ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ನಟರು ಜನಸಾಮಾನ್ಯರಿಗೆ ಹೆಚ್ಚು ಹತ್ತಿರವಾಗಿರುತ್ತಾರೆ. ಯಾಕೆಂದರೆ, ಪ್ರತಿನಿತ್ಯವೂ ಕೂಡ ಪ್ರಸಾರವಾಗುವ ದಾರವಾಹಿಗಳಲ್ಲಿ ಕಾಣುವ ಮುಖಗಳೇ ಆಗಿರುವುದರಿಂದ ತಮ್ಮ ಮನೆಯ ಸದಸ್ಯರಂತೆ ಜನ ಅವರನ್ನು ಕಾಣುತ್ತಾರೆ. ಅಲ್ಲದೆ, ಹೀಗಾಗಿಯೇ ಕಿರುತೆರೆ ಧಾರಾವಾಹಿಗಳಿಗೆ ತಮ್ಮ ಜೀವನವನ್ನು ಮುಡಿಪಾಗಿ ಕಟ್ಟಿಕೊಂಡ ಅನೇಕ ಪ್ರತಿಭೆಗಳು ಇವೆ.
ಇದೇ ಪಟ್ಟಿಗೆ ಸೇರಲಿದ್ದಾರೆ ನಟ ಶ್ರೀಧರ್ ನಾಯಕ್ (ACTOR SRIDHAR NAIR). ಇತ್ತೀಚೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ ಪಾರು ಹಾಗೂ ಈಗಷ್ಟೇ ಕಲರ್ಸ್ ಕನ್ನಡ ವಾಹಿನಿ ಶುರುವಾಗಿದ್ದ ವಧು ಧಾರವಾಹಿಯ ಮುಖ್ಯಪಾತ್ರದಲ್ಲಿ ಶ್ರೀಧರ್ ನಾಯರ್ ಗುರುತಿಸಿಕೊಂಡಿದ್ದರು. ಆದರೆ ಸಾಧಿಸಲು ಸಾಕಷ್ಟು ಸಮಯ ಹಾಗೂ ಕಣ್ತುಂಬ ಕನಸಿದ್ದ ನಟನ ಬಾಳಿನಲ್ಲಿ ವಿಧಿ ಬಿರುಗಾಳಿ ಎಬ್ಬಿಸಿ ಬಲಿ ಪಡೆದುಕೊಂಡಿದೆ.
ಈ ವಿಚಾರದ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಪ್ರಸಾರವಾಗಿತ್ತು ನಟ ಶ್ರೀಧರ್ ರವರಿಗೆ ಆಪ್ತರಾಗಿದ್ದ ಕೆಲವು ಕಲಾವಿದರುಗಳು ಶ್ರೀಧರ್ ನಾಯರ್ ಅವರು ಗಂಭೀರವಾದ ಆರೋಗ್ಯ ಸಮಸ್ಯೆಗೆ ಗುರಿಯಾಗಿರುವುದು ಹಾಗೂ ಅವರ ಚಿಕಿತ್ಸೆಗೆ ಹಣ ಇಲ್ಲದೆ ನಟ ನರಳಾಗುತ್ತಿರುವುದರ ಬಗ್ಗೆ ವಿಡಿಯೋ ಮಾಡಿ ಸಹಾಯ ಹಸ್ತ ಚಾಚಿದ್ದರು. ಆದರೆ ಸಾ’ವು ಬದುಕಿನ ಹೋರಾಟದಲ್ಲಿ ವಿಧಿಗೆ ಜಯ ಸಂದಿದೆ.
ಸುಮಾರು ದಿನಗಳಿಂದ ಬೆಂಗಳೂರಿನ ಬ್ಲಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಯರ್ ಅವರು ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಸುರ ಸುಂದರಾಂಗನಂತೆ ಸ್ಪುರದ್ರೂಪಿಯಾಗಿಂತಹ ನಟ ಗುರುತೇ ಸಿಗದಷ್ಟು ಬದಲಾಗಿ ಚಿಕಿತ್ಸೆ ಫಲಕಾರಿಯಾಗಿದೆ ನಮ್ಮನ್ನು ಅಗಲಿದ್ದಾರೆ.
ಮೂಲತಃ ರಂಗಭೂಮಿ ಕಲಾವಿದನಾಗಿದ್ದ ಶ್ರೀಧರ್ ಅವರು ರಂಗಭೂಮಿಯಲ್ಲಿ ಕೂಡ ಸಾಕಷ್ಟು ಹೆಸರು ಮಾಡಿದ್ದರು ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮ ಹತ್ತಿರದವರೊಡನೆ ಇರುತ್ತಿದ್ದ ಅವರ ಒಡನಾಟ ಮತ್ತು ಅವರ ವಿಧೇಯ ಗುಣ ಎಲ್ಲರಿಗೂ ಅಚ್ಚು ಹೆಚ್ಚಾಗಿತ್ತು. ಅಭಿನಯದಲ್ಲೂ ಕೂಡ ಸೈನಿಸಿಕೊಂಡಿದ್ದ ಇವರು ಪೋಷಕ ಪಾತ್ರಗಳಿಗೆ ಹೇಳ ಹೆಸರಾಗಿದ್ದರು.
ಈಗಷ್ಟೇ ಸಿನಿಮಾ ಜಗತ್ತಿನ ಕಡೆ ಮುಖ ಮಾಡಿದ ಇವರಿಗೆ ಕಿಚ್ಚ ಸುದೀಪ್ ಅವರ ಅಭಿನಯದ ಮ್ಯಾಕ್ಸ್ ಚಿತ್ರದಲ್ಲಿ(MAX MOVIE) ಅವಕಾಶವು ದೊರಕಿತ್ತು. ಈಗಷ್ಟೇ ಉದಯೋನ್ಮುಖ ತಾರೆಯಾಗಿ ಬೆಳಗುತ್ತಿದ್ದ ನಟ ಅನಾರೋಗ್ಯಕ್ಕೆ ಗುರಿಯಾಗಿ ಕಣ್ಮರೆಯಾಗಿದ್ದಾರೆ. ಆದರೆ ಈ ನೋವಿಗಿಂತಲೂ ವೈಯಕ್ತಿಕ ಜೀವನದಲ್ಲಾದ ಏರುಪೇರಿನಿಂದ ನಟ ಕುಸಿದಿದ್ದರು ಎಂದರೆ ಕೂಡ ತಪ್ಪಾಗಲಾರದು
ಯಾಕೆಂದರೆ ಈಗಾಗಲೇ ವಿವಾಹವಾಗಿ ಸಂತಾನ ಕೂಡ ಇದ್ದ ಶ್ರೀಧರ್ ಅವರು ಕಡೆ ದಿನದಲ್ಲಿ ಏಕಾಂಗಿಯಾಗಿದ್ದರು. ಪ್ರೀತಿಸಿ ವಿವಾಹವಾಗಿದ್ದ ಇವರ ಪತ್ನಿ ಇವರ ಕಷ್ಟದ ದಿನಗಳಲ್ಲಿ ಜೊತೆ ನಿಲ್ಲದೆ ಇವರನ್ನು ಬಿಟ್ಟು ಹೋಗಿದ್ದರು ಸ್ವತಃ ಬಹಳ ನೋವಿನಿಂದ ಕಡೆ ದಿನಗಳಲ್ಲಿ ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡು ತಮ್ಮ ದುಃ’ಖ ಹೊರಹಾಕಿದ್ದರು. ಈ ರೀತಿ ಜೀವನಪೂರ್ತಿ ಕಷ್ಟಗಳಲ್ಲಿ ಬೇಯುತ್ತಿದ್ದ ನಟ ಕೊನೆಗೂ ದುರಂತ ಅಂತ್ಯ ಕಂಡಿದ್ದಾರೆ.
ಇಂತಹ ದುರಂತ ಅಂತ್ಯ ಕಂಡ ಈ ನಟನ ಆತ್ಮಕ್ಕೆ ಶಾಂತಿ ಸಿಗಲಿ ಇವರ ಅಗಲಿಕೆ ಬಣ್ಣದ ಪ್ರಪಂಚಕ್ಕೆ ತುಂಬಲಾಗದು ಆದರೂ ಅವರ ಆತ್ಮೀಯರೆಲ್ಲರಿಗೂ ಭಗವಂತ ಈ ಹೊರಬರುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ. ನಟನ ಅಂತಿಮ ದರ್ಶನಕ್ಕೆ ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.