Sunday, June 4, 2023
HomeViral Newsಬಾಯ್ ಫ್ರೆಂಡ್ ಇಂದ ಹ-ಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ಕೊಟ್ಟು ದೈಹಿಕವಾಗಿ ಹಿಂ-ಸೆ ಕೊಟ್ಟ ಪೋಟೋಸ್...

ಬಾಯ್ ಫ್ರೆಂಡ್ ಇಂದ ಹ-ಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ಕೊಟ್ಟು ದೈಹಿಕವಾಗಿ ಹಿಂ-ಸೆ ಕೊಟ್ಟ ಪೋಟೋಸ್ ಹಂಚಿಕೊಂಡ ನಟಿ ಅನಿಕಾ.

 

ಸಾಮಾನ್ಯ ಮಹಿಳೆಯರೇ ಆಗಲಿ ಸೆಲೆಬ್ರೆಟಿಗಳೇ ಆಗಲಿ ಕೆಲವರಿಗೆ ಈ ಪುರುಷ ಪ್ರಧಾನ ವ್ಯವಸ್ಥೆಯಿಂದ ಪದೇಪದೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ಆಗುತ್ತವೇ ಇರುತ್ತದೆ. ಕೆಲವರು ನಾಲ್ಕು ಗೋಡೆಗಳ ಮಧ್ಯೆ ಇದನ್ನೆಲ್ಲ ಇದೀನ್ನೆ ಸಹಿಸಿಕೊಂಡು, ಮುಚ್ಚಿಟ್ಟುಕೊಂಡು ನಗುವಿನ ಮುಖವಾಡ ಹಾಕಿ ಮುಂದೆ ಹೋಗುವ ಪ್ರಯತ್ನ ಮಾಡಿದರೆ, ಕೆಲವೊಮ್ಮೆ ತಾಳ್ಮೆ ಕಟ್ಟೆಯೊಡೆದು ಸರಿಯಾಗಿ ಶಿಕ್ಷೆ ಕೊಡಬೇಕು ಎನ್ನುವಷ್ಟು ಆ.ಕ್ರೋ.ಶ ಹುಟ್ಟಿಕೊಳ್ಳುತ್ತದೆ.

ಈಗ ಅಂತಹದೊಂದು ನಿರ್ಧಾರಕ್ಕೆ ಬಂದಿದ್ದಾರೆ ತಮಿಳಿನ ನಟಿ ಅನಿಕ ವಿಕ್ರಮನ್ ಅವರು. ಕೆ ಸಿನಿಮಾ ಮೂಲಕ ಚಿತ್ರರಂಗ ಪಾದಾಪಣೆ ಮಾಡಿದ ಇವರು ಅಲ್ಲಿಯ ಪ್ರಾಮಿಸ್ ಹೀರೋಯಿನ್ ಆಗಿದ್ದಾರೆ. ಆದರೆ ಈಕೆ ಬಾಯ್ ಫ್ರೆಂಡ್ ಕೊಡುತ್ತಿರುವ ಕಿರುಕುಳ ತಾಳಲಾರದೆ ಬಹಳ ಬೇಸತ್ತು ಹೋಗಿ ಈಗ ಬೇಸರದಿಂದ ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಹಂಚಿಕೊಂಡಿದ್ದಾರೆ.

ಸದ್ಯಕ್ಕೀಗ ಅನ್ಯಾಯಕ್ಕೆ ಒಳಗಾದವರಿಗೆ ಎಲ್ಲೂ ನ್ಯಾಯ ಸಿಗಲಿಲ್ಲ ಎಂದರೆ ಕಡೆಗೆ ಸೋಶಿಯಲ್ ಮೀಡಿಯಾ ಅಸ್ತ್ರ ಎನ್ನಬಹುದು. ಯಾಕೆಂದರೆ ಇಡೀ ಪ್ರಪಂಚಕ್ಕೆ ಒಬ್ಬ ಮನುಷ್ಯನ ಕೆಟ್ಟ ಮುಖವನ್ನು ಸಾಕ್ಷಿ ಸಮೇತ ಪ್ರದರ್ಶನ ಮಾಡುವುದಕ್ಕೆ ಇದಕ್ಕಿಂತ ಉತ್ತಮ ವೇದಿಕೆ ಮತ್ತೊಂದಿಲ್ಲ. ಇದೇ ಕಾರಣಕ್ಕೆ ಅನಿಕಾ ತನಗಾದ ಶೋಷಣೆ ಸಹಿಸಲಾಗದೆ, ಒಮ್ಮೆಲೇ ತಿರುಗಿಬಿದ್ದು ತನಗಾದ ನೋವನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅನಿಕ ವಿಕ್ರಮನ್ ಅವರು ಕಳೆದ ಕೆಲವು ವರ್ಷಗಳಿಂದ ಅಂಕಿತ್ ಪಿಳ್ಳೈ ಎನ್ನುವವರನ್ನು ಬಹಳ ಪ್ರೀತಿಸುತ್ತಿದ್ದಾರಂತೆ. ಮೊದಮೊದಲಿಗೆ ಎಲ್ಲವೂ ಚೆನ್ನಾಗಿದ್ದ ಇವರ ಸಂಬಂಧದಲ್ಲಿ ಇತ್ತೀಚೆಗೆ ಯಾವುದು ಸರಿ ಇಲ್ಲ ಎನ್ನಬಹುದು. ಅದೀಗ ಪ್ರತಿದಿನ ನಟಿ ಮೇಲೆ ದೈಹಿಕವಾಗಿ ಹ.ಲ್ಲೆ ಆಗುವಷ್ಟು ಮಿತಿಮೀರಿದ ಮಟ್ಟಕ್ಕೆ ಬೆಳೆದು ನಿಂತಿದೆ.

ಈ ಹಿಂದೆ ಕೂಡ ಇದೇ ರೀತಿ ಹಲ್ಲೆ ಆಗುತ್ತಿದ್ದಾಗ ನಟಿ ಆ ಬಗ್ಗೆ ಪೊಲೀಸ್ ಗೆ ದೂರು ಕೊಡುವ ಪ್ರಯತ್ನ ಪಟ್ಟರೂ ಈತ ತನ್ನ ಚಾಲಾಕಿತನದಿಂದ ಎಸ್ಕೇಪ್ ಆಗುತ್ತಿದ್ದ. ಮೊದಲಿಗೆ ಚೆನ್ನೈ ಅಲ್ಲಿ ಈಕೆ ಮೇಲೆ ಹ.ಲ್ಲೆ ಆಗಿ ಪೊಲೀಸ್ ದೂರ ಕೊಡುವ ಪ್ರಯತ್ನ ಮಾಡಿದಾಗ ಆತ ಆಕೆಯ ಕಾಲಿಗೆ ಬಿದ್ದು ಕಣ್ಣೀರ ನಾಟಕ ಆಡಿ ಎಸ್ಕೇಪ್ ಆಗಿದ್ದ. ಮತ್ತೊಮ್ಮೆ ಬೆಂಗಳೂರಿನಲ್ಲಿದ್ದಾಗ ಕೂಡ ಇದೇ ರೀತಿ ವಿಪರೀತವಾಗಿ ಆಕೆ ಮೇಲೆ ಹಲ್ಲೆ ಮಾಡಿದ್ದ, ಆಗ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟರು ಪೊಲೀಸರಿಗೆ ಹಣ ಕೊಟ್ಟು ತಪ್ಪಿಸಿಕೊಂಡಿದ್ದ ಎಂದು ಈಗ ಸೋಶಿಯಲ್ ಮೀಡಿಯಾದಲ್ಲಿ ದೂರಿದ್ದಾರೆ ನಟಿ.

ಈ ಬಾರಿ ಅವನಿಗೆ ಬುದ್ಧಿ ಕಲಿಸಲು ಅವನು ಹ.ಲ್ಲೆ ಮಾಡಿರುವುದರಿಂದ ಈಕೆಗಾಗಿರುವ ಗಾಯವನ್ನೆಲ್ಲ ಫೋಟೋ ತೆಗೆದು ಅದರ ಸಮೇತವಾಗಿ ಹಂಚಿಕೊಂಡಿದ್ದಾರೆ. ಈಕೆಯ ಕೆನ್ನೆ ತೋಳು ಎದೆ ಭಾಗ ಇಲ್ಲೆಲ್ಲ ಹೊಡೆತ ಬಿದ್ದಿರುವುದು ಕಾಣುತ್ತಿದೆ ಆತ ಬಹಳ ಆತ್ಮವಿಶ್ವದಿಂದ ಹೊಡೆಯುತ್ತಾನೆ, ಆತನನ್ನು ಪೊಲೀಸರು ಏನು ಮಾಡುವುದಿಲ್ಲ ಎನ್ನುವ ಧೈರ್ಯ ಅವನಿಗೆ, ಇಷ್ಟು ವಿಷಕಾರಿ ಮನಸ್ಥಿತಿಯನ್ನು ಎಂದು ನನಗೆ ತಿಳಿದಿರಲಿಲ್ಲ.

ನಾನು ಶೂಟಿಂಗ್ ಹೋಗೋದು ಅವನಿಗೆ ಇಷ್ಟವಿಲ್ಲದೆ ನನ್ನ ಮೊಬೈಲ್ ಕೂಡ ಹೊಡೆದು ಹಾಕಿದ್ದಾನೆ. ನನಗೆ ಗೊತ್ತಿಲ್ಲದೆ ನನ್ನ ವಾಟ್ಸಪ್ ಅನ್ನು ಅವನ ಲ್ಯಾಪ್ಟಾಪ್ ಗೆ ಕನೆಕ್ಟ್ ಮಾಡಿಕೊಂಡು ನೋಡುತ್ತಿರುತ್ತಾನೆ. ಅವನಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಹಿಂಸೆ ಆಗುತ್ತಿದೆ ನಾನೇ ಅವನನ್ನು ಬಿಟ್ಟು ಬಿಡುವ ನಿರ್ಧಾರಕ್ಕೆ ಬಂದಿದ್ದರೂ ಅವನು ಬಿಡುತ್ತಿಲ್ಲ ಜೊತೆಗೆ ಇತ್ತೀಚೆಗೆ ನನ್ನ ಕುಟುಂಬಕ್ಕೆ ಹಾಗೂ ನನಗೆ ಕೊಲೆ ಬೆದರಿಕೆ ಕೂಡ ಹಾಕುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.