Home Entertainment ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಲವ್ ಅಫೇರ್ ಬಗ್ಗೆ ಓಪನ್ ಸ್ಟೇಟ್ಮೆಂಟ್ ಕೊಟ್ಟ ನಟಿ ಪ್ರೇಮ. ಇವರ ಮಾತು ಕೇಳಿ ಶಾ-ಕ್ ಆದ ಫ್ಯಾನ್ಸ್

ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಲವ್ ಅಫೇರ್ ಬಗ್ಗೆ ಓಪನ್ ಸ್ಟೇಟ್ಮೆಂಟ್ ಕೊಟ್ಟ ನಟಿ ಪ್ರೇಮ. ಇವರ ಮಾತು ಕೇಳಿ ಶಾ-ಕ್ ಆದ ಫ್ಯಾನ್ಸ್

0
ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಲವ್ ಅಫೇರ್ ಬಗ್ಗೆ ಓಪನ್ ಸ್ಟೇಟ್ಮೆಂಟ್ ಕೊಟ್ಟ ನಟಿ ಪ್ರೇಮ. ಇವರ ಮಾತು ಕೇಳಿ ಶಾ-ಕ್ ಆದ ಫ್ಯಾನ್ಸ್

 

ಸಹಜ ನಟಿ, ಮೋಹಕ ತಾರೆ ಪ್ರೇಮ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಸಿನಿಮಾ ಲೋಕದಲ್ಲಿ ಗಟ್ಟಿಯಾಗಿ ನಿಂತ ನಟಿ. ಕೊಡಗಿನ ಕುವರಿಯಾದ ಈಕೆ ಸ್ಯಾಂಡಲ್ವುಡ್ ಅಂಗಳದಲ್ಲಿ ಬೆಳೆದು ಇಂದು ಕರ್ನಾಟಕದ ಪ್ರತಿ ಮನೆಗಳಲ್ಲೂ ಮನೆ ಮಗಳಂತ ಪ್ರೀತಿ ಪಡೆದುಕೊಳ್ಳುತ್ತಿದ್ದಾರೆ. ನಟಿ ಪ್ರೇಮ ಎಂದರೆ ಕನ್ನಡಿಗರಿಗೆ ಅದೇನೋ ಒಂದು ರೀತಿಯ ವಿಶೇಷ ಪ್ರೀತಿ, ಈಕೆ ಮುಖದಲ್ಲಿರುವ ಮುಗ್ಧತೆಯೇ ಅದಕ್ಕೆ ಕಾರಣ ಆಗಿದ್ದರೂ ಇರಬಹುದು.

ನಟಿ ಪ್ರೇಮ ಅವರು ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾದಲ್ಲಿ ಕಾಣಿಸಿಕೊಂಡು ಕನ್ನಡ ಚಲನಚಿತ್ರ ರಂಗದಲ್ಲಿ ಅಚ್ಚಳಿದ ಹೆಚ್ಚುಗುರುತು ಮೂಡಿಸಿರುವಂತಹ ಪ್ರತಿಭಾನ್ವಿತ ನಟಿ. ಪ್ರೇಮ ಅವರು ಅವರ ಸಮಕಾಲೀನ ಎಲ್ಲ ಸೂಪರ್ ಸ್ಟಾರ್ ಹೀರೋಗಳ ಜೊತೆ ಕೂಡ ತೆರೆ ಹಂಚಿಕೊಂಡಿದ್ದಾರೆ. ಶಿವಣ್ಣ, ರಮೇಶ್ ಅರವಿಂದ್, ರವಿಚಂದ್ರನ್, ವಿಷ್ಣುವರ್ಧನ್ ಅವರೊಂದಿಗೆ ಅತಿಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇವರು ಇವರೆಲ್ಲರಿಗೂ ಯಶಸ್ವಿ ಜೋಡಿಯಾಗಿದ್ದರು.

ಜೊತೆಗೆ ಇವರ ಮತ್ತು ಉಪೇಂದ್ರ ಅವರ ಕಾಂಬಿನೇಷನ್ ಬಗ್ಗೆ ಹೇಳುವ ಹಾಗೆ ಇಲ್ಲ. ಸವ್ಯಸಾಚಿ ಎನ್ನುವ ಸಿನಿಮಾ ಮೂಲಕ ಶಿವರಾಜಕುಮಾರ್ ಅವರಿಗೆ ಜೋಡಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪ್ರೇಮ ಅವರು ಉಪೇಂದ್ರ ಅವರ ನಿರ್ದೇಶನದ, ಶಿವಣ್ಣ ಅವರ ಅಭಿನಯದ ಓಂ ಸಿನಿಮಾ ಮೂಲಕ ದೊಡ್ಡ ಬ್ರೇಕ್ ಪಡೆದುಕೊಂಡರು. ಇಂದಿಗೂ ಸಹ ಹೆಚ್ಚಿನ ಜನರು ಓಂ ಚಿತ್ರವೇ ಇವರ ಮೊದಲ ಚಿತ್ರ ಎಂದು ಭಾವಿಸಿದ್ದಾರೆ.

ಆ ಸಿನಿಮಾದಿಂದಲೇ ಉಪೇಂದ್ರ ಮತ್ತೆ ಪ್ರೇಮ ಅವರ ಸ್ನೇಹ ಶುರುವಾಗಿತ್ತು ಎಂದು ಹೇಳಬಹುದು. ನಂತರ ಉಪೇಂದ್ರ ಅವರ ನಿರ್ದೇಶನದ ಮತ್ತು ನಟನೆಯ ಅನೇಕ ಸಿನಿಮಾಗಳಲ್ಲಿ ಪ್ರೇಮ ಅವರು ಕಾಣಿಸಿಕೊಂಡರು. ಉಪೇಂದ್ರ ಅವರ ಉಪೇಂದ್ರ ಸಿನಿಮಾದಲ್ಲೂ ಕೂಡ ಉಪೇಂದ್ರ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರ ಕಾಂಬಿನೇಷನ್ನು ಉಪೇಂದ್ರ ಸಿನಿಮಾದ ಏನಿಲ್ಲ ಏನಿಲ್ಲ ಹಾಡು ಕೊನೆವರೆಗೂ ಕನ್ನಡಿಗರ ಫೆವರೇಟ್.

ಹೀಗೆ ಉಪೇಂದ್ರ ನಿರ್ದೇಶನದಲ್ಲಿ ಮತ್ತು ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರೇಮ ಮತ್ತು ಉಪೇಂದ್ರ ಅವರ ಬಗ್ಗೆ ಸಿನಿಮಾ ಇಂಡಸ್ಟ್ರಿಯವರು ಬೇರೆ ಕಥೆ ಕಟ್ಟಿ ಮಾತನಾಡಲು ಶುರು ಮಾಡಿದ್ದರು. ಅವರಿಬ್ಬರ ನಡುವೆ ಸ್ನೇಹಕ್ಕಿಂತ ಮೇಲಾದ ಒಂದು ಸಂಬಂಧ ಇದೆ ಸುದ್ದಿ ಹಬ್ಬಿಸಿದ್ದರು. ಇದು ಕನ್ನಡ ಚಿತ್ರರಂಗ ಮಾತ್ರವಲ್ಲದೆ ಟಾಲಿವುಡ್ ಅಂಗಳದಲ್ಲಿ ಕೂಡ ಮುಟ್ಟಿತ್ತು.

ಎಲ್ಲರೂ ಇದರ ಬಗ್ಗೆ ಮಾತನಾಡಿದ್ದರೂ ಕೂಡ ಎದುರು ನಿಂತು ಪ್ರಶ್ನೆ ಮಾಡಿದವರು ಯಾರು ಇರಲಿಲ್ಲ. ಆದರೂ ಮೊದಲ ಬಾರಿಗೆ ಯೌಟ್ಯೂಬ್ ಚಾನೆಲ್ ಒಂದರಲ್ಲಿ ಉಪೇಂದ್ರ ಅವರ ಪ್ರಶ್ನೆ ಬಂದಾಗ ನಟಿ ಪ್ರೇಮ ಅವರೇ ಇದರ ಬಗ್ಗೆ ಮಾತನಾಡಿ ಆ ವಿಷಯಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಯಾವುದಾದರೂ ಒಂದು ಕಾಂಬಿನೇಷನ್ ಚೆನ್ನಾಗಿ ವರ್ಕ್ ಆದಾಗ ಅಥವಾ ಸತತವಾಗಿ ಅದೇ ನಿರ್ದೇಶಕರ ಅಥವಾ ನಟನ ಜೊತೆ ಕಾಣಿಸಿಕೊಂಡಾಗ ಇಂಥದೊಂದು ಗಾಸಿಪ್ ಹಬ್ಬುವುದು ಸರ್ವೇಸಾಮಾನ್ಯ.

ಅದು ನಮ್ಮ ಇಂಡಸ್ಟ್ರಿಯಲ್ಲಿ ಎಲ್ಲಾ ಇಂಡಸ್ಟ್ರಿಯಲ್ಲಿ ಹೀಗಾಗುತ್ತದೆ. ಆದರೆ ಆ ಸಮಯದಲ್ಲಿ ಆ ರೀತಿ ಎಷ್ಟೇ ಸುದ್ದಿಗಳು ಹಬ್ಬಿದರೂ ಕೂಡ ನಾನಾಗಲಿ ಉಪೇಂದ್ರ ಅವರಾಗಲಿ ಎಂದು ಇದರ ಬಗ್ಗೆ ತಲೆಕೂಡಿಸಿಕೊಳ್ಳಲಿಲ್ಲ, ಮಾತು ಕೂಡ ಆಡಲಿಲ್ಲ. ನಮ್ಮ ವಿರುದ್ಧ ಈ ರೀತಿ ಮಾತನಾಡಿಕೊಂಡವರು ಸಹ ನಮ್ಮ ಎದುರಿಗೆ ಬಂದು ಕೇಳಲಿಲ್ಲ. ಉಪೇಂದ್ರ ಅವರು ಬೆಸ್ಟ್ ಡೈರೆಕ್ಟರ್ ಅವರ ಅಂದುಕೊಂಡಿದ್ದ ಸೀನ್ ಬರುವವರೆಗೂ ಅವರು ಬಿಡದೆ ನಮ್ಮಿಂದ ಅದನ್ನು ತೆಗೆಯುತ್ತಾರೆ. ಅವರಿಂದ ನಾನು ಅಭಿನಯದಲ್ಲಿ ಸಾಕಷ್ಟು ಕಳೆದಿದ್ದೇನೆ ನಟನಾಗಿ ನಿರ್ದೇಶಕನಾಗಿ ಕೂಡ ಉಪೇಂದ್ರ ಬೆಸ್ಟ್ ಅವರ ಸಿನಿಮಾಗಳಲ್ಲಿ ಲಿಂಗ ಬೇಧವಿರುವದಿಲ್ಲ ಅವರ ಸಿನಿಮಾಗಳಲ್ಲಿ ಅಭಿನಯಿಸಿದೆ ಒಂದು ಖುಷಿ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here