ಕಾರ್ಮಿಕ ಕಾರ್ಡ್ ಇದ್ದವರು 20,000 ರೂಪಾಯಿಗಳನ್ನು ಉಚಿತವಾಗಿ ಪಡೆಯಲು ತಪ್ಪದೇ ಈ ಕೆಲಸವನ್ನು ಮಾಡಬೇಕು.

ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಕಾರ್ಮಿಕರ ಕಲ್ಯಾಣ ಇಲಾಖೆಯ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಿದೆ. ಕಾರ್ಮಿಕರ ಅಭಿವೃದ್ಧಿಯ ಹೊಣೆ ಹೊತ್ತಿದೆ. ಹೊಸ ಹೊಸ ಯೋಜನೆಗಳನ್ನು ಕಾರ್ಮಿಕರ ಎದುರಲ್ಲಿ ಬಿತ್ತರಿಸುವ ಮೂಲಕ ಅವರಿಗೆ ಹಣಕಾಸಿನ ಸಹಾಯ ಮಾಡುತ್ತಿದೆ. ಕೆಲವೊಂದು ಸ್ಕೀಮ್ಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಕೂಡಲೇ ಅವು ಯಾವವು ಎಂಬುದನ್ನು ಈ ಬರಹವನ್ನು ಓದುವುದರ ಮುಖಾಂತರ ನೀವು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.

ಆರೋಗ್ಯದ ಸಮಸ್ಯೆಯು ಯಾರನ್ನು ಬಿಡುತ್ತಿಲ್ಲ. ದಿನಗೂಲಿ ಮಾಡಿ ಜೀವನ ನಡೆಸುವವರು, ಗ್ರಾಮೀಣ ಭಾಗದ ಜನರು, ರೈತರು ಈ ದುಬಾರಿ ದುನಿಯಾದಲ್ಲಿ ಏರುಪೇರಾದ ಆರೋಗ್ಯವನ್ನು ಹದ ಸ್ಥಿತಿಗೆ ತರಲು ಸೆಣಸಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಕಾರ್ಮಿಕರ ಕಲ್ಯಾಣ ಇಲಾಖೆಯು ಕಾರ್ಮಿಕರ ಆರೋಗ್ಯದ ಹಿತ ದೃಷ್ಟಿಯಿಂದ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಸಹಾಯಧನವನ್ನು ನೀಡುತ್ತಿದೆ. ದೊಡ್ಡ ದೊಡ್ಡ ಕಾಯಿಲೆಗಳ ವೆಚ್ಚವನ್ನು ಭರಿಸಲು ಬಡ ಕಾರ್ಮಿಕರಿಗೆ ಹೆಗಲಾಗಿ ನಿಂತಿದೆ.

ನೊಂದಾಯಿತ ಕಾರ್ಮಿಕರಿಗಾಗಿ ಎರಡು ಸ್ಕೀಮ್ ಗಳಲ್ಲಿ ಅರ್ಜಿಯನ್ನು ಆಹ್ವಾನಿಸಿದೆ:-

• ಕಾರ್ಮಿಕರ ಚಿಕಿತ್ಸಾ ಭಾಗ್ಯ ಸ್ಕೀಮ್ ನ ಅಡಿಯಲ್ಲಿ ಹೃದಯ, ಕಿಡ್ನಿ, ಕಣ್ಣುಗಳು ಸೇರಿದಂತೆ ದೇಹದ ಹಲವು ಭಾಗಗಳ ಶಸ್ತ್ರಚಿಕಿತ್ಸೆಗಾಗಿ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಎರಡು ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ನೀಡುತ್ತಿದೆ.
• ಕಾರ್ಮಿಕರ ಆರೋಗ್ಯ ಭಾಗ್ಯ ಸ್ಕೀಮ್ ನ ಅಡಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಹಾಗೂ ಅವರನ್ನು ಅವಲಂಬಿಸಿ ಜೀವನ ಸಾಗಿಸುತ್ತಿರುವವರಿಗೆ ಅಂದರೆ ಕುಟುಂಬಸ್ಥರಿಗೆ 300 ರೂಪಾಯಿಗಳಿಂದ ಗರಿಷ್ಠ 20 ಸಾವಿರ ರೂಪಾಯಿಗಳವರೆಗೆ ಸಹಾಯಧನವನ್ನು ನೀಡುತ್ತಿದೆ.

ಸಮಸ್ಯೆಯಲ್ಲಿರುವ ಕಾರ್ಮಿಕರು ಮೇಲಿನ ಎರಡು ಸ್ಕೀಮ್ಗಳಿಂದ ಪ್ರಯೋಜನಗಳನ್ನು ಪಡೆಯಬೇಕೆಂದರೆ ಕೆಲವು ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕಾರ್ಮಿಕರು ಹೊಂದಿರಬೇಕಾದ ದಾಖಲೆಗಳು/ ಅರ್ಹತೆ :

• ಕಾರ್ಮಿಕರ ಕಲ್ಯಾಣ ಇಲಾಖೆಯಲ್ಲಿ ಕಾರ್ಮಿಕರು ನೋಂದಾಯಿತರಾಗಿರಬೇಕು ಮತ್ತು ಅವರ ನೋಂದಣಿ ಚಾಲ್ತಿಯಲ್ಲಿರಬೇಕು.
• ಮಂಡಳಿಯಲ್ಲಿ ನೀಡಿದ ನೋಂದಣಿ ಅಥವಾ ಕಾರ್ಮಿಕರ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು.
• ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಯಲ್ಲಿ ಕನಿಷ್ಠ ಎರಡು ದಿನಗಳ ವರೆಗೆ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿಯೇ ಉಳಿದ ದಾಖಲೆಗಳನ್ನು ಹೊಂದಿರಬೇಕು.
• ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ನ ಮುಖಪುಟವನ್ನು ಹೊಂದಿದ್ದು ಲಗತ್ತಿಸಬೇಕು.
• ಉದ್ಯೋಗ ಅಥವಾ ಸ್ವಯಂ ದೃಢೀಕರಣ ಪತ್ರವನ್ನು ಹೊಂದಿರಬೇಕು.
• ಆಸ್ಪತ್ರೆಗೆ ದಾಖಲಾದ ದಿನಾಂಕ ಮತ್ತು ಬಿಡುಗಡೆಯಾದ ದಿನಾಂಕಗಳ ದಾಖಲೆಗಳು ಇರಬೇಕು.
• ಖರ್ಚು ವೆಚ್ಚಗಳೊಂದಿಗೆ ಚಿಕಿತ್ಸಾ ವಿವರಗಳನ್ನು ದಾಖಲೆ ಪತ್ರಗಳೊಂದಿಗೆ ಅವಶ್ಯವಾಗಿ ನೀಡಬೇಕು.
• ಕಾರ್ಮಿಕರ ಚಿಕಿತ್ಸ ಭಾಗ್ಯ ಅಡಿಯಲ್ಲಿ ಹಣವನ್ನು ಪಡೆಯಲು ನಮೂನೆ 22ಎ ನಲ್ಲಿ ವೈದ್ಯರ ಸಹಾಯದಿಂದ ಆಸ್ಪತ್ರೆಯಿಂದ ಭರ್ತಿ ಮಾಡಿದ ಅರ್ಜಿಯನ್ನು ಹೊಂದಿರಬೇಕು.

ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಹೊಂದಿರುವವರು ಕಾರ್ಮಿಕರ ಚಿಕಿತ್ಸಾ ಭಾಗ್ಯ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಬೇಕೆಂದರೆ ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ ಆರು ತಿಂಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಕಾರ್ಮಿಕರ ಆರೋಗ್ಯ ಭಾಗ್ಯ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಬೇಕೆಂದರೆ ಆಸ್ಪತ್ರೆಗೆ ದಾಖಲಾದ ದಿನಾಂಕದಿಂದ ಆರು ತಿಂಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

ಮೇಲೆ ತಿಳಿಸಿದ ಎಲ್ಲಾ ದಾಖಲಾತಿಗಳನ್ನು ಹೊಂದಿರುವ ಅರ್ಹ ಕಾರ್ಮಿಕರು, ನಿಗದಿಪಡಿಸಿದ ಸಮಯದ ಒಳಗೆ ಅರ್ಜಿಯನ್ನು ಭರ್ತಿ ಮಾಡಿ ಕೇಳಿದ ದಾಖಲಾತಿಗಳನ್ನು ಲಗತ್ತಿಸಿದರೆ ಕಾರ್ಮಿಕರ ಕಲ್ಯಾಣ ಇಲಾಖೆಯಿಂದ ಆರೋಗ್ಯದ ಚೇತರಿಕೆಗಾಗಿ ಹಣ ಸಹಾಯವನ್ನು ಪಡೆಯಬಹುದು.

Leave a Comment