇಳಿಕೆ ಎಷ್ಟು ತೀವ್ರವಾದದ್ದು ಎನ್ನುವುದನ್ನು ಅರ್ಥ ಮಾಡಿಸುವ ಪ್ರಯತ್ನಕ್ಕೆ ಕೈ ಹಾಕಿ ನಟನ ಬೇಜವಾಬ್ದಾರಿ ಹೇಳಕ್ಕೆ ಕ್ಷಮೆ ಕೊಡಲೇಬೇಕು ಎಂದು ಪಟ್ಟು ಹಿಡಿದಿವೆ.
ಇತ್ತ ಜೂನ್ 05ರಂದು ದೇಶದಾದ್ಯಂತ ಕಮಲ್ ಹಾಸನ್ ಸಿಂಬು ಅಭಿರಾಮಿ, ತ್ರಿಶಾ ಇತ್ಯಾದಿ ಕಲಾವಿದರ ನಟನೆಯ ಬಹು ನಿರೀಕ್ಷಿತ ಚಿತ್ರ ಥಗ್ಸ್ ಲೈಫ್ ದೇಶದಾದ್ಯಂತ ಬಿಡುಗಡೆ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಕನ್ನಡ ಚಲನಚಿತ್ರ ಮಂಡಳಿಯೂ ಕೂಡ ಕಮಲ್ ಹಾಸನ್ ಅವರು ಕ್ಷಮೆ ಕೇಳಬೇಕು ಇಲ್ಲವಾದರೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎನ್ನುವ ಎಚ್ಚರಿಕೆ ಕೊಟ್ಟಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಗಳು ಆಗಿದ್ದರೂ ಕೂಡ ನಟ ಕಮಲ್ ಹಾಸನ್ ಅವರು ಮಾತ್ರ ಯಾವುದಕ್ಕೂ ಕ್ಯಾರೆ ಇಲ್ಲದೆ ಸುಮ್ಮನಿದ್ದಾರೆ. ಈ ನಡುವೆ ನ್ಯೂಸ್ ನಿರೂಪಕರೊಬ್ಬರು ಕಮಲ್ ಹಾಸನ್ ಅವರಿಗೆ ಈ ವಿಚಾರದ ಕುರಿತು ಪ್ರಶ್ನೆ ಕೇಳಿದಿದ್ದಾರೆ ಅದಕ್ಕೆ ಕಮಲ್ ಹಾಸನ್ ಅವರ ಕೊಟ್ಟಿರುವ ಉತ್ತರ ಕನ್ನಡಿಗರನ್ನು ಇನ್ನಷ್ಟು ಪ್ರಚೋದಿಸುವಂತಿದೆ.
ಚೈನ್ನೈನಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿರುವ ನಟ ಕಮಲ್ ಹಾಸನ್, ನಮ್ಮದು ಪ್ರಜಾಪ್ರಭುತ್ವ ದೇಶ. ನಾನು ಕಾನೂನು ಮತ್ತು ನ್ಯಾಯಾಂಗದಲ್ಲಿ ನಂಬಿಕೆ ಇಟ್ಟಿದ್ದೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿರುವ ನನ್ನ ಪ್ರೀತಿ ನಿಜವಾದದ್ದು. ಆದರೆ ಅವರದ್ದೇ ಆದ ಅಜೆಂಡಗಳನ್ನು ಹೊಂದಿರುವವರು ಬಿಟ್ಟು ಬೇರೆಯವರು ಆ ನನ್ನ ಪ್ರೀತಿಯನ್ನು ಅನುಮಾನಿಸುವುದಿಲ್ಲ ಎನ್ನುವ ನಂಬಿಕೆ ಇದೆ.
ನನ್ನಿಂದ ತಪ್ಪಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ, ಆದರೆ ತಪ್ಪನ್ನೇ ಮಾಡದ್ದಿದ್ದರೇ ನಾನು ಕ್ಷಮೆ ಕೇಳುವುದಿಲ್ಲ ಈ ಹಿಂದೆಯೂ ನನಗೆ ಬೆದರಿಕೆಗಳನ್ನ ಒಡ್ಡಲಾಗಿದೆ ಆದರೆ ಇವುಗಳಿಗೆ ನಾನು ಬೆದರುವುದಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಭಾಷೆಯ ವಿಚಾರ ಇಟ್ಟುಕೊಂಡು ಯಾರು ರಾಜಕೀಯ ಮಾಡುವುದು ಬೇಡ ನಾನು ಹೇಳಿದ ವಿಷಯದ ಕುರಿತು ಸಂಶೋಧನಾ ತಜ್ಞರು ಸಂಶೋಧನೆ ನಡೆಸಲಿ ಅಂದಿದ್ದಾರೆ.
ಇನ್ನು ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಿವಣ್ಣ (Hatric Hero Shiva raj kumar) ಕೂಡ ಈ ವಿಚಾರದಲ್ಲಿ ಕನ್ನಡಿಗರನ್ನು ಸಂತೈಸುವ ಕೆಲಸ ಬಿಟ್ಟು ಕಮಲ್ ಹಾಸನ್ ಅವರಿಗೆ ಎಲ್ಲವೂ ತಿಳಿದಿದೆ ಬೇಕೆಂದು ಅವರು ಈ ರೀತಿ ಹೇಳಿಲ್ಲ ಅವರು ತಪ್ಪು ಅವರಿಗೆ ಗೊತ್ತಾದರೆ ತಿದ್ದಿಕೊಳ್ಳುತ್ತಾರೆ. ಅವರು ಪ್ರೀತಿಯಿಂದ ಈ ಮಾತು ಹೇಳಿದ್ದು ಆ ಚಿಕ್ಕ ವಿಚಾರವನ್ನು ದೊಡ್ಡದು ಮಾಡುವುದು ಬೇಡ ಎಂದು ಹೇಳಿದ್ದಾರೆ. ಕನ್ನಡಿಗರಿಗೆ ಇದು ಇನ್ನಷ್ಟು ಬೇಸರ ತಂದಿದೆ. ನಟಿ ರಮ್ಯ, ರಚಿತರಾಮ್ ಪರ ಬ್ಯಾಟ್ ಬೀಸಿದ್ದಾರೆ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ