Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಟಿ ಮಾನ್ಯ ಬದುಕಿನಲ್ಲಿ ವಿಧಿ ಆಟ, ಬದುಕನ್ನೇ ನಾ-ಶ ಮಾಡಿದ ಸ್ಟ್ರೋಕ್ ಕಾಯಿಲೆ. ಸದ್ಯಕ್ಕೆ ಮಾನ್ಯ ಪರಿಸ್ಥಿತಿ ಈಗ ಹೇಗಿದೆ ಗೊತ್ತ.?

Posted on February 3, 2023 By Kannada Trend News No Comments on ನಟಿ ಮಾನ್ಯ ಬದುಕಿನಲ್ಲಿ ವಿಧಿ ಆಟ, ಬದುಕನ್ನೇ ನಾ-ಶ ಮಾಡಿದ ಸ್ಟ್ರೋಕ್ ಕಾಯಿಲೆ. ಸದ್ಯಕ್ಕೆ ಮಾನ್ಯ ಪರಿಸ್ಥಿತಿ ಈಗ ಹೇಗಿದೆ ಗೊತ್ತ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenge star Darshan) ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅಂತಹ ಖ್ಯಾತ ನಟರೊಂದಿಗೆ ನಾಯಕನಟಿ ಆಗಿ ಅಭಿನಯಿಸಿದ್ದ ಮಾನ್ಯ (Manya) ಎನ್ನುವ ಮುದ್ದು ಮುಖದ ಚೆಲುವೆ ಕನ್ನಡಿಗರಿಗೆಲ್ಲರಿಗೂ ನೆನಪಿದ್ದಾರೆ. ಮುದ್ದು ಮುದ್ದಾದ ಮಾತು, ಸ್ಪುರದ್ರೂಪಿ ಚೆಲುವು ಹಾಗೂ ಪಾತ್ರಕ್ಕೆ ತಕ್ಕ ಹಾಗೆ ಸಹಜವಾಗಿ ಅಭಿನಯಿಸುವ ಟ್ಯಾಲೆಂಟ್ ಇದೆ ಕಾರಣಕ್ಕಾಗಿ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದರು ಈಕೆ.

ಇಷ್ಟೆಲ್ಲ ಹೆಸರು ಮಾಡಿರುವ ಇವರು ಅಲ್ಲಿ ತನಕ ಸವೆಸಿ ಬಂದಿದ್ದು ಹೂವಿನ ಹಾಸಿಗೆ ಅಂತ ಹಾದಿಯಲ್ಲಲ್ಲ, ಬದಲಾಗಿ ಬದುಕಿನ ಪೂರ್ತಿ ತುಳಿದಿದ್ದು ಹಾಗೂ ಈಗ ಬದುಕುತ್ತಿರುವುದು ಕೂಡ ಮುಳ್ಳಿನಂತಹ ಬದುಕು ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ವಿಧಿ ನಟಿ ಮಾನ್ಯ ಅವರ ಬದುಕಿನಲ್ಲಿ ಆಟ ಆಡಿದೆ. ಮಾನ್ಯ ಅವರು ಚಿಕ್ಕ ವಯಸ್ಸಿನಿಗೆ ತಂದೆಯನ್ನು ಕಳೆದುಕೊಳ್ಳುತ್ತಾರೆ ಹಾಗಾಗಿ ತಾವು ಸಹ ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬದ ಭಾರವನ್ನು ಹೊರಬೇಕಾಗುತ್ತದೆ.

ಓದಿನಲ್ಲಿ ಬಹಳ ಆಸಕ್ತಿ ಇದ್ದ ಇವರು ವಿದ್ಯಾಭ್ಯಾಸ ನಿಲ್ಲಿಸಿ ದುಡಿಯಲೇಬೇಕಾದ ಅನಿವಾರ್ಯತೆ ಇರುತ್ತದೆ. ಹಾಗಾಗಿ ಕೆಲಸ ಮಾಡುತ್ತ ನಟನೆಯತ್ತ ವಾಲಿದ ಇವರು ಹಲವು ವರ್ಷಗಳ ಕಾಲ ಇಂಡಸ್ಟ್ರಿಯಲ್ ಒಳ್ಳೊಳ್ಳೆ ಸಿನಿಮಾ ಮಾಡಿ ಹೆಸರು ಮಾಡಿದರು. ನಂತರ 2008ರಲ್ಲಿ ಮಲಯಾಳಂ ಸಿನಿಮಾ ಒಂದರಲ್ಲಿ ಅಭಿನಯಿಸಿ ಕೆರಿಯರ್ಗೆ ಗುಡ್ ಬೈ ಹೇಳಿ ವೈವಾಹಿಕ ಜೀವನದತ್ತ ಮುಖ ಮಾಡಿದರು.

2008ರಲ್ಲಿ ಸತ್ಯಪಟೇಲ್ (Sathya patel) ಎನ್ನುವವರನ್ನು ವಿವಾಹ ಆಗುತ್ತದೆ, ಕೊನೆವರೆಗೂ ಕೈ ಹಿಡಿದುಕೊಂಡೆ ಇರಬೇಕು ಎಂದು ಜೋಡಿ ಆದ ಇವರ ವಿವಾಹ ಅಷ್ಟೇ ಬೇಗ ವಿ-ಚ್ಛೇ-ದ-ನ-ದಲ್ಲಿ ಕೊನೆಗೊಳ್ಳುತ್ತದೆ. ಹೊಂದಾಣಿಕೆ ಸಮಸ್ಯೆ ಕಾರಣದಿಂದಾಗಿ 2013ರಲ್ಲಿ ವಿಚ್ಛೇದನ ಕೂಡ ಆಗುತ್ತದೆ. ಅದೇ ವರ್ಷ ಎರಡನೇ ಮದುವೆಯನ್ನು ಸಹ ಆಗುತ್ತಾರೆ. ವಿಕಾಸ್ ಬಚ್ಚಪೈ (Vikas Bachpe) ಅವರ ಜೊತೆ ಹೊಸ ಜೀವನ ಶುರು ಮಾಡಿದ ಇವರು ದೂರದ ಅಮೆರಿಕ (America) ದೇಶಕ್ಕೆ ಹೋಗಿ ನೆಲೆಸುತ್ತಾರೆ.

ನಂತರ ಇವರಿಗೆ ಬಾಲ್ಯದ ಕನಸಾಗಿದ್ದ ವಿದ್ಯಾಭ್ಯಾಸದ ಕಡೆ ಮನವಾಲುತ್ತದೆ. ಈಕೆ ಬರೋಬ್ಬರಿ 41 ಸಿನಿಮಾಗಳಲ್ಲಿ ನಾಯಕಿ ಆದ ಬಳಿಕ ಓದಲು ಶುರು ಮಾಡುತ್ತಾರೆ. ಆಕೆಯಲ್ಲಿದ್ದ ಆಸಕ್ತಿಯಿಂದ ಸ್ಯಾಟ್ (SAT) ಪರೀಕ್ಷೆಯನ್ನು ಪಾಸ್ ಮಾಡುತ್ತಾರೆ ನಂತರ ಐವಿ ಲೀಗ್ ಅಲ್ಲಿ ವಿದ್ಯಾಭ್ಯಾಸ ನಡೆಸುತ್ತಾರೆ. ನ್ಯಾಯಾರ್ಕ್ ನ ಪ್ರತಿಷ್ಠಿತ ಯುನಿವರ್ಸಿಟಿ ಅಲ್ಲೂ ಸಹ ವಿದ್ಯಾಭ್ಯಾಸ ಮಾಡುತ್ತಾರೆ ಆ ವೇಳೆಗಾಗಲೇ ಮುದ್ದಾದ ಹೆಣ್ಣು ಮಗುವಿಗೂ ಜನ್ಮ ನೀಡಿರುತ್ತಾರೆ.

ಬದುಕಿನಲ್ಲಿ ಎಲ್ಲವೂ ಚೆನ್ನಾಗಿರುತ್ತೆ ಇನ್ನೇನು ಆಕಾಶವೇ ಕೈಗೆ ಸಿಕ್ಕಷ್ಟು ಸಂಭ್ರಮ ಆದರೆ ಅಂತಹದ್ದೇ ಸಮಯದಲ್ಲಿ ಮತ್ತೊಂದು ಶಾಕ್ ಇವರಿಗೆ ಎದುರಾಗಿರುತ್ತದೆ. ಇದ್ದಕ್ಕಿದ್ದಂತೆ ಸ್ಟ್ರೋಕ್ (Stroke) ಗೆ ತುತ್ತಾದ ನಟಿ ಬರೋಬ್ಬರಿ ಎರಡು ವರ್ಷಗಳ ಕಾಲ ಹಾಸಿಗೆ ಮೇಲೆ ಮಲಗುವಂತಾಗಿ ಬಿಡುತ್ತದೆ. ಪ್ರತಿದಿನ ಕೂಡ ಇವರಿಗೆ ಸ್ಟೆರಾಯ್ಡ್ ಇಂಜೆಕ್ಷನ್ ಕೊಡಲಾಗುತ್ತದೆ. ಇಷ್ಟು ದಿನ ಲವಲವಿಕೆಯಿಂದ ಕುಣಿಯುತ್ತಿದ್ದ ನಟಿ ಎದ್ದು ನಡೆದಾಡಲು ಸಹ ಆಗಲಾರದ ಪರಿಸ್ಥಿತಿ.

ಆಗ ಕರೋನ ಆವರಿಸಿದ್ದ ಸಮಯ, ಆಪ್ತರನ್ನು ಸಹ ನೋಡುವಂತಿಲ್ಲ. ಆಗ ಆಕೆ ಕಳೆದ ಒಂದೊಂದು ಕ್ಷಣ ಕೂಡ ನರಕಮಯವಾಗಿತ್ತು. ಇದನ್ನೆಲ್ಲ ಸ್ವತಃ ನಟಿಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಸುಧಾರಿಸಿಕೊಂಡಿದ್ದು ತನ್ನ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಜೊತೆಗೆ ತಾನು ಇದನ್ನು ಏನೋ ಸಾಧಿಸಿದೆ ಎನ್ನುವ ಕಾರಣಕ್ಕೆ ಹೇಳುತ್ತಿಲ್ಲ ಅಥವಾ ಸಿಂಪತಿ ಗಿಟ್ಟಿಸಿಕೊಳ್ಳಲು ಹೇಳುತ್ತಿಲ್ಲ.

ನನ್ನಂತೆ ಸಮಸ್ಯೆ ಎದುರಿಸುತ್ತಿರುವವರಿಗೆ ನನ್ನ ಕಥೆ ಸ್ಪೂರ್ತಿ ಆಗಬೇಕು ಎನ್ನುವ ಕಾರಣಕ್ಕೆ ಹೇಳುತ್ತಿದ್ದೇನೆ. ಆತ್ಮವಿಶ್ವಾಸ ಇದ್ದರೆ ಎಂತಹ ಸಾವನ್ನು ಬೇಕಾದರೂ ಎದುರಿಸಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದಾರೆ ಸದ್ಯಕ್ಕೆ ಇವರು ಗುಣಮುಖವಾಗುತ್ತಿರುವುದು ಅಭಿಮಾನಿಗಳಿಗೆಲ್ಲರಿಗೂ ಸಂತಸದ ಸುದ್ದಿ ಆಗಿದೆ.

Viral News Tags:Actor Manya, Manya Naidu
WhatsApp Group Join Now
Telegram Group Join Now

Post navigation

Previous Post: ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ
Next Post: ನೆನ್ನೆಯಷ್ಟೇ ಡೆ-ತ್ ನೋಟ್ ಬರೆದಿಟ್ಟು ಆ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತೆನೆ ಅಂತ ಪೋಸ್ಟ್ ಹಾಕಿದ್ದ ಕೀರ್ತಿ, ಇಂದು ಇದ್ದಕ್ಕಿದ್ದ ಹಾಗೇ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಏನದು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore