ಈ ಪ್ರಪಂಚವೇ ಹಾಗೆ ಆರೋಪಿ ಹಾಗೂ ಅಪರಾಧಿಗಳ ವ್ಯತ್ಯಾಸ ಇಲ್ಲದಂತೆ ಜನರನ್ನು ನೋಡುತ್ತದೆ. ಯಾವುದಾದರೂ ಪ್ರಕರಣದಲ್ಲಿ ಆರೋಪಿ ಎನ್ನುವ ಅನುಮಾನ ಹುಟ್ಟಿದ್ದರೂ ಸಾಕು. ಸುತ್ತಮುತ್ತ ಇರುವ ಜನರು ಮಾತ್ರವಲ್ಲದೆ ಇಡೀ ಜಗತ್ತು ನಮ್ಮನ್ನು ಅಪರಾಧಿಯಾಗಿ ಮಾಡಿ ಬಿಟ್ಟಿರುತ್ತದೆ. ಕಾನೂನು ಹೋರಾಟ ಮಾಡಿ ನಾವು ಗೆಲ್ಲಬಹುದು ಆದರೆ ಜನ ಕೊಡುವ ಆ ಶಿ.ಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಇಂತಹದೇ ಒಂದು ನೋವನ್ನು ಈಗ ಹೈಟೆಕ್ ವೇ.ಶ್ಯಾ.ವಾಟಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಬಹುಭಾಷ ನಟಿ ಯಮುನಾ ಅವರು ಅನುಭವಿಸುತ್ತಿದ್ದಾರೆ.
ನಟಿ ಯಮುನಾ ಕನ್ನಡದ ನಟಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಈಕೆ ಕನ್ನಡ, ತಮಿಳು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ನಾಯಕ ನಟಿಯಾಗಿ ಮತ್ತು ಕಿರುತರೆ ನಟಿಯಾಗಿ ಹಾಗೂ ಪೋಷಕ ಪಾತ್ರಧಾರಿ ಆಗಿ ಹೆಸರು ಮಾಡಿದ್ದಾರೆ. ಆದರೆ 2011ರ ಜನವರಿ 20ನೇ ತಾರೀಕಿನ ಮಧ್ಯರಾತ್ರಿ ಆದ ಒಂದು ಘಟನೆಯಿಂದ ಆಕೆ ಬದುಕು ಸಂಪೂರ್ಣವಾಗಿ ಹಾಳಾಗಿ ಹೋಯಿತು ಎಂದೇ ಹೇಳಬಹುದು. ಬೆಂಗಳೂರಿನಲ್ಲಿರುವ ವಿಠ್ಠಲ್ ಮಲ್ಯ ರಸ್ತೆಯ ಹೈಟೆಕ್ ಹೋಟೆಲ್ ಒಂದರಲ್ಲಿ ರೂಮ್ ಪಡೆದು ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು.
ಅದರಲ್ಲಿ ಪ್ರಮುಖ ಆರೋಪಿಯಾಗಿ ನಟಿ ಯಮುನಾ ಮತ್ತು ಇನ್ನಿತರ ಮೂರು ಜನ ಸಿಕ್ಕಿಬಿದ್ದಿದ್ದರು. ಆ ಸಮಯದಲ್ಲಿ ಕೂಡ ಈ ವಿಷಯ ಬಾರಿ ಸುದ್ದಿಯಾಗಿತ್ತು. ನಂತರ ನ್ಯಾಯಾಲಯದಲ್ಲಿ ಈಕೆ ತಾನು ಹೇಗೆ ಆ ಘಟನೆಯಲ್ಲಿ ಸಿಕ್ಕಿಕೊಂಡರು ಎನ್ನುವುದರ ವಿವರ ಕೊಟ್ಟಿದ್ದರು, ನಂತರ ಹೈಕೋರ್ಟ್ ಇವರನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತ್ತು. ಜೊತೆಗೆ ಅದಾದ ಬಳಿಕ ಹಲವು ಸಂದರ್ಶನಗಳಲ್ಲಿ ನಟಿ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದರು.
ಆದರೂ ಸಹ ಈಗಲೂ ಅವರನ್ನು ಅದೇ ದೃಷ್ಟಿಕೋನದಿಂದ ನೋಡುತ್ತಿರುವುದು ಮಾತ್ರ ಅಲ್ಲದೆ ಆಕೆಯನ್ನು ಹಿಂಸಿಸುವ ಕೆಲಸಗಳು ಆಗುತ್ತಿದೆಯಂತೆ ಎನ್ನುವುದು. ಈ ಬಗ್ಗೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಮಾಡಿ ನೋವು ತೋಡಿಕೊಂಡಿರುವ ನಟಿ ಯಮುನ ನ್ಯಾಯಸ್ಥಾನವೇ ನನ್ನನ್ನು ನಿರ್ದೋಷಿ ಎಂದು ಪೋಷಿಸಿದೆ, ನಾನು ನ್ಯಾಯಾಲಯದಲ್ಲಿ ಗೆದ್ದರೂ ಕೂಡ ಜನ ಮಾತ್ರ ಸಾ.ಯು.ವರೆಗೂ ನನ್ನನ್ನು ಬಿಡಲ್ಲ ಎನಿಸುತ್ತದೆ.
ಯಾಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ನನ್ನ ಫೋಟೋ ಹಾಕಿಕೊಂಡು ವಿಚಿತ್ರ ಥಂಬ್ ನೇಲ್ ಹಾಕಿ ಪದೇಪದೇ ಆ ವಿಷಯಕ್ಕೆ ನನ್ನನ್ನು ಎಳೆದು ತರುತ್ತಿದ್ದಾರೆ. ಎಷ್ಟೋ ಬಾರಿ ನನ್ನ ಕಣ್ಣಿಗೆ ಇದು ಬಿದ್ದರೂ ಅದನ್ನು ಓಪನ್ ಮಾಡಿ ನೋಡುವ ಮನಸ್ಸು ಇಲ್ಲದೆ ಸುಮ್ಮನಾಗಿದ್ದೇನೆ. ಆದರೆ ಇದನ್ನು ನೋಡಿದ ತಕ್ಷಣ ಮನಸ್ಸಿಗೆ ಒಂದು ವಿಚಿತ್ರ ನೋವಾಗುತ್ತದೆ ಇದುವರೆಗೆ ನಾನು ಸಾಕಷ್ಟು ಮಾನಸಿಕವಾಗಿ ಈ ವಿಷಯಕ್ಕಾಗಿ ಸಿದ್ಧವಾಗಿದ್ದೇನೆ.
ನನ್ನನ್ನು ನಾನು ಎಷ್ಟೇ ಮೋಟಿವೇಟ್ ಮಾಡಿಕೊಂಡಿರೂ ಕೂಡ ಇಂತಹ ವಿಡಿಯೋಗಳು ಕಣ್ಣಿಗೆ ಬಿದ್ದಾಗ ಬಹಳ ಬೇಸರವಾಗುತ್ತದೆ. ನಾನು ಕೂಡ ಎಲ್ಲರಂತೆ ಮನುಷ್ಯೆ ಅಲ್ಲವೇ, ದಯವಿಟ್ಟು ನನ್ನ ಹೆಸರನ್ನು ಬಳಸಿಕೊಂಡು ಈ ರೀತಿ ಹಿಂಸೆ ಕೊಡವ ಕೆಲಸವನ್ನು ನನಗೆ ಮಾಡಬೇಡಿ. ಇದನ್ನೆಲ್ಲ ನೋಡುತ್ತಿದ್ದರೆ ಇನ್ನಷ್ಟು ಮಾನಸಿಕ ಹಿಂಸೆ ಆಗುತ್ತಿದೆ ಎಂದು ಮಾತನಾಡಿರುವ ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.