ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!

ಇತ್ತೀಚಿಗೆ ಹೃ’ದ’ಯ’ಘಾ’ತಗದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸೇರಿದಂತೆ ಹಲವು ಸೆಲೆಬ್ರಿಟಿಗಳು ಮೃ’ತರಾಗಿದ್ದಾರೆ. ಪುನೀತ್ ರಾಜಕುಮಾರ್ ಅವರ ಸಾ’ವಿ’ನ ನೋವನ್ನು ಮರೆಯುವ ಮುನ್ನವೇ ಅವರ ಕುಟುಂಬದಲ್ಲಿ ಹೃ’ದ’ಯ’ಘಾ’ತದ ಕಾರಣಕ್ಕೆ ಮತ್ತೊಂದು ಸಾ’ವಾಗಿದೆ.

ಇಂದು ಸ್ಯಾಂಡಲ್ವುಡ್ ಸ್ಟಾರ್ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ (Sandalwood star Vijaya Raghavendra wife Spandana) ಅವರು ಕೂಡ ಇದೇ ಕಾರಣದಿಂದ ನಿ’ಧ’ನ’ರಾಗಿದ್ದಾರೆ ಈ ಸುದ್ದಿ ಇಡೀ ಕರ್ನಾಟಕದ ಜನತೆಗೆ ಶಾ’ಕ್ ನೀಡಿದೆ. ಮೂರು ದಿನಗಳ ಹಿಂದೆ ಸ್ನೇಹಿತರ ಹಾಗೂ ಕುಟುಂಬದವರೊಂದಿಗೆ ಬ್ಯಾಂಕಾಕ್ ಪ್ರವಾಸಕ್ಕೆ (Bangkok ) ಹೋಗಿದ್ದ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಲೋ ಬಿಪಿ (low BP) ಮತ್ತು ಹಾರ್ಟ್ ಅಟ್ಯಾಕ್ (Heart attack) ಆಗಿ ಕುಸಿದು ಬಿದ್ದಿದ್ದಾರೆ.

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!

ತಕ್ಷಣವೇ ಅವರನ್ನು ಅಲ್ಲಿದ್ದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ. ನಾಳೆ ಬೆಂಗಳೂರಿಗೆ ಸ್ಪಂದನ ಅವರ ಪ್ರಾರ್ಥೀವ ಶರೀರ ಬರುವ ಸಾಧ್ಯತೆ ಇದೆ. ಸ್ಪಂದನ ಅವರಿಗೆ ಹಾರ್ಟ್ ಅಟ್ಯಾಕ್ ಆದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರೆಲ್ಲರೂ ಬ್ಯಾಂಕಾಕ್ ಗೆ ಹೋಗಿದ್ದಾರೆ.

2007 ರ ಆಗಸ್ಟ್ 26ರಂದು ವಿಜಯ ರಾಘವೇಂದ್ರ ಅವರು ಸ್ಪಂದನ ಅವರನ್ನು ಮದುವೆ (Marriage) ಆಗಿದ್ದರು. ಇನ್ನು 19 ದಿನಗಳು ಕಳೆದಿದ್ದರೆ ಇವರ ಸುಖ ಬಾಂಧವ್ಯಕ್ಕೆ 16 ವರ್ಷ ತುಂಬುತ್ತಿತ್ತು. ಆದರೆ ಅಷ್ಟರಲ್ಲಿ ವಿಧಿ ಬೇಸರವಾಗಿ ಆಟ ಮುಗಿಸಿದೆ. ನಿವೃತ್ತ ಪೊಲೀಸ್ ಅಧಿಕಾರ ಶಿವರಾಂ ಅವರ ಪುತ್ರಿಯಾಗಿದ್ದ ಸ್ಪಂದನ ಅವರನ್ನು ಕಾಫಿ ಡೇ ಒಂದರಲ್ಲಿ ನೋಡಿದ ವಿಜಯ ರಾಘವೇಂದ್ರ ಅವರು ಮೊದಲ ನೋಟದಲ್ಲಿ ಪ್ರೀತಿಗೆ ಬಿದ್ದಿದ್ದರು.

ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡದಿದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.! ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

ಪ್ರೀತಿಸಿ ಕೈ ಹಿಡಿದ ಪತ್ನಿ ಮೇಲೆ ಅಪಾರವಾದ ಪ್ರೀತಿ ಹೊಂದಿದ್ದರು. ಮದುವೆ ಆದಾ ಬಳಿಕ ಕೂಡ ಪ್ರೇಮ ಪಕ್ಷಿಗಳಿಗೆ ಇದ್ದ ಇವರ ಜೋಡಿ ಸಿನಿಮಾಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಎಲ್ಲರ ಕಣ್ಣುಗಳನ್ನು ಸೆಳೆಯುತ್ತಿತ್ತು. ಕನ್ನಡದಲ್ಲಿ ಬಿಗ್ ಬಾಸ್ ಮೊದಲನೇ ಸೀಸನ್ ಗೆ ಕಂಟೆಸ್ಟೆಂಟ್ ಆಗಿ ಹೋಗಿದ್ದ ವಿಜಯ ರಾಘವೇಂದ್ರ ಅವರು ಅವಕಾಶ ಸಿಕ್ಕಾಗಲೆಲ್ಲ ಪತ್ನಿ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಿದ್ದರು.

ಇದರಿಂದ ವಿಜಯ ರಾಘವೇಂದ್ರ ಅವರು ಕುಟುಂಬದ ಮೇಲೆ ಎಷ್ಟು ಪ್ರೀತಿ ಹೊಂದಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಈ ದಂಪತಿಗಳ ದಾಂಪತ್ಯಕ್ಕೆ ಸಾಕ್ಷಿಯಾಗಿ ಶೌರ್ಯ ಎನ್ನುವ ಮಗನೂ ಸಹ ಇದ್ದಾನೆ. ಸ್ಪಂದನ ಅವರು ವಿಜಯ ರಾಘವೇಂದ್ರ ಅವರ ಡ್ಯಾನ್ಸ್ ಸ್ಕೂಲ್ ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿ ಕಡೆ ಕೂಡ ಮುಖ ಮಾಡಿದ್ದ ಇವರು 2016 ರಲ್ಲಿ ರವಿಚಂದ್ರನ್ (Ravichandran) ಅವರ ಅಪೂರ್ವ ಸಿನಿಮಾದಲ್ಲಿ (Apoorva Movie) ಕೂಡ ಕಾಣಿಸಿಕೊಂಡಿದ್ದರು.

ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಪಡೆಯುತ್ತಿರುವವರಿಗೆ ಶಾ-ಕಿಂಗ್ ನ್ಯೂಸ್, ಇನ್ಮುಂದೆ ಪಿಂಚಣಿ ಹಣ ಬಂದ್.!

ವಿಜಯ ರಾಘವೇಂದ್ರ ಅವರ ನಟನೆಯ ಕಿಸ್ಮತ್ (Kismath movie) ಸಿನಿಮಾಗೆ ನಿರ್ಮಾಪಕಿ ಕೂಡ ಆಗಿದ್ದರು. ಜೀವನದ ಬಗ್ಗೆ ಅದೆಷ್ಟೋ ಕನಸು ಕಂಡಿದ್ದ ಸ್ಪಂದನ ಅವರು ಇದೀಗ ಅಕಾಲಿಕ ಮುತ್ಯುವಿಗೆ ತುತ್ತಾಗಿ ಹೋಗಿದ್ದಾರೆ. ಕಾಫಿ ಡೇ ನಲ್ಲಿ ಆಗಿದ್ದ ಇವರಿಬ್ಬರ ಭೇಟಿ ಮದುವೆಯಾಗಿ ಇಷ್ಟು ವರ್ಷಗಳ ಕಾಲ ಯಾವುದೇ ಗಾಸಿಪ್ ಇಲ್ಲದೆ ಬದುಕಿದ ಅನ್ಯೋನತೆ ಎಲ್ಲರಿಗೂ ಉದಾಹರಣೆ ಆಗಿತ್ತು. ಸ್ಪಂದನ ಅವರ ಆತ್ಮಕ್ಕೆ ಶಾಂತಿ ಕೋರಿ, ವಿಜಯ ರಾಘವೇಂದ್ರ ಅವರಿಗೆ ಈ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸೋಣ.

Leave a Comment