ನಟ ಕಮಲ್ ಹಾಸನ್ (ACTOR KAMAL HASAN) ಅವರು ಕಳೆದ ವಾರ ನಡೆದ ಅವರ ಥಗ್ಸ್ ಲೈಫ್ (THUGS LIFE) ಸಿನಿಮಾ ರಿಲೀಸ್ ಕಾರ್ಯಕ್ರಮದಲ್ಲಿ ಮಾತಿನ ಬರದಲ್ಲಿ ಕನ್ನಡ ಭಾಷೆಯು ತಮಿಳು ಮೂಲದಿಂದ ಬಂದಿದ್ದು, ತಮಿಳು ಭಾಷೆ ಎಲ್ಲರ ಅಮ್ಮ ಎಂದು ಹೇಳಿಬಿಟ್ಟಿದ್ದಾರೆ, ಈ ಹೇಳಿಕೆಗೆ ಕರ್ನಾಟಕದಾದ್ಯಂತ ವಿಪರೀತವಾಗಿ ಆಕ್ಷೇಪ ವ್ಯಕ್ತವಾಗುತ್ತದೆ.
ಇದು ಕನ್ನಡಿಗರ ಭಾಷಾಭಿಮಾನ ಹಾಗೂ ಗೌರವಕ್ಕೆ ತರುವಂತಹ ಹೇಳಿಕೆ ಹಾಕಿದೆ. ಹೀಗಾಗಿ ಇಂತಹ ತಪ್ಪಾದ ಹೇಳಿಕೆಯನ್ನು ನೀಡಿದ ಕಮಲ್ ಹಾಸನ್ ಅವರು ಕೂಡಲೇ ತಮ್ಮ ತಪ್ಪನ್ನು ಅರಿತುಕೊಂಡು ಕ್ಷಮೆ ಕೇಳಬೇಕು ಎಂದು ಕನ್ನಡಪರ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಇಲ್ಲವಾದಲ್ಲಿ ಇವರನ್ನು ಬ್ಯಾನ್ ಮಾಡಲಾಗುವುದು ಹಾಗೂ ಯಾವುದೇ ಕಾರಣಕ್ಕೂ ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ರಿಲೀಸ್ ಆಗಲು ಬಿಡುವುದಿಲ್ಲ ಎಂದು ಕನ್ನಡ ಚಲನಚಿತ್ರ ಪರಿಷತ್ತು ಕೂಡ ಎಚ್ಚರಿಕೆ ನೀಡಿದೆ.
ಆದರೆ ಕಮಲ್ ಹಾಸನ್ ಅವರು ಮಾತ್ರ ನಾನು ಹೇಳಿದ್ದಲ್ಲಿ ತಪ್ಪು ಇಲ್ಲ, ತಪ್ಪು ಮಾಡಿದ್ದರೆ ಕ್ಷಮೆ ಕೇಳುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇಂದು ಇದು ರಾಜಕೀಯವಾಗುತ್ತಿದೆ. ಭಾಷೆಯ ವಿಚಾರದಲ್ಲಿ ಪುರಾತತ್ವ ತಜ್ಞರು, ಭಾಷಾ ತಜ್ಞರು ಸಂಶೋಧನೆ ಮಾಡಿ ಮಾತನಾಡಬೇಕು ರಾಜಕೀಯ ಮಾಡುವವರು ಅಲ್ಲ ಹೀಗಾಗಿ ತಪ್ಪೇ ಇಲ್ಲದ ವಿಚಾರದ ಬಗ್ಗೆ ನಾನು ಕ್ಷಮೆ ಕೇಳುವುದಿಲ್ಲ ಯಾವುದೇ ಬೆದರಿಕೆಗೂ ಬಗ್ಗುವುದಿಲ್ಲ ಎಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.
ಇತ್ತ ಇನ್ನೊಂದು ನಮ್ಮ ಕರುನಾಡಿನ ಹಲವು ಕಲಾವಿದರು ನಟನ ಹೇಳಿಕೆಯನ್ನೇ ಬೆಂಬಲಿಸಿ ಬ್ಯಾಟ್ ಬೀಸುತ್ತಿದ್ದಾರೆ. ಅಂದು ಆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಹೋಗಿದ್ದ ಶಿವರಾಜ್ ಕುಮಾರ್ ರವರು ಈ ಮಾತು ಹೇಳುವಾಗ ವೇದಿಕೆ ಮೇಲೆಯೇ ಇದ್ದರು. ನಂತರ ಇದನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಅವರ ನಮ್ಮ ಬಾಂಧವ್ಯ ವೈಯುಕ್ತಿಕ ಹೀಗಾಗಿ ಅವರ ಪ್ರೀತಿಗಾಗಿ ಹೋಗಬೇಕಾಯಿತು. ಅವರಿಗೆ ಕನ್ನಡದ ಭಾಷೆಯ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿ ಇದೆ ಪ್ರೀತಿಯಿಂದ ಹಾಗೆ ಹೇಳಿದ್ದಾರೆ ಅದನ್ನು ದೊಡ್ಡದು ಮಾಡುವ ಅಗತ್ಯ ಇಲ್ಲ ತಪ್ಪಾಗಿದ್ದರೆ ಅವರು ತಿದ್ದು ಕೊಳ್ಳುತ್ತಾರೆ ನೀವು ಇದನ್ನು ದೊಡ್ಡದಾಗಿ ಮಾಡಲು ಹೋಗಬೇಡಿ ಎಂದಿದ್ದರು. ಇನ್ನು ನಟಿ ರಮ್ಯಾ ಹಾಗೂ ರಚಿತಾ ರಾಮ್ ಕೂಡ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ನಟ ಕಿಶೋರ್ ಕೂಡ ಇದನ್ನೇ ಮುದ್ದುವರಿಸಿದ್ದಾರೆ.
ಆರಂಭದಿಂದ ವಿಭಿನ್ನ ರೀತಿಯ ನಿಲುವುಗಳನ್ನು ಧೈರ್ಯವಾಗಿ ವ್ಯಕ್ತಪಡಿಸುತ್ತಾ ಅನೇಕ ಬಾರಿ ನಮ್ಮವರ ಕೆಂಗಣ್ಣಿಗೆ ಗುರಿಯಾಗಿರುವ ಕಿಶೋರ್ ಈ ಬಾರಿಯೂ ಕೂಡ ಇಂತಹದೇ ವಿವಾದ ಮಾಡಿಕೊಳ್ಳುವಂತಹ ಹೇಳಿಕೆ ನೀಡಿದ್ದಾರೆ. ಕಮಲ್ ಹಾಸನ್ ಅವರು ತಮಿಳು ಕನ್ನಡ ಭಾಷೆಯಿಂದ ಹುಟ್ಟಿದ್ದು ಎಂದರೆ ಅದರಲ್ಲಿ ಅವಮಾನ ಆಗುವ ಭಾಷೆ ಏನಿದೆ ನಾನು ನನ್ನ ತಾಯಿಯ ಹೊಟ್ಟೆಯಿಂದ ಹುಟ್ಟಿದ್ದು ಎಂದರೆ ನನಗೂ ಹಾಗೂ ನನ್ನ ತಾಯಿಗೂ ಅದು ಅವಮಾನ ಹೇಗಾಗುತ್ತದೆ. ಎಲ್ಲ ಭಾಷೆಗಳು ಕೂಡ ಎಲ್ಲಿಂದಲೋ ಹುಟ್ಟಿ ಬಂದಿರುತ್ತವೆ ನಂತರ ಬೆಳೆಯುತ್ತವೆ.
ಹೀಗೆ ಭಾಷೆ ಧರ್ಮ ಹಾಗೂ ಜಾತಿ ವಿಚಾರ ಇಟ್ಟುಕೊಂಡು ನಮ್ಮಲ್ಲಿ ರಾಜಕೀಯಗಳು ಹೆಚ್ಚಾಗುತ್ತಿವೆ. ಈ ವಿಚಾರವನ್ನು ದೊಡ್ಡದು ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ ಒಬ್ಬ ಎಲ್ಲವನ್ನು ತಿಳಿದುಕೊಂಡ ವ್ಯಕ್ತಿ ಏನಾದರೂ ಹೇಳಿಕೆ ನೀಡಿದ್ದಾರೆ ಎಂದರೆ ಅದರಲ್ಲಿ ಒಂದು ಸಿದ್ಧಾಂತ ಇರುತ್ತದೆ ಅದನ್ನು ಅವರನ್ನೇ ಕೇಳಿ ತಿಳಿದುಕೊಳ್ಳಬೇಕು ಅದನ್ನು ಬಿಟ್ಟು ಈ ರೀತಿಯಲ್ಲ ಮಾಡಲು ಹೋಗಬಾರದು ಎಂದಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕಾಮೆಂಟ್ ಮಾಡಿ ತಿಳಿಸಿ.