ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸುರೇಶ್ ಅಗರ್ವಾಲ್ ಎಂಬ ವ್ಯಕ್ತಿ ತನ್ನ 60 ವರ್ಷ ವಯಸ್ಸಾಗಿದ್ದ ತಾಯಿಯ ಜೊತೆ ವಾಸಿಸುತ್ತಿದ್ದ. ಸುರೇಶ್ ತಂದೆ ಕೆಲವು ವರ್ಷಗಳ ಹಿಂದೆ ಸ.ತ್ತು ಹೋಗಿದ್ದರಿಂದ ತಾಯಿ ತುಂಬಾ ಕಷ್ಟಪಟ್ಟು ಅವನನ್ನು ಸಾಕಿದ್ದರು. ಸುರೇಶ್ ಮದುವೆ ಆಗಲು ಪ್ರಯತ್ನಿಸುತ್ತಿದ್ದರೂ ಸಾಕಷ್ಟು ಅಡಚಣೆಗಳು ಎದುರಾದವು. ನಂತರ ಬಹಳ ವರ್ಷಗಳ ಮೇಲೆ ಸುರೇಶ್ಗೆ ಒಂದು ಹುಡುಗಿ ಜೊತೆ ಅದ್ದೂರಿಯಾಗಿ ಮದುವೆ ಆಗುತ್ತದೆ.
ಮದುವೆಗೂ ಮುನ್ನ ಸುರೇಶ್ ಪತ್ನಿ ದಿವ್ಯ ತುಂಬಾ ಡೀಸೆಂಟ್, ಒಳ್ಳೆಯ ಕುಟುಂಬದ ಹುಡುಗಿ ಎಂದು ಕಾಣುತ್ತಿದ್ದಳು ಆದರೆ ಮದುವೆಯಾದ ಕೆಲ ದಿನಗಳ ನಂತರವೇ ಅವಳು ತನ್ನ ಮುಖವಾಡವನ್ನು ಪ್ರದರ್ಶನ ಮಾಡಿದಳು. ದಿವ್ಯ ತನ್ನ ಅತ್ತೆಗೆ ಗೌರವ ಕೊಡದೆ ಪ್ರತಿ ದಿನ ಜಗಳ ಆಡುತ್ತಿದ್ದಳು ಸುರೇಶ್ ಜೊತೆ ಬೇರೆ ಮನೆ ಮಾಡಿ ಪತಿ ಪತ್ನಿ ಇಬ್ಬರೆ ಸಂಸಾರ ಮಾಡಬೇಕು ಎಂಬುದು ದಿವ್ಯಳ ಆಸೆಯಾಗಿತ್ತು. ಅದಕ್ಕಾಗಿ ಮನೆ ಬಿಟ್ಟು ಹೋಗಲು ಅನೇಕ ಷಡ್ಯಾಂತರಗಳನ್ನು ಅತ್ತೆಯ ವಿರುದ್ದ ಮಾಡುತ್ತಾಳೆ.
ಉದಾಹರಣೆಗೆ ನನ್ನ ಗಂಡನ ಬೇಬಿನಿಂದ ದುಡ್ಡನ್ನು ಕದಿಯುತ್ತಿದ್ದೀಯ ನೀನು ಕಳ್ಳಿ ಎಂದು ಸುಮ್ಮನೆ ಅತ್ತೆಯ ಮೇಲೆ ಆರೋಪ ಮಾಡುತ್ತಿದ್ದಳು. ಅಲ್ಲದೆ ಮೆಟ್ಟಿಲುಗಳ ಮೇಲೆ ಎಣ್ಣೆ ಚೆಲ್ಲಿ ಅತ್ತೆಯನ್ನು ಬೀಳಿಸಲು ಪ್ರಯತ್ನಿಸುತ್ತಿದ್ದಳು. ಸುರೇಶ್ ತನ್ನ ಹೆಂಡತಿಯ ಬಣ್ಣ ಬಣ್ಣದ ಮಾತುಗಳನ್ನು ನಂಬಿ ತಾಯಿ ಮೇಲೆ ಕೋಪ ಮಾಡಿಕೊಂಡು ಪ್ರತಿನಿತ್ಯ ತಾಯಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದ. ಹೀಗೆ ಮಗ ಮತ್ತು ಸೊಸೆ ನೀಡುತ್ತಿದ್ದ ಹಿಂಸೆಯಿಂದ ತಾಯಿಯ ಮಾನಸಿಕ ಸ್ಥಿತಿ ಹದಗೆಡುತ್ತಿತ್ತು. ಹುಚ್ಚಿಯಂತೆ ಆಡುವುದಕ್ಕೂ ಕೂಡ ಶುರು ಮಾಡಿಕೊಂಡರು
ಇದನ್ನೇ ಬಂಡವಾಳವಾಗಿ ತೆಗೆದುಕೊಂಡ ದಿವ್ಯ ರೀ ನಿಮ್ಮ ತಾಯಿ ಹುಚ್ಚಿಯ ರೀತಿ ಆಡುತ್ತಿದ್ದಾರೆ ನಿಮ್ಮ ತಾಯಿಗೆ ತಲೆ ಕೆಟ್ಟಿದೆ ಅನ್ನಿಸುತ್ತಿದೆ. ಹಾಗಾಗಿ ಕೆಲವು ದಿನಗಳ ಕಾಲ ಹುಚ್ಚಾಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆಯನ್ನು ಕೊಡಿಸಿ ಎಂದು ಗಂಡನಿಗೆ ಹೇಳಿದಳು. ಹೆಂಡತಿಯ ಮಾತುಗಳನ್ನು ಕೇಳಿ ತನ್ನ ತಾಯಿಯ ಮೇಲಿನ ಪ್ರೀತಿ ಕಳೆದುಕೊಂಡಿದ್ದ ಸುರೇಶ್ ತಾಯಿ ಬಗ್ಗೆ ಸ್ವಲ್ಪ ಕೂಡ ಯೋಚನೆ ಮಾಡಿದೆ ಹುಚ್ಚಾಸ್ಪತ್ರೆಗೆ ಸೇರಿಸಿದನು. ಇದರಿಂದ ದಿವ್ಯಳ ಆಸೆಯಂತೆ ಬೇರೆ ಇರಬೇಕು ಎಂಬುದು ನೆರವೇರಿತು.
ತಾಯಿಯನ್ನು ಹಿಂಸಿಸಿ ನೋಯಿಸಿದ ಪರಿಣಾಮ ಸುರೇಶ್ ಜೀವನದಲ್ಲಿ ಸಮಸ್ಯೆಗಳು ಎದುರಾದವು. ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾಗಿ ಸುರೇಶ್ ಬಹಳ ಸಾಲದಲ್ಲಿ ಸಿಲುಕಿ ಹಾಕಿಕೊಂಡ. ಅವನ ಬಳಿ ಇದ್ದ ಕಾರು ಬೈಕ್ ಮನೆ ಎಲ್ಲವನ್ನು ಮಾರಬೇಕಾಯಿತು. ಬಾಡಿಗೆ ಮನೆಯಲ್ಲಿ ಇರಬೇಕಾದ ಸ್ಥಿತಿಗೆ ಬಂದ ಸುರೇಶ್ ಎರಡು ಹೊತ್ತು ಊಟ ತಿನ್ನುವುದಕ್ಕೂ ಕೂಡ ಕಷ್ಟ ಪಡಬೇಕಾಯಿತು. ಇದರಿಂದ ದಿವ್ಯ ಕೂಡ ಸುರೇಶನ್ನು ಬಿಟ್ಟು ಹೋದಳು.
ಈ ಸಮಯದಲ್ಲಿ ಏಕಾಂಗಿಯಾಗಿದ್ದ ಸುರೇಶ್ ಗೆ ತಾಯಿ ನೆನಪಾಗುತ್ತಾರೆ. ಹೆಂಡತಿ ಮಾತು ಕೇಳಿ ತಾಯಿಗೆ ಎಂತ ಮೋಸ ಮಾಡಿಬಿಟ್ಟೆ ಎಂದು ಪಶ್ಚಾತ್ತಾಪ ಪಟ್ಟು ತಕ್ಷಣ ತಾಯಿಯನ್ನು ನೋಡಲು ಹುಚ್ಚಾಸ್ಪತ್ರೆಗೆ ಹೋದನು. ಅಲ್ಲಿ ಹೋಗಿ ನೋಡಿದರೆ ತಾಯಿ ಇರಲಿಲ್ಲ ಬಳಿಕ ಆಸ್ಪತ್ರೆಯವರು ತನ್ನ ತಾಯಿಯನ್ನು ಯಾರೋ ಒಬ್ಬರು ದತ್ತುಗೆ ಪಡೆದುಕೊಂಡು ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನುವ ವಿಷಯವನ್ನು ತಿಳಿಸಿದರು.
ನಂತರ ಸುರೇಶ್ ಅವರ ವಿಳಾಸ ತಿಳಿದುಕೊಂಡು ಅವರ ಮನೆಗೆ ಹೋಗಿ ನೋಡಿದಾಗ ಆ ವ್ಯಕ್ತಿ ಸುರೇಶ್ ತಾಯಿಗೆ ವಿಜೃಂಭಣೆಯ ಜೀವನ ಕೊಟ್ಟಿದ್ದನ್ನು ನೋಡಿದ ಸುರೇಶ್ ಕಣ್ಣಲ್ಲಿ ನೀರು ಬಂತು ಮತ್ತು ಆತ ಮಾಡಿದ ತಪ್ಪು ಕೂಡ ಅರಿವಾಯಿತು. ಸುರೇಶ್ ತನ್ನ ತಾಯಿಯ ಬಳಿ ಹೋಗಿ ಕ್ಷಮೆ ಕೇಳಿ ತಾಯಿಯನ್ನು ಮನೆಗೆ ಬಾ ಎಂದು ಹೇಳಿದಾಗ ಆಕೆ ಒಪ್ಪಲಿಲ್ಲ ಆದರೆ ಮಗ ಮಾಡಿರುವ ತಪ್ಪನ್ನು ಕ್ಷಮಿಸಿದಳು. ಇದಾದ ಮೇಲೆ ಸುರೇಶ್ ಮತ್ತೆ ತನ್ನ ಬಾಡಿಗೆ ಮನೆಗೆ ಹೋಗಿ ಒಬ್ಬಂಟಿ ಜೀವನವನ್ನು ಮಾಡಿದನು.