Home Entertainment ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ ನಟಿ ಅಮೂಲ್ಯ ಅವಳಿ ಮಕ್ಕಳು, ಪುಟಾಣಿ RCB ಫ್ಯಾನ್ಸ್ ಗೆ ಫಿದಾ ಆದ ಕನ್ನಡಿಗರು. ಈ ಕ್ಯೂಟ್ ವಿಡಿಯೋ ನೋಡಿ.

ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ ನಟಿ ಅಮೂಲ್ಯ ಅವಳಿ ಮಕ್ಕಳು, ಪುಟಾಣಿ RCB ಫ್ಯಾನ್ಸ್ ಗೆ ಫಿದಾ ಆದ ಕನ್ನಡಿಗರು. ಈ ಕ್ಯೂಟ್ ವಿಡಿಯೋ ನೋಡಿ.

0
ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ ನಟಿ ಅಮೂಲ್ಯ ಅವಳಿ ಮಕ್ಕಳು, ಪುಟಾಣಿ RCB ಫ್ಯಾನ್ಸ್ ಗೆ ಫಿದಾ ಆದ ಕನ್ನಡಿಗರು. ಈ ಕ್ಯೂಟ್ ವಿಡಿಯೋ ನೋಡಿ.

 

ಏಪ್ರಿಲ್ ಬಂದರೆ ನಾನಾ ಕಾರಣಗಳಿಗಾಗಿ ಇಷ್ಟ ಆಗುತ್ತದೆ. ಶಾಲಾ ಕಾಲೇಜು ಹೋಗುವವರಿಗೆ ರಜೆಯ ಸಂಭ್ರಮವಾದರೆ, ಕ್ರಿಕೆಟ್ ಪ್ರಿಯರಿಗೆ ಇದು IPL ಹಬ್ಬ. ಸದ್ಯಕ್ಕೀಗ ಭಾರತದಲ್ಲಿ ಐಪಿಎಲ್ ಹಬ್ಬ ಜೋರಾಗಿ ನಡೆಯುತ್ತಿತ್ತು ಎಲ್ಲರೂ ತಮ್ಮ ತಮ್ಮ ತಂಡವನ್ನು ಬೆಂಬಲಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ತಮ್ಮ ನೆಚ್ಚಿನ ತಂಡಗಳ ಪರ ಪ್ರಚಾರ, ವಿರೋಧಿ ತಂಡಗಳ ವಿರುದ್ಧ ಟ್ರೊಲ್ ಹಾವಳಿ ಹರಿದು ಬರುತ್ತಿದೆ.

IPL ತಂಡಗಳಲ್ಲಿ ಅತಿ ಹೆಚ್ಚಿನ ಪ್ರಾಮಾಣಿಕ ಅಭಿಮಾನಿಗಳು ಹೊಂದಿರುವ ತಂಡವಾದ ಕರ್ನಾಟಕದ ತಂಡವಾದ ಬೆಂಗಳೂರು ರಾಯಲ್ ಚಾಲೆಂಜರ್ಸ್, ನಮ್ಮ ಹೆಮ್ಮೆಯ RCB ಬಗ್ಗೆ ಹೇಳುವುದೇ ಬೇಡ. ಪ್ರತಿ ಸಲವೂ ಕೂಡ ಸೋತರೂ ಗೆದ್ದರೂ ಕೊನೆವರೆಗೂ ಆರ್ಸಿಬಿ ಫ್ಯಾನ್ಸ್ ಎಂದು ಹೇಳಿಕೊಳ್ಳುವ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ಜಯಘೋಷ ಭಾರಿಸುತ್ತಾ ಬೆಂಬಲಿಸುತ್ತಾರೆ.

ಕ್ರಿಕೆಟ್ ಸ್ಟೇಡಿಯಂಗಳನ್ನು RCB ಮ್ಯಾಚ್ ಇದ್ದಾಗ ನೋಡುವುದೇ ಒಂದು ಆನಂದ. ತಂಡೋಪ ತಂಡವಾಗಿ ಸ್ನೇಹಿತರೊಟ್ಟಿಗೆ ಬರುವ ಆರ್ಸಿಬಿ ಅಭಿಮಾನಿಗಳು ಭಾವುಕರಾಗುವ ಆ ಕ್ಷಣಗಳು ಆಟಗಾರರ ಮನಸ್ಸನ್ನು ಮುಟ್ಟದೇ ಇರಲಾರದು. ಇದರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ RCB ಬಳಗಕ್ಕೆ ದೊಡ್ಡ ಬೆಂಬಲವೇ ಇದೆ.

ಪ್ರತಿಯೊಬ್ಬರ ವಾಟ್ಸಪ್ ಸ್ಟೇಟಸ್ ಗಳಿಂದ ಹಿಡಿದು, ಇನ್ಸ್ಟಾಗ್ರಾಮ್ ಸ್ಟೋರಿ ತನಕ ಪ್ರಮುಖ ಸಾಮಾಜಿಕ ಜಾಲತಾಣಗಳೆಲ್ಲದರಲ್ಲೂ ಕೂಡ RCB ಯದ್ದೇ ವಿಡಿಯೋಗಳು ಫೋಟೋಗಳು ಪೋಸ್ಟ್ಗಳು. ಎಲ್ಲರೂ ಕೂಡ ವಿಭಿನ್ನ ಬಗೆಯಲ್ಲಿ ತಮ್ಮ ತಂಡವನ್ನು ಬೆಂಬಲಿಸುತ್ತಾ ಆ ಫೋಟೋಗಳನ್ನು ಶೇರ್ ಮಾಡುತ್ತಾರೆ. ಸದ್ಯಕ್ಕಿಗ ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ಅಮೂಲ್ಯ ಅವರ ಅವಳಿ ಮಕ್ಕಳು ಸಹ ಈ ಸಲ ಕಪ್ ನಮ್ದೆ ಎಂದು ಹೇಳುತ್ತಿದ್ದಾರೆ.

ಅವರು ಹೇಳುವ ರೀತಿ ವಿಶೇಷವಾಗಿದ್ದು, ನೆಟ್ಟಿಗರು ನೋಡಿ ಫಿದಾ ಆಗಿದ್ದಾರೆ. ಅಮೂಲ್ಯ ಹಾಗೂ ಜಗದೀಶ್ ದಂಪತಿ ತಮ್ಮ ಅವಳಿ ಮಕ್ಕಳಾದ ಅಥರ್ವ ಮತ್ತು ಅಧವ್ ಆರ್‌ಸಿಬಿ ಜೆರ್ಸಿ ತೊಡಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಈಗ IPL ಸಂಭ್ರಮದ ಕಾಲ ಆಗಿರುವ ಕಾರಣ ಇದೇ ಥೀಮ್ ಅಲ್ಲಿ ಫೋಟೋಶೂಟ್ ಮಾಡಿಸಿ, ಸೋಶಿಯಲ್ ಮೀಡಿಯಾದಲ್ಲಿ ಈ ಸಲ ಕಪ್ ನಮ್ದೆ ಎಂದು ಬರೆದು ಹಂಚಿಕೊಂಡಿದ್ದಾರೆ.

ಮುದ್ದು ಮಕ್ಕಳು ಕೆಂಪು ಬಣ್ಣದ ಜರ್ಸಿ ಜೊತೆ ಕಪ್ ಕೈಲಿ ಹಿಡಿದುಕೊಂಡು, ಕಪ್ ಮುಂದೆ ಕುಳಿತು, ಬ್ಯಾಟ್ ಬಾಲ್ ಹಿಡಿದು ಪೋಸ್ ಕೊಟ್ಟಿರುವುದು ಆರ್‌ಸಿಬಿ ಅಭಿಮಾನಿಗಳಿಗೆ ಬಹಳ ಸಂತಸ ತಂದಿದೆ. ಪುಟ್ಟ RCB ಅಭಿಮಾನಿಗಳ ಅಭಿಮಾನದಿಂದಾದರೂ ಈ ಸಲ ಕಪ್ ನಮಗೆ ಬರಲಿ ಎಂದು ಕೆಲವರು ಕೇಳಿಕೊಳ್ಳುತ್ತಿದ್ದಾರೆ. ಪ್ರತಿ ವಿಶೇಷಕ್ಕೂ ಕೂಡ ಅಮೂಲ್ಯ ದಂಪತಿಗಳು ಈ ರೀತಿ ತಮ್ಮ ಮುದ್ದು ಅವಳಿ ಮಕ್ಕಳ ಫೋಟೋ ಶೂಟ್ ಮಾಡಿಸುತ್ತಾರೆ.

ಸಂಕ್ರಾಂತಿ, ಯುಗಾದಿ, ಹೊಸ ವರ್ಷ, ಕ್ರಿಸ್ಮಸ್, ಮಕ್ಕಳ ಹುಟ್ಟು ಹಬ್ಬ ಹೀಗೆ ಆಯಾ ಮಾಸದ ವಿಶೇಷಕ್ಕೆ ಅನುಗುಣವಾಗಿ ಮಕ್ಕಳಿಬ್ಬರಿಗೂ ಒಂದೇ ತರದ ಬಟ್ಟೆ ತೊಟ್ಟು ಅದಕ್ಕೆ ಒಪ್ಪುವ ಹಾಗೆ ದಂಪತಿಗಳು ಕಾಶ್ಚ್ಯೂಮ್ ತೊಟ್ಟು ಫೋಟೋಶೂಟ್ ಮಾಡಿಸಿ ಅದನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಈ ಬಾರಿ ಮಾಡಿಸಿರುವ RCB ಫೋಟೋಶೂಟ್ ಎಂದಿನಂತೆ ಬಾರಿ ಸಂಖ್ಯೆಯ ಲೈಕ್ಸ್, ಕಮೆಂಟ್ ಮತ್ತು ಶೇರ್ ಪಡೆಯುತ್ತಿದೆ.

 

LEAVE A REPLY

Please enter your comment!
Please enter your name here