ಮತ್ತೊಮ್ಮೆ ಮೋಸ ಹೋದ ನಟ ಅನಿರುದ್ಧ್, ಅಭಿಮಾನಿಗಳಿಗೆ ಕಹಿಸುದ್ದಿ ಇದ್ದೊಂದು ಅವಕಾಶವನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ.

 

ನಟ ಅನಿರುದ್ಧ್ ಅವರು ಚೆಲ್ಲಾಟ, ಚಿತ್ರ ಮುಂತಾದ ಯುವಜನತೆಗೆ ಇಷ್ಟ ಆಗುವ ಹೊಸ ರೀತಿಯ ಸಿನಿಮಾ ಮೂಲಕವೇ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು. ಅವರು ಮತ್ತು ರಕ್ಷಿತಾ ಅವರ ಕಾಂಬಿನೇಷನ್ ನ ನೀನೆಲ್ಲೋ ನಾನಲ್ಲೆ ಸಿನಿಮಾ ಬಗ್ಗೆ ಇಂದಿಗೂ ಜನ ಮಾತನಾಡುತ್ತಾರೆ. ಒಬ್ಬ ಹೀರೋ ಆಗಲು ಅಷ್ಟು ಅರ್ಹತೆಗಳನ್ನು ಹೊಂದಿದ್ದ ಜೊತೆಗೆ ನಿರ್ದೇಶಕನಾಗಿ ಬರಹಗಾರನಾಗಿ ಸ್ಕ್ರಿಪ್ ರೈಟರ್ ಆಗಿ ತೆರೆ ಹಿಂದಿನ ಕೆಲಸ ಬಲ್ಲವರಾಗಿದ್ದ.

ಈ ಹೀರೋ ಅದ್ಯಾಕೋ ಬೆಳ್ಳಿ ತೆರೆಯಲ್ಲಿ ಹೊಳೆಯಲೇ ಇಲ್ಲ. ನಂತರ ಅವರ ವೃತಿ ಜೀವನಕ್ಕೆ ಬ್ರೇಕ್ ಕೊಟ್ಟಿದ್ದು ಕಿರುತೆರೆಯ ಜೊತೆ ಜೊತೆಯಲಿ ಎನ್ನುವ ಧಾರಾವಾಹಿ. ಆರ್ಯವರ್ಧನ್ ಎನ್ನುವ ಪಾತ್ರವನ್ನು ಮಾಡುವುದರೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಅನಿರುದ್ಧ್ ನಟನೆಗೆ ಕಿರುತೆರೆಯ ಪ್ರೇಕ್ಷಕರು ಫಿದಾ ಆಗಿ ಹೋದರು. ಜೊತೆ ಜೊತೆಯಲಿ ಧಾರಾವಾಹಿ ಜನಪ್ರಿಯತೆಗೆ ಒಂದು ರೀತಿಯಲ್ಲಿ ಆರ್ಯವರ್ಧನ್ ಪಾತ್ರ ಮಾಡಿದ ಅನಿರುದ್ಧ್ ಅವರೇ ಕಾರಣ ಎಂದು ಹೇಳಬಹುದು.

ಅಷ್ಟರ ಮಟ್ಟಿಗೆ ಆ ಪಾತ್ರ ಅನಿರುದ್ಧ್ ಅವರಿಗೆ ಹೊಂದಾಣಿಕೆಯಾಗಿತ್ತು ಹಲವು ವರ್ಷಗಳವರೆಗೆ ಕಿರುತೆರೆ ಲೋಕದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಅತಿ ಹೆಚ್ಚು TRPಯನ್ನು ಕೂಡ ಪಡೆದು ಎಲ್ಲ ವರ್ಗದವರ ಮನಸೆಳೆದಿದ್ದ ಈ ಧಾರವಾಹಿ ತಂಡದಿಂದ ದಿಢೀರ್ ಎಂದು ಪ್ರೇಕ್ಷಕರಿಗೆ ಶಾ’ಕಿಂ’ಗ್ ಸುದ್ದಿ ಎದುರಾಗಿತ್ತು. ಅನಿರುದ್ಧ್ ಅವರು ಮಾಡುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಮತ್ತೊಬ್ಬರು ನಿರ್ಧಾರ ಆಗುವ ಮುನ್ನವೇ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ಹೊರ ಹಾಕಲಾಗಿತ್ತು.

ಇದರ ವಿರುದ್ಧ ವಿಷ್ಣುವರ್ಧನ್ ಅವರ ಅಭಿಮಾನಿಗಳು ಕೂಡ ಇದೊಂದು ಸಂಚು ಎಂದು ಆಕ್ರೋಶ ಹೊರ ಹಾಕಿದ್ದರು. ಅನಿರುದ್ಧ್ ಅವರಿಲ್ಲದೆ ಆ ಧಾರಾವಾಹಿ ಹಿಂದಿನ ಜನಬೆಂಬಲ ಕಳೆದುಕೊಳ್ಳುತ್ತದೆ ಎನ್ನುವುದನ್ನು ಅರಿತಿದ್ದರು ಕೂಡ ನಿರ್ದೇಶಕ ಆರೂರು ಜಗದೀಶ್ ಅವರು ಅನಿರುದ್ಧ್ ಅವರ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿ ನನ್ನ ಧಾರಾವಾಹಿ ನಿಂತು ಹೋದರು ಪರವಾಗಿಲ್ಲ ಅವರು ಮಾತ್ರ ಧಾರಾವಾಹಿಯಲ್ಲಿ ಮುಂದುವರಿಯೋದು ಬೇಡ ಎಂದು ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡರು.

ಈಗ ಹರೀಶ್ ರಾಜ್ ಅವರು ಆ ಪಾತ್ರದಲ್ಲಿ ಮುಂದುವರೆಯುತ್ತಿದ್ದಾರೆ ಮತ್ತು ಆರ್ಯವರ್ತಕನ ಪಾತ್ರಕ್ಕೆ ಸಾಕಷ್ಟು ಜೀವಂತಿಕೆ ತುಂಬಿಸಲು ತನ್ನಿಂದಾದ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಧಾರಾವಾಹಿ ಹಿಂದಿನಂತಿಲ್ಲ ಅಷ್ಟೇ ನಿಜ. ಇದೆಲ್ಲ ಆದಮೇಲೆ ಜಗದೀಶ್ ಅವರು ನಿರ್ದೇಶಕರ ಸಂಘಕ್ಕೆ ದೂರು ಸಹ ಕೊಟ್ಟಿದ್ದರು. ಅನಿರುದ್ಧ್ ಅವರನ್ನು ಎರಡು ವರ್ಷಗಳವರೆಗೆ ಕಿರುತೆರೆ ಮಾಧ್ಯಮದಿಂದ ಬ್ಯಾನ್ ಮಾಡಬೇಕು ಎಂದು ಸಹ ಅವರು ಕೇಳಿಕೊಂಡಿದ್ದರು.

ಆದರೆ ಅಷ್ಟಕ್ಕೆ ಎಲ್ಲವನ್ನು ಕೈ ಬಿಡಲಾಯಿತು. ಅನಿರುದ್ಧ್ ಅವರು ಜೊತೆ ಜೊತೆಯಲಿ ಧಾರಾವಾಹಿ ಇಂದ ಹೊರಬಂದ ಕೆಲವೇ ದಿನಗಳಲ್ಲಿ ವಿಷ್ಣುವರ್ಧನ್ ಅವರ ಸ್ನೇಹಿತರಾದ ಎಸ್ ನಾರಾಯಣ್ ಅವರು ಅನಿರುದ್ಧ್ ಅವರ ಕೈ ಹಿಡಿದಿದ್ದರು. ಸೂರ್ಯವಂಶ ಎನ್ನುವ ಹೆಸರಿನಲ್ಲಿ ಹೊಸ ಧಾರವಾಹಿಯನ್ನು ನಿರ್ದೇಶಿಸಿ ಅನಿರುದ್ಧ ಅವರನ್ನು ಮುಖ್ಯ ಪಾತ್ರಕ್ಕೆ ಹಾಕಿಕೊಳ್ಳುವುದಾಗಿ ಹೇಳಿಕೊಂಡಿದ್ದರು.

ಅನಿರುದ್ಧ್ ಮತ್ತು ಎಸ್ ನಾರಾಯಣ್ ಅವರು ಒಟ್ಟಿಗೆ ಈ ವಿಷಯವನ್ನು ಮಾಧ್ಯಮಗಳ ಮುಂದೆ ಕೂಡ ಸುದ್ದಿಗೋಷ್ಠಿ ನಡೆಸಿ ಹಂಚಿಕೊಂಡಿದ್ದರು. ಈ ಹೊಸ ಧಾರಾವಾಹಿಯು ಉದಯ ಟಿವಿಯಲ್ಲಿ ಕೆಲವೇ ದಿನಗಳಲ್ಲಿ ಪ್ರಸಾರವಾಗಲಿದೆ ಎನ್ನುವ ಸುದ್ದಿಯು ಹಬ್ಬಿತ್ತು. ಆದರೆ ಈ ಧಾರಾವಾಹಿಗಾಗಿ ಕಾಯುತ್ತಿದ್ದ ಅನಿರುದ್ಧ್ ಅಭಿಮಾನಿಗಳಿಗೆ ಈಗ ಕಹಿ ಸುದ್ದಿ ಸಿಕ್ಕಿದೆ.

ಅದೇನೆಂದರೆ ಸೂರ್ಯವಂಶ ಧಾರಾವಾಹಿ 20 ಸಂಚಿಕೆಗಳ ಚಿತ್ರೀಕರಣ ನಡೆದು ನಿಂತು ಹೋಗಿದೆಯಂತೆ. ಎಸ್ ನಾರಾಯಣ್ ಅವರು ಈಗಾಗಲೇ ಧಾರಾವಾಹಿಯಿಂದ ಹೊರ ಬಂದಿದ್ದಾರಂತೆ. ಜೊತೆ ಜೊತೆಯಲಿ ಧಾರಾವಾಹಿ ಇಲ್ಲವಾದರೂ ಸೂರ್ಯವಂಶ ಧಾರಾವಾಹಿಯಲ್ಲಾದರೂ ಅನಿರುದ್ಧ್ ಅವರನ್ನು ತೆರೆ ಮೇಲೆ ನೋಡಬಹುದು ಎಂದುಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಇದರಿಂದ ಭಾರಿ ನಿರಾಸೆಯಾಗಿದೆ.

Leave a Comment