ಪತಿಯಿಂದ ದೂರವಾಗಿದ್ದಾರ ಗಣೇಶ್ ಜೊತೆ ನಟಿಸಿದ್ದ ಈ ಮಲಯಾಳಿ ನಟಿ.? ಶೈಲೂ ಸಿನಿಮಾದ ಮೂಲಕ ಕನ್ನಡಕ್ಕೆ ಎಂಟ್ರಿ ಆಗಿ 2008ರಿಂದ ಶೈಲೂ ಎಂದೇ ಅನ್ವರ್ಥ ಹೆಸರಿನಿಂದ ಕರೆಸಿಕೊಳ್ಳುತ್ತಿರುವ ಭಾಮ ಅವರು ಮೂಲತಃ ಮಲಯಾಳಂ ನಟಿ. ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಅಲ್ಲಿದ್ದ ಈ ನಟಿ ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ಶ್ರೀನಗರ ಕಿಟ್ಟಿ, ಮಿತ್ರ ಇನ್ನು ಮುಂತಾದವರಿಗೆ ನಾಯಕನಟಿಯಾಗಿ ಅಭಿನಯಿಸಿದ್ದಾರೆ.
ಗೋಲ್ಡನ್ ಸ್ಟಾರ್ ಜೊತೆ ಇವರು ನಟಿಸಿದ್ದ ಶೈಲೂ ಸಿನಿಮಾ ಬಹಳ ಹಿಟ್ ಆಗಿತ್ತು ಆನಂತರ ಅವರು ಆಟೋ ರಾಜ ಸಿನಿಮಾದಲ್ಲೂ ಕೂಡ ಗಣೇಶ್ ಅವರಿಗೆ ಜೋಡಿ ಆಗಿದ್ದರು. ಮುದ್ದುಮುಖದ ಈ ಚೆಲುವೆ 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಅರುಣ್ ಎನ್ನುವ ಉದ್ಯಮಿಯನ್ನು ಕೈಹಿಡಿದ ಭಾಮ ಅವರು ನಂತರ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿದ್ದರು.
ಆ ಬಗ್ಗೆ ಎಲ್ಲೂ ಕೂಡ ಅಧಿಕೃತವಾಗಿ ಘೋಷಣೆ ಕೊಟ್ಟು ದೂರ ಆಗದೆ ಇದ್ದರೂ ಆಕೆ ಮದುವೆ ಆದಾಗಿನಿಂದ ಯಾವ ಸಿನಿಮಾದಲ್ಲಿ ಕೂಡ ನಟನೆ ಮಾಡಿಲ್ಲ. ಇದರಿಂದ ಅವರು ಕೆರಿಯರ್ ಕೊನೆಗೊಳಿಸಿ ಪರ್ಸನಲ್ ಲೈಫ್ ಗೆ ಸ್ಪೇಸ್ ಕೊಡುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಎರಡು ವರ್ಷದ ಮುದ್ದಾದ ಹೆಣ್ಣು ಮಗಳನ್ನು ಕೂಡ ಪಡೆದಿರುವ ಭಾಮ ಅವರು ಪತಿಯ ಜೊತೆ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು.
ಆದರೆ ಇತ್ತೀಚೆಗೆ ಅವರು ನಡೆದುಕೊಂಡಿರುವ ರೀತಿಯಿಂದ ಅವರ ದಾಂಪತ್ಯದಲ್ಲಿ ಎಲ್ಲಾ ಸರಿ ಇದೆಯಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಅದೇನೆಂದರೆ ಭಾಮಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿ ಇದ್ದರು ಸದಾ ಪತಿಯ ಜೊತೆಗೆ ಔಟಿಂಗ್ ಹೋಗುತ್ತಿದ್ದ ಫೋಟೋಗಳು, ಪಿಕ್ನಿಕ್ ವೆಕೇಷನ್ ಗಳ ವಿಡಿಯೋಗಳು ಹಾಗೂ ಮಗಳ ಜೊತೆಗಿನ ಫೋಟೋಗಳು ಮುಂತಾದವುಗಳನ್ನೆಲ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದರು.
ಆದರೆ ಇತ್ತೀಚೆಗೆ ಆಕೆ ಯಾವುದೇ ಫೋಟೋವನ್ನು ಕೂಡ ಅಪ್ಲೋಡ್ ಮಾಡಿಲ್ಲ. ಜೊತೆಗೆ ಮೊದಲ ವರ್ಷದಲ್ಲಿ ಮಗಳ ಹುಟ್ಟು ಹಬ್ಬವನ್ನು ಸಕ್ಕತ್ ಗ್ರಾಂಡ್ ಆಗಿ ಆಚರಿಸಿ ಆ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದ ಭಾಮ ಅವರು ಈ ವರ್ಷ ಮಗಳ ಹುಟ್ಟು ಹಬ್ಬವನ್ನು ಕೂಡ ಬಹಳ ಸರಳವಾಗಿ ಆಚರಿಸಿದ ರೀತಿ ಕಾಣುತ್ತದೆ. ಒಂದೇ ಒಂದು ಫೋಟೋ ಕೂಡ ಮಗಳ ಎರಡನೇ ವರ್ಷದ ಹುಟ್ಟು ಹಬ್ಬದ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಲ್ಲ.
ಅಲ್ಲದೆ ಹಿಂದೆ ತನ್ನ ಪತಿ ಜೊತೆಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದ ಭಾಮ ಅವರು ಒಂದೊಂದಾಗಿ ಎಲ್ಲವನ್ನು ಕೂಡ ಡಿಲೀಟ್ ಮಾಡಿದ್ದಾರೆ. ಇದರಿಂದ ವೈವಾಹಿಕ ಜೀವನದಲ್ಲಿ ಏರುಪೇರು ಆಗಿದೆ ಅನ್ನುವ ಅನುಮಾನ ನೆಟ್ಟಿಗರಲ್ಲಿ ಹುಟ್ಟುಕೊಂಡಿದೆ. ಆದರೆ ಸ್ವತಃ ಭಾಮ ಅವರೇ ಹೇಳಿಕೆ ಕೊಡುವ ತನಕ ಇದನ್ನು ಕೇವಲ ಊಹಾಪೋಹ ಎಂದು ಅಂದಾಜಿಸಬಹುದು.
ಅಷ್ಟೇ ಆಕೆ ಯಾವ ಕಾರಣಕ್ಕಾಗಿ ಆ ರೀತಿ ಮಾಡಿದ್ದಾರೆ ಏನೋ ಗೊತ್ತಿಲ್ಲ. ಆದರೆ ನಟಿಯ ದಾಂಪತ್ಯ ಬದುಕು ಇಷ್ಟು ಬೇಗ ಮುಗಿಯುವುದು ಬೇಡ ಎಂದೇ ಅಭಿಮಾನಿಗಳಾಗಿ ನಾವೆಲ್ಲ ಬಯಸುವುದು. ಆದಷ್ಟು ಬೇಗ ತಮ್ಮ ನಡುವೆ ಏನಾದರೂ ಮನಸ್ತಾಪ ಇದ್ದರೆ ಸರಿ ಮಾಡಿಕೊಂಡು ಖುಷಿ ಖುಷಿಯಿಂದ ಮುದ್ದು ಮಗಳ ಹಾಗೂ ಪತಿಯ ಜೊತೆ ಭಾಮ ಬದುಕುವಂತಾಗಲಿ ಎಂದು ಹರಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.
https://www.instagram.com/p/CmjIncTPGqs/?igshid=YmMyMTA2M2Y=