Sunday, June 4, 2023
HomeEntertainmentತಿಂಗಳಿಗೆ ಮೇಕಪ್ ಖರ್ಚಿಗೆ 1 ಲಕ್ಷ ಬೇಕು. ಹಾಗಾದ್ರೆ ಎಷ್ಟೊತ್ತು ಮೇಕಪ್ ಮಾಡ್ಕೋತಿರ, ತಿಂಗಳಿಗೆ ಎಷ್ಟು...

ತಿಂಗಳಿಗೆ ಮೇಕಪ್ ಖರ್ಚಿಗೆ 1 ಲಕ್ಷ ಬೇಕು. ಹಾಗಾದ್ರೆ ಎಷ್ಟೊತ್ತು ಮೇಕಪ್ ಮಾಡ್ಕೋತಿರ, ತಿಂಗಳಿಗೆ ಎಷ್ಟು ದುಡಿತೀರ ಅಂತ ಕೇಳಿದ್ಕೆ ನಟಿ ಧನುಶ್ರೀ ಕೊಟ್ಟ ಉತ್ತರವೇನು ಗೊತ್ತ.?

 

ಧನುಶ್ರೀ ಅವರು ಟಿಕ್ ಟಾಕ್ ಇಂದ ಬೆಳೆದ ಪ್ರತಿಭೆ. ಯಾಕೆಂದರೆ ಇವರು ಐಟಿ ಕಂಪನಿಯ ಉದ್ಯೋಗಿ ಆಗಿದ್ದ ಇವರು ಆ ಕೆಲಸ ತೊರೆದು ಫುಲ್ ಟೈಮ್ ಸೋಶಿಯಲ್ ಇನ್ಫ್ಲುಯೆನ್ಸ್ ಆಗಿ ತೊಡಗಿಸಿಕೊಂಡಿದ್ದು ಟಿಕ್ ಟಾಕ್ ಮೂಲಕ. ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಲೇ ಫೇಮಸ್ ಆಗಿ ಇಂದು ಸಿನಿಮಾ ಮಾಡುವವರೆಗೂ ತಲುಪಿರುವ ಧನುಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್.

ಇದೇ ಕಾರಣದಿಂದ ಬಿಗ್ ಬಾಸ್ ಅವಕಾಶ ಗಿಟ್ಟಿಸಿಕೊಂಡಿದ್ದ ಇವರು ಬಿಗ್ ಬಾಸ್ ಸೀಸನ್ ಎಂಟರ ಕಂಟೆಸ್ಟೆಂಟ್ ಆಗಿದ್ದರು. ಆದರೆ ಮೊದಲನೇ ವಾರಕ್ಕೆ ಮನೆಯಿಂದ ಔಟ್ ಆಗಿ ಬಿಟ್ಟರು. ಬಿಗ್ ಬಾಸ್ ಇಂದ ಬಂದ ಮೇಲೆ ಅವರಿಗೆ ಸಿನಿಮಾಗಳಿಂದ ಆಫರ್ ಬರೆದಿದ್ದು ಅವರ ಮೊದಲ ಸಿನಿಮಾ ಆದ ಒಂದೊಳ್ಳೆ ಲವ್ ಸ್ಟೋರಿ ರಿಲೀಸ್ ಹಂತಕ್ಕೆ ಬಂದು ತಲುಪಿದೆ. ಇದರ ಕುರಿತ ಸಂದರ್ಶನದಲ್ಲಿ ಧನುಶ್ರೀ ಭಾಗಿಯಾಗಿದ್ದಾರೆ.

ಈ ಸಂದರ್ಶನದಲ್ಲಿ ಸಿನಿಮಾ ಕುರಿತಂತೆ ಹಾಗೂ ವೈಯಕ್ತಿಕ ಜೀವನದ ಕುರಿತಂತೆ ಹಾಗೂ ಅವರ ವೀಡಿಯೋಗಳ ಬಗ್ಗೆ ಕೂಡ ಪ್ರಶ್ನೆ ಕೇಳಲಾಗಿದೆ. ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಇವರು ಅವರ ಸ್ನೇಹಿತ ಸಮೀರ್ ಬಗ್ಗೆ ಕೇಳಿದ ಪ್ರಶ್ನೆಗೆ ಸಕ್ಕತ್ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ನಿರೂಪಕರು ಎಲ್ಲರೂ ನಿಮ್ಮ ಹಾಗೂ ಸಮೀರ್ ಅವರ ಸಂಬಂಧದ ಬಗ್ಗೆ ಪಾಸಿಟಿವ್ ಹಾಗೂ ನೆಗೆಟಿವ್ ಆಗೂ ಮಾತನಾಡುತ್ತಿದ್ದಾರೆ.

ಹೆಚ್ಚಿನ ಜನರು ನೀವಿಬ್ಬರೂ ಲವರ್ಸ್ ನೀವಿಬ್ಬರೂ ಮದುವೆ ಆಗುತ್ತೀರಾ ಎಂದು ಊಹೆ ಮಾಡಿಕೊಂಡಿದ್ದಾರೆ ಅದು ನಿಜ ನಾ ಎಂದು ಕೇಳಿದ್ದಾರೆ. ಅದಕ್ಕೆ ಧನುಶ್ರೀ ಅವರು ಆ ರೀತಿ ಏನು ಇಲ್ಲ ನಾವಿಬ್ಬರು ಪ್ರೊಫೆಷನಲ್ ಪಾರ್ಟ್ನರ್ ಅಷ್ಟೇ ನನಗೆ ನನ್ನ ವ್ಲೋಗ್ ಗಳಿಗೆ ಎಡಿಟಿಂಗ್ ಮಾಡಲು ಹೇಳಿಕೊಟ್ಟಿದ್ದು ಸಮೀರ್. ಅವನಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ ಹಾಗೂ ನಾನು ಸಹ ಅವನಿಗೆ ಸೇಮ್ ಫೀಲ್ಡ್ ಅಲ್ಲಿ ಇರುವುದರಿಂದ ಕೆಲವು ವಿಷಯಗಳನ್ನು ಹಂಚಿಕೊಳ್ಳುತ್ತೇನೆ.

ಹೀಗಾಗಿ ಇಬ್ಬರು ಜೊತೆ ಕಾಣಿಸಿಕೊಳ್ಳುತ್ತೇವೆ ಹೊರತು ಆ ರೀತಿ ಏನು ಇಲ್ಲ ಎಂದು ಬಹಳ ನೇರವಾಗಿ ಉತ್ತರಿಸಿದ್ದಾರೆ. ಮುಂದುವರೆದು ಎಲ್ಲರೂ ಸಹ ಧನುಶ್ರೀ ಅವರನ್ನು ಅವರ ಮೇಕಪ್ ಬಗ್ಗೆ ಟ್ರೋಲ್ ಮಾಡುತ್ತಾರೆ ಇದಕ್ಕೂ ಸಹ ಉತ್ತರ ಕೊಟ್ಟಿದ್ದು ನಿರೂಪಕರು ಮೇಕಪ್ ಮಾಡಿಕೊಳ್ಳಲು ಮಿನಿಮಮ್ ಎಷ್ಟು ಸಮಯ ತೆಗೆದುಕೊಳ್ಳುತ್ತೀರಾ ಎಂದು ಕೇಳಿದ್ದಕ್ಕೆ ಅದು ಡಿಪೆಂಡ್ಸ್ ಆಗುತ್ತದೆ ಎಂದು ಉತ್ತರ ಕೊಟ್ಟಿದ್ದಾರೆ.

ಮುಂದೆ ನಿಮ್ಮಿಂದ ಕೂಡ ಒಂದೊಳ್ಳೆ ಲವ್ ಸ್ಟೋರಿ ಎಕ್ಸ್ಪೆಕ್ಟ್ ಮಾಡಬಹುದಾ ಎಂದು ಕೇಳಿದ ಪ್ರಶ್ನೆಗೆ ನೋಡೋಣ ಎಂದು ಉತ್ತರ ಕೊಟ್ಟಿದ್ದಾರೆ. ನನಗೆ ನನ್ನದೇ ಆದ ಜವಾಬ್ದಾರಿಗಳಿದೆ. ನಾನು ಹಳ್ಳಿಯಿಂದ ಬಂದು ಸಾಧಿಸಲು ಕನಸು ಕಾಣುತ್ತಿರುವ ಹುಡುಗಿ. ನನಗೆ ಸಿಟಿಯಲ್ಲಿ ಸ್ವಂತ ಮನೆ ಇಲ್ಲ ನನ್ನ ಬಾಡಿಗೆ ಕಟ್ಟಿಕೊಂಡು ಹೆತ್ತವರ ಖರ್ಚು ನೋಡಿಕೊಂಡು ನನ್ನ ಲೋನ್ ಗಳನ್ನು ನೋಡಿಕೊಂಡು ಜೀವನ ನಿರ್ವಹಣೆ ಮಾಡುವುದರ ಜೊತೆಗೆ ಅದಕ್ಕಾಗಿಯೇ ಬದುಕಬೇಕು.

ಇಷ್ಟೆಲ್ಲ ಬಿಝಿ ಇರುವಾಗ ಯಾವುದೋ ಒಂದು ಹುಡುಗನ ಹಿಂದೆ ತಿರುಗುತ್ತಾ ಕುಳಿತರೆ ಇದೆಲ್ಲ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ನನಗೆ ನನ್ನ ಮೊಬೈಲ್ ದೇವರಿದ್ದಂತೆ ಬೆಳಗ್ಗೆ ಎದ್ದ ತಕ್ಷಣ ಎಲ್ಲರೂ ದೇವರ ಫೋಟೋ ನೋಡುತ್ತಾರೆ. ಆದರೆ ನಾನು ನನ್ನ ಮೊಬೈಲ್ ನೋಡುತ್ತೇನೆ. ಇಂದು ನಾನು ಹೆಸರು ಮಾಡಿದರೂ ದುಡ್ಡು ಮಾಡುತ್ತಿದ್ದರೂ ಅದು ನನ್ನ ಮೊಬೈಲ್ ಇಂದಲೇ ಸಾಧ್ಯವಾಯಿತು. ಹಾಗಾಗಿ ನಾನು ದೇವರಷ್ಟೇ ಮೊಬೈಲ್ ಅನ್ನು ಗೌರವಿಸುತ್ತೇನೆ ಪ್ರೀತಿಸುತ್ತೇನೆ ಎನ್ನುವ ವಿಷಯವನ್ನೂ ಹೇಳಿಕೊಂಡಿದ್ದಾರೆ.