ದಕ್ಷಿಣ ಕರ್ನಾಟಕದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುವ ಒಂದು ಶ್ರೀ ಕ್ಷೇತ್ರ ಅದು ಧರ್ಮಸ್ಥಳ (Darmasthala). ಧರ್ಮಸ್ಥಳದ ಮಂಜುನಾಥನಿಗೆ ಸಾಮಾನ್ಯ ನಾಗರಿಕರಿಂದ ಹಿಡಿದು ಸಿನಿಮಾ ಸ್ಟಾರ್ ಗಳು, ರಾಜಕೀಯ ಮುಖಂಡರುಗಳು ಮತ್ತು ಉದ್ಯಮಿಗಳು ಹೀಗೆ ಎಲ್ಲರೂ ಭಕ್ತರಾಗಿದ್ದಾರೆ.
ಧರ್ಮಸ್ಥಳದಲ್ಲಿರುವ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿ ಎಂದರೆ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಹೆಸರುವಾಸಿ. ಮಾತು ತಪ್ಪದ ಮಂಜುನಾಥ ಹಾಗೂ ನ್ಯಾಯ ಕೊಡುವ ಅಣ್ಣಪ್ಪ ಸ್ವಾಮಿ ಎಂದೇ ಈ ದೇವರುಗಳನ್ನು ನಂಬಿ ಭಕ್ತಾದಿಗಳು ಅದೇ ಪ್ರಕಾರವಾಗಿ ಇಲ್ಲಿಗೆ ನಡೆದುಕೊಳ್ಳುತ್ತಾನೆ. ಧರ್ಮಸ್ಥಳಕ್ಕೆ ಹೋಗುವುದು ಎನ್ನುವುದು ಒಂದು ವಿಶೇಷ ವಾಡಿಕೆಯಾಗಿ ಜನರಿಗೆ ಅಭ್ಯಾಸವಾಗಿ ಹೋಗಿದೆ.
ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!
ಇದೇ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಧರ್ಮಸ್ಥಳದ ಖ್ಯಾತಿ ವಿಶ್ವವಿಖ್ಯಾತವಾಗುತ್ತಿದೆ ಯಾವಾಗಲೂ ಭಕ್ತಿಯ ವಿಚಾರ ಹಾಗೂ ಧರ್ಮದ ವಿಚಾರವಾಗಿ ಚರ್ಚೆ ಆಗುತ್ತಿರುವ ಧರ್ಮಸ್ಥಳದ ವಿಚಾರವೂ ಈ ಬಾರಿ ಮುಗ್ಧ ಹುಡುಗಿ ಒಬ್ಬಳ ಅ’ತ್ಯಾ’ಚಾ’ರದ ಪ್ರಕರಣದಿಂದ ಸದ್ದಾಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ 12 ವರ್ಷಗಳ ಹಿಂದೆ ಅಂದರೆ 2012 ಇಸವಿಯಲ್ಲಿ ಧರ್ಮಸ್ಥಳದ ಉಜಿರೆಯ SDM ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಎನ್ನುವ ಅಪ್ರಾಪ್ತ ಬಾಲಕಿಯ ಅ’ತ್ಯಾ’ಚಾ’ರ ಹಾಗೂ ಕೊ’ಲೆಯಾಗಿತ್ತು (Ujjire Soujanya case).
ಅಮಾನುಷವಾಗಿ ಅ’ತ್ಯಾ’ಚಾ’ರ ಮಾಡಿ ಕ್ರೂ.ರವಾಗಿ ಕೊಂ.ದಿದ್ದ ಆಕೆಯ ಸಾ.ವಿಗೆ ನ್ಯಾಯ ಬೇಕು ಎಂದು ರಾಜ್ಯದಾದ್ಯಂತ ಪ್ರತಿಭಟನೆಯಾದ ಕಾರಣ ಪ್ರಕರಣವನ್ನು CBI ಗೆ ಒಪ್ಪಿಸುವ ಮಟ್ಟಕ್ಕೂ ಕೂಡ ಹೋಗಿತ್ತು. ಈ ಕೇಸ್ ಅಲ್ಲಿ ಆರೋಪಿ ಎಂದು ಸಂತೋಷ್ ರಾವ್ ಎನ್ನುವವರನ್ನು ಬಂಧಿಸಿ ಇಷ್ಟು ವರ್ಷ ಜೈಲಲ್ಲಿ ಇಡಲಾಗಿತ್ತು. ಆದರೆ ಈಗ CBI ನ್ಯಾಯಾಲಯವು ಆತನನ್ನು ನಿರಾಪರಾಧಿ ಎಂದು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಮತ್ತೊಮ್ಮೆ ರಾಜ್ಯದಲ್ಲಿ ಸೌಜನ್ಯ ಪ್ರಕರಣ ಚರ್ಚೆಯಲ್ಲಿದೆ.
ರಾಜ್ಯದ ರೈತರಿಗೆಲ್ಲಾ ಸಿಹಿಸುದ್ದಿ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಘೋಷಿಸಿದ ಮಾನ್ಯ ಮುಖ್ಯಮಂತ್ರಿಗಳು…
ಜನಸಾಮಾನ್ಯರು ಹಾಗೂ ಸಂಘಟನೆಗಳು ರಾಜ್ಯ ಸರ್ಕಾರ ಮತ್ತೊಮ್ಮೆ ಆದೇಶ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ತಮ್ಮದೇ ರೀತಿಯಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ (Social media) ಕೂಡ ಈಗ ಅತಿ ಹೆಚ್ಚು ಚರ್ಚೆ ಆಗುತ್ತಿರುವ ವಿಚಾರ ಇದೆ ಆಗಿದ್ದು ದಿನಕ್ಕೊಂದು ತಿರವು ಪಡೆದುಕೊಳ್ಳುತ್ತಿದೆ.
ಅಂತಿಮವಾಗಿ ಈ ಪ್ರಕರಣದ ಹಿಂದೆ ಯಾವುದೋ ದೊಡ್ಡ ಶಕ್ತಿಗಳ ಕೈವಾಡ ಇದೆ, ಹಾಗಾಗಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎನ್ನುವ ಅನುಮಾನವೂ ಹೊಗೆಯಾಡುತ್ತಿದೆ. ನೆಟ್ಟಿಗರು ತಮ್ಮದೇ ರೀತಿಯಲ್ಲಿ ಈ ವಿಚಾರದವಾಗಿ ಪ್ರತಿಕ್ರಿಯಿಸಿ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೇಳುತ್ತಿದ್ದಾರೆ. ಈಗ ಸ್ಯಾಂಡಲ್ವುಡ್ ಸ್ಟಾರ್ ದುನಿಯಾ ವಿಜಯ್ (Hero Duniya Vijay) ಕೂಡ ಪ್ರಕರಣದ ಬಗ್ಗೆ ಧ್ವನಿ ಎತ್ತಿ ತಾವು ಸಹ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸೌಜನ್ಯ ಪ್ರಕರಣದ ಕುರಿತಾಗಿ ಪೋಸ್ಟ್ (Post) ಒಂದನ್ನು ಹಾಕಿಕೊಂಡಿದ್ದಾರೆ.
ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!
ಮಂಜುನಾಥ ಸ್ವಾಮಿಯ ಹಾಗೂ ಕು.ಸೌಜನ್ಯ ರ ಫೋಟೋ ಹಾಕಿ ದುನಿಯಾ ವಿಜಯ್ ಅವರು ಕೆಲ ಬರಹಗಳನ್ನು ಕೂಡ ಬರೆದುಕೊಂಡಿದ್ದಾರೆ. ಪ್ರತಿವರ್ಷ ಧರ್ಮಸ್ಥಳಕ್ಕೆ ಹೋಗುವುದು ವಾಡಿಕೆಯಾಗಿತ್ತು. ಆದರೆ ಸೌಜನ್ಯ ಪ್ರಕರಣದಲ್ಲಿ ಇಂದಿನ ಬೆಳವಣಿಗೆಗಳನ್ನು ನೋಡಿದರೆ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಎನಿಸುತ್ತಿದೆ ಎಂದು ಬರೆದುಕೊಂಡು ಬುದ್ಧ ಅವರು ಹೇಳಿದ ಸತ್ಯ ಎನ್ನುವುದು ಸೂರ್ಯನ ಬೆಳಕಿದ್ದಂತೆ ಹೆಚ್ಚು ಹೊತ್ತು ಮರೆ ಮಾಚಲಾಗದು ಎನ್ನುವ ಮಾತನ್ನು ಕೂಡ ಉಲ್ಲೇಖಿಸಿ ಜಸ್ಟಿಸ್ ಫಾರ್ ಸೌಜನ್ಯ ಹಾಶ್ ಟ್ಯಾಗ್ (#Justiceforsoujanya) ಬಳಸಿ ಶೇರ್ ಮಾಡಿದ್ದಾರೆ.
ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ.
ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು – ಬುದ್ಧ#Justiceforsoujanya pic.twitter.com/wlxF84dHY4
— Duniya Vijay (@OfficialViji) August 1, 2023